Paraspara e-KootaBandhu for quicker news

25Feb/100

Election

ಶ್ರೀಗುರುನರಸಿಂಹ ದೇವಳದ ಆಡಳಿತ ಮಂಡಳಿಯ 2010-15 ನೇ ಸಾಲಿನ 9 ಜನ ಸದಸ್ಯರ ಆಯ್ಕೆಗೆ  ಚುನಾವಣೆಯ ಪ್ರಕ್ರಿಯೆಯು ಪ್ರಾರಂಭವಾಗಿದೆ.

ದಿನಾಂಕ 26.02.2010 ರಂದು ಬೆಳಿಗ್ಗೆ 9-00 ರಿಂದ ನಾಮಪತ್ರಗಳ ಪರೀಶಿಲನೆ.

ದಿನಾಂಕ 01.03.2010 ರಂದು ಮಧ್ಯಾಹ್ನ 3-00 ರ ತನಕ ನಾಮಪತ್ರ ಹಿಂತೆಗೆಯವ ದಿನ

ಶ್ರೀದೇವಳದ ವಠಾರದಲ್ಲಿ ಚುನಾವಣೆಯು  ದಿನಾಂಕ 28.03.2010 ರಂದು ಪೂರ್ವಾಹ್ನ 8-00 ರಿಂದ ಮಧ್ಯಾಹ್ನ 4-00 ರವರೆಗೆ (ಮತದಾನ ) ನಡೆಯಲಿದೆ.

ಅದೇ ದಿನ ಅಪರಾಹ್ನ 5-00 ರಿಂದ ಮತ ಏಣಿಕೆ ನಡೆಯಲಿದೆ.

ಅದೇ ದಿನ ಅಪರಾಹ್ನ 8-00 ಕ್ಕೆ ಚುನಾವಣೆಯ ಪಲಿತಾಂಶವನ್ನು ಪ್ರಕಟಿಸಲಾಗುತ್ತದೆ.

25Feb/100

Election – Nomination Details

ಶ್ರೀದೇವಳದ 2010-15 ನೇ ಸಾಲಿಗಾಗಿ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು ನಾಮಪತ್ರ ಸಲ್ಲಿಕೆಗೆ ದಿನಾಂಕ 24.02.10 ನಿಗದಿಯಾಗಿದ್ದು ಒಟ್ಟು 9 ಸದಸ್ಯರ ಸ್ಥಾನಗಳಿಗೆ 33 ನಾಮಪತ್ರಗಳು ಸಲ್ಲಿಕೆಯಾಗಿದೆ.

(1) ಕೋಟ 12. ರೆವಿನ್ಯೂ ಗ್ರಾಮಗಳ 4. ಸ್ಥಾನಕ್ಕೆ 21 ಅಭ್ಯರ್ಥಿಗಳು

(2) ಈ 12. ಗ್ರಾಮ ಬಿಟ್ಟು ಉಡುಪಿ ಜಿಲ್ಲೆಯ 1. ಸ್ಥಾನಕ್ಕೆ 4 ಅಭ್ಯರ್ಥಿಗಳು

(3) ದಕ್ಷಿಣಕನ್ನಡ ಜಿಲ್ಲೆಯ 1. ಸ್ಥಾನಕ್ಕೆ 2 ಅಭ್ಯರ್ಥಿಗಳು

(4) ಬೆಂಗಳೂರು ಕಾರ್ಪರೇಷನ್ ವ್ಯಾಪ್ತಿಯ 1. ಸ್ಥಾನಕ್ಕೆ 2 ಅಭ್ಯರ್ಥಿಗಳು

(5) ಕರ್ನಾಟಕ ರಾಜ್ಯದ ಉಳಿದ ಭಾಗದ 1. ಸ್ಥಾನಕ್ಕೆ 1 ಅಭ್ಯರ್ಥಿ

(6) ಕರ್ನಾಟಕೇತರ ಭಾರತದ ಇತರ ಪ್ರದೇಶಗಳ 1. ಸ್ಥಾನಕ್ಕೆ 3 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ.

25Feb/100

Doners

14.01.2010 ರಂದು ಶಂಕರನಾರಾಯಣ ಬೈಲೂರು ಮುಂಬೈ ರೂ. 50,001/- ಮತ್ತು                ಅಜಯ್ ಬೈಲೂರು ಬೆಂಗಳೂರು ಇವರು ರೂ.50,001/- ನ್ನು ಶ್ರೀದೇವಳಕ್ಕೆ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷರು ದೇಣಿಗೆಯನ್ನು ಸ್ವೀಕರಿಸಿ ಶ್ರೀದೇವಳದ ಸಂಪ್ರದಾಯದಂತೆ ಅವರನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

 ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಶಿವಮೊಗ್ಗ ಅಂಗಸಂಸ್ಥೆಯವರು ಶ್ರೀದೇವಳದ ಅಭಿವ್ರದ್ಧಿಗೆ ತಮ್ಮ ಸದಸ್ಯರಿಂದ ಸಂಗ್ರಹಿಸಿದ ಬ್ರಹತ್ ಮೊತ್ತ ರೂ. ಒಂದು ಲಕ್ಷವನ್ನು ಶ್ರೀದೇವಳಕ್ಕೆ ನೀಡಿದರು.

ಶ್ರೀ ರಾಧಕ್ರಷ್ಣ ಮಯ್ಯ ಉದ್ಯಾವರ ಉಡುಪಿ ಇವರು ರೂ.50,000/-ನ್ನು ಶ್ರೀದೇವಳಕ್ಕೆ ನೀಡಿದರು.ಆಡಳಿತ ಮಂಡಳಿಯ ಅಧ್ಯಕ್ಷರು ದೇಣಿಗೆಯನ್ನು ಸ್ವೀಕರಿಸಿ ಶ್ರೀದೇವಳದ ಸಂಪ್ರದಾಯದಂತೆ ಅವರನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.