Paraspara e-KootaBandhu for quicker news

16Nov/090

Puraskara

ದಿನಾಂಕ 15.11.09ರಂದು ಸಾಲಿಗ್ರಾಮ ಶ್ರೀಗುರುನರಸಿಂಹನ ಉಪಸನ್ನಿಧಿ ಅತ್ಯಂತ ಕಾರಣಿಕವಾದ ಶ್ರೀಆಂಜನೇಯ ಸ್ವಾಮಿಯ ಅರ್ಚಕರಾಗಿರುವ ಶ್ರೀ ಪಿ ವಿಜಯಕುಮಾರ ಆಡಿಗರನ್ನು ಶ್ರೀ ಉಡುಪಿ ಕೃಷ್ಣಮಠದ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಪರ್ಯಾಯ ಶ್ರೀಪುತ್ತಿಗೆ ಮಠದ ಸ್ವಾಮಿಜಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಾಯುಸ್ತುತಿ ಪುನಶ್ಚರಣೆಯ ಸುಸಂದರ್ಭದಲ್ಲಿ ಶಾಲು ಹೊದೆಸಿ ಶ್ರೀಕೃಷ್ಣಾನುಗ್ರಹ ಪತ್ರ ಹಾಗೂ ಫಲ ಪುಷ್ಫ, ಪ್ರಸಾದವನ್ನು ನೀಡಿ ಗೌರವಿಸಿದರು.

16Nov/090

Deepotsava

ದಿನಾಂಕ 16.11.2009 ರಂದು ಪ್ರತಿವರ್ಷದಂತೆ ಕಾರ್ತಿಕ ಮಾಸದ ದೀಪೋತ್ಸವವು ಅದ್ದೂರಿಯಾಗಿ ನಡೆಯಿತು. ಪೂರ್ವಾಹ್ನ ಶ್ರೀದೇವರ ಸನ್ನಿಧಿಯಲ್ಲಿ ನರಸಿಂಹ ಹೋಮ ಮೋದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ತಂತ್ರಿಗಳಾದ ವೇ.ಮೂ.ಶಂಕರನಾರಾಯಣ ಸೋಮಯಾಜಿ ಮತ್ತು  ಅರ್ಚಕ        ವೇ.ಮೂ. ವಿಜಯಕುಮಾರ ಅಡಿಗಳ ಸಹಕಾರದಿಂದ ನಡೆಸಿಕೊಟ್ಟರು.

ಸಂಜೆ ದೀಪೋತ್ಸವದ ಅಂಗವಾಗಿ ಶ್ರೀದೇವರಿಗೆ ಹಿರಿರಂಗಪೂಜೆಯ ನಂತರ ಸಿಂಗರಿಸಿದ ಉತ್ಸವ ಮೂರ್ತಿಯೊದಿಗೆ  ದೇವಳದ ಬಿರುದಾವಲಿ ಮಂಗಳವಾದ್ಯ ವೇದ ಪಾಠಶಾಲೆಯ ಗುರುಗಳ ವಿದ್ಯಾರ್ಥಿಗಳ ಉಪಾಧಿವಂತರ ವೇದಘೋಷದಿಂದ ಉತ್ಸವ ಪ್ರಾರಂಭವಾಯಿತು. ದೇವಳದ ಒಳಗೂ ಹೊರಗೂ ರಥಬೀದಿಯ ಇಕ್ಕೆಲಗಳಲ್ಲಿ ಶಂಖತೀರ್ಥ ಸರೋವರರದಲ್ಲಿ ಪಾರಂಪರಿಕ ಹಣತೆ ದೀಪಗಳ ಆಕರ್ಷಣೆಯೊಂದಿಗೆ ವಿದ್ಯುತ್ ದೀಪಗಳ ವೈಭವ ಮನಸೆಳೆಯುವಂತಿತ್ತು.

ಉತ್ಸವಮೂರ್ತಿಯು ಪುಷ್ಫರಥದಲ್ಲಿ ಶ್ರೀಆಂಜನೇಯ ದೇವಳದವರೆಗೆ  ಹೋಗಿ ಶ್ರೀಆಂಜನೇಯ ದೇವರಿಗೆ ಹಿರೆಕಡ್ಲೆರಂಗಪೂಜೆಯ ನಂತರ ಹಿಂದುರುಗಿ ಶಂಖತೀರ್ಥ ಸರೋವರದಲ್ಲಿ ಶ್ರೀದೇವರಿಗೆ ತೆಪ್ಪದಲ್ಲಿ ಮೆರವಣಿಗೆ ಮಾಡಿ ನಂತರ ಶ್ರೀದೇವಳಕ್ಕೆ ಹಿಂದುರುಗಿ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವನ್ನು ಮುಗಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು

ದೀಪೋತ್ಸವದ ಅಂಗವಾಗಿ ಸಾಂಸ್ಕ್ರತಿಕ ಕಾರ್ಯಕ್ರಮ "ಯಕ್ಷಮಿತ್ರರು" ಕಾರ್ಕಡ ಇವರು ಅತಿಥಿ ಕಲಾವಿದರನ್ನು ಕೂಡಿಕೊಂಡು "ದ್ರೌಪದಿ ಪ್ರತಾಪ" ಯಕ್ಷಗಾನ ಕಥಾ ಭಾಗವನ್ನು ಆಡಿತೋರಿಸಿದರು