Paraspara e-KootaBandhu for quicker news

22Jan/100

Donation by Subramanya H.V.

ದಿನಾಂಕ 03.01.10 ರಂದು ಶ್ರೀ.ಎಚ್.ವಿ.ಸುಬ್ರಹ್ಮಣ್ಯ , ಮಾವಿನಕುಡಿಗೆ, ತೋಟದೂರು ಚಿಕ್ಕಮಗಳೂರು ಜಿಲ್ಲೆ. ಇವರು ರೂ.1,00,101/- ನ್ನು  ಶ್ರೀದೇವಳಕ್ಕೆ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ದೇಣಿಗೆಯನ್ನು ಸ್ವೀಕರಿಸಿ, ಶ್ರೀದೇವಳದ ಸಂಪ್ರದಾಯದಂತೆ ಶ್ರೀಎಚ್.ವಿ. ಸುಬ್ರಹ್ಮಣ್ಯ ಮತ್ತು ಅವರ ಪತ್ನಿಯನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

Donation by Mavinkudige

20Jan/100

Saligrama Jatre

16.01.2010  ರಂದು ವಾರ್ಷಿಕ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ರಥಾರೋಹಣ ನಡೆದರೆ ಸಂಜೆ ರಥಾವರೋಣದ ಬಳಿಕ ಓಲಗ ಮಂಟಪದಲ್ಲಿ ಅಷ್ಟವಧಾನ ಸೇವೆ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಹಸ್ರಾರು ಸಂಖ್ಯೆಗೂ ಮಿಕ್ಕಿದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀದೇವರ ಕ್ರಪೆಗೆ ಪಾತ್ರರಾದರು.

20Jan/100

Jatreya Sevakartharu

ಪ್ರತಿ ವರ್ಷದಂತೆ ಈ ವರ್ಷವು ಹಬ್ಬದ ಮುನ್ನಾ ದಿನ 15.01.2010 ರಂದು ಉಪಹಾರದ ವ್ಯವಸ್ಥೆಯನ್ನು (ರ್ಸೂರ್ಯಗ್ರಹಣದ ಪ್ರಯುಕ್ತ) ಬೆಂಗಳೂರಿನ ಪಿ ನಾರಾಯಣ ಉಪಾಧ್ಯಾಯರು ವಹಿಸಿಕೊಂಡರು. ಸಾವಿರಾರು ಜನರು ಗ್ರಹಣ ಮುಗಿದ ನಂತರ ಸಾಯಂಕಾಲ ಉಪಹಾರವನ್ನು ಸ್ವೀಕರಿಸದರು.

16.01.2010 ರಂದು ಜಾತ್ರೆಯ ದಿನದ ಮಧ್ಯಾಹ್ನದ ಅನ್ನ ಸಂತರ್ಪಣೆಯನ್ನು ಶ್ರೀಮತಿ ಜಯಲಕ್ಷೀ ಯಜ್ಞನಾರಾಯಣ ಹೇರ್ಳೆಯವರು ಪ್ರತಿ ವರ್ಷದಂತೆ ಈ ವರ್ಷವು ನೆರವೇರಿದರು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀದೇವರ ಭೋಜನ ಪ್ರಸಾದವನ್ನು ಸ್ವೀಕರಿಸಿದರು.

Anna Dana

 

16.01.2010 ರಂದು ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಿನ ಓರ್ವ ಭಕ್ತರು ಮತ್ತು ದಿ|| ಎ.ಪಿ. ವೈಕುಂಠ ಕಾರಂತರ ಸ್ಮರಣಾರ್ಥ  ಅವರ ಹೆಂಡತಿ ಮತ್ತು ಮಕ್ಕಳು ಬೆಳಿಗ್ಗೆ ಬಿಸಿಲಿನಲ್ಲಿ ದಣಿದ ಸಹಸ್ರಾರು ಜನ ಭಕ್ತಾಧಿಗಳಿಗೆ ಪಾನಕವನ್ನು ನೀಡಿ ಜನರ ದಣಿವನ್ನು ತಣಿಸಿದರು.

Panaka

16.01.2010 ರ ಸಂಜೆ ಪ್ರತಿ ವರ್ಷದಂತೆ ಈ ವರ್ಷ ಶ್ರೀ ಎಂ.ಎಸ್. ಮಯ್ಯ ನ್ಯಾಯವಾದಿಗಳು ಉಡುಪಿ ಇವರು ಹಸಿದ ಹಾಗೂ ದಣಿದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳಿಗೆ ಪಾನಕ ಹಾಗೂ ಪನೀವಾರವನ್ನು ವಿತರಿಸಿದರು.

17.01.201೦ ರ ಶ್ರೀದೇವರ ಪ್ರಬೋಧೋತ್ಸವವನ್ನು ದಿ|| ಕೋಟ ವಾಸುದೇವ ಸೋಮಯಾಜಿಗಳ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ನಡೆಸಿಕೊಟ್ಟರು.

20Jan/100

Jatreya Sabha Karyakrama

Samaropa

ದಿನಾಂಕ 15.01.2010 ರಂದು ಶ್ರೀಗುರುನರಸಿಂಹ ಸಾಂಸ್ಕ್ರತಿಕ ರಂಗಮಂಟಪದಲ್ಲಿ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಹ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು.

Samaropa 3

ಸಭಾಕಾರ್ಯಕ್ರಮದಲ್ಲಿ ವಯೋವ್ರದ್ಧರು ಜ್ಞಾನವ್ರದ್ಧರು  ತಂತ್ರಿಗಳಾದ ಶ್ರೀ ವೇ.ಮು. ಯಜ್ಞನಾರಾಯಣ ಸೋಮಯಾಜಿಯವರನ್ನು   ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.

Samaropa

ಪ್ರತಿ ವರ್ಷ ತಪ್ಪದೆ ಜಾತ್ರೆಯ ದಿನ ಸಾವಿರಾರು ಜನ ಭಕ್ತರಿಗೆ ಅನ್ನದಾನವನ್ನು ಮಾಡುತ್ತಿರುವ ಶ್ರೀಮತಿ ಜಯಲಕ್ಷ್ಮೀ ಹೇರ್ಳೆಯವರನ್ನು   ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.

 

Samaropa

ಜ್ಞಾನಮಂದಿರದ ರಂಗಮಂಟಪದ ವೆಚ್ಚವನ್ನು (ರೂ.6,00,000-00) ಭರಿಸಿದ ಶ್ರೀಮತಿ ಸರೋಜ ಶಿವರಾಮ ಹೊಳ್ಳ ಕಾರ್ಕಡ ಇವರನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಇನ್ನೋರ್ವ ದಾನಿ ಶ್ರೀ ಪಿ.ನಾರಾಯಣ ಉಪಾಧ್ಯಾಯರನ್ನು ಗೌರವಿಸಲು ಉದ್ಧೇಶಿಸಿದರೂ ಕಾರಾಣಾಂತರದಿಂದ ಅವರಿಗೆ ಬರಲು ಸಾಧ್ಯವಾಗದಿದ್ದರಿಂದ ಆ ಕಾರ್ಯಕ್ರಮವನ್ನು  ಮುಂದೂಡಲಾಯಿತು

20Jan/100

Donation

ದಿನಾಂಕ 16.01.2010 ರಂದು ಅಶೋಕ ಪಾಂಡೆಶ್ವರ ಹೊಳ್ಳ ಮತ್ತು ಸುಧಾ ಪಾಂಡೇಶ್ವರ ಹೊಳ್ಳ ಇವರು ರೂ.1,25,116-00 ಗಳನ್ನು ಕೊಟ್ಟು  ಶ್ರೀದೇವಳದ ಜ್ಞಾನಮಂದಿರದ ಒಂದು ಕೋಣೆಯನ್ನು ಪ್ರಾಯೋಜಿಸಿದರು.

Donation 3ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಬ್ರಹತ ಮೊತ್ತವನ್ನು ಸ್ವೀಕರಿಸಿದರು.

Donation

Donation  ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಶ್ರೀದೇವಳದ ಸಂಪ್ರದಾಯದಂತೆ  ದಾನಿಗಳಿಗೆ ಶಾಲು ಹೊದೆಸಿ ಫಲಪುಷ್ಫ ಹಾಗೂ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು .

20Jan/100

Samskrtika Karyakrama

Samskrtika udgqane

13.01.2010 ರಂದು ಬುಧವಾರ ಸಂಜೆ 6.30 ಗೆ ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ.ಪಿ.ಸೂರ್ಯನಾರಾಯಣ ಹೇರ್ಳೆ ಮತ್ತು ಸದಸ್ಯರಾದ ಶ್ರೀ ಕ್ರಷ್ಣ ಹೆಬ್ಬಾರ, ಕೊಡೇರಿ ವಾಸುದೇವ ಕಾರಂತರು,   ಕೂಟಮಹಾಜಗತ್ತು ಸಾಲಿಗ್ರಾಮ ಮಹಿಳಾವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಮಧ್ಯಸ್ಥ ಇವರು ದೀಪ ಬೆಳಗಿಸುವುದರ ಮೂಲಕ ಜಾತ್ರೆಯ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಂದು  6.45 ರಿಂದ 8.00 ರ ತನಕ ಜ್ಞಾನದೀಪ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ವಿವಿಧ ನ್ರತ್ಯದಿಂದ ಪ್ರೇಕ್ಷಕರನ್ನು ಮನರಂಜಿಸಿದರು.

8.00 ರಿಂದ ಉಪ್ಪಿನಕುದ್ರು ಶ್ರೀಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಇವರಿಂದ ನರಕಾಸುರ ವಧೆ   ಮತ್ತು ಗರುಡ ಗರ್ವಭಂಗ ಎನ್ನುವ ಯಕ್ಷಗಾನ ಪ್ರಸಂಗವನ್ನು ಗೊಂಬೆಗಳ ಮುಲಕ ಆಡಿ ಜನರನ್ನು ಮನರಂಜಿಸಿದರು. ನಂತರ ಗೊಂಬೆ ಆಟದ ಕ್ರಮಗಳನ್ನು, ಮಹತ್ವವನ್ನು, ಜನರಿಗೆ ಉದಾಹರಣೆಗಳ ಮೂಲಕ ತೋರಿಸಿದರು

Gombeyata

Gombeyata

 

14.01.2010 ರಂದು ಗುರುವಾರ ಸಂಜೆ 6.30 ಯಿಂದ 7.30 ಯವರೆಗೆ ಶ್ರೀಲಕ್ಷ್ಮೀನಾರಾಯಣ ಅಡಿಗ ಪಾರಂಪಳ್ಳಿ ಮತ್ತು ಸಂಗಡಿಗರಿಂದ ಭಾವಗೀತೆ, ಭಕ್ತಿಗೀತೆ, ಜನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳ ಮುಲಕ ಸಂಗೀತದ ಮಧುರ ಲೋಕಕ್ಕೆ   ಜನರನ್ನು ಕರೆದೊಯಿದರು.

Sanggitha

 

ಸಂಜೆ 7.30 ರಿಂದ ಬಹುಮುಖಿ ಸಾಲಿಗ್ರಾಮ ಇವರಿಂದ ಜೂನಿಯರ್‍ ರಾಜಕುಮಾರ ಇವರ ಹಾಸ್ಯದಿಂದ ಜನರನ್ನು ನಗೆಯ ಕಡಲಲ್ಲಿ ತೇಲಿಸಿದರು.

ಲಾವಣ್ಯ ಬೈಂದೂರು ಇವರಿಂದ "ಬಾವಿ ಕಳೆದಿದೆ" ಹಾಸ್ಯ ನಾಟಕದ ಮುಲಕ ಜನರನ್ನು ಹಾಸ್ಯ ಲೋಕಕ್ಕೆ ಕರೆದೊಯಿದರು

Nataka

 

ದಿನಾಂಕ 15.01.2010ರ ಶುಕ್ರವಾರ ಸಂಜೆ 6.30 ಯಿಂದ 7.30 ಯವರೆಗೆ ನಟರಾಜ ನ್ರತ್ಯನಿಕೇತನ ಇವರು ವಿವಿಧ ನ್ರತ್ಯಗಳಿಂದ ಜನರನ್ನು ಮನರಂಜಿಸಿದರು.

7-30 ಯಿಂದ 8.00 ಗಂಟೆಯವರೆಗೆ ಸಭಾ ಕಾರ್ಯಕ್ರಮ

8.00 ರಿಂದ ಶ್ರೀ ಎಂ ಈಶ್ವರ ಭಟ್ ಮತ್ತು ಸಂಗಡಿಗರು ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸುವುದರ ಜನರನ್ನು ಮನರಂಜಿಸಿದರು.

Yakshagana

 

16.01.2010 ರ ಶನಿವಾರ ಸಂಜೆ ಗಂಟೆ 6.30 ಯಿಂದ ಓಲಗ ಮಂಟಪದಲ್ಲಿ ಶ್ರೀ ರಾಮಚಂದ್ರ ಐತಾಳ ಮತ್ತು ಸಂಗಡಿಗರಿಂದ ವೀಣಾ ವಾದನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Valaga Veena

 

ಸಂಜೆ 7-30 ಯಿಂದ ರಥಬೀದಿ ಪ್ರೆಂಡ್ಸ್ ಸಾಲಿಗ್ರಾಮ ಇವರು ಆಯೋಜಿಸಿದ ಸಂಗೀತ ರಸಮಂಜರಿಯಿಂದ ಬಹು ಸಂಖ್ಯೆಯ ಜನರು ಸಂಗೀತ ಸಂಜೆಯನ್ನು ಸವಿದರು .

ರಾತ್ರಿ ಗಂಟೆ 11 ರಿಂದ ಶ್ರೀ ಅಮ್ರತೇಶ್ವರಿ ಯಕ್ಷಗಾನ ಮಂಡಳಿ ಕೋಟ ಇವರಿಂದ ಯಕ್ಷಗಾನ ಬಯಲಾಟವನ್ನು ಆಡಿ ತೋರಿಸಲಾಯಿತು.

20Jan/100

Prabhodhotsva

ಪ್ರಬೋಧೋತ್ಸವ  ದಿನಾಂಕ 17.01.2010 ರಂದು ಓಕುಳಿ ಹೊಂಡದ ಶಾಸ್ತ್ರವನ್ನು ಶ್ರೀದೇವಳದ ವಾಲಗ ಮಂಟಪದಲ್ಲಿ ಮಾಡಿ ಶ್ರೀದೇವರ ಉತ್ಸವಮೂರ್ತಿ  ಶ್ರೀದೇವಳದಿಂದ ಒಂದೂವರೆ ಕಿ.ಮೀ. ದೂರವಿರುವ ಹಂದೆ ದೇವಸ್ಥಾನಕ್ಕೆ ಪಾಲ್ಕಿಯಲ್ಲಿ  ವೇದಘೋಷ, ಮಂಗಲವಾದ್ಯ, ಬಿರುದಾವಳಿಯೊಂದಿಗೆ ಮೆರವಣಿಗೆಯಲ್ಲಿ ಹೋಗಿ ಶ್ರೀದೇವರನ್ನು ಹಂದೆ ದೇವಸ್ಥಾನದ ಕೆರೆಯಲ್ಲಿ  ಅವಭ್ರತ ಸ್ನಾನ ಮಾಡಿಸಿ ಹಂದೆ ದೇವಸ್ಥಾನ ಶ್ರೀವಿಷ್ಣು ದೇವರ ಎದುರು ಅಷ್ಟವಧಾನ ಸೇವೆ ಸಲ್ಲಿಸಿ  ವಸಂತವನ್ನು ಪೂರೈಸಿ ದಾರಿಯಲ್ಲಿ ಬರುವಾಗ ವಿವಿಧ ನಿಗದಿತ ಸ್ಥಳಗಳಲ್ಲಿ ಕಟ್ಟೆಪೂಜೆಯನ್ನು ಪೂರೈಸಿ ಶ್ರೀದೇವಳಕ್ಕೆ ಹಿಂತಿರುಗಿದರು.

ಶ್ರೀದೇವಳದಲ್ಲಿ ಮೊದಲು ಮಾಡಿದ್ದ ನರಸಿಂಹ ಹೋಮಕ್ಕೆ  ಪೂರಾಣಾಹುತಿ ಮಾಡಿ. ಧ್ವಜಸ್ತಂಭಕ್ಕೆ ಪೂಜೆ ಮಾಡಿ ಧ್ವಜಪಟವನ್ನು ಇಳಿಸಿದರು. 

ಅನಂತರ ಉತ್ಸವಮೂರ್ತಿಯು ಮೆರವಣಿಗೆಯೊಂದಿಗೆ ಶ್ರೀದೇವಳದ ಗರ್ಭಗುಡಿಯನ್ನು ಪ್ರವೇಶವಾಗಿ ಮಹಾಮಂಗಳಾರತಿಯನ್ನು ಮಾಡಿದರು. ನಂತರ ಮಂತ್ರಾಕ್ಷತೆಯೊಂದಿಗೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯಗೊಂಡಿತು.

18.01.2010 ರಂದು ಸಂಪ್ರೋಕ್ಷಣೆ   ಶ್ರೀದೇವರಿಗೆ ನವಕಪ್ರಧಾನ ಕಲಶಾಭಿಷೇಕ ಮಾಡಿ ಮತ್ತು ಶ್ರೀದೇವಳನ್ನು ಪ್ರೋಕ್ಷಣೆ ಮಾಡಿ ಶುದ್ಧ ಮಾಡಿದರು.

15Jan/100

Makara Sankramana

ಗರುಡ ಹೋಮ ಮಾಡಿ ತಂದ ಗರುಡಪಟದ ಆರೋಹಣ

ಗರುಡ ಹೋಮ ಮಾಡಿ ತಂದ ಗರುಡಪಟದ ಆರೋಹಣ

ಕಾರ್ಕಡದಿಂದ ಬಂದ ಮೆರವಣಿಗೆ ಶ್ರೀದೇವಳದ ರಾಜಾಂಗಣ ಪ್ರವೇಶ
ಕಾರ್ಕಡದಿಂದ ಬಂದ ಮೆರವಣಿಗೆ ಶ್ರೀದೇವಳದ ರಾಜಾಂಗಣ ಪ್ರವೇಶ
ಚಿತ್ರಪಾಡಿ ಗ್ರಾಮಸ್ಥರು ತಂದ ಬಾಳೆಗಿಡವನ್ನು ಧ್ವಜಸ್ತಂಬಕ್ಕೆ ಕಟ್ಟುವುದು

ಚಿತ್ರಪಾಡಿ ಗ್ರಾಮಸ್ಥರು ತಂದ ಬಾಳೆಗಿಡವನ್ನು ಧ್ವಜಸ್ತಂಬಕ್ಕೆ ಕಟ್ಟುವುದು

ಕಾರ್ಕಡದಿಂದ ತಂದ ಅಡಕೆಮರವನ್ನು ಧ್ವಜ ಸ್ಥಂಬಕ್ಕೆ ಕಟ್ಟುವುದು

ಕಾರ್ಕಡದಿಂದ ತಂದ ಅಡಕೆಮರವನ್ನು ಧ್ವಜ ಸ್ಥಂಬಕ್ಕೆ ಕಟ್ಟುವುದು

ಗರುಡ ಹೋಮ ಮಾಡಿದ ನಂತರ ಗರುಡಪಟವನ್ನು ಧ್ವಜರೋಹಣಕ್ಕೆ ಮೆರವಣಿಗೆಯಲ್ಲಿ ತರುವುದು

ಗರುಡ ಹೋಮ ಮಾಡಿದ ನಂತರ ಗರುಡಪಟವನ್ನು ಧ್ವಜರೋಹಣಕ್ಕೆ ಮೆರವಣಿಗೆಯಲ್ಲಿ ತರುವುದು

ಧ್ವಜಸ್ತಂಭದ ಪೂಜೆಯ ನಂತರ ಗರುಡ ಪಟವನ್ನು ಏರಿಸುವುದು.

ಅಡಕೆಮರ ಹಾಗೂ ಬಾಳೆಮರವನ್ನು ದ್‌ಔಜಸ್ತಂಭಕ್ಕೆ ಕಟ್ಟಿದ ನಂತರ ಪೂಜೆ

ಅಡಕೆಮರ ಹಾಗೂ ಬಾಳೆಮರವನ್ನು ಧ್ವಜಜಸ್ತಂಭಕ್ಕೆ ಕಟ್ಟಿದ ನಂತರ ಪೂಜೆ

14.01.2010  ಮಕರ ಸಂಕ್ರಮಣ,   ಸಾಯಂ 7.30 ಕ್ಕೆ ಕರ್ಕಾಟಕ ಲಗ್ನದಲ್ಲಿ ದ್ವಜಾರೋಹಣ, ಶ್ರೀ ನರಸಿಂಹ ದೇವರಿಗೆ ಕಿರಿರಂಗಪೂಜೆ

 

 

ಒಂದು ಬದಿ ಗರುಡ ಇನ್ನೊಂದು ಬದಿ ಆಂಜನೇಯ ಚಿತ್ರ ಇರುವ ಪಟವನ್ನು ವಿಧ್ಯುಕ್ತವಾಗಿ ಪೂಜೆ ಮಾಡಿ ಏರಿಸುವ ಕ್ರಿಯೆಯೇ ಧ್ವಜಾರೋಹಣ. ಇದನ್ನೆ ಗರುಡ ಕಟ್ಟುವುದು ಎನ್ನುತ್ತಾರೆ.

     ಪ್ರತಿವರ್ಷದಂತೆ ಈ ವರ್ಷವು  ಗರುಡ ಕಟ್ಟಲು ಬೇಕಾದ ಅಡಕೆ ಮರವನ್ನು ನೀಡುವ ಕಾರ್ಕಡ ಗ್ರಾಮಸ್ಥರು ಹೊಸ ಅಡಿಕೆ ಮರವನ್ನು ಸಜ್ಜುಗೊಳಿಸಿ  ಶ್ರೀ ದೇವಳದ ಜೋಯಿಸರಾದ ಶ್ರೀವೇ.ಮೂ. ರತ್ನಾಕರ ಸೋಮಯಾಜಿಯವರು ಹಾಗೂ ಉಪಾಧಿವಂತರ ಉಪಸ್ಥಿತಿಯಲ್ಲಿ ವಿಜ್ರಂಬಣೆಯ ಮೆರವಣಿಗೆಯಲ್ಲಿ  ಚಿತ್ರಪಾಡಿ ಗ್ರಾಮದವರೆಗೆ ತಂದರು ಚಿತ್ರಪಾಡಿ ಗ್ರಾಮಸ್ಥರು ಗೊನೆ ಹಾಕಿದ ಬಾಳೆಯನ್ನು ದೇವಸ್ಥಾನಕ್ಕೆ ನೀಡಿ ಕಾರ್ಕಡದವರು ತಂದ ಅಡಕೆ ಮರವನ್ನು ಚಿತ್ರಪಾಡಿ ಗ್ರಾಮದ ಮೋಕ್ತೇಸರರು ಮತ್ತು ಗ್ರಾಮಸ್ಥರು ಸಾಂಪ್ರಾದಾಯಿಕವಾಗಿ ಮೆರವಣಿಗೆಯಲ್ಲಿ ಬರಮಾಡಿಕೊಂಡು ದೇವಸ್ಥಾನಕ್ಕೆ ತಂದರು.

   ಗ್ರಾಮಸ್ಥರು ದೇವರಿಗೆ ಮುಖ ಮಾಡಿ ಅಡಿಕೆಮರವನ್ನು ನಿಲ್ಲಿಸಿ ಬಾಳೆ ಗಿಡವನ್ನು ಒಟ್ಟು ಸೇರಿಸಿ ಧ್ವಜಸ್ಥಂಭಕ್ಕೆ ಕಟ್ಟಿದರು. . ತಂತ್ರಿಗಳಾದ ವೇ.ಮೂ.ಶಂಕರನಾರಾಯಣ ಸೋಮಯಾಜಿಯವರು ಗರುಡಪಟವನ್ನಿಟ್ಟುಕೊಂಡು ಗರುಡ ಹೋಮ ಮಾಡಿದರು ಮತ್ತು .ಅರ್ಚಕರಾದ ಶ್ರೀ ವೇ.ಮೂ.ವಿಜಯಕುಮಾರ ಅಡಿಗರು ಶ್ರೀದೇವರಿಗೆ ಕಲಶಾಭಿಷೇಕ ಹಾಗೂ ವಿಶೇಷ ಪೂಜೆಯನ್ನು  ಮಾಡಿದರು.

   ತಂತ್ರಿಗಳು ವಿದ್ಯುಕ್ತವಾಗಿ ಧ್ವಜಸ್ತಂಭಕ್ಕೆ ಪೂಜೆಯನ್ನು ಮಾಡಿ ಗರುಡಪಟವನ್ನು  ಏರಿಸಿದರು. ನಂತರ ಶ್ರೀದೇವರಿಗೆ ಕಿರಿರಂಗಪೂಜೆಯನ್ನು ಮಾಡಿ ವಿಶೇಷ ಬಲಿಪೂಜೆಯನ್ನು ಮಾಡಿದರು.

13Jan/100

Kanchi Kamakoti Pitadhipathi

kanchikamakoti swami_0005 ದಿನಾಂಕ 12.01.2010 ರಂದು ಕಂಚಿಕಾಮಕೋಟಿ ಪೀಠಾಧಿಪತಿಗಳಾದ ಶ್ರೀಶ್ರೀ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ತಮ್ಮ ಉಡುಪಿ ಜಿಲ್ಲೆಯ ಭೇಟಿ ಕಾಲದಲ್ಲಿ ಶ್ರೀದೇವಳದಲ್ಲಿ ನಿಗಮಾಗಮ ಪಾಠಶಾಳೆ ನಡೆಯುತ್ತಿರುವುದು ತಿಳಿದು ಶ್ರೀದೇವಳಕ್ಕೆ ಭೇಟಿ ನೀಡಿದರು.

kanchikamakoti swami_0001 ಶ್ರೀದೇವಳದ ಸ್ವಾಗತ ಗೋಪುರದಿಂದ ಮಂಗಲವಾದ್ಯದೊಂದಿಗೆ ನಿಗಮಾಗಮ ಪಾಠ ಶಾಲಾ ವಿದ್ಯಾರ್ಥಿಗಳ ವೇದಘೋಷ, ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ನಿಗಮಾಗಮ ಪಾಠ ಶಾಲೆಯ ಪ್ರಾಂಶುಪಾಲರು ಮತ್ತು ಗುರುಗಳು , ವಿದ್ಯಾರ್ಥಿಗಳು ನೆರೆದ ಭಕ್ತಾದಿಗಳು ಆದರದಿಂದ ಬರಮಾಡಿಕೊಂಡರು.

kanchikamakoti swami_0003 ಶ್ರೀಶ್ರೀಗಳವರು ಶ್ರೀದೇವರ ದರ್ಶನ ಪಡೆದರು. ಶ್ರೀದೇವಳದ ವತಿಯಿಂದ ಫಲಪುಷ್ಫ ನೀಡಿ ಗೌರವಿಸಲಾಯಿತು.

ನೆರೆದ ವಿದ್ಯಾರ್ಥಿಗಳನ್ನು, ಭಕ್ತರನ್ನು ಫಲ ಮಂತ್ರಾಕ್ಷತೆ ನೀಡಿ ಹರಸಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು.

kanchi

8Jan/100

Ratharamba

08.01.2010 ರ ಶುಕ್ರವಾರ   ಪೂರ್ವಾಹ್ನ 9.30 ಗೆ  ಕುಂಭ ಲಗ್ನದಲ್ಲಿ ರಥಕ್ಕೆ ಪೂಜೆ ಮಾಡಿ ರಥ ಸಿದ್ಧತೆಗಾಗಿ ಶಿಲ್ಪಿಗಳಿಗೆ ವೀಳ್ಯ ನೀಡುತ್ತಾರೆ 16.01.10 ಕ್ಕೆ ನಡೆಯುವ ಬ್ರಹ್ಮರಥೋತ್ಸವಕ್ಕೆ ರಥವನ್ನು ಸಿದ್ದತೆ ಮಾಡುತ್ತಾರೆ

habba