Paraspara e-KootaBandhu for quicker news

28Mar/100

Election- Saligrama Ksetra

ಇಂದು ನಡೆದ ಆಡಳಿತ ಮಂಡಳಿಯ ಸದಸ್ಯರ ಚುನಾವಣೆಯ ಫಲಿತಾಂಶ ಹೀಗಿದೆ

ಕ್ರ.ಸಂ.     ಅಭ್ಯರ್ಥಿಯ ಹೆಸರು                              ಗಳಿಸಿದ ಮತ                  ಸದಸ್ಯರಾಗಿ ಆಯ್ಕೆಯಾದವರು

1.             ಅನಂತಪದ್ಮನಾಭ ಐತಾಳ                    -  378                             3ನೇ ಸ್ಥಾನ

2.             ಆನಂದರಾಮ ಮಧ್ಯಸ್ಥ                          -  375                              4ನೇ ಸ್ಥಾನ

3.             ಜಗದೀಶ ಕಾರಂತ ಎ.                          -  488                                1ನೇ ಸ್ಥಾನ

4.              ಜಗದೀಶ ಉಪಾಧ್ಯ                             -  347                                ಪರಾಜಯ

5.             ಧರ್ಮರಾಯ ಹಂದೆ ಎಚ್                      -  420                               2ನೇ ಸ್ಥಾನ

6.             ಜಿ.ಎಸ್ ನಾರಾಯಣ ಹೇರ್ಳೆ                -   327                               ಪರಾಜಯ

7.             ರಾಜಶೇಖರ ಹೆಬ್ಬಾರ                          -   344                                ಪರಾಜಯ

8.             ಸಂತೋಷ ಮಧ್ಯಸ್ಥ                             -  174                                  ಪರಾಜಯ

9.              ಸುಬ್ರಹ್ಮಣ್ಯ ಹೇರ್ಳೆ                              -  365                                  ಪರಾಜಯ

ಸಾಲಿಗ್ರಾಮ ಕ್ಷೇತ್ರದಿಂದ ಈ ಮೇಲಿನ 4ಜನ ಅಭ್ಯರ್ಥಿಗಳು ಜಯಗಳಿಸಿದ್ದು, ಮುಂದಿನ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದು 31.03.2010 ರ 11 ಗಂಟೆಗೆ 2010-2015 ರ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ, ಆಯ್ಕೆಯಾದ 9 ಜನರ ಸದಸ್ಯರ ನಡುವೆ ನಡೆಯಲಿದೆ.

01.01.2010 ರಂದು 2010-2015 ರ ಹೊಸ ಆಡಳಿತ ಮಂಡಳಿಯು ಅಧಿಕಾರವನ್ನು ಸ್ವೀಕರಿಸಲಿದೆ.

28Mar/100

Udupi Kshetra

ಇದೀಗ ಬಂದ ವರದಿಯ ಪ್ರಕಾರ ಉಡುಪಿ ಕ್ಷೇತ್ರದಿಂದ ರಮಾನಂದ ನಾವುಡ ಎಚ್ ವಿ (17.ಮತ) ಯವರ ಎದುರು ಸದಾರಾಮ ಹೇರ್ಳೆ ವೈ ಇವರು ಅತಿ ಹೆಚ್ಚು ಮತವನ್ನು ಪಡೆದು ಗೆಲುವನ್ನು ಪಡೆದಿದ್ದಾರೆ,

28Mar/100

Voting

ಇಂದು ಆಡಳಿತ ಮಂಡಳಿಯ ಸದಸ್ಯರ ಚುನಾವಣೆಗೆ ಸಾಲಿಗ್ರಾಮ ಕ್ಷೇತ್ರದ ನಾಲ್ಕು ಅಭ್ಯರ್ಥಿಗೆ ಹಾಗೂ ಉಡುಪಿ ಕ್ಷೇತ್ರದ ಒಂದು ಅಭ್ಯರ್ಥಿಗೆ ಚುನಾವಣೆಗೆ ಮತದಾನ ನಡೆದಿದ್ದು ಸಾಲಿಗ್ರಾಮ ಕ್ಷೇತ್ರದಲ್ಲಿ 1087 ಮತದಲ್ಲಿ 827 ಮತ ಚಲಾವಣೆಯಾಗಿದೆ. ಉಡುಪಿ ಕ್ಷೇತ್ರದಲ್ಲಿ  834 ಮತಗಳಲ್ಲಿ 254 ಮತಗಳು ಚಲಾವಣೆಯಾಗಿದೆ.

28Mar/100

Counting

ಮತಚಲಾವಣೆಯು 4  ಗಂಟೆಯವರೆಗೆ ನಡೆದಿದ್ದು 4.30 ಗೆ ಉಡುಪಿ ಹಾಗೂ ಸಾಲಿಗ್ರಾಮ ಕ್ಷೇತ್ದ ಮತಗಳ ಲೆಕ್ಕ ಸುರುವಾಗಿದೆ.

24Mar/100

Sowramana Yugadhi

ಶ್ರೀದೇವಳದಲ್ಲಿ 14.04.2010 ರಂದು ಮೇಷ ಸಂಕ್ರಮಣ, ಶ್ರೀದೇವರಿಗೆ ವಿಶೇಷ ಪೂಜೆ ಹಾಗೂ ಮಧ್ಯಾಹ್ನ ಮಹಾಪೂಜೆಯ ನಂತರ ಪುಷ್ಫರಥೋತ್ಸವ.

ದಿನಾಂಕ 15.04.2010 ರಂದು ಸೌರಮಾನ ಯುಗಾದಿ ಆಚರಣೆ. ಸಂಜೆ ಗಂಟೆ 4.30 ಗೆ  ಶ್ರೀದೇವರಿಗೆ ವಿಶೇಷ ಪೂಜೆ, ಸೌರ ಹೊಸ ವರ್ಷಚಾರಣೆ,  ಪಂಚಾಂಗ ಪೂಜೆ, ವಿಕ್ರತಿನಾಮ ಸಂವತ್ಸರದ ವರ್ಷಫಲ ಪಠನ,

ನಂತರ ಪಾನಕ ಪನೀವಾರ ವಿತರಣೆ.

24Mar/100

Chakra Thirtha Sarovara Smarpane

ದಿನಾಂಕ 23.03.2010 ರಂದು ಶ್ರೀದೇವಳದಲ್ಲಿ ಹಬ್ಬದ ಸಡಗರ ಎದ್ದು ಕಾಣುತ್ತಿತ್ತು. ಅಂದು ಶ್ರೀದೇವಳದ ಬ್ರಹತ್ ಅಭಿವ್ರದ್ಧಿ ಯೋಜನೇಯ ಒಂದು ಅಂಗವಾದ, ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಸುಮಾರು ರೂ. 32ಲಕ್ಷ ವೆಚ್ಚದಲ್ಲಿ ಪುನಃ ನವೀಕರಣಗೊಂಡ  ಚಕ್ರತೀರ್ಥ ಸರೋವರದ ಶುದ್ಧೀಕರಣ ಹಾಗೂ ಸಮರ್ಪಣಾ ಕಾಯಕ್ರಮ ಇಟ್ಟುಕೊಳ್ಳಲಾಗಿತ್ತು. ಸುತ್ತಲು ಹುಲ್ಲು ಹಾಸಿನ ಹಾಗೂ ಹೂವಿನ ಗಿಡದ ಮಧ್ಯದಲ್ಲಿ ಅಷ್ಟಭುಜಾಕ್ರತಿಯಲ್ಲಿರುವ, ಸುಂದರವಾಗಿ ಅಲಂಕ್ರತಗೊಂಡ ಈ ಸರೋವರದ ಸೊಬಗನ್ನ ನೋಡುವುದೆ ಕಣ್ಣಿಗೆ ಹಬ್ಬವೆನಿಸುತ್ತಿತ್ತು.

ಪೂರ್ವಾಹ್ನ ಗಂಟೆ 8-30 ಗೆ ಆಡಳಿತ ಮಂಡಳಿಯ ಕೋಶಾಧಿಕಾರಿಯ ಶ್ರೀ ಕೊಡೇರಿ ವಾಸುದೇವ ಕಾರಂತರ ಯಜಮಾನತ್ವದಲ್ಲಿ ಶ್ರೀದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ತಟಾಕ ಶುದ್ಧ ಶಾಂತಿಯೊಂದಿಗೆ  ಧಾರ್ಮಿಕ ವಿಧಿ ವಿದಾನಗಳನ್ನು ಪೂರೈಸಲಾಯಿತು.

ನಂತರ ಚಕ್ರತೀರ್ಥ ಸರೋವರವಕ್ಕೆ ಕಲಶವನ್ನು ಸಮರ್ಪಿಸಿ, ಪೂಜೆಯನ್ನು ಮಾಡಿ ಸಾಂಕೇತಿಕ ಹಾಗೂ ಶಾಸ್ತ್ರೋಕ್ತವಾಗಿ ಬೆಳ್ಳಿಯ ಮೀನು ಹಾಗೂ ಆಮೆಗಳನ್ನು ಬಿಡುವುದರ ಮುಲಕ ಸರೋವರವನ್ನು ಶ್ರೀದೇವರಿಗೆ ಸಮರ್ಪಿಸಲಾಯಿತು.

Chakra theertha Samarpane

Chakra theertha Samarpane

Photo of Chakratheertha Before Renovation.

Photo of Chakratheertha Before Renovation.

Chakrtheertha Samarpane

ಶ್ರೀ ದೇವಳದ ಜೋಯಿಸರಾದ  ವೇದಮುರ್ತಿ ಶ್ರೀ ರತ್ನಾಕರ ಸೋಮಯಾಜಿಯವರ ಹಾಗೂ ತಮ್ಮ ಪುರೋಹಿತ ವ್ರಂದದವರ ಹಾಗೂ ಅರ್ಚಕರಾದ ವೇದಮುರ್ತಿ ಶ್ರೀ ವಿಜಯಕುಮಾರ ಅಡಿಗರ ನೇತ್ರತ್ವದಲ್ಲಿ  ಚಕ್ರತೀರ್ಥ ಸರೋವರದ ಶುದ್ಧಿಕರಣದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.  ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪಿ.ಸೂರ್ಯನಾರಾಯಣ ಹೇರಳೆ, ಸದಸ್ಯರಾದ ಶ್ರೀ ಕ್ರಷ್ಣ ಹೆಬ್ಬಾರರು, ಗ್ರಾಮಮೋಕ್ತೇಸರರು, ಅಂಗಸಂಸ್ಥೆಯ ಪದಾಧಿಕಾರಿಗಳು, ದಾನಿಗಳು, ಹಾಗೂ ಊರ ಸಮಸ್ತರು ಭಾಗವಹಿಸಿದ್ದರು.

ಅಂದು ಶ್ರೀದೇವಳದಲ್ಲಿ ಶ್ರೀ ದೇವಳದ ಜೋಯಿಸರಾದ  ವೇದಮುರ್ತಿ ಶ್ರೀ ರತ್ನಾಕರ ಸೋಮಯಾಜಿಯವರು ಶ್ರೀದೇವರಿಗೆ "ಹಿರೇ ರಂಗಪೂಜೆ" ಸೇವೆಯನ್ನು ಮಾಡಿದರು. ಬೆಳಿಗ್ಗೆ ನರಸಿಂಹ ಹೋಮ ಸಂಹಿತಾಭಿಷೇಕ ಹಾಗೂ ವಿಶೇಷಪೂಜೆ ಮಧ್ಯಾಹ್ನ  ಅನ್ನಸಂತರ್ಪಣೆ , ರಾತ್ರಿ ಹಿರೇರಂಗಪೂಜೆ, ದೀಪೋತ್ಸವ, ಪುಷ್ಫರಥೋತ್ಸವ,  ಅಷ್ಞವಧಾನ ಸೇವೆಯನ್ನು ನೇರವೇರಿಸಲಾಯಿತು, ನಂತರ ಪಾನಕ ಪನೀವಾರವನ್ನು ವಿತರಿಸಲಾಯಿತು.

24Mar/100

Kanyaka Samskruthi Shibira

ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ, ಇವರು ಕೂಟ ಮಹಾಜಗತ್ತು ಸಾಲಿಗ್ರಾಮ(ರಿ) ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾ ವೇದಿಕೆಯ ಸಹಕಾರದೊಂದಿಗೆ ದಿನಾಂಕ 12.04.2010 ರಿಂದ 14.04.2010 ರ ವರೆಗೆ ಕನ್ಯಕಾ ಶಿಬಿರವನ್ನು ನಡೆಸಲಿರುವರು.

ಆಸಕ್ತರಿಗಿದು ಆತ್ಮೀಯ ಆಹ್ವಾನ

12.04.2010 ಅಪರಾಹ್ನ 3.00 ಗಂಟೆಗೆ ಸೋಮವಾರ ಶಿಬಿರದ ಉದ್ಘಾಟನೆ:-

ಉದ್ಘಾಟಕರು : ಶ್ರೀಮತಿ ಪಾರ್ವತಿ ಐತಾಳ w/o ರಾಮಚಂದ್ರ ಐತಾಳ, ಪಾರಂಪಳ್ಳಿ, ಸಾಲಿಗ್ರಾಮ.

ಅಧ್ಯಕ್ಷರು : ಸಿ ನರಸಿಂಹ ಮಧ್ಯಸ್ಥ, ಸದಸ್ಯರು ಆಡಳಿತಮಂಡಳಿ, ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ

ಅಪರಾಹ್ನ 4-00 ಗಂಟೆಯಿಂದ 5-00 ರವರೆಗೆ ಉಪನ್ಯಾಸ : ವಿಷಯ: "ಸಂಪ್ರದಾಯದ ಚೌಕಟ್ಟಿನಲ್ಲಿ ಸಂಸ್ಕ್ರತಿಯ ನೆಲೆಗಟ್ಟು " ಉಪನ್ಯಾಸಕರು : ಶ್ರೀಮತಿ ಶಾಂತ ಐತಾಳ w/o ಬಾಲಕ್ರಷ್ಣ ಐತಾಳ ಸದಾಶಿವ ಐತಾಳರ ಮನೆ ಕೋಟತಟ್ಟು ಕೋಟ.

5-00 ಗಂಟೆಯಿಂದ ಮನೋರಂಜನೆ ಕಾರ್ಯಕ್ರಮಗಳು : ಮಹಿಳಾ ವೇದಿಕೆ ಸಾಲಿಗ್ರಾಮ

ದಿನಾಂಕ 13.04.2010 ಪೂರ್ವಾಹ್ನ ಗಂಟೆ 8 ರಿಂದ 8-45 ರವರೆಗೆ  "ಯೋಗ"

ಪೂರ್ವಾಹ್ನ ಗಂಟೆ 9.30 ರಿಂದ 10-30 ಯವರೆಗೆ ಉಪನ್ಯಾಸ ವಿಷಯ : " ನಮ್ಮ ಸಂಸ್ಕ್ರತಿ- ಆಸಕ್ತಿ ಅಭಿರುಚಿ "  ಉಪನ್ಯಾಸಕರು : ಶ್ರೀ ಶ್ರೀಧರ ಹಂದೆ, ಪಟೇಲರ ಮನೆ, ಮಕ್ಕಳ ಮೇಳ ಸಾಲಿಗ್ರಾಮ, ಹಂದಟ್ಟು.

ಪೂರ್ವಾಹ್ನ ಗಂಟೆ 11 ರಿಂದ 12 ರವರೆಗೆ ಉಪನ್ಯಾಸ ವಿಷಯ : " ಅತಿಥಿ ಸತ್ಕಾರ " ಉಪನ್ಯಾಸಕರು : ಶ್ರೀಮತಿ ಶ್ರೀಮತಿ ಮಯ್ಯ w/o ಸುಬ್ರಾಯ ಮಯ್ಯ, ಗುಂಡ್ಮಿ.

ಗಂಟೆ 12 ರಿಂದ ಶ್ರೀದೇವರ ಮಹಾಪೂಜೆ- ಭೋಜನ ಪ್ರಸಾದ ಸ್ವೀಕಾರ.

ಮಧ್ಯಾಹ್ನ 2-30 ರಿಂದ 3-30 ರವರೆಗೆ ಕರಕುಶಲ ಕಲೆ : ರಂಗೋಲಿ ಸದಾರಮೆ ಕಾರಂತ ಕೋಟ ಇವರಿಂದ

ಸಂಜೆ 4-00 ರಿಂದ ಅಂತ್ಯಾಕ್ಷರಿ :- "ಪರಸ್ಪರ" ಮಹಿಳಾವೇದಿಕೆ ಸಾಲಿಗ್ರಾಮ.

ದಿನಾಂಕ 14.04.2010 ಪೂರ್ವಾಹ್ನ ಗಂಟೆ 8-00 ರಿಂದ 8-45 ರವರೆಗೆ : " ಯೋಗ "

ಪೂವಾಹ್ನ ಗಂಟೆ 9-30 ರಿಂದ 10-45 ರವರೆಗೆ  : " ಪುನರಾವರ್ತನೆ "

ಪೂರ್ವಾಹ್ನ 11 ಗಂಟೆಯಿಂದ   " ಸಮಾರೋಪ " 

 ಅಧ್ಯಕ್ಷರು : ಪಿ. ಸೂರ್ಯನಾರಾಯಣ ಹೇರ್ಳೆ, ಅಧ್ಯಕ್ಷರು, ಆಡಳಿತ ಮಂಡಳಿ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ.

ಮುಖ್ಯ ಅತಿಥಿ : ಸುಶೀಲ ಹೊಳ್ಳ, ಬಾಳೆಬೆಟ್ಟು, ನಿವ್ರತ್ತ ಮುಖ್ಯೋಪಾಧ್ಯಾಯರು, ರಾಮಪ್ರಸಾದ ಹಿರಿಯ ಪ್ರಾಥಮಿಕ ಶಾಲೆ, ಮಣೂರು.

ಶಿಬಿರಾರ್ಥಿಗಳ ತಾಯಂದಿರಿಗೂ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ, ವ್ಯವಸ್ಥೆ ಇದೆ. ಆಸಕ್ತರು ಬಿಳಿ ಹಾಳೆಯಲ್ಲಿ ತಮ್ಮ ಹೆಸರು, ಹೆತ್ತವರ ಹೆಸರು, ವಿಳಾಸ, ಪ್ರಾಯ, ವಿದ್ಯಾರ್ಹತೆ, ಇತ್ಯಾದಿ ವಿವರಗಳನ್ನು 10.04.2010 ರ ಒಳಗೆ ಶ್ರೀದೇವಳದ ಕಛೇರಿ/ಮಹಿಳಾ ವೇದಿಕೆಯ ಪದಾಧಿಕಾರಿಗಳಿಗೆ ಕಳುಹಿಸಿಕೊಡಬೇಕು. 12.04.2010 ರ ಮಧ್ಯಾಹ್ನ 2 ಗಂಟೆಯೊಳಗೆ ಕೂಡ ಹೆಸರು ನೊಂದಾಯಿಸಿಬಹುದು.

ಸೂಚನೆ : ಸ್ತೋತ್ರ ಪುಸ್ತಕವನ್ನು ಅಗತ್ಯವಾಗಿ ತರಬೇಕು.

 

ಶ್ರೀಮತಿ ಜಯಶ್ರೀ ಮಧ್ಯಸ್ಥ                                                                   ಅಧ್ಯಕ್ಷರು ಮತ್ತು ಸದಸ್ಯರು

ಅಧ್ಯಕ್ಷರು ಮಹಿಳಾವೇದಿಕೆ, ಮತ್ತು ಸದಸ್ಯರು                                                   ಆಡಳಿತ ಮಂಡಳಿ

ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ (ರಿ)                                     ಶ್ರೀ ಗುರುನರಸಿಂಹ ದೇವಸ್ಥಾನ

                                                                                                              ಸಾಲಿಗ್ರಾಮ.

24Mar/100

Anjaneya Jayanthi

ಶ್ರೀ ಗುರುನರಸಿಂಹ ದೇವರ ಉಪಸನ್ನಿಧಿಯಾದ ಶ್ರೀ ಅಂಜನೇಯ ದೇವರ ಸನ್ನಿಧಿಯಲ್ಲಿ ವಾಡಿಕೆಯಂತೆ ದಿನಾಂಕ 30.03.2010 ರಂದು ನಡೆಯುವ ಆಂಜನೇಯ ಜಯಂತೀಯ ಕಾರ್ಯಕ್ರಮಗಳಿಗೆ ತಮ್ಮೆಲ್ಲರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.

ಕಾರ್ಯಕ್ರಮಗಳು : ಪೂರ್ವಾಹ್ನ 7-00 ಕ್ಕೆ ಪಂಚವಿಂಶತಿ ಕಲಶಾಭಿಷೇಕ, ವಿಶೇಷಪೂಜೆ

ಸಂಜೆ:- 6.30 ಕ್ಕೆ ಮಹಾರಂಗಪೂಜೆ, ಪಾನಕ ಪನೀವಾರ ವಿತರಣೆ

17Mar/100

Donation by Bhagavathichandra

ದಿನಾಂಕ 16.03.2010 ರಂದು ದಿ. ಐರೋಡಿ ನರಸಿಂಹ ಹೆಬ್ಬಾರ & ಶಾರದಮ್ಮ ಇವರ ನೆನಪಿಗಾಗಿ ಅವರ ಮೊಮ್ಮಗ ಭಗವತಿಚಂದ್ರ "ವಿವೇಕಚಂದ್ರ" ಕೋಡಿರಸ್ತೆ, ಹಂಗಳೂರು, ಕುಂದಾಪುರ, ಇವರು ದೇವಸ್ಥಾನಕ್ಕೆ ರೂ.1,25,000-00 ನ್ನು ಕೊಡುವುದರ ಮುಲಕ ಜ್ಞಾನಮಂದಿರದ ಒಂದು ಕೋಣೆಯನ್ನು ಪ್ರಾಯೋಜಿಸಿದರು. ಮತ್ತು ಶಾಶ್ವತ ನಂದಾದೀಪದ ಸೇವೆಗಾಗಿ ರೂ.79,500-00 ನ್ನು ನೀಡಿದರು.

ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಪಿ. ಸೂರ್ಯನಾರಾಯಣ ಹೇರಳೆಯವರು  ಈ ಕೊಡುಗೆಯನ್ನು ಸ್ವೀಕರಸಿ ಶ್ರೀದೇವರ ಪ್ರಸಾದವನ್ನು ನೀಡಿ ದಾನಿಗಳನ್ನು ಗೌರವಿಸಿದರು

17Mar/100

Vasanth Veda Shibira

ವಸಂತವೇದ ಶಿಬಿರ :-  ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇವರು ಕೂಟಮಹಾಜಗತ್ತು(ರಿ) ಸಾಲಿಗ್ರಾಮ ಅಂಗಸಂಸ್ಥೆ ಇವರ ಸಹಕಾರದೊಂದಿಗೆ ದಿನಾಂಕ 16.04.2010 ರಿಂದ 15.05.2010 ರವರೆಗೆ (30 ದಿನಗಳು) ವಿಪ್ರ ವಟುಗಳಿಗೆ ವಸಂತ ವೇದ ಶಿಬಿರವನ್ನು ನಡೆಸಲಾಗುವುದು.

ಕೂಟ ಮಹಾಜಗತ್ತು (ರಿ) ಸಾಲಿಗ್ರಾಮ ಕೇಂದ್ರ ಸಂಸ್ಥೆಯವರು ತಯಾರಿಸಿದ ಪಠ್ಯಕ್ರಮದಂತೆ

  • 1ನೇ  ವರ್ಷದ ತರಗತಿಯಲ್ಲಿ ಸಂಧ್ಯಾವಂದನೆ, ದೇವರಸ್ತೋತ್ರಗಳು ಮತ್ತು ಪುರುಷ, ಗಣಪತಿ ಅಗ್ನಿ ಮತ್ತು ಭಾಗ್ಯ ಸೂಕ್ತಗಳನ್ನು ಹೇಳಿಕೊಡಲಾಗುವುದು.
  • 2ನೇ ವರ್ಷದ ತರಗತಿಯಲ್ಲಿ ವಿಷ್ಣು, ರುದ್ರ, ಸೂರ್ಯ ಸೂಕ್ತಗಳನ್ನು ಪಂಚಾಯತನ ಪೂಜಾ ಪದ್ದತಿಯನ್ನು ಹೇಳಿಕೊಡಲಾಗುವುದು
  • 3ನೇ ವರ್ಷದ ತರಗತಿಯಲ್ಲಿ ಸ್ವಸ್ತಿ, ರಾತ್ರಿ ಐಕ್ಯಮತ್ಯ, ಸರಸ್ವತಿ ಸೂಕ್ತಗಳನ್ನು, ಮಂತ್ರಪುಷ್ಫ, ರುದ್ರಾಧ್ಯಾಯ ಮತ್ತು ಚಮಕಾಧ್ಯಾಯವನ್ನು ಹೇಳಿಕೊಡಲಾಗುವುದು.
  • 4ನೇ ವರ್ಷದ ತರಗತಿಯಲ್ಲಿ ಪವಮಾನ ಸೂಕ್ತ ಒಂದು ಮತ್ತು ಎರಡನೇ ಅಧ್ಯಾಯ, ಬ್ರಹ್ಮಯಜ್ಞ, ಪಿತ್ರತರ್ಪಣ, ಔಪಾಸನವನ್ನು ಹೇಳಿಕೊಡಲಾಗುವುದು.
  • 5ನೇ ವರ್ಷದ ತರಗತಿಯಲ್ಲಿ ಪವಮಾನ ಸೂಕ್ತದ ಉಳಿದ ಅಧ್ಯಾಯಗಳನ್ನು ಹೇಳಿಕೊಡಲಾಗುವುದು.
  • ಇದಲ್ಲದೆ ಎಲ್ಲಾ ತರಗತಿಯವರಿಗೆ ಆಸನ, ಸೂರ್ಯನಮಸ್ಕಾರ, ಪಂಚಾಂಗ ಪಠಣ, ಸರಳ ಸಂಸ್ಕ್ರತ ಶಿಕ್ಷಣವನ್ನು ನೀಡಲಾಗುವುದು.

ಪರ ಊರಿನಿಂದ ಬರುವವರಿಗೆ ಉಚಿತ ಊಟ ವಸತಿ ವ್ಯವಸ್ಥೆ ಇದೆ. ಪ್ರಥಮ ವರ್ಷ ನೂರು ವಟುಗಳಿಗೆ ಸೇರಲು ಅವಕಾಶವಿದೆ.

ಆಸಕ್ತ ಅಭ್ಯರ್ಥಿಗಳು ಖಾಲಿ ಕಾಗದದಲ್ಲಿ ಅಥವಾ ದೇವಸ್ಥಾನದ ಕಚೇರಿಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ಹೆಸರು, ತಂದೆಯ ಹೆಸರು, ಗೋತ್ರ, ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾರ್ಹತೆ, ಹುಟ್ಟಿದ ತಾರೀಕು, ಪ್ರಾಯ, ವಸತಿ ಸೌಕರ್ಯ ಬೇಕೆ? ಸಂಸ್ಕ್ರತ ಜ್ಞಾನವಿದಯೇ? ಎಂಬ ವಿವರಗಳನ್ನು ಬರೆದು ವಸಂತವೇದ ಶಿಬಿರದಲ್ಲಿ ಭಾಗಿಯಾಗಿದ್ದರೆ ಅಲ್ಲಿನ ವ್ಯಾಸಂಗ ಪ್ರಮಾಣಪತ್ರದ ಯಥಾ ನಕಲಿನೊಂದಿಗೆ ತಾ.05.04.2010 ರ ಒಳಗೆ ವ್ಯವಸ್ಥಾಪಕರು, ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ. 576225, ಉಡುಪಿ ಜಿಲ್ಲೆ ಇಲ್ಲಿಗೆ ಕಳುಹಿಸಿಕೊಡಬೇಕು.

ತಾ.16.04.2010 ರಂದು 3,4,5 ನೇ ತರಗತಿಗಳ ಪ್ರವೇಶಕ್ಕೆ ಹಾಗೂ 17.04.2010 ರಂದು 1,2 ನೇ ತರಗತಿಗಳ ಪ್ರವೇಶಕ್ಕೆ ನಡೆಯುವ ಸಂದರ್ಶನದಲ್ಲಿ ತಮ್ಮ ತಂದೆ/ತಾಯಿ/ರಕ್ಷಕರೊಂದಿಗೆ ಭಾಗವಹಿಸಬೇಕು.

ಶಿಬಿರಕ್ಕೆ ಬರುವಾಗ ಪಾಣಿಪಂಚೆ, ಬೈರಾಸ, ಪೆನ್ನು, ಬಟ್ಟಲು, ಲೋಟ, ಕುಳಿತುಕೊಳ್ಳುವ ಚಾಪೆ, ನೋಟು ಪುಸ್ತಕ, ಕೌಳಿಗೆ, ಸೌಟು, ಹರಿವಾಣ, ವಸತಿ ಮಾಡುವ ಮಕ್ಕಳು ರಾತ್ರಿ ಮಲಗಲು ಬೇಕಾದ ಪರಿಕರಗಳು, ಸೋಪು, ಬ್ರಶ್, ಪೇಸ್ಟ್ ಇತ್ಯಾದಿ ನಿತ್ಯೋಪಯೋಗಿ ವಸ್ತುಗಳನ್ನು ತರಬೇಕು

ಹೆಚ್ಚಿನ ಮಾಹಿತಿಗಾಗಿ ಶ್ರೀದೇವಳದ ಕಛೇರಿಯನ್ನು ಸಮಪರ್ಕಿಸಿರಿ. (ದೂರವಾಣಿ:- 0820-2564544, 3204544)