Paraspara e-KootaBandhu for quicker news

6Dec/090

Dhanu Masa

17.12.2009  ರಿಂದ 13.01.2009 ರವರೆಗೆ ಶ್ರೀದೇವಳದಲ್ಲಿ  ಸೇವಾಕರ್ತರು ಶ್ರೀ ದೇವರಿಗೆ ಧನು ಪೂಜೆ ಮಾಡಿ ಅನ್ನದಾನವನ್ನು ಮಾಡುವುದರ ಮೂಲಕ ಶ್ರೀಗುರುನರಸಿಂಹ ಹಾಗೂ ಪರಿವಾರ ದೇವತೆಗಳ ಕ್ರಪೆಗೆ ಪಾತ್ರರಾದರು.

ಈ ಧರ್ನುಮಾಸದಲ್ಲಿ ಸಮಾರಾಧನೆ ಸೇವೆ ಶ್ರೀ ದೇವರಿಗೆ ಅತ್ಯಂತ ಪ್ರಿಯವಾದ ಸೇವೆಯಾಗಿದೆ.

3Dec/090

Mane Akki Samaradhane

ದೇವಳದ ಇತಿಹಾಸದಲ್ಲಿ ಅತ್ಯಂತ ಮಹತ್ವ ಪಡೆದ ಪರ್ವದಿನಗಳ ಆಚರಣೆಯಲ್ಲಿ ಮಹಾ ಮೂಡುಗಣಪತಿ ಮತ್ತು ಮನೆಅಕ್ಕಿ ಸಮಾರಾಧನೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮ ಮೋಕ್ತೇಸರ ನೇತ್ರತ್ವದಲ್ಲಿ ವಿವಿಧ ಕೂಟ ಮಹಾಜಗತ್ತು ಅಂಗಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಕಟ್ಟುಕಟ್ಟಲೆ ಸೇವೆ. 

ಈ ವರ್ಷ ದಿನಾಂಕ 03-12-2009 ರಂದು ಮನೆ ಅಕ್ಕಿ ಸಮಾರಾಧನೆ  ಶ್ರೀಗುರುನರಸಿಂಹ ದೇವರಿಗೆ ಮಧ್ಯಾಹ್ನ 12-30ಕ್ಕೆ ಮಹಾಪೂಜೆಯನ್ನು ಮಾಡಿ 01-೦0ಕ್ಕೆ ಭೋಜನ ಪ್ರಸಾದವನ್ನು ಭಕ್ತಾದಿಗಳು ಸ್ವೀಕರಿಸಿದರು.

26 ಜನ ಗ್ರಾಮ ಮೋಕ್ತೇಸರರು ಕೋಟ 14 ಗ್ರಾಮಗಳ ಸಮಾಜ ಬಾಂಧವರು ಹಾಗೂ ಭಕ್ತರಿಂದ  ಮತ್ತು ಕೂಟ ಮಹಾಜಗತ್ತಿನ ಬೇರೆ ಬೇರೆ ಅಂಗಸಂಸ್ಥೆಗಳಿಂದ ಸಂಗ್ರಹಿಸಿದ ತೆಂಗಿನ ಕಾಯಿ, ಅಕ್ಕಿ, ನಗದು ಹಣದಿಂದ  ತಯಾರಿಸಿದ ಶ್ರೀದೇವರ ಭೋಜನ ಪ್ರಸಾದವನ್ನು ಸಾವಿರಾರು ಜನ ಭಕ್ತರು  ಸ್ವೀಕರಿಸಿದರು.

2Dec/090

Mudu Ganapathi Seve

ದೇವಳದ ಇತಿಹಾಸದಲ್ಲಿ ಅತ್ಯಂತ ಮಹತ್ವ ಪಡೆದ ಪರ್ವದಿನಗಳ ಆಚರಣೆಯಲ್ಲಿ ಮಹಾ ಮೂಡುಗಣಪತಿ ಮತ್ತು ಮನೆಅಕ್ಕಿ ಸಮಾರಾಧನೆಗಳು ಪ್ರಮುಖ ಪಾತ್ರ ವಹಿಸುತ್ತದೆ ಈ ವರ್ಷ ದಿನಾಂಕ 02-12-2009 ರಾತ್ರಿ ಗಂಟೆ 7-30 ಕ್ಕೆ ಮಹಾಮುಡುಗಣಪತಿ ಸೇವೆ ನಡೆಯಿತು.

ಗ್ರಾಮ ಮೋಕ್ತೇಸರರು ಕೋಟ 14 ಗ್ರಾಮಗಳ ಸಮಾಜ ಬಾಂಧವರು ಹಾಗೂ ಭಕ್ತರಿಂದ  ಮತ್ತು ಕೂಟ ಮಹಾಜಗತ್ತಿನ ಬೇರೆ ಬೇರೆ ಅಂಗಸಂಸ್ಥೆಗಳಿಂದ ಸಂಗ್ರಹಿಸಿದ ತೆಂಗಿನ ಕಾಯಿ  ಫಲಪುಷ್ಫಗಳನ್ನು ಶ್ರೀಗುರುನರಸಿಂಹ ದೇವರಿಗೆ ಮತ್ತು ಪರಿವಾರ ದೇವತೆಗಳಿಗೆ ಮೂಲಕ ಸಮರ್ಪಿಸಿದರು.

ಸಾವಿರದ ಇಪ್ಪತ್ತೇಂಟುಕ್ಕು ಹೆಚ್ಚು ತೆಂಗಿನಕಾಯಿಗಳನ್ನು ಒಡೆದು ಶ್ರೀದೇವರಿಗೆ ಸಮರ್ಪಿಸಿ ಮಹಾಮಂಗಳಾರತಿಯನ್ನು ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದವನ್ನು ಹಂಚಲಾಯಿತು.