Paraspara e-KootaBandhu for quicker news

15Aug/090

Vivaha Vedike

ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ  ಶ್ರೀ ಪಿ.ಸೂರ್ಯನಾರಾಯಣ ಹೇರ್ಳೆ ವಿವಾಹ ವೇದಿಕೆಯ ಫಾರ್ಮುಗಳನ್ನು ಬಿಡುಗಡೆ ಮಡುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು

ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪಿ.ಸೂರ್ಯನಾರಾಯಣ ಹೇರ್ಳೆ ವಿವಾಹ ವೇದಿಕೆಯ ಫಾರ್ಮುಗಳನ್ನು ಬಿಡುಗಡೆ ಮಡುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು

ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಇನ್ನೊಂದು ಮಹತ್ತರ ಹೆಜ್ಜೆ ದಿನಾಂಕ 15-08-2009 ಈ ವರ್ಷದ ಕೊನೆಯ ಶ್ರಾವಣ ಶನಿವಾರ 11--30ಕ್ಕೆ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಮತ್ತು ಕೂಟಬಂಧು (ರಿ) ಇವರ ಅಂತರ್ಜಾಲಾ ತಾಣ kootabandhu.org ಇವರ ಸಹಕಾರದೊಂದಿಗೆ ಶ್ರೀಗುರುನರಸಿಂಹ ಸನ್ನಿಧಿಯಲ್ಲಿ ವಿವಾಹ ಸಂಘಟನಾ ಮಾಹಿತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಈ ಸಮಾರಂಭದ ಹಿರಿತನವನ್ನು ದೇವಳದ ಆಡಳಿತಮಂಡಳಿಯ ಅಧ್ಯಕ್ಷ ಶ್ರೀ ಪಿ. ಸೂರ್ಯನಾರಾಯಣ ಹೇರ್ಳೆ ಯವರು ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಕೂಟ ಮಹಾಜಗತ್ತಿನ ಅಧ್ಯಕ್ಷ ಶ್ರೀ ಡಾ|| ಕೆ.ಎಸ್ ಕಾರಂತ್, ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತ್, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಜಯಶ್ರಿ ಮಧ್ಯಸ್ಥ, ಹಾಗೂ ಆಡಳಿತ ಮಂಡಳಿಯ ಸದಸ್ಯರು ವೇದಿಕೆಯಲ್ಲಿ ಆಸೀನರಾಗಿದ್ದರು.

ಶ್ರೀದೇವಳದ ನಿಗಮಾಗಮ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದೋಕ್ತ ಪ್ರಾರ್ಥನೆ, ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ವೇ.ಮೂ.ಜಿ ಸೀತರಾಮ ಉಪಾಧ್ಯರಿಂದ ಸ್ವಾಗತ, ಕಾರ್ಯದರ್ಶಿ ಶ್ರೀ ಬಿ.ನಾರಾಯಣ ಸೋಮಯಾಜಿಯವರಿಂದ ಪ್ರಸ್ತಾವನೆ ನಡೆಯಿತು.

ಶ್ರೀ ಬಿ.ನಾರಾಯಣ ಸೋಮಯಾಜಿಯವರು ಈ ಮಾಹಿತಿ ಕೇಂದ್ರದ ಉದ್ದೇಶ, ಚಟುವಟಿಕೆ ಹಾಗೂ ಅಂತರ್ಜಾಲದಿಂದ ಮಾಹಿತಿ ಪಡೆಯುವ ವಿಧಾನವನ್ನು ವಿವರಿಸಿದರು.

ದೇವಳದ ಅಧ್ಯಕ್ಷರು ಪಾರ್ಮುಗಳನ್ನು ಬಿಡುಗಡೆ ಮಾಡುವುದರ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು

ಈ ಒಂದು ಹೊಸ ಸಂಸ್ಥೆಯ ಪೂರ್ಣ ಪ್ರಯೋಜನವನ್ನು ಸಮಾಜಬಾಂಧವರು ಪಡೆದು ದೇವಳದ ಪ್ರಯತ್ನವನ್ನು ಸಾರ್ಥಕಗೊಳಿಸುವಂತೆ ವಿನಂತಿಸಿಕೊಂಡರು.

15Aug/090

Swarna Mukavada Smarpane

Swarna Mukavada

ದಿನಾಂಕ 15.08.2009 ರಂದು ಈ ವರ್ಷದ ಕೊನೆಯ ಶ್ರಾವಣ ಶನಿವಾರವು ಜಾತ್ರೆಯನ್ನು ನೆನಪಿಸುತ್ತಿತ್ತು ಅಂದು ಶ್ರೀ ದೇವರಿಗೆ ದಿ|ಪಿ ಶಂಕರ ಮಧ್ಯಸ್ಥ ಮತ್ತು ಶ್ರೀಮತಿ ಮಧ್ಯಸ್ಥರ ಮಕ್ಕಳಿಂದ ದೊಡ್ಡ ಮೊತ್ತದ ದೇಣಿಗೆಯೊಂದಿಗೆ ದೇವಳದಲ್ಲಿರುವ ಅನುಪಯೋಗಿ ಚಿನ್ನದ ಚೂರು ಪಾರುಗಳನ್ನು ಬಳಸಿಕೊಂಡು ಬೆಳ್ಳಿಯ ಮುಖವಾಡಕ್ಕೆ ಚಿನ್ನದ ಹಾಳೆಯನ್ನು ಲೇಪನ ಮಡಾಯಿಸಿ ಶ್ರೀದೇವರಿಗೆ ಸಮರ್ಪಿಸುವ ಕಾರ್ಯಕ್ರಮವನ್ನು ಇರಿಸಿಕೊಳ್ಳಲಾಗಿತ್ತು.

Golden Maskಬೆಳಿಗ್ಗೆ ಬಾರ್ಕೂರಿನಿಂದ ತಂದ ಸುವರ್ಣಮುಖವಾಡವನ್ನು ಆಂಜನೇಯ ದೇವಸ್ಥಾನದಿಂದ ಮಂಗಳವಾದ್ಯದೊಡನೆ ದಾನಿಗಳಾದ ಶ್ರೀರಮೇಶ ಮಧ್ಯಸ್ಥರ ಸಹೋದರ ಮನೋಹರ ಮಧ್ಯಸ್ಥರನ್ನು ಕೂಡಿಕೊಂಡು ಮೆರವಣಿಗೆಯಲ್ಲಿ ಶ್ರೀ ನರಸಿಂಹ ದೇವರ ಸನ್ನಿಧಿಗೆ ತಂದು ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಶ್ರೀ ದೇವರಿಗೆ ಸಮರ್ಪಿಸಲಾಯಿತು.

ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಕೂಟಮಹಾಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಬೇರೆ ಬೇರೆ ಅಂಗಸಂಸ್ಥೆಯ ಅಧ್ಯಕ್ಷರು ಸದಸ್ಯರು, ಗ್ರಾಮ ಮೋಕ್ತೇಸರರು ಮತ್ತು ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದು ಚಿನ್ನದ ಮುಖವಾಡದಲ್ಲಿ ಶ್ರೀ ದೇವರನ್ನು ನೋಡಿ ಸಂತೋಷಪಟ್ಟರು.

ಅಂದು ನಡೆದ ವಿಶೇಷ ಸಭಾ ಕಾರ್ಯಕ್ರಮಗಳ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಪಿ ಸೂರ್ಯನಾರಾಯಣ ಹೇರ್ಳೆ  ದಾನಿಗಳಾದ ಶ್ರೀ ರಮೇಶ ಮಧ್ಯಸ್ಥರ ಸಹೋದರ ಶ್ರೀಮನೋಹರ ಮಧ್ಯಸ್ಥರನ್ನು ಮತ್ತು ಮುಖವಾಡ ರಚಿಸಿದ ಶಿಲ್ಪಿ ಶ್ರೀ ಶ್ರೀಕಾಂತ್ ಆಚಾರ್ ಇವರನ್ನು ಶ್ರೀ ದೇವಳದ ಸಂಪ್ರದಾಯದಂತೆ ಶಾಲು ಹೊದೆಸಿ ಫಲಪುಷ್ಫ,ತಾಂಬೂಲ, ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತುGolden Mask Submission

 

 

 

 

 

 

 

ಶ್ರೀದೇವರಿಗೆ ಸ್ವರ್ಣಮುಖವಾಡವನ್ನು ತೋಡಿಸಿ ಅಲಂಕರಿಸಲಾಯಿತು.

ಶ್ರೀದೇವರಿಗೆ ಸ್ವರ್ಣಮುಖವಾಡವನ್ನು ತೋಡಿಸಿ ಅಲಂಕರಿಸಲಾಯಿತು.

8Aug/090

Belli Daranda Smarpane

ಶ್ರೀಆಂಜನೇಯ ದೇವಳದ ಗರ್ಭಗುಡಿಗೆ ಸಮರ್ಪಿಸಲಾದ ಬೆಳ್ಳಿ ದಾರಂದ

ಶ್ರೀಆಂಜನೇಯ ದೇವಳದ ಗರ್ಭಗುಡಿಗೆ ಸಮರ್ಪಿಸಲಾದ ಬೆಳ್ಳಿ ದಾರಂದ

ದಿನಾಂಕ 10.08.2008 ಶ್ರೀ ಗುರುನರಸಿಂಹ ದೇವರ ಉಪಸನ್ನಿಧಿ ಸಾಲಿಗ್ರಾಮ ಪೇಟೆಯ ನಡುವೆ ರಾರಾಜಿಸುತ್ತಿರುವ ಭಕ್ತರ ಇಷ್ಟಾರ್ಥವನ್ನು ನೇರವೇರಿಸುತ್ತಿರುವ ಶ್ರೀಆಂಜನೇಯನ ಸನ್ನಿಧಿಯಲ್ಲಿ ಭಕ್ತಿ ಭಾವಗಳ ಸಂಗಮವಾಗಿತ್ತು , ಹಬ್ಬದ ಸಡಗರವಿತ್ತು, ಅಂದು ಶ್ರೀದೇವರ ಗರ್ಭಗುಡಿಯ ಪ್ರಧಾನ ದ್ವಾರಕ್ಕೆ ಸುಮಾರು      7 ಕೆಜಿ ಬೆಳ್ಳಿಯನ್ನು ಬಳಸಿಕೊಂಡು ರೂ.2 ಲಕ್ಷ ವೆಚ್ಚದಲ್ಲಿ ಕಲಾತ್ಮಕ ಹಾಗೂ ಕುಸುರಿ ಕೆಲಸದಿಂದ ಕೂಡಿದ ತಗಡನ್ನು ಮಡಾಯಿಸಿ ಸ್ವಾಮಿಗೆ ಅರ್ಪಿಸುವ ಸಮಾರಂಭ ಶಾಸ್ತ್ರೋಕ್ತವಾಗಿ ನೇರವೇರಿತು. ಈ ಕೊಡುಗೆಯನ್ನು ಉದಾರವಾಗಿ ನೀಡಿದ ದಾನಿ ಶ್ರೀರವಿ, ರಶ್ಮಿ ಮತ್ತು ಮಗ ರಕ್ಷಿತ ಇವರುಗಳು ಈ ಸಂಬಂಧ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಭಕ್ತಿಪೂರ್ವಕವಾಗಿ ತೊಡಗಿಸಿಕೊಂಡಿದ್ದರು,

ಧಾರ್ಮಿಕ ಕಾರ್ಯಕ್ರಮ

ಧಾರ್ಮಿಕ ಕಾರ್ಯಕ್ರಮ

ಹೋಮ ಹವನ, ಅಭಿಷೇಕಗಳೊಂದಿಗೆ ಶ್ರೀಆಂಜನೇಯ ದೇವರಿಗೆ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ರಜತದ್ವಾರವನ್ನು ಸಮರ್ಪಿಸಿದರು. ಈ ದಾನಿಗಳಿಗೆ ಪ್ರೇರಣೆ ಮಾರ್ಗದರ್ಶನ ನೀಡಿದ ಅವರ ಸಮೀಪ  ಬಂಧು ವೇ.ಮೂ. ಶ್ರೀ ರತ್ನಾಕರ ಸೋಮಯಾಜಿ ಕುಟುಂಬದವರು ಈ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟರು.

ಧಾರ್ಮಿಕ ಕಾರ್ಯಕ್ರಮಗಳನ್ನು ದೇವಳದ ತಂತ್ರಿಗಳಾದ ವೇ.ಮೂ. ಶ್ರೀ ಶಂಕರನಾರಾಯಣ ಸೋಮಯಾಜಿ ಅರ್ಚಕ ವೇ.ಮೂ. ವಿಜಯಕಮಾರ ಅಡಿಗ ಇವರುಗಳು ನೆರವೇರಿಸಿಕೊಟ್ಟರು.

ದೇವಳದವತಿಯಿಂದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಪಿ. ಸೂರ್ಯನಾರಾಯಣ ಹೇರ್ಳೆಯವರು ದಾನಿಗಳನ್ನು ಹಾಗೂ ದ್ವಾರದ ಕೆಲಸ ನಿರ್ವಹಿಸಿದ ಮಂಟಪ ಶ್ರೀ ಕೇಶವ ಆಚಾರ್ಯ ಅವರನ್ನು ದೇವಳದ ಸಂಪ್ರದಾಯದಂತೆ ಗೌರವಿಸಿ ನಂಬಿದ ಭಕ್ತರಿಗೆ ಸದಾ ಒಳಿತನ್ನುಂಟುಮಾಡಲೆಂದು ಪ್ರಾರ್ಥಿಸಿದರು.  ಇದೀಗ ರಜತ ದ್ವಾರದಿಂದ ಪ್ರಾರಂಭಗೊಂಡ ದೇಗುಲವು ನಂಬಿದ ಭಕ್ತರ ನರವಿನಿಂದ ರಜತ ಮಂದಿರವಾಗಿ ಕಂಗೊಳಿಸುವಂತಾಗಲೆಂದು ಆಶಿಸಿದರು

ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪಿ ಸೂರ್ಯನಾರಾಯಣ ಹೇರ್ಳೆಯವರು ಬೆಳ್ಳಿ ದಾರಂದದ ದಾನಿ ಶ್ರೀರವಿ ಶ್ರೀಮತಿ ರಶ್ಮಿ ಮತ್ತು ಕುಮಾರ ರಕ್ಷಿತ್ ಇವರಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು

ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪಿ ಸೂರ್ಯನಾರಾಯಣ ಹೇರ್ಳೆಯವರು ಬೆಳ್ಳಿ ದಾರಂದದ ದಾನಿ ಶ್ರೀರವಿ ಶ್ರೀಮತಿ ರಶ್ಮಿ ಮತ್ತು ಕುಮಾರ ರಕ್ಷಿತ್ ಇವರಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರುಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪಿ ಸೂರ್ಯನಾರಾಯಣ ಹೇರ್ಳೆಯವರು ಬೆಳ್ಳಿ ದಾರಂದದ ಶಿಲ್ಪಿ ಶ್ರೀ ಕೇಶವ ಆಚಾರ್ಯ ಇವರಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು

   

Categories

Calendar

August 2009
M T W T F S S
    Sep »
 12
3456789
10111213141516
17181920212223
24252627282930
31  

Also Visit

Old Blogs