Paraspara e-KootaBandhu for quicker news

29Apr/100

Sneha Sammilana Samaramba

ಶ್ರೀದೇವಳದ 2005-10ನೇ ಸಾಲಿನ ಆಡಳಿತ ಮಂಡಳಿಯ ಸದಸ್ಯರ ನಿರ್ಗಮನ ಹಾಗೂ 2010-15 ನೇ ಸಾಲಿನ ಆಡಳಿತ ಮಂಡಳಿಯ ಸದಸ್ಯರ ಆಗಮನದ ಸ್ನೇಹ ಸಮ್ಮಿಲನ ಎಂಬ ವಿನೂತನ ಕಾರ್ಯಕ್ರಮವು ದಿನಾಂಕ 11.04.2010 ರಂದು ಪೂವಾಹ್ನ 10-30 ಕ್ಕೆ ಸಮಾಜ ಬಾಂಧವರ ಸಮಾವೇಶದೊಂದಿಗೆ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವು ಶ್ರೀದೇವಳದ ಸಮೀಪದ ಕೂಟಬಂಧು ಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ನಿರ್ಗಮದ ಅಧ್ಯಕ್ಷರಾದ ಶ್ರೀ ಪಿ.ಸೂರ್ಯನಾರಾಯಣ ಹೇರ್ಳೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಎ.ಜಗದೀಶ ಕಾರಂತ, ಕೂಟಮಹಾಜಗತ್ತು ಸಾಲಿಗ್ರಾಮ(ರಿ) ಕೇಂದ್ರಾಧ್ಯಕ್ಷರಾದ ಡಾ| ಕೆ.ಎಸ್ ಕಾರಂತರು ನೂತನ ಆಡಳಿತ ಮಂಡಳಿಯ ಸದಸ್ಯರು ವೇದಿಕೆಯ ಮೇಲೆ ಆಸೀನರಾಗಿದ್ದರು.

ಶ್ರೀಗುರುವಿನ ಸಾಮುಹಿಕ ಪ್ರಾರ್ಥನೆಯೊಂದಿಗೆ  ಸಭೆ ಪ್ರಾರಂಭವಾಯಿತು. ನೂತನ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಪಿ.ಆನಂದರಾಮ ಮಧ್ಯಸ್ತರು ವೇದಿಕೆಯ ಮೇಲಿರುವ ಅಧ್ಯಕ್ಷರು ಅತಿಥಿಗಳನ್ನು ಹಾಗೂ ಆಗಮಿಸಿದ ಎಲ್ಲ ಕೂಟಬಾಂಧವರನ್ನು ಹ್ರತ್ಪೂರ್ವಕವಾಗಿ ಸ್ವಾಗತಿಸಿದರು. ಈ ಸಮಾವೇಷದ ಉದ್ಧೇಶವನ್ನು ಪ್ರಸ್ತಾಪಿಸುತ್ತಾ ನಾವೇ ರೂಪಿಸಿ ಕೊಂಡ ಆಡಳಿತ ನಿಯಾಮವಳಿಯಂತೆ ಇದೀಗ ನೂತನ ಆಡಳಿತಮಂಡಳಿಯು ಅಸ್ತಿತ್ವಕ್ಕೆ ಬಂದಿದೆ. ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆದಿದೆ. ಚುನಾವಣೆ ಪರ್ವ ಮುಗಿದ ಮೇಲೆ ಈಗ ನಾವೆಲ್ಲರೂ ಸಮಾಜದ ಸಹೋದರ ಸಹೋದರಿಯಂತೆ ಮುಂದುವರಿಯಬೇಕಾಗಿದೆ. ಇದು ಹಿಂದೆಯು ನಡೆದಿದೆ ಮುಂದೆಯು ನಡೆಯುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಗುರುಸನ್ನಿಧಿಯನ್ನು ಮಾದರಿಯಾಗಿ ರೂಪಿಸೋಣ, ತನ್ಮೂಲಕ ನಮ್ಮ ಅಭಿವ್ರದ್ಧಿಯ ಕಡೆಗೆ ಹೆಜ್ಜೆ ಹಾಕೋಣ ಎಂದರು.

ಶ್ರೀಗುರುನರಸಿಂಹ ನಿಗಮಾಗಮ ಪಾಠ ಶಾಲೆಯ ಪ್ರಾಂಶುಪಾಲರಾದ ಡಾ| ನಿಟಿಲಾಪುರ ಕ್ರಷ್ಣಮೂರ್ತಿಯವರು ನೂತನ ಆಡಳಿತ ಮಂಡಳಿ ಸದಸ್ಯರ ಪರಿಚಯವನ್ನು ಸವಿಸ್ತಾರವಾಗಿ ಮಾಡಿಕೊಟ್ಟರು. ಬಹುತೇಕ ನೂತನ ಆಡಳಿತಮಂಡಳಿಯ ಸದಸ್ಯರು ಹಾಜರಿದ್ದರು. ಆದರೆ ನಿರ್ಗಮನದ ಆಡಳಿತ ಮಂಡಳಿಯ ಸದಸ್ಯರಲ್ಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಮಾತ್ರ ಹಾಜರಿದ್ದುದನ್ನು ಎಲ್ಲರು ಗಮನಿಸುವಂತಿತ್ತು. ಬೇರೆ ಬೇರೆ ಕೂ.ಮ.ಜ.ಅಂಗಸಂಸ್ಥೆಯ ಸದಸ್ಯರು, ಗ್ರಾಮಮೋಕ್ತೇಸರರು, ಸಾಲಿಗ್ರಾಮ ಪರಿಸರದ ಸಮಾಜದ ಬಂಧು ಭಗಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿದರು.

2010-15ರ ಸಾಲಿಗಾಗಿ ಆಡಳಿತಮಂಡಳಿಯ ಸದಸ್ಯರ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಮುಖ್ಯಚುನಾವಣಾಧಿಕಾರಿ ಶ್ರೀ ಕೆ. ಪರಮೇಶ್ವರ ಬಾಸ್ರಿ ಹಾಗೂ ಅವರ ಸಹಾಯಕರಾದ ಶ್ರೀ ಪಿ. ಸೀತರಾಮ ಸೋಮಯಾಜಿಯವರನ್ನು ಶ್ರೀದೇವರ ಪ್ರಸಾದದೊಂದಿಗೆ ಫಲಪುಷ್ಫ ನೀಡಿ ಗೌರವಿಸಲಾಯಿತು. ಮುಖ್ಯ ಚುನಾವಣಾಧಿಕಾರಿ ಶ್ರೀ ಬಾಸ್ರಿಯವರು ಶ್ರೀದೇವರ ಪ್ರೇರಣೆಯಂತೆ ತಾನು ಕೆಲಸ ನಿರ್ವಹಿಸಿದ್ದು ಇದನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ತನ್ನ ಕ್ರತಜ್ಞತೆಯನ್ನು ಸಲ್ಲಿಸಿದರು. ಅದರಲ್ಲಿಯೂ ಮುಖ್ಯವಾಗಿ ಕಳೆದ ಚುನಾವಣೆಯನ್ನು ನಡೆಸಿಕೊಟ್ಟ ಹಾಗೂ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟ ಶ್ರೀ ಮಾಧವ ಹೊಳ್ಳ ಮಧೂರು ಇವರಿಗೆ ಶ್ರೀದೇವಳದ ಆಡಳಿತ ಮಂಡಳಿಯವರಿಗೆ ಸಮಾಜದ ಸರ್ವ ಬಂಧುಗಳಿಗೆ ಹಾಗೂ ಕೂಟಮಹಾಜಗತ್ತಿನ ಎಲ್ಲಾ ಅಂಗಸಂಸ್ಥೆಯ ಪದಾಧಿಕಾರಿಗಳಿಗೆ ಶ್ರೀದೇವಳದ ಸಿಬ್ಬಂದಿ ವರ್ಗದವರಿಗೆ ತಾನು ಅಭಾರಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೂಟಮಹಾಜಗತ್ತಿನ ಕೇಂದ್ರಾಧ್ಯಕ್ಷ ಡಾ| ಕೆ.ಎಸ್ ಕಾರಂತರು ಮಾತನಾಡುತ್ತಾ ಹಿಂದಿನ ಆಡಳಿತಮಂಡಳಿಯ ಉತ್ತಮ ಕಾರ್ಯ ನಿರ್ವಹಿಸಿದೆ. ನೂತನ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯ ನಿರ್ವಹಿಸುವಂತಗಾಲಿ, ಸಮಾಜಬಾಂಧವರು ಸದಾ ನಿಮ್ಮೊಡನೆ ಇರುತ್ತಾರೆ ಎಂಬ ಭರವಸೆ ನೀಡಿದರು. ನಂತರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ. ಜಗದೀಶ ಕಾರಂತರು ಮಾತನಾಡುತ್ತಾ ತಮ್ಮೆಲ್ಲರ ಪೂರ್ಣ ಸಹಕಾರದೊಂದಿಗೆ ತಮ್ಮ ನಿರೀಕ್ಷೆಗೆ ಅನುಗುಣವಾಗಿ ಕೆಲಸ ನಿರ್ವಹಿಸಲು ತಾನು ಹಾಗೂ ತನ್ನ ಆಡಳಿತ ಮಂಡಳಿಯ ಸರ್ವ ಸದಸ್ಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಶ್ರೀದೇವರ ಸೇವೆ ಮಾಡುವ ಭರವಸೆ ನೀಡಿದರು. ನಂತರ ಶ್ರೀ ಪಿ. ಸೂರ್ಯನಾರಾಯಣ ಹೇರ್ಳೆಯವರು ಅಧ್ಯಕ್ಷೀಯ ಭಾಷಣದಲ್ಲಿ ಕಳೆದ 15 ವರ್ಷಗಳಿಂದ ಆಡಳಿತ ಮಂಡಳಿಯ ಸದಸ್ಯನಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷನಾಗಿ ತನ್ನ ಅನುಭವವನ್ನು ತೆರೆದಿಟ್ಟರು. ತನ್ನ ಸಹೋದರ ದಿ.  ಕ್ರಷ್ಣ ಹೇರ್ಳೆಯವರೊಂದಿಗೆ ಕೂಟಮಹಾಜಗತ್ತಿನೊಡನೆ ತನ್ನ ಅನುಭವವನ್ನು ಹಂಚಿಕೊಂಡರು. 15-20 ವರ್ಷಗಳ ಹಿಂದೆ ಶ್ರೀದೇವಳದ ಸ್ಥಿತಿಗತಿಯನ್ನು ಅವಲೋಕಿಸಿದರು. ಇತ್ತೀಚಗಿನ 15 ವರ್ಷಗಳ ಸಾಧನ ಫಲಕವು ದಕ್ಷಿಣ ಪೌಳಿಯಲ್ಲರಿರುವುದನ್ನು ತಾವು ಗಮನಿಸುವಂತೆ ವಿನಂತಿಸಿಕೊಂಡರು. ಈ ಎಲ್ಲಾ ಆಭಿವ್ರದ್ಧಿಗೆ ಸಮಾಜ ಬಾಂಧವರು, ಭಕ್ತಜನರು ಕಾರಣ ಎಂದು ನಮ್ರವಾಗಿ ಒಪ್ಪಿಕೊಂಡರು. ಮುಂದಿನ ಆಡಳಿತ ಮಂಡಳಿಗೆ ಇದೇ ರೀತಿಯ ಪ್ರೋತ್ಸಾಹ ಹರಿದು ಬರಲೆಂದು ಆಶಿಸಿದರು.  ತಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಾರ್ಯದರ್ಶಿಯಾಗಿ ದುಡಿದ ಶ್ರೀ ಬಿ.ನಾರಾಯಣ ಸೋಮಯಾಜಿಯವರ ಕುರಿತು ಪ್ರಸ್ತಾಪಿಸುತ್ತಾ ದಿನದ 24 ಗಂಟೆಗಳಲ್ಲೂ ದೇವಳದ ಬಗ್ಗೆ ಚಿಂತಿಸುತ್ತಿದ್ದ ಒಬ್ಬ ಅಪರೂಪದ ವ್ಯಕ್ತಿ ಎಂದರು. ತನ್ನ ಎಲ್ಲಾ ಚಿಂತನೆಗಳನ್ನು ತಿಳಿಸುತ್ತಾ ಕ್ರಮ ಕೈಗೊಳ್ಳುವ ಎಲ್ಲಾ ಆಧಿಕಾರವನ್ನು ನನಗೆ ಒಪ್ಪಿಸುತ್ತಿದ್ದ ಅವರ ರೀತಿ ಇತರರಿಗೆ ಮಾರ್ಗದರ್ಶನ ಎಂದರು. ಅವರ ಮಾರ್ಗದರ್ಶನ ಮುಂದೆಯು ಲಭಿಸುವಂತಾಗಲಿ ಎಂದು ಹಾರೈಸಿದರು. ತಮ್ಮೆಲ್ಲ ಸಾಧನೆಗಳ ಬೆನ್ನೆಲುಬಾಗಿದ್ದ ಶ್ರೀದೇವಳದ ಸಿಬ್ಬಂದಿ ವರ್ಗದವರನ್ನು ಈ ಸಂಧರ್ಭದಲ್ಲಿ ಹಾರ್ದಿಕವಾಗಿ ಅಭಿನಂದಿಸಿದರು.

ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ವಹಣೆಯ ಹೊಣೆ ಹೊತ್ತ ಹಿಂದಿನ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀ ಬಿ ನಾರಾಯಣ ಸೋಮಯಾಜಿಯವರು ಮಾತನಾಡುತ್ತಾ ಕಾರ್ಯದರ್ಶಿಯಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಲು ಪ್ರಯತ್ನಿಸಿದ್ದೇನೆ ಆ ಕುರಿತು ನನಗೆ ತ್ರಪ್ತಿ ಇರುವುದಾಗಿಯು ವಾರದಲ್ಲಿ 2-3 ಬಾರಿ ಶ್ರೀದೇವಳಕ್ಕೆ ಬಂದು ಹೋಗಲು ಸಾಧ್ಯವಾಗುತ್ತಿದ್ದರೆ ಇನ್ನಷ್ಟು ಪ್ರಗತಿಯನ್ನು ಸಾಧಿಸಬಹುದಿತ್ತು ಎಂಬ ಕೊರಗು ಇರುವುದಾಗಿ ತಿಳಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷರ ಸಹಕಾರ ಶ್ರೀದೇವಳದ ಸಿಬ್ಬಂದಿ ವರ್ಗದವರ ಅರ್ಪಣಾ ಮನೋಭಾವದ ದುಡಿಮೆಯನ್ನು ನಾನು ತುಂಬು ಹ್ರದಯದಿಂದ ಗೌರವಿಸುತ್ತೇನೆ. ನೌಕರರೆಲ್ಲರ ಪರವಾಗಿ ಕಳೆದ 9 ವರ್ಷಗಳಿಂದ ದುಡಿದ ದೇವಳದ ವ್ಯವಸ್ಥಾಪಕರಾದ ಜಿ.ಎಸ್.ನಾರಾಯಣ ಹೇರ್ಳೆ ಇವರನ್ನು  ಸಾಂಕೇತಿಕವಾಗಿ ಪುಷ್ಫ ನೀಡಿ ಗೌರವಿಸಿದರು. ಮುಂದೆಯು ಶ್ರೀದೇವಳದ ಆಡಳಿತ ಮಂಡಳಿ, ಸಮಾಜ ಬಯಸಿದರೆ ಪ್ರಾಮಾಣಿಕ ಸೇವೆ ನಡೆಸಲು ಬದ್ಧ ಎಂದರು.

ಶ್ರೀದೇವಳದ ಹಿಂದಿನ ವ್ಯವಸ್ಥಾಪಕರಾದ ಜಿ.ಎಸ್.ನಾರಾಯಣ ಹೇರ್ಳೆಯವರು ದೇವಳದ ಸಿಬ್ಬಂದಿಯ ಬಗ್ಗೆ ಆಡಳಿತ ಮಂಡಳಿಯ ಮೆಚ್ಚುಗೆಯ ನುಡಿಗಳಿಗೆ ಕ್ರತಜ್ಷತೆ ಸಲ್ಲಿಸುತ್ತಾ ನಮ್ಮೆಲ್ಲ ಕೆಲಸಗಳಿಗೆ ಅಂದಂದಿನ ಆಡಳಿತ ಮಂಡಳಿ ನೀಡಿದ ಸ್ಪೂರ್ತಿ ಶ್ರೀಗುರುನರಸಿಂಹ ಹಾಗೂ ಪರಿವಾರ ದೇವತೆಗಳ ಆಶೀರ್ವಾದ ಕಾರಣ ಎಂದು ಹೇಳುತ್ತಾ ಮುಂದೆಯೂ ಸಮರ್ಪಣಾ ಭಾವದಿಂದ ದುಡಿಯುವ ಭರವಸೆ ನೀಡುತ್ತಾ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರಿಗೆ ಸಭಾಸದರಿಗೆ ಧನ್ಯವಾದ ಸಲ್ಲಿಸಿದರು.

ಎಲ್ಲರೂ ಶ್ರೀದೇವರ ಮಹಾಮಂಗಳಾರತಿಯನ್ನು ವೀಕ್ಷಿಸಿ ಭೋಜನ ಪ್ರಸಾದವನ್ನು ಸ್ವೀಕರಿಸಿ ಚದರಿದರು.

29Apr/100

Vasantha Veda Shibira

ದಿನಾಂಕ 16.04.2010 ರಂದು 3,4,5, ಮತ್ತು 17.04.2010 ರಂದು 1,2 ತರಗತಿಗಳಿಗೆ ಸಂದರ್ಶನ ನಡೆದಿದ್ದು, ಒಟ್ಟು 368 ವಿದ್ಯಾರ್ಥಿಗಳು ಭಾಗವಹಿಸಿದ್ದು ಒಟ್ಟು 13 ತರಗತಿಗಳಾಗಿ ವಿಂಗಡಿಸಿದ್ದು 15  ಗುರುಗಳು. ಪಾಠವನ್ನು ಮಾಡುತ್ತಿದ್ದಾರೆ. ರಾತ್ರಿ 262 ವಿದ್ಯಾರ್ಥಿಗಳು  ವಸತಿ ಹೊಂದಿರುತ್ತಾರೆ.

15.05.2010 ರ ಬೆಳಿಗ್ಗೆ  ಸಮಾರೋಪ ಸಮಾರಂಭ ನಡೆಯಲಿದ್ದು ಶಿಬಿರ ಮಧ್ಯಾಹ್ನ ಕೊನೆಗೊಳ್ಳಲಿದೆ.

29Apr/100

Kanyka Samskrti Shibira

ದಿನಾಂಕ 12.04.2010 ರ ಮಧ್ಯಾಹ್ನ 3-00 ರಿಂದ 14.04.2010 ರ ವರೆಗೆ ಶ್ರೀಗುರುನರಸಿಂಹ ದೇವಸ್ಥಾನ ಇವರು ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾ ವೇದಿಕೆಯ ಸಹಕಾರದೊಂದಿಗೆ ಕನ್ಯಕಾ ಸಂಸ್ಕ್ರತಿ ಶಿಬಿರವು ಯಶಸ್ವಿಯಾಗಿ ನಡೆಯಿತು.  46 ಜನ ಕನ್ಯಕಾ ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದರು.

ಉದ್ಘಟನಾ ಸಮಾರಂಭ

ಉದ್ಘಟನಾ ಸಮಾರಂಭ

ದಿನಾಂಕ 12.04.2010ರ ಮಧ್ಯಾಹ್ನ 3.00 ಕ್ಕೆ ಶ್ರೀಮತಿ ಪಾರ್ವತಿ ಐತಾಳರು ಶಿಬಿರವನ್ನು ಉದ್ಘಾಟಿಸಿದರು  ಶ್ರೀಸಿ ನರಸಿಂಹ ಮಧ್ಯಸ್ತ, ಮಾಜಿ ಸದಸ್ಯರು ಆಡಳಿತ ಮಂಡಳಿ ಶ್ರೀಗುರುನರಸಿಂಹ ದೇವಸ್ಥಾನ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು, ನೂತನ ಆಡಳಿತ ಮಂಡಳಿ ಕಾರ್ಯದರ್ಶಿ ಆನಂದರಾಮ ಮಧ್ಯಸ್ತ, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಮಧ್ಯಸ್ತ ,ಮತ್ತು ಶ್ರೀದೇವಳದ ವ್ಯವಸ್ಥಾಪಕರಾದ ಗಿಳಿಯಾರು ಶಂಕರನಾರಾಯಣ ಹೇರ್ಳೆ ಇವರು ಉಪಸ್ಥಿತರಿದ್ದರು.

ಸಭೆಯ ನಂತರ ಶ್ರೀಮತಿ ಶಾಂತ ಐತಾಳರಿಂದ "ಸಂಪ್ರದಾಯದ ಚೌಕಟ್ಟಿನಲ್ಲಿ ಸಂಸ್ಕ್ರತಿಯ ನೆಲೆಗಟ್ಟು " ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿದರು ನಂತರ ಮಹಿಳಾ ವೇದಿಕೆಯಿಂದ ವಿವಿಧ ಆಟಗಳನ್ನು ನಡೆಸಿದರು.

13.04.10ರ ಬೆಳಿಗ್ಗೆ 8.00 ರಿಂದ ಯೋಗಭ್ಯಾಸವನ್ನು ನಡೆಸಲಾಯಿತು. 9.30 ಯಿಂದ "ನಮ್ಮ ಸಂಸ್ಕ್ರತಿ -ಆಸಕ್ತಿ-ಅಭಿರುಚಿಯ" ಬಗ್ಗೆ ಶ್ರೀ ಶ್ರೀಧರ ಹಂದೆಯವರು ಉಪನ್ಯಾಸವನ್ನು ನೀಡಿದರು ಗಂಟೆ 11-00 ರಿಂದ "ಅತಿಥಿ ಸತ್ಕಾರ"ದ ಬಗ್ಗೆ ಶ್ರೀಮತಿ ಶ್ರೀಮತಿ ಮಯ್ಯರವರು ಉಪನ್ಯಾಸವನ್ನು ನೀಡಿದರು. ಮಧ್ಯಾಹ್ನ 2.30 ರಿಂದ "ರಂಗೋಲಿ" ಬಿಡಿಸುವ ಹಾಗೂ ಕರಕುಶಲ ಕಲೆಯ ಬಗ್ಗೆ ಶ್ರೀಮತಿ ಸದಾರಮೆ ಕಾರಂತರು ತರಬೇತಿ ನೀಡಿದರು. ಸಂಜೆ -4.00 ರಿಂದ ಅಂತ್ಯಾಕ್ಷರಿಯನ್ನು ನಡೆಸಲಾಯಿತು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

ದಿನಾಂಕ 14.04.2010 ರಂದು ಬೆಳಿಗ್ಗೆ 8.00 ರಿಂದ ಯೋಗಾಭ್ಯಾಸವನ್ನು ನಡೆಸಲಾಯಿತು.  ಗಂಟೆ 9.30 ರಿಂದ ಪುನಾರಾವರ್ತನೆ, ಗಂಟೆ 11-00 ರಿಂದ ಸಮಾರೋಪ ಕಾರ್ಯಕ್ರಮವನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನ ಅಡಳಿತ ಮಂಡಳಿಯ ಅಧ್ಯಕ್ಷ ಎ. ಜಗದೀಶ ಕಾರಂತರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಶ್ರೀ ಪಿ. ಸೂರ್ಯನಾರಾಯಣ ಹೇರ್ಳೆ ಹಾಗೂ ನಿವ್ರತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ ಹೊಳ್ಳ, ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಧರ್ಮರಾಯ ಹಂದೆ ಮತ್ತು ಕಾರ್ಯದರ್ಶಿ ಆನಂದರಾಮ ಮಧ್ಯಸ್ತ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಜಯಶ್ರಿ ಮಧ್ಯಸ್ತ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಶ್ರೀದೇವಳದ ವತಿಯಿಂದ ಮುಖ್ಯ ಅತಿಥಿಗಳಿಗೆ ಹಾಗೂ ಶಿಬಿರಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಿಬಿರಾರ್ಥಿಗಳು

ಶಿಬಿರಾರ್ಥಿಗಳು

ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಮಹಿಳಾ ವೇದಿಕೆ. ಸಾಲಿಗ್ರಾಮ ಅಂಗಸಂಸ್ಥೆ

ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಮಹಿಳಾ ವೇದಿಕೆ. ಸಾಲಿಗ್ರಾಮ ಅಂಗಸಂಸ್ಥೆ

29Apr/100

Abinandana & Sanmana

ದಿನಾಂಕ 02.05.2010 ರ ಭಾನುವಾರ ಸಂಜೆ 4-30 ಕ್ಕೆ ಶ್ರೀಗುರುನರಸಿಂಹ ದೇವಳದ ಜ್ಞಾನಮಂದಿರದಲ್ಲಿ ತುಮಕೂರು ಮತ್ತು ಅಮೇರಿಕಾದ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ನಮ್ಮೂರ (ಪಾರಂಪಳ್ಳಿ-ಸಾಲಿಗ್ರಾಮ) ಕೀರ್ತಿಯ MTRನ ಡಾ| ಪಾರಂಪಳ್ಳಿ ಸದಾನಂದ ಮಯ್ಯ ಇವರಿಗೆ ಸಾರ್ವಜನಿಕ ಅಭಿನಂದನೆ ಮತ್ತು ಸಂಮಾನ ಸಮಾರಂಭವು ನಡೆಯಲಿದೆ.

ಬನ್ನಿ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುವ 

ಅಧ್ಯಕ್ಷರು ಮತ್ತು ಸರ್ವಸದಸ್ಯರು

ಡಾಕ್ಟರ್‍ ಪಿ ಸದಾನಂದ ಮಯ್ಯ ಅಭಿನಂದನಾ ಸಮಿತಿ

ಕೋಟ - ಸಾಲಿಗ್ರಾಮ

Filed under: General No Comments
9Apr/100

Narasimha Jayanhi

ದಿನಾಂಕ 26.05.2010 ರಂದು ಶ್ರೀದೇವಳದಲ್ಲಿ ನರಸಿಂಹ ಜಯಂತಿ ನಡೆಯಲಿದೆ.

ಬೆಳಿಗ್ಗೆ ವಿಶೇಷಪೂಜೆ, ನವಕಪ್ರಧಾನ ಹೋಮ, ನರಸಿಂಹಹೋಮ, ಸಹಿಂತಾಭಿಷೇಕ, ಮಧ್ಯಾಹ್ನ 12.30 ಗೆ ಮಹಾಮಂಗಳಾರತಿ ನಡೆಯಲಿದೆ. 1-00 ಕ್ಕೆ ಭೋಜನಪ್ರಸಾದ

ಸಾಯಾಂಕಾಲ 7-30  ಗೆ ಮಹಾಪೂಜೆ 8.00 ಕ್ಕೆ ಹಿರೇ ರಂಗಪೂಜೆ, ಪುಷ್ಫರಥೋತ್ಸವ, ಅಷ್ಟವಧಾನ ಸೇವೆ ನಡೆಯಲಿದೆ. ನಂತರ ಪಾನಕ ಪನೀವಾರ ವಿತರಣೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಕೋರಿದೆ

9Apr/100

Adalita Mandali 2010-15

ದಿನಾಂಕ 31.03.2010 ರಂದು ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ 2010-15ನೇ ಸಾಲಿನ ಚುನಾಯಿತರಾದ 9 ಜನ ಸದಸ್ಯರಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಿ ಈ ಕೆಳಗಿನ ಪದಾಧಿಕಾರಿಗಳನ್ನು ಮುಖ್ಯ ಚುನಾವಣಾಧಿಕಾರಿಗಳು ನೇಮಿಸಿದರು. ದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಬಿ. ನಾರಾಯಣ ಸೋಮಯಾಜಿಯವರು ಅಧ್ಯಕ್ಷತೆ ವಹಿಸಿದ್ದರು, ಸದಸ್ಯರಾದ ಕೃಷ್ಣ ಹೆಬ್ಬಾರ‍್ ಉಪಸ್ಥಿತರಿದ್ದರು.

 

ನೂತನ ಆಡಳಿತ ಮಂಡಳಿ 2010-2015
ನೂತನ ಆಡಳಿತ ಮಂಡಳಿ 2010-2015

ನೂತನ ಆಡಳಿತ ಮಂಡಳಿಯ ಸದಸ್ಯರು 2010-15 

ಪೋಟೋದಲ್ಲಿ ಎಡದಿಂದ ಬಲಕ್ಕೆ

 

1. ಸದಸ್ಯರು : ಶ್ರೀ ಧರ್ಮರಾಯ ಹಂದೆ ಎಚ್

s/o ಬಲರಾಮ ಹಂದೆ ಎಚ್, ನಿವ್ರತ್ತ ಕರ್ನಾಟಕ ಬೇಂಕ್ ಅಧಿಕಾರಿ, ಮನೆ ನಂಬ್ರ. 2/44

ಹಂದಟ್ಟು, ಅಂಚೆ ಕೋಟ 576221 ಉಡುಪಿ ಜಿಲ್ಲೆ, PH. 0820-2564779,

9591144261

2. ಸದಸ್ಯರು : ಶ್ರೀ ನಾಗರಾಜ ಬಿ

s/o ಕ್ರಷ್ಣ ಭಟ್ಟ, ಪ್ರಾಂಶುಪಾಲರು. ಶ್ರೀ ಗಾಯತ್ರಿ ವಾನಿಜ್ಯ ವಿದ್ಯಾ ಶಾಲೆ ಹರಿಹರಬೀದಿ

ಶ್ರಂಗೇರಿ   PH. 9844467520

3. ಉಪಾಧ್ಯಕ್ಷರು : ಶ್ರೀ ಭಾಸ್ಕರ ನಾವಡ

s/o ಅನಂತರಾಮ ನಾವಡ, ನಿವ್ರತ್ತ ಬೇಂಕ್ ಅಧಿಕಾರಿ "ಪ್ರಸನ್ನ ಲಕ್ಷ್ಮೀ" ಅಬ್ಬಗಾರ್ಡನ್

ಜಾರಾಂದಾಯ ದೇವಸ್ಥಾನದ ರಸ್ತೆ ಉರ್ವ ಮಾರ್ಕೇಟ್ ಮಂಗಳೂರು -570006

PH : 934356081

4. ಅಧ್ಯಕ್ಷರು : ಶ್ರೀ ಎ. ಜಗದೀಶ ಕಾರಂತ

s/o ಶ್ರೀನಿವಾಸ ಕಾರಂತ, ಕ್ರಷಿ. ಐರೋಡಿ ಸಾಸ್ತಾನ ಅಂಚೆ -576226 ಉಡುಪಿ ಜಿಲ್ಲೆ

PH. 0820-2584605, 9972095779

5. ಕಾರ್ಯದರ್ಶಿ : ಶ್ರೀ ಆನಂದರಾಮ ಮಧ್ಯಸ್ತ

s/o ಶ್ರೀನಿವಾಸ ಮಧ್ಯಸ್ತ, ನಿವ್ರತ್ತ ತಹಶೀಲ್ದಾರರು, "ಶ್ರೀಗಿರಿ ಭಾಸ್ಕರ" ಪಾರಂಪಳ್ಳಿ

ಸಾಲಿಗ್ರಾಮ 576225     PH. 0820-2565157, 9448219042

6. ಸದಸ್ಯರು : ಯಜ್ಞನಾರಾಯಣ ಹೇರ್ಳೆ ಕೆ

s/o ವೆಂಕಪ್ಪಯ್ಯ ಕೆ.  687 , 7ನೇ ಮೈನ್ 3ನೇಹಂತ ಜೆಪಿನಗರ ಬೆಂಗಳೂರು. 560078

PH. 9845030484

7.ಸದಸ್ಯರು :  ಕೃಷ್ಣ ಹೊಳ್ಳ ಎನ್

s/o ಗೋಪಾಲಕೃಷ್ಣ ಹೊಳ್ಳ, "ಶ್ರೀಕ್ರಪಾ" ನೀರಾಳ ಮನೆ ಅಂಚೆ ಸಿರಿಬಾಗಿಲು 671124.

PH. 09495534763

8. ಕೋಶಾಧಿಕಾರಿ : ಶ್ರೀ ಸದಾರಾಮ ಹೇರ್ಳೆ ವೈ

s/o ಮರಿಯಪ್ಪ ಹೇರ್ಳೆ ಎಡಬೆಟ್ಟು, ವಾಸವಿ, ಸಪ್ತಗಿರಿ ನಗರ ಮಣಿಪಾಲ 576104,

ಉಡುಪಿ ಜಿಲ್ಲೆ   PH. 0820-2572255, 9448724164

9. ಸದಸ್ಯರು : ವೇ.ಮು ಶ್ರೀ ಅನಂತಪದ್ಮನಾಭ ಐತಾಳ

s/o ಸದಾಶಿವ ಐತಾಳ ಪುರೋಹಿತರು ಹಲಸಿನಕಟ್ಟೆ, ಅಂಚೆ ಕೋಟ- 576221

PH. 0820-2564789, 98806027691

ನೂತನ ಆಡಳಿತ ಮಂಡಳಿಯ ಪ್ರಥಮ ಸಭೆ ದಿನಾಂಕ 06.04.2010 ರಂದು ಪೂವಾಹ್ನ 11-00 ಗಂಟೆಗೆ ಶ್ರೀದೇವಳದ ಸಭಾಭವನದಲ್ಲಿ ನಡೆದಿದ್ದು  ಅಂದು ನೂತನ ಆಡಳಿತ ಮಂಡಳಿಯು, ನಿರ್ಗಮನ ಆಡಳಿತ ಮಂಡಳಿಯವರಿಂದ ಸಂಪೂರ್ಣ ಅಧಿಕಾರವನ್ನು ಪಡೆಯಲಾಗಿದೆ.

5Apr/100

Sneha Sammilana

Sneha Sammilana 1

 ಆಡಳಿತ ಮಂಡಳಿ ಸದಸ್ಯರ ಆಗಮನ 2010-15  ನಿರ್ಗಮನ 2005-10 ಮತ್ತು ಸಮಾಜ ಬಾಂಧವರ ಸ್ನೇಹ ಸಮ್ಮಿಲನವು ದಿನಾಂಕ 11.04.2010 ರ ಪೂರ್ವಾಹ್ನ ಶ್ರೀದೇವಳದ ಜ್ಞಾನಮಂದಿರ ಸಭಾಭವನದಲ್ಲಿ ನಡೆಯಲಿದೆ.ಈ ಸಮಾರಂಭಕ್ಕೆ ನೀವೆಲ್ಲರೂ ನಿಮ್ಮವರೊಡನೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ.

2Apr/100

Anjaneyaya Jayanthi Acharane

ಶ್ರೀದೇವಳದಲ್ಲಿ 30.03.2010 ರಂದು ಶ್ರೀಆಂಜನೇಯ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಪೂರ್ವಾಹ್ನ 6.00 ಗಂಟೆಗೆ ಪಂಚವಿಶಂತಿ ಕಲಶ, ನವಕಪ್ರಧಾನಹೋಮ, ಕಲಾಶಾಭಿಷೇಕ, ಹಾಗೂ ಶ್ರೀದೇವರಿಗೆ ವಿಶೇಷ ಪೂಜೆಯನ್ನು  ಶ್ರೀದೇವಳದ ಜೋಯಿಸರಾದ ಶ್ರೀ ವೇ.ಮು.ರತ್ನಾಕರ ಸೋಮಯಾಜಿಯವರ  ನೇತ್ರತ್ವದಲ್ಲಿ ಅರ್ಚಕ ಶ್ರೀ ವೇ.ಮು. ವಿಜಯಕುಮಾರ ಅಡಿಗರ ಸಹಕಾರದಲ್ಲಿ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀಕೊಡೇರಿ ವಾಸುದೇವ ಕಾರಂತರ ಯಜಮಾನತ್ವದಲ್ಲಿ ನೇರವೇರಿಸಲಾಯಿತು. ಪೂರ್ವಾಹ್ನದ ಸೇವೆಯ ಎಲ್ಲಾ ಖರ್ಚನ್ನು ಶ್ರೀ ಕೊಡೇರಿ ವಾಸುದೇವ ಕಾರಂತರು ವಹಿಸಿದ್ದರು.

ಸಂಜೆ 7.30 ಗೆ ವಿಶೇಷಪೂಜೆ ಮಹಾರಂಗಪೂಜೆ ನೇರವೇರಿಸಲಾಯಿತು. ನಂತರ ಪಾನಕ ಪನಿವಾರವನ್ನು  ನೆರದಿದ್ದ ಭಕ್ತರಿಗೆ ಹಂಚಲಾಯಿತು.

ವಿಶೇಷ ಆಕರ್ಷಣೆಯಾಗಿ ಭಕ್ತರಿಂದ ಕರ್ಪೂರವನ್ನು ಶ್ರೀಆಂಜನೇಯ ದೇವಳದಿಂದ ಶ್ರೀಗುರುನರಸಿಂಹ ದೇವಸ್ಥಾನದ ಧ್ವಜಸ್ತಂಭದವರಿಗೆ ಹಚ್ಚಲಾಯಿತು.ಮತ್ತು ಆಂಜನೇಯ ಸೇವಾಸಮಿತಿ ಹಾಗೂ ಪೇಟೆ ಹತ್ತು ಸಮಸ್ತರಿಂದ ಹಲವು ಬಗೆಯ ವಿಶೇಷ ಪ್ರಸಾದವನ್ನು ಭಕ್ತಾದಿಗಳಿಗೆ ಹಂಚಲಾಯಿತು.ಮತ್ತು ಕಲಾವೇದಿಕೆ ಸಾಲಿಗ್ರಾಮ, ಇವರಿಂದ ಶ್ರೀದೇವಳದ ರಥಬೀದಿಯಲ್ಲಿ ಸಂಜೆ 7-00 ರಿಂದ ಸಭಾಕಾರ್ಯಕ್ರಮ, ಜನಪದ ನ್ರತ್ಯ ವೈಭವ, ವಿವಿಧ ಮನೋರಂಜನೆಗಳು,ಹಾಗೂ ಚೇರ್ಕಾಡಿಯ ಕಲಾಶ್ರೀ ಬಾಲಕಿಯರ ಯಕ್ಷಗಾನ ಮಂಡಳಿಯಿಂದ ಶ್ರೀ ಕ್ರಷ್ಣ ಪಾರಿಜಾತ ಎನ್ನುವ ಪ್ರಸಂಗವನ್ನು ಆಡಿತೋರಿಸಿದರು.