Paraspara e-KootaBandhu for quicker news

10Oct/090

Belli Mukavada Samaprpane

ಬೆಳ್ಳಿ ಮುಖವಾಡದ ದಾನಿ ಶ್ರೀ ರಾಮದಾಸ್ ರಾವ್ ಮತ್ತು ಮನೆಯವರು

ಬೆಳ್ಳಿ ಮುಖವಾಡದ ದಾನಿ ಶ್ರೀ ರಾಮದಾಸ್ ರಾವ್ ಮತ್ತು ಮನೆಯವರು

ಬೆಳ್ಳಿ ಮುಖವಾಡ

ಬೆಳ್ಳಿ ಮುಖವಾಡ

ದಿನಾಂಕ 08.10.09 ರಂದು ಶ್ರೀಗುರುನರಸಿಂಹ ದೇವರಿಗೆ ರೂ.1,05,500/- ಮೌಲ್ಯದ ರಜತ ಕವಚ ಸಮರ್ಪಣೆಯ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕವಚದ ದಾನಿ ಶ್ರೀ ರಾಮದಾಸ್ ರಾವ್, ಹೊಸಬೆಟ್ಟು ಸುರತ್ಕಲ್ ಇವರು ತಮ್ಮ ಪತ್ನಿ, ಪುತ್ರಿಯರೊಡನೆ ಬೆಳ್ಳಿ ಕವಚ ಸಮೇತ ಬೆಳಿಗ್ಗೆ ಬೇಗ ದೇವಳಕ್ಕೆ ಆಗಮಿಸಿ ಕವಚವನ್ನು ಶ್ರೀ ಆಂಜನೇಯ ಸನ್ನಿಧಿಯಿಂದ ಶ್ರೀ ಗುರು ದೇವರ ಸನ್ನಿಧಿಗೆ ರಜತಪಲ್ಲಕಿಯಲ್ಲಿರಿಸಿ ಭವ್ಯ ಮೆರವಣಿಗೆಯಲ್ಲಿ ತರಲಾಯಿತು.  ಮಾಡಬೇಕಾದ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಳದ ತಂತ್ರಿ ಶ್ರೀ ವೇ.ಮೂ.ಶಂಕರನಾರಾಯಣ ಸೋಮಯಾಜಿ ಮತ್ತು ಅರ್ಚಕ ಶ್ರೀ ವೇ.ಮೂ.ವಿಜಯಕುಮಾರ ಅಡಿಗರು ನೇರವರಿಸಿದರು. ಮಧ್ಯಾಹ್ನ ಮಹಾಪೂಜೆಗೆ ದೇವರಿಗೆ ಕವಚವನ್ನು ತೊಡಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ಶ್ರೀ ಆಂಜನೇಯ ದೇವಳದಿಂದ ಪಲ್ಲಕಿಯ ಮೇಲೆ ಮೆರವಣಿಗೆಯಲ್ಲಿ ಶ್ರೀದೇವಳಕ್ಕೆ ತರಲಾಯಿತು

ಶ್ರೀ ಆಂಜನೇಯ ದೇವಳದಿಂದ ಪಲ್ಲಕಿಯ ಮೇಲೆ ಮೆರವಣಿಗೆಯಲ್ಲಿ ಶ್ರೀದೇವಳಕ್ಕೆ ತರಲಾಯಿತು

ಶ್ರೀದೇವಳದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ವೇ.ಮೂ.ಗುಂಡ್ಮಿ ಸೀತರಾಮ ಉಪಾಧ್ಯಾರು ದಾನಿಗಳ ಕೊಡುಗೆಗೆ ಅವರನ್ನು ಅಭಿನಂದಿಸುತ್ತಾ ಅವರ ಆಶೋತ್ತರಗಳನ್ನು ಗುರುದೇವರು ನೇರವೇರಿಸಲೆಂದು ಪ್ರಾರ್ಥಿಸಿ ಅವರನ್ನು ಆಶೀರ್ವದಿಸಿದರು, ದೇವಳದ ಸಂಪ್ರದಾಯದಂತೆ ಶ್ರೀ ರಾಮದಾಸ್ ರಾವ್ ಮತ್ತು ದಂಪತಿಗಳನ್ನು ಫಲ ತಾಂಬೂಲ ನೀಡಿ ಶಾಲು ಹೊದೆಸಿ ಗೌರವಿಸಲಾಯಿತು.

ಬೆಲ್ಲಿಮುಖವಾಡದಲ್ಲಿ ಅಲಂಕ್ರತಗೊಂಡ ಶ್ರೀಗುರುನರಸಿಂಹ ದೇವರು

ಬೆಲ್ಲಿಮುಖವಾಡದಲ್ಲಿ ಅಲಂಕ್ರತಗೊಂಡ ಶ್ರೀಗುರುನರಸಿಂಹ ದೇವರು

ಬೆಳ್ಳಿ ಮುಖವಾಡವನ್ನು ಶ್ರೀದೇವರಿಗೆ ಸಮರ್ಪಿಸಿ ಅಲಂಕರಿಸಲಾಯಿತು

ಬೆಳ್ಳಿ ಮುಖವಾಡವನ್ನು ಶ್ರೀದೇವರಿಗೆ ಸಮರ್ಪಿಸಿ ಅಲಂಕರಿಸಲಾಯಿತು

ಶ್ರೀದೇವರಿಗೆ ಬೆಳ್ಳಿ ಮುಖವಾಡ ನೀಡಿದ ಶ್ರೀರಾಮದಾಸ ರಾವ್ ಮತ್ತು ಮನೆಯವರನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷರು ಶ್ರೀ ವೇ.ಮೂ.ಸೀತರಾಮ ಉಪಾಧ್ಯಯರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು

ಶ್ರೀದೇವರಿಗೆ ಬೆಳ್ಳಿ ಮುಖವಾಡ ನೀಡಿದ ಶ್ರೀರಾಮದಾಸ ರಾವ್ ಮತ್ತು ಮನೆಯವರನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷರು ಶ್ರೀ ವೇ.ಮೂ.ಸೀತರಾಮ ಉಪಾಧ್ಯಯರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು