Paraspara e-KootaBandhu for quicker news

11Nov/090

Ashwatha Kattege Guddali Puje

ಅಶ್ವತ ಕಟ್ಟೆಗೆ ಗುದ್ದಲಿ ಪೂಜೆ

ಅಶ್ವತ ಕಟ್ಟೆಗೆ ಗುದ್ದಲಿ ಪೂಜೆ

ಶ್ರೀ ಗುರುನರಸಿಂಹ ದೇವಳದ ಪೂರ್ವೇತಿಹಾಸದಲ್ಲಿ ಅಶ್ವತ್ಥ ಮರವು ಬಹಳ ಪ್ರಾಮುಖ್ಯವನ್ನು ಪಡೆದಿದೆ. ಶ್ರೀದೇವರ ಮೂಲಬಿಂಬವು ದೇವಳದ ಅಗ್ನೇಯ ಮೂಲೆಯಲ್ಲಿದ್ದ ಅಶ್ವತ್ಥ ಮರದ ಪೊಟರೆಯಲ್ಲಿದ್ದಿತ್ತು ಎಂದು ಹೇಳಲಾಗುತ್ತದೆ. ಹಿಂದೆ ಈ ಬ್ರಹತ್ ಅಶ್ವತ್ಥ ಮರಕ್ಕೆ ಪ್ರತಿದಿನ ಪೂಜೆ ನಡೆಯುತ್ತಿತ್ತು. ದೇವಳಕ್ಕೆ ಬಂದ ಭಕ್ತರು ಈ ಮರಕ್ಕೆ ಪ್ರದಕ್ಷಿಣೆ ಬಂದು ಭಕ್ತಿಯಿಂದ ನಮಸ್ಕರಿಸುವ ಪರಿಪಾಟಿಯನ್ನು ಬೆಳಸಿಕೊಂಡಿದ್ದರು.

ಈ ಅಶ್ವತ್ಥ ಮರ ನೆಟ್ಟ ದಿನದಿಂದಲೂ ದೇವಸ್ಥಾನದ ಅಭಿವ್ರದ್ಧಿ ಕಾಮಗಾರಿಗಳು ಹೆಚ್ಚು ವೇಗವನ್ನು ಪಡೆದುಕೊಡಿರುವುದು ಮತ್ತು ಈ ಕ್ಷೇತ್ರವು ಹೆಚ್ಚು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿರುವುದು  ಸೋಜಿಗ ಎನಿಸುತ್ತದೆ.

ಶ್ರೀದೇವಳದ ಆಡಳಿತ ಮಂಡಳಿಯು ಸುಂದರಕಟ್ಟೆಯನ್ನು ಕಟ್ಟಲು ನಿಶ್ಚಯಿಸಿ ದಿನಾಂಕ 08.11.2009 ರಂದು ಪೂವಾಹ್ನ ದೇವಳದ ತಂತ್ರಿ ವೇ.ಮೂ.ಶಂಕರನಾರಾಯಣ ಸೋಮಯಾಜಿ, ಅರ್ಚಕ ವೇ.ಮೂ.ವಿಜಯಕುಮಾರ ಅಡಿಗರ ಸಹಕಾರದಲ್ಲಿ ಧಾರ್ಮಿಕ ಪೂಜಾವಿಧಿ ವಿಧಾನಗಳೊಂದಿಗೆ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ.ಪಿ ಸೂರ್ಯನಾರಾಯಣ ಹೇರ್ಳೆ, ಕಾರ್ಯದರ್ಶಿ ಶ್ರೀ.ಬಿ. ನಾರಾಯಣ ಸೋಮಯಾಜಿ ಜೊತೆಯಾಗಿ ಅಡಿಗಲ್ಲನ್ನು ಇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ವೇ.ಮೂ. ಗುಂಡ್ಮಿ ಸೀತರಾಮ ಉಪಾಧ್ಯರು,   ಶ್ರೀ ಕೊಡೇರಿ ವಾಸುದೇವ ಕಾರಂತ, ಶ್ರೀ ಕೆ ಯಜ್ಞನಾರಾಯಣ ಹೇರ್ಳೆ, ಶ್ರೀ  ಎ. ಕ್ರಷ್ಣ ಹೆಬ್ಬಾರ್,                 ಶ್ರೀ ಎಂ. ಪದ್ಮನಾಭ ಕಾರಂತರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.

ashwathakatte

Comments (0) Trackbacks (0)

No comments yet.


Leave a comment


No trackbacks yet.