Paraspara e-KootaBandhu for quicker news

20Feb/100

Donation by Grama Muktesara okkuta

ದಿನಾಂಕ 19.02.2010 ರಂದು ಶ್ರೀದೇವಳದ ಮನೆ ಅಕ್ಕಿ ಸಮಾರಾಧನೆ, ಮುಡುಗಣಪತಿ ನಿರ್ವಹಣಾ ಉಳಿತಾಯದ ಹಣದಿಂದ ರೂ.1,00,101/-ನ್ನು ಗ್ರಾಮಮೋಕ್ತೇಸರರ ಒಕ್ಕೂಟದಿಂದ ಒಕ್ಕೂಟದ ಅಧ್ಯಕ್ಷ ಶ್ರೀ ಸಿ. ನರಸಿಂಹ ಮಧ್ಯಸ್ಥರು ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪಿ.ಸೂರ್ಯನಾರಾಯಣ ಹೇರ್ಳೆಯವರಿಗೆ ನೀಡಿದರು.

Gramamoktesarru_0001

20Feb/100

Jnana Mandira Inaguration

ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಸಭೆ ಸಮಾರಂಭ, ಸಾಂಸ್ಕ್ರತಿಕ, ಧಾರ್ಮಿಕ ಸಭೆ ನಡೆಸಲು ಹಾಗೂ ದೇವಳದ ವತಿಯಿಂದ ನಡೆಸಲ್ಪಡುವ ಶ್ರೀ ಗುರುನರಸಿಂಹ ನಿಗಮಾಗಮ ಪಾಠ ಶಾಲೆಗೆ ಸ್ವಂತ ಸ್ಥಳವಕಾಶವನ್ನು ಒದಗಿಸುವ ಸಲುವಾಗಿ ಸುಮಾರು 98.ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಜ್ಞಾನಮಂದಿರ ಕಟ್ಟಡದ ಉದ್ಘಾಟನಾ ಸಮಾರಂಭವು ದಿನಾಂಕ 18.02.10 ರಂದು ಸಂಜೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೇರವೇರಿಸಲಾಯಿತು.

Jnanamandira_0002

ವಾಸ್ತುಪೂಜೆ, ವಾಸ್ತುಹೋಮ, ಮತ್ತು ರಾಕ್ಷೋಘ್ನ ಹೋಮಗಳು ಶ್ರೀದೇವಳದ ತಂತ್ರಿಗಳಾದ ವೇ.ಮು.ಶ್ರೀ ಶಂಕರನಾರಾಯಣ ಸೋಮಯಾಜಿಯವರ ಹಿರಿತನದಲ್ಲಿ ಅರ್ಚಕ ವೇ.ಮು.ಶ್ರೀ ವಿಜಯಕುಮಾರ ಅಡಿಗ ಹಾಗೂ ವೈದಿಕರು  ನಡೆಸಿಕೊಟ್ಟರು. ಈ ಕಾರ್ಯಕ್ರಮಗಳ ಯಜಮಾನತ್ವನ್ನು ಶ್ರೀ ಕೊಡೇರಿ ವಾಸುದೇವ ಕಾರಂತರು ವಹಿಸಿದ್ದರು.Jnanamandira_0001

ದಿನಾಂಕ 19.02.10 ರಂದು ಪೂರ್ವಾಹ್ನ ಗಣಹೋಮ, ಶ್ರೀದೇವರಿಗೆ ಪಂಚವಿಂಶತಿ ಕಲಾಶಿಭಿಷೇಕ ನವಕಪ್ರಧಾನ ಹೋಮಗಳನ್ನು ನಡೆಸಲಾಯಿತು. ಮದ್ಯಂತರದಲ್ಲಿ ನಡೆದ ಗಣಹೋಮ ಮಂಗಳಾರತಿಯ ತರುವಾಯ ವೇದಮಾತೆಗೆ ಶ್ರೀ ಬಿ. ನಾರಾಯಣ ಸೋಮಯಾಜಿಯವರು ಮಂಗಳಾರತಿ ಬೆಳಗಿದರು.

Jnanamandira_0003

ತರುವಾಯ ಜ್ಞಾನಮಂದಿರದ ಒಂದನೇ ಮಹಡಿಯನ್ನು ನಿಗಮಾಗಮ ಪಾಠಶಾಲೆಯ ಉಪಯೋಗಕ್ಕೆ ನೀಡಿದ್ದು ದೇವಳದ ಅಧ್ಯಕ್ಷರು ಅದನ್ನು ಉದ್ಘಾಟಿಸಿ ಶಾಲೆಗೆ ವಿದ್ಯುಕ್ತ ಚಾಲನೆ ನೀಡಿದರು.

Jnanamandira_0005

ಆಡಳಿತಮಂಡಳಿಯ ಅಧ್ಯಕ್ಷರು. ಶ್ರೀ.ಪಿ.ಸೂರ್ಯನಾರಾಯಣ ಹೇರ್ಳೆ, ಉಪಾಧ್ಯಕ್ಷ ವೇ.ಮು.ಶ್ರೀ ಜಿ ಸೀತರಾಮ ಉಪಾಧ್ಯಾಯರು, ಕಾರ್ಯದರ್ಶಿ ಶ್ರೀ.ಬಿ.ನಾರಾಯಣ ಸೋಮಯಾಜಿ, ಕೋಶಾಧಿಕಾರಿ ಕೆ.ವಾಸುದೇವಕಾರಂತ, ಸದಸ್ಯರುಗಳಾದ ಶ್ರೀ.ಎಂ.ಪದ್ಮನಾಭ ಕಾರಂತ, ಶ್ರೀ.ಸಿ. ನರಸಿಂಹ ಮಧ್ಯಸ್ಥ, ಶ್ರೀ.ಎ.ಕ್ರಷ್ಣ ಹೆಬ್ಬಾರ, ಬೇರೆ ಬೇರೆ ಅಂಗಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಮೋಕ್ತೇಸರರು, ಪಾಠಶಾಲೆಯ ಪ್ರಾಂಶುಪಾಲ ಡಾ.ನಿಟಿಲಾಪುರ ಕ್ರಷ್ಣಮುರ್ತಿ ಹಾಗೂ ಇತರ ಗುರುಗಳು, ಸಾರ್ವಜನಿಕ ಸದ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಪಾಲುದಾರರಾದರು.

Jnanamandira_0006