Paraspara e-KootaBandhu for quicker news

9Sep/090

Slaha samithi Sabha

ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಸಮಾಜ ಬಾಂಧವರಿಂದ ಅಂಗಿಕ್ರವಾದ ಆಡಳಿತ ನಿಯಮಾವಳಿಯಂತೆ ವರ್ಷಕ್ಕೆ ಎರಡು ಬಾರಿ ಸಮಾಜದ ಎಲ್ಲಾ ಪ್ರದೇಶಗಳ ಪ್ರಾತಿನಿಧಿಕ ಸದಸ್ಯರ, ಗಣ್ಯವ್ಯಕ್ತಿಗಳ, ದಾನಿಗಳನ್ನೊಳಗೊಂಡ ಸಲಹಾಸಮಿತಿಯ ಸಭೆಯನ್ನು ಕರೆದು ದೇವಳದ ಆಗುಹೋಗುಗಳ ಸ್ಪಷ್ಟ ಚಿತ್ರಣವನ್ನು ನೀಡುವ ಪಾರದರ್ಶಕ, ಪ್ರಜಾಸ್ತಾತ್ಮಕ ಕ್ರಮಗಳನ್ನು ಅನುಸರಿಸಿಕೊಂಡು ಬರುತ್ತಿದೆ.

ಅದರಂತೆ ಈ ವರ್ಷದ ದ್ವಿತೀಯ ಸಲಹಾ ಸಮಿತಿ ಸಭೆಯನ್ನು ದಿನಾಂಕ 20-09-2009 ಪೂರ್ವಾಹ್ನ ಕೂಟಬಂಧು ಸಭಾಭವನದಲ್ಲಿ ಕರೆಯಲಾಗಿತ್ತು ಸಭೆಯ ಹಿರಿತನವನ್ನು ಆಡಳಿತ ಮಂಡಳಿಯ ಅಧ್ಯಕ್ಷ                   ಪಿ ಸೂರ್ಯನಾರಾಯಣ ಹೇರ್ಳೆ ವಹಿಸಿದ್ದರು. ಅವರೊಡನೆ ಆಡಳಿತ ಮಂಡಳಿಯ ಸದಸ್ಯರು, ಕೂ.ಮ.ಜ.ದ ಕೇಂದ್ರಾಧ್ಯಕ್ಷ ಡಾ|| ಕೆ.ಎಸ್ ಕಾರಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಸಾಮೂಹಿಕಾ ಪ್ರಾರ್ಥನಾ ನಂತರ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ.ಬಿ.ನಾರಾಯಣ ಸೋಮಯಾಜಿ ಯವರಿಂದ ಸ್ವಾಗತ, ಶ್ರೀಪ್ರಭಾಕರ ಮಯ್ಯರಿಂದ ವರದಿ ವಾಚನ, ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ಕೊಡೇರಿ ವಾಸುದೇವ ಕಾರಂತರಿಂದ ದೇವಳದ ಕಾರ್ಯಚಟುವಟಿಕೆಗಳ ವರದಿ, ಕಳೆದ ವರ್ಷದ ಅಡಿಟ್ ವರದಿ, ಈ ಸಾಲಿನ ಮುಂಗಡ ಪತ್ರದ ವಿವರಗಳನ್ನು ಸಭಯ ಗಮನಕ್ಕೆ ತಂದರು.

ಶ್ರೀದೇವಳವು ಹಮ್ಮಿಕೊಂಡ ಬ್ರಹತ್ ಅಭಿವ್ರದ್ಧಿ ಚಟುವಟಿಕೆಗಳ ಮಾಹಿತಿಯನ್ನು ಮತ್ತು 2010 ರ ಮಾರ್ಚನಲ್ಲಿ ನಡೆಯಲಿರುವ ಆಡಳಿತ ಮಂಡಳಿಯ ಸದಸ್ಯರ ಚುನಾವಣಾ ಮಾಹಿತಿಗಳನ್ನು ದೇವಳದ ವ್ಯವಸ್ಥಾಪಕರು ಸಭೆಯ ಗಮನಕ್ಕೆ ತಂದರು.,

ಬ್ರಹತ್ ಅಭಿವ್ರದ್ಧಿಯ ಚಟುವಟಿಕೆಗಳ ಬಗ್ಗೆ ಸಭೆ ತನ್ನ ಮೆಚ್ಚುಗೆ ಸೂಚಿಸಿತು. ಸುಧಾರಣೆಗಳನ್ನೊಳಗೊಂಡ ಚುಬಾವಣಾ ಪ್ರಕ್ರಿಯೆಗಳನ್ನು ಅನುಮೋದಿಸುತ್ತಾ ಒಮ್ಮತದ ಅಭ್ಯರ್ಥಿಗಳ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಎಲ್ಲಾ ಸಮಾಜ ಬಾಂಧವರನ್ನು ಕಳಕಳಿಯಿಂದ ವಿನಂತಿಸಿತು.

ಆಡಳಿತಮಂಡಳಿಯ ಸದಸ್ಯ ಶ್ರೀ ಸಿ ನರಸಿಂಹ ಮಧ್ಯಸ್ಥರು ಧನ್ಯವಾದ ಸಮರ್ಪಿಸಿದರು

Comments (0) Trackbacks (0)

No comments yet.


Leave a comment


No trackbacks yet.