Paraspara e-KootaBandhu for quicker news

27May/100

Narasimha Jayanthi Acharane

ಶ್ರೀಗುರುನರಸಿಂಹ ದೇವಾಸ್ಥಾನದಲ್ಲಿ ವಾಡಿಕೆಯಂತೆ ನರಸಿಂಹ ಜಯಂತಿಯನ್ನು 26.05.2010 ರಂದು ಅದ್ದೂರಿಯಿಂದ ಆಚರಿಸಲಾಯಿತು. ಪೂರ್ವಾಹ್ನ  ನರಸಿಂಹ ಹೋಮ,  ನವಕಪ್ರಧಾನ ಕಲಶಾಭಿಷೇಕ,  ಸಂಹಿತಾಭಿಷೇಕಗಳು ಶಾಸ್ತ್ರೋಕ್ತವಾಗಿ ನಡೆದವು. ಮಧ್ಯಾಹ್ನ ಮಹಾಪೂಜೆಯ ನಂತರ ಭೋಜನ ಪ್ರಸಾದವನ್ನು  ಭಕ್ತರು ಸ್ವೀಕರಿಸಿದರು.

ಸಂಜೆ ಪ್ರದೋಷ ಕಾಲದಲ್ಲಿ ಸಂಜೆಯ ಪೂಜೆಗಳು ಸಾಂಗವಾಗಿ ನೇರವೇರಿದವು ಅಷ್ಟಾವಧಾನ ಸೇವೆಯ ನಂತರ ಶ್ರೀದೇವಳದಿಂದ ಪಾನಕ ಪನಿವಾರವನ್ನು ಗ್ರಾಮಮೋಕ್ತೇಸರ ಒಕ್ಕೂಟದಿಂದ ಹಣ್ಣುಹಂಪಲುಗಳನ್ನು ಪ್ರಸಾದರೂಪದಲ್ಲಿ ವಿತರಿಸಲಾಯಿತು.

ರಾತ್ರಿ ವಾಡಿಕೆಯಂತೆ ಹಿರಿರಂಗಪೂಜೆ ಪುಷ್ಫರಥೋತ್ಸವಗಳು ವಿಜ್ರಂಭಣೆಯಿಂದ ನಡೆದವು. 

ಧಾರ್ಮಿಕ ಕಾರ್ಯಕ್ರಮಗಳನ್ನು ವೇ.ಮು.ಶ್ರೀ ರತ್ನಾಕರ ಸೋಮಯಾಜಿಗಳು, ಅರ್ಚಕ ಶ್ರೀ ಜನಾರ್ಧನ ಅಡಿಗರು, ಸಹಕಾರದೊಂದಿಗೆ ಇತರ ವೈದಿಕರ ನೆರವಿನೊಂದಿಗೆ ನಡೆಸಿಕೊಟ್ಟರು. ಈ ಸೇವೆಯ ಕತ್ರ ಆಗಿ ಉಜಿರೆಯ ಶ್ರೀಮತಿ ದೇವಕಿ ಶ್ರೀ ವಿಶ್ವನಾಥ ದಂಪತಿಗಳು ಬೆಳಗಿನಿಂದ ರಾತ್ರಿಯವರೆಗೆ ತಮ್ಮನ್ನು ಸ್ವಾಮಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆಡಳಿತ ಮಂಡಳಿಯ ಅಧ್ಯಕ್ಷ ಎ.ಜಗದೀಶ ಕಾರಂತ ಸಹ ಧರ್ಮದರ್ಶಿಗಳಾದ ಶ್ರೀ ಸದಾರಾಮ ಹೇರ್ಳೆ, ಶ್ರೀಧರ್ಮರಾಯ ಹಂದೆಯವರ ಮಾರ್ಗದರ್ಶನದಲ್ಲಿ ದೇವಳದ ಶಿಂಬಧಿಗಳ ಸಹಕಾರದೊಂದಿಗೆ ನರಸಿಂಹ ಜಯಂತಿಯ ಕಾರ್ಯಕ್ರಮಗಳು ಯಶಸ್ಚಿಯಾಗಿ ಮುಗಿದವು.

26May/100

Rajatha Prabhavali Smarpane

ಬೆಳ್ಳಿ ಪ್ರಭಾವಳಿ ಸಮರ್ಪಣೆ

ಬೆಳ್ಳಿ ಪ್ರಭಾವಳಿ ಸಮರ್ಪಣೆ

ಶ್ರೀ ಗುರುನರಸಿಂಹ ದೇವರಲ್ಲಿ ಪಾರ್ಥಿಸಿಕೊಂಡಂತೆ ಕಾರ್ಯಸಿದ್ದಿ ಹೊಂದಿ ಸಂತ್ರಪ್ತಿಯಿಂದ ಶ್ರೀದೇವರಿಗೆ ಬೆಳ್ಳಿಯ ಪ್ರಭಾವಳಿಯನ್ನು (ಅಂದಾಜು ವೆಚ್ಚ  1.25 ಲಕ್ಷ)

ಬಿ.ಜಿ. ಗಣೇಶ ಭಟ್

ಬಿ.ಜಿ. ಗಣೇಶ ಭಟ್

ಮಂಗಳೂರು ಮಯ್ಯಾಡಿಯ ಗಣೇಶ ಬಿ.ಜಿ. ದಂಪತಿಗಳು ದಿನಾಂಕ 15.5.2010 ರಂದು ಶಾಸ್ತ್ರೋಕ್ತವಾಗಿ ಶ್ರೀದೇವರಿಗೆ ಬೆಳ್ಳಿ ಪ್ರಭಾವಳಿಯನ್ನು ಸಮರ್ಪಿಸಿದರು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ. ಜಗದೀಶ ಕಾರಂತರು ಅದನ್ನು ಸ್ವೀಕರಿಸಿ ದೇವಳದ ಸಂಪ್ರದಾಯದಂತೆ ಗಣೇಶ ಬಿ.ಜಿ ದಂಪತಿಗಳನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಆಡಳಿತ ಮಂಡಳಿಯ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ  ಶ್ರೀ ಪಿ. ನರಸಿಂಹ ಹೊಳ್ಳ ಬೆಂಗಳೂರು. ಇವರು ತನ್ನ ತಾಯಿ ದಿ. ಸಾವಿತ್ರಮ್ಮ ಮತ್ತು ಪತ್ನಿ ದಿ. ವಿಶಾಲಾಕ್ಷಿ ಇವರ ಸ್ಮರಣಾರ್ಥ ಅಂದಾಜು 15.ಗ್ರಾಂ ತೂಕದ, ಅಂದಾಜು 25,670/- ರೂಪಾಯಿ ಮೌಲ್ಯದ ಚಿನ್ನದ ಗುಂಡುಮಣಿ ಸರವನ್ನು ಶ್ರೀದೇವರಿಗೆ ಸಮರ್ಪಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಎ.ಜಗದೀಶ ಕಾರಂತರು ಚಿನ್ನದ ಗುಂಡುಮಣಿ ಸರವನ್ನು ಸ್ವೀಕರಿಸಿದರು, ಮತ್ತು ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಪಿ.ಸೂರ್ಯನಾರಾಯಣ ಹೇರ್ಳೆಯವರು ಶ್ರೀದೇವಳದ ಸಂಪ್ರದಾಯದಂತೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ಶ್ರೀ ಪಿ. ನರಸಿಂಹ ಹೊಳ್ಳ

ಶ್ರೀ ಪಿ. ನರಸಿಂಹ ಹೊಳ್ಳ

25May/100

Nigamagama Patha Shale

ಶ್ರೀ ಗುರುನರಸಿಂಹ ನಿಗಮಾಗಮ ಪಾಠ ಶಾಲೆ ಸಾಲಿಗ್ರಾಮ ಉಡುಪಿ ಜಿಲ್ಲೆ

                   ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ, ಉಡುಪಿ ಜಿಲ್ಲೆ ಇವರು ನಡೆಸಿಕೊಂಡು ಬರುತ್ತಿರುವ ಶ್ರೀಗುರುನರಸಿಂಹ ನಿಗಮಾಗಮ ಪಾಠಶಾಲೆಯಲ್ಲಿ ಋಗ್ವೇದಾಧ್ಯಯನ ಮತ್ತು ವಾತುಲಾದ್ಯಾಗಮ  ತರಗತಿಗಳ ಪ್ರವೇಶಕ್ಕಾಗಿ ಉಪವೀತರಾದ ಸ್ಮಾರ್ತ ವಿಪ್ರ ವಟುಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಋಗ್ವೇದದ ಪ್ರಥಮ ಪ್ರವೇಶ ಮುಲ ಪರೀಕ್ಷೆಗೆ, ಧಾರ್ಮಿಕ ದತ್ತಿ ಇಲಾಖೆ ನಡೆಸುವ ವಾತುಲಾದ್ಯಾಗಮ ಪ್ರವರ ಪರೀಕ್ಷೆಗೆ ತರಬೇತಿ ನೀಡಲಾಗುವುದು. ಈಗ ದೇವಸ್ಥಾನಗಳಿಗೆ ಜ್ಯಾರಿಗೆ  ಬಂದ ಹೊಸ ನಿಯಾಮವಳಿಯಂತೆ ಅರ್ಚಕರಾಗಿ ಕೆಲಸ ಮಾಡಲು ವೇದಾಧ್ಯಯನ ಮಾನ್ಯತೆ ಪಡೆದ ದ್ರಢಪತ್ರಿಕೆ ಪಡೆದಿರಬೇಕು.

               ಆಸಕ್ತ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಂದರ್ಶನಕ್ಕೆ ದಿನಾಂಕ 31.05.2010 ರಂದು ಪೂರ್ವಾಹ್ನ 11 ಗಂಟೆಗೆ ದೇವಳದ ಪಾಠಶಾಲೆಯ ಕಛೇರಿಯಲ್ಲಿ ಹಾಜರಿರುವಂತೆ ಆಡಳಿತ ಮಂಡಳಿಯ ಅಧ್ಯಕ್ಷರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

              ಆಯ್ಕೆಯಾದ ವಟುಗಳಿಗೆ ಉಚಿತ ಊಟ, ವಸತಿ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಪಾಠಶಾಲೆಯ ಪ್ರಾಂಶುಪಾಲರಾದ ಶ್ರೀ ಡಾ|| ನಿಟಿಲಾಪುರ ಕ್ರಷ್ಣಮುರ್ತಿ ಕಾರಂತ್ ಇವರನ್ನು ಸಂಪರ್ಕಿಸಿರಿ. ದೂರವಾಣಿ:- 9480228495 (ದೇವಳದ ಕಛೇರಿ:- 0820-2564544, 3204544)

19May/100

Vasantha Veda Shibira- Samaropa

ವಸಂತವೇದ ಶಿಬಿರ 2010

ವಸಂತವೇದ ಶಿಬಿರ 2010

ಶ್ರೀಗುರುನರಸಿಂಹ ದೇವಳವು ಕಳೆದ ಕೆಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವವ 1 ತಿಂಗಳ ವಸಂತವೇದ ಶಿಬಿರವು ಈ ವರ್ಷವೂ ಏಪ್ರೀಲ್ 16 ರಿಂದ ಪ್ರಾರಂಭವಾಗಿ ಮೇ 12 ರವರೆಗೆ ನಡೆದಿದ್ದು ಅದರ ಸಮಾರೋಪ ಸಮಾರಂಭವು 12.05.2010 ಶ್ರೀದೇವಳದ ಜ್ಞಾನಮಂದಿರ ಸಭಾಭವನದಲ್ಲಿ ನಡೆಯಿತು

ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ

ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀದೇವಳದ ಆಡಳಿತಮಂಡಳಿಯ ಅಧ್ಯಕ್ಷ ಶ್ರೀ.ಎ ಜಗದೀಶ ಕಾರಂತರು ವಹಿಸಿದ್ದರು. ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಪಿ.ಸೂರ್ಯನಾರಾಯಣ  ಹೇರ್ಳೆಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ದೇವಳದ ಆಡಳಿತ ಮಂಡಳಿ ಸದಸ್ಯರುಗಳಾದ ನೀರಾಳ ಶ್ರೀ ಕ್ರಷ್ಣ ಹೊಳ್ಳ ವೇ.ಮು.ಶ್ರೀ ಅನಂತಪದ್ಮನಾಭ ಐತಾಳ, ಶ್ರೀ ಎಚ್ ಧರ್ಮರಾಯ ಹಂದೆ, ಶ್ರೀ ವೈ. ಸದಾರಾಮ ಹೇರ್ಳೆ ಮತ್ತು ಶ್ರೀ ಪಿ. ಆನಂದರಾಮ ಮದ್ಯಸ್ತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪ್ರದಾಯದಂತೆ ಶಿಬಿರಾರ್ಥಿಗಳ ವೇದಘೋಷದ ಪ್ರಾರ್ಥನೆಯೊಂದಿಗೆ ಸಭೆ ಪಾರಂಭವಾಯಿತು.

ಶಿಬಿರದ ನಿರ್ದೇಶಕರಾದ ಡಾ| ನಿಟಿಲಾಪುರ ಕ್ರಷ್ಣಮುರ್ತಿಯವರು ಶಿಬಿರದ ಉದ್ದೇಶದ ಕುರಿತು ಪ್ರಸ್ತಾವನೆಯೊಂದಿಗೆ ವೇದಿಕೆಯಲ್ಲಿ ಆಸೀನರಾದ ಎಲ್ಲರನ್ನೂ ಶಿಬಿರಾರ್ಥಿಗಳನ್ನು ಅವರ ಹೆತ್ತವರನ್ನು ಹ್ರತ್ಫೂರ್ವಕವಾಗಿ ಸ್ವಾಗತಿಸಿದರು.

ಶಿಬಿರದ ಸಂಕ್ಷಿಪ್ತ ವರದಿಯನ್ನು ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ವೈ ಸದಾರಾಮ ಹೇರ್ಳೆಯವರು ವಾಚಿಸಿದರು. ಒಟ್ಟು 13 ತರಗತಿಗಳಲ್ಲಿ 352 ಶಿಬಿರಾರ್ಥಿಗಳು ಆಭ್ಯಸಿಸಿದ್ದು ಪ್ರತಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ ದ್ವಿತೀಯ ಸ್ಥಾನಿಗಳಿಗೆ ಧಾರ್ಮಿಕ ಗ್ರಂಥಗಳನ್ನು ಬಹುಮಾನರೂಪವಾಗಿ ನೀಡಿ ಪ್ರೋತ್ಸಾಹಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಬಹುಮಾನ ವಿತರಸಿದ ಶ್ರೀ ಪಿ.  ಸೂರ್ಯನಾತಾಯಣ ಹೇರ್ಳೆಯವರು ತಮ್ಮ ಸುದೀರ್ಘ ಆಡಳಿತಮಂಡಳಿಯ ಪದಾಧಿಕಾರಿಗಳಾಗಿ ದುಡಿದ ಅವಧಿಯ ಅನುಭವಗಳನ್ನು ಮೆಲುಕು ಹಾಕುತ್ತಾ ಮುಂದಿನ ದಿನಗಳಲ್ಲಿ ಈ ಶಿಬಿರವು ಇನ್ನಷ್ಟು ವಿದ್ಯಾರ್ಥಿಗಳನ್ನು ತನ್ನತ್ತ ಸೇಳೆಯುವಂತಾಗಲಿ ಎಂದು ಆಶಿಸಿದರು.

ಶ್ರೀ ಪ್ರೋ. ಉಪೇಂದ್ರ ಸೋಮಯಾಜಿ

ಶ್ರೀ ಪ್ರೋ. ಉಪೇಂದ್ರ ಸೋಮಯಾಜಿ

ಈ ವರ್ಷದ ಶಿಬಿರದಲ್ಲಿ ಸಂಜೆಯ ಬಿಡುವಿನ ಸಮಯದಲ್ಲಿ ಮಹಾಭಾರತದ, ರಾಮಾಯಣದ, ನೀತಿಕಥೆಗಳು, ಮೋಜಿನ ಆಟ ಮೊದಲಾದವುಗಳನ್ನು ಪ್ರತಿ ದಿನ ಸಂಜೆ ಒಂದು ಗಂಟೆಯ ಅವಧಿಯಲ್ಲಿ ನಡೆಸಿಕೊಟ್ಟ ಪ್ರೋ. ಶ್ರೀ ಉಪೇಂದ್ರ ಸೋಮಯಾಜಿ,  ಶ್ರೀ ಪಿ. ನರಸಿಂಹ ಐತಾಳ ಮತ್ತು  ಶ್ರೀ ನಿಲಾವರ ಸುರೇಂದ್ರ ಅಡಿಗ,  ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.

ಶ್ರೀ ಪಿ. ನರಸಿಂಹ ಐತಾಳ

ಶ್ರೀ ಪಿ. ನರಸಿಂಹ ಐತಾಳ

ಸಂಪನ್ಮೂಲ ವ್ಯಕ್ತಿಗಳಾಗಿ  ಆಗಮಿಸಿದ ಇವರುಗಳು ಮಕ್ಕಳೊಡನೆ ಬೆರೆಯಲು ಅವಕಾಶ ಕಲ್ಪಿಸಿಕೊಟ್ಟ ಶ್ರೀದೇವಳದ ಆಡಳಿತಮಂಡಳಿಗೆ ಕ್ರತಜ್ಞತೆ ಸೂಚಿಸುತ್ತಾ ಈ ಕಾರ್ಯಕ್ರಮಗಳಲ್ಲಿ ಎಲ್ಲಾ ಮಕ್ಕಳು ಭಾಗಿಯಾಗುವಂತಾದರೆ ಹೆಚ್ಚು ಪ್ರಯೋಜಕಾರಿಯಾಗುತ್ತಿತ್ತು. ಎಂದು ಅಭಿಪ್ರಾಯ ಪಟ್ಟರು.

ನಂತರ ಗುರುಗಳಾಗಿ ಕೆಲಸ ನಿರ್ವಹಿಸಿದ ಎಲ್ಲಾ ಗುರುಗಳಿಗೆ ಪ್ರಸಾದ ರೂಪದ ಸಂಭಾವನೆ ನೀಡಿ ಗೌರವಿಸಲಾಯಿತು. ಗುರುಗಳೆಲ್ಲರ ಪರವಾಗಿ ವೇ.ಮು.ಶ್ರೀ ಗುಂಡ್ಮಿ ಗಣಪಯ್ಯ ಹೊಳ್ಳರು ತಮ್ಮ ಅನಿಸಿಕೆಯನ್ನು ಹೇಳುತ್ತಾ ಇಲ್ಲಿ ಕಲಿತದ್ದನ್ನು ಅಭ್ಯಸಿಸುವಂತೆ 5 ವರ್ಷವೂ ಶಿಬಿರದಲ್ಲಿ ಭಾಗಿಗಳಾಗಿ ಬ್ರಾಹ್ಮಣರಿಗೆ ಭೂಷಣ ಪ್ರಾಯವಾದ ವೇದ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಮಕ್ಕಳ ಹೆತ್ತವರ/ರಕ್ಷಕರ ಪರವಾಗಿ ಶ್ರೀ ಕೆ. ಸುಬ್ರಾಯ ತುಂಗ ಕೋಟತಟ್ಟು, ಶ್ರೀಮತಿ ರಾಜಲಕ್ಷ್ಮೀ ಕುಂದಾಪುರ, ಶ್ರೀಮತಿ ಪದ್ಮಾವತಿ ಬೆಂಗಳೂರು ಇವರುಗಳು ಶಿಬಿರದ ಉಪಯುಕ್ತತೆಯ ಬಗ್ಗೆ ಹೇಳುತ್ತಾ ಇದೊಂದು ಅತ್ಯತ್ತಮ ಯೋಜನೆ ಎಂದು ಶ್ಲಾಘಿಸಿದರು. ಅಲ್ಲದೆ ಆಡಳಿತ ಮಂಡಳಿಗೆ ಅಭಿಮಾನ ಪೂರ್ವಕ ಕ್ರತಜ್ಞತೆ ಸಲ್ಲಿಸಿದರು.

ಆಡಳಿತ ಮಂಡಳಿಯ ಸದಸ್ಯ ವೇ.ಮು.ಶ್ರೀ ಅನಂತಪದ್ಮನಾಭ ಐತಾಳರು ಆಡಳಿತ ಮಂಡಳಿಯ ದ್ರಷ್ಟಿಕೋನದಲ್ಲಿ ಶಿಬಿರದ ಸಾಧಕ ಬಾಧಕಗಳನ್ನು ವಿವರಿಸುತ್ತಾ ಮಕ್ಕಳ ಹೆತ್ತವರಿಂದ ಬಂದ ಸೂಚನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ  ಅವುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಬಿರದ ಉದ್ದೇಶ ಸಾರ್ಥಕವಾಗಬೇಕು, ಮಕ್ಕಳು ಹೆತ್ತವರು ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಬೇಕು. ಮುಂದಿನ ದಿನಗಳಲ್ಲಿ ಆಸಕ್ತಿ ಇರುವ ಮಕ್ಕಳ ಸೇರ್ಪಡೆಗೆ ಹೆಚ್ಚು ಒತ್ತು ನೀಡಲಾಗುವುದು. ದೇವಳದ ಹಣ ಸಾರ್ಥಕವಾಗಬೇಕು, ಈ ಶಿಬಿರದಂತಹ ಯಾವುದೇ ಉತ್ತಮ ಯೋಜನೆಗಳನ್ನು ನೂತನ ಆಡಳಿತಮಂಡಳಿ ಕೈಬಿಡುವುದಿಲ್ಲ ಎಂದರು. ಶಿಬಿರದ ಯಶಸ್ಸಿಗೆ ಕಾರಣರಾದ ಗುರುಗಳನ್ನು, ಮಕ್ಕಳನ್ನು, ಮಕ್ಕಳ ಹೆತ್ತವರನ್ನು, ಸಂಪನ್ಮೂಲ ವ್ಯಕ್ತಿಗಳನ್ನು, ದೇವಳದ ಶಿಬಂಧಿ ವರ್ಗದವರ ಶ್ರಮವನ್ನು ಸ್ಮರಿಸಿಕೊಂಡರು.

ದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಪಿ.ಆನಂದರಾಮ ಮಧ್ಯಸ್ತರು ಸಂಬಂಧಿಸಿದ ಎಲ್ಲರಿಗೆ ಕ್ರತಜ್ಞತೆಯನ್ನು ಸೂಚಿಸುತ್ತಾ ಶಿಬಿರದ ಯಶಸ್ಸಿಗೆ ಮಕ್ಕಳ ಹೆತ್ತವರ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ ಎಂದರು.

ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು. ಶ್ರೀದೇವರ ಮಹಾಮಂಗಳಾರತಿಯನ್ನು ವೀಕ್ಷಿಸಿ ಭೋಜನಪ್ರಸಾದ ಸ್ವೀಕರಿಸಿ ಎಲ್ಲರೂ ಚದರಿದರು.