Paraspara e-KootaBandhu for quicker news

24Jun/100

Shravana Shanivara

ಶ್ರೀದೇವಳದಲ್ಲಿ  ವಿಶೇಷ ಆಚರಣೆಯಾಗಿ ಶ್ರಾವಣ ಶನಿವಾರವು ದಿನಾಂಕ 14.08.2010,  21.08.2010, 28.08.2010, ಮತ್ತು 04.09.2010ರಂದು ನಡೆಯಲಿದೆ. ಭಕ್ತಾದಿಗಳು ಶ್ರೀಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಸೇವೆಯಲ್ಲಿ ಭಾಗವಹಿಸಲು ಆಡಳಿತ ಮಂಡಳಿ ಕೋರಿದೆ

20Jun/100

Elaneeru Abhisheka

ದಿನಾಂಕ 15.06.2010 ರ ಮಿಥುನ ಸಂಕ್ರಮಣದಂದು ಭಕ್ತರು ಸಮರ್ಪಿಸಿದ ಸುಮಾರು  2,000 ಏಳನೀರಿನಿಂದ ವೇದ ಪಾಠಶಾಲೆಯ ಗುರುಗಳು, ವಿಧ್ಯಾರ್ಥಿಗಳು ಮತ್ತು ಋತ್ವಿಜರ ವೇದಘೊಷದೊಂದಿಗೆ ಮಂಗಳವಾದ್ಯದೊಂದಿಗೆ ಸೀಯಾಳಾಭಿಷೇಕವನ್ನು ಶ್ರೀಗುರುನರಸಿಂಹ, ಶ್ರೀಆಂಜನೇಯ, ಶ್ರೀದುರ್ಗಾಪರಮೇಶ್ವರಿ, ಶ್ರೀಗಣಪತಿ ಮತ್ತು ನಾಗಸನ್ನಿದಿಯಲ್ಲಿ ನೇರವೇರಿಸಲಾಯಿತು.

ಸಾಧಾರಣ 500 ಜನ ಭಕ್ತಾದಿಗಳು ಈ ಸೇವೆಯಲ್ಲಿ ಭಾಗವಹಿಸಿದ್ದರು, ಮಧ್ಯಾಹ್ನ 12.30 ಗೆ ಮಹಾಮಂಗಳಾರತಿಯನ್ನು ಮಾಡಿ ಅಲಂಕರಿಸಿದ ಬಲಿಮೂರ್ತಿಯೊಂದಿಗೆ ವಿಶೇಷ ಬಲಿಯೊಂದಿಗೆ ಶ್ರೀ ಆಂಜನೇಯ ದೇವರ ಸನ್ನಿಧಿಯವರೆಗೆ ಪುಷ್ಫರಥವನ್ನು ಎಳೆಯಲಾಯಿತು. ನಂತರ ಭೊಜನ ಪ್ರಸಾದವನ್ನು ಸ್ವೀಕರಿಸಿ ಚದುರಿದರು.

1Jun/100

Koota Mahajagattu saligrama

ದಿನಾಂಕ 05.06.2010 ರ ಶನಿವಾರ  ಸಂಜೆ 5.00 ಕ್ಕೆ ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಸದಸ್ಯರ ಸಭೆಯು ಅಂಗಸಂಸ್ಥೆಯ ಅಧ್ಯಕ್ಷರಾದ  ಶ್ರೀ ಎ. ಜಗದೀಶ ಕಾರಂತರ ಅಧ್ಯಕ್ಷತೆಯಲ್ಲಿ ಕೂಟಬಂಧು ಭವನದಲ್ಲಿ  ನಡೆಯಲಿದೆ.  ಎಲ್ಲಾ ಸದಸ್ಯರು ಈ ಸಭೆಯಲ್ಲಿ ಹಾಜರಿರುವಂತೆ ಕೋರಿದೆ.

1Jun/100

Elaneeru Abhisheka

ದಿನಾಂಕ  15.06.2010 ರಂದು ಶ್ರೀದೇವಳದಲ್ಲಿ ಮಿಥುನ ಸಂಕ್ರಮಣ ಆಚರಣೆ, ಗಣಹೋಮ, ಪುಷ್ಫರಥೋತ್ಸವ,  ಸೀಯಾಳಭಿಷೇಕ

ಪೂರ್ವಾಹ್ನ 10-00 ರಿಂದ  ಉತ್ತಮ ಮಳೆ ಬೆಳೆ ಮತ್ತು ಲೋಕ ಕಲ್ಯಾಣಕ್ಕಾಗಿ  ಶ್ರೀಗುರುನರಸಿಂಹ ದೇವರು ಮತ್ತು ಪರಿವಾರ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಸಹಸ್ರ ಎಳನೀರು ಅಭಿಷೇಕವನ್ನು ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಳನೀರನ್ನು (ಸೀಯಾಳ,ಬೊಂಡ) ತಂದು ಶ್ರೀದೇವರ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀದೇವಳದ ಆಡಳಿತ ಮಂಡಳಿಯು ಕೋರಿದೆ.