Paraspara e-KootaBandhu for quicker news

25Jul/100

Shakala Ruk Shintha Yaga

      

ಯುವ ಮತ್ತು ವಿಪ್ರ ವ್ರಂದ ಕುಂದಾಪುರ

ಯುವ ಮತ್ತು ವಿಪ್ರ ವ್ರಂದ ಕುಂದಾಪುರ

        ಶ್ರೀದೇವಳದಲ್ಲಿ ದಿನಾಂಕ 15.07.2010 ರಿಂದ 22.07.2010 ರವರೆಗೆ  ಯುವ ಮತ್ತು ವಿಪ್ರ ವ್ರಂದ ಕುಂದಾಪುರ ಇವರು ಶ್ರೀದೇವಳದ ಸಹಕಾರದೊಂದಿಗೆ ಶಾಕಲ ಋಕ್ ಸಂಹಿತಾಯಾಗ ಯಶಸ್ವಿಯಾಗಿ ನೇರವೇರಿಸಿದರು

      8 ದಿನಗಳ ಕಾಲ ಬೆಳಿಗ್ಗೆ 6-00 ರಿಂದ 12-00 ರತನಕ ಯಾಗ ಮಧ್ಯಾಹ್ನ 1-00 ಕ್ಕೆ ಭೋಜನ ಪ್ರಸಾದ ಹಾಗೂ 7 ದಿನಗಳ ಸಂಜೆ 6-00 ಕ್ಕೆ ಅಷ್ಟವಧಾನ ಸೇವೆ ಮತ್ತು ಪಾನಕ ಪನೀವಾರ ವಿತರಣೆ. ಕೊನೆ ದಿನ 22-07-2010 ರಂದು ಪೂರ್ಣಾಹುತಿ ನಡೆದಿದ್ದು ಸುಮಾರು 1,000 ಜನ ಭಾಗವಹಿಸಿದ್ದರು ಹಾಗೂ ಒಟ್ಟು 8 ದಿನಗಳ ಯಾಗದಲ್ಲಿ ಸೂಮಾರು 3,000 ಭಕ್ತಾದಿಗಳು ಭಾಗವಹಿಸಿದ್ದರು.

         ಈ ಯಾಗದ ಯಶಸ್ವಿಗೆ ಶ್ರೀದೇವಳದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಸಂಪೂರ್ಣ

ಸಹಕಾರ   ಕಾರಣ ಎಂದು ಕುಂದಾಪುರದ ವಿಪ್ರ ವ್ರಂದ ಪ್ರಶಂಸಿದ್ದಾರೆ.

       Shakala

          ಶ್ರೀದೇವಳದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದು, ಹೀಗೆ ಬ್ರಹತ್ ಮಟ್ಟದ ದೇವತಾ ಕಾರ್ಯವನ್ನು ನಡೆಸಲು ಶ್ರೀದೇವಳದಲ್ಲಿ ಅವಕಾಶ ಹಾಗೂ ಸಂಪೂರ್ಣ ಸಹಕಾರವನ್ನು ನೀಡಲಾಗುವುದು. ಆಸಕ್ತ ಕರ್ತರು ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಿ ಎಂದು ಆಡಳಿತ ಮಂಡಳಿ ಅಧ್ಯಕ್ಷ  ಶ್ರೀ ಎ. ಜಗದೀಶ ಕಾರಂತರು ಹೇಳಿದರು.

17Jul/100

Maha Sabhe & Snmana

ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ, ಸಾಲಿಗ್ರಾಮ- 576225

ಮಹಾಸಭೆ ಹಾಗೂ ಸನ್ಮಾನ ಸಮಾರಂಭದ ಸವಿನಯ ಆಮಂತ್ರಣ

ದಿನಾಂಕ: 31-07-2010, ಸಮಯ ಸಂಜೆ 4-00 ಕ್ಕೆ,  ಸ್ಥಳ : ಜ್ಞಾನಮಂದಿರ ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ.

 • ಅಧ್ಯಕ್ಷತೆ :   ಶ್ರೀ ಜಗದೀಶ ಕಾರಂತ ಐರೋಡಿ                                   

               ಅಧ್ಯಕ್ಷರು ಕೂ.ಮ.ಜ.(ರಿ) ಸಾಲಿಗ್ರಾಮ ಅಂಗಸಂಸ್ಥೆ ಹಾಗೂ ಅಧ್ಯಕ್ಷರು ಆಡಳಿತ  ಮಂಡಳಿ  

                ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ.

 

 • ಮುಖ್ಯ ಅತಿಥಿಗಳುಶ್ರೀ. ವಿ. ಭಾಸ್ಕರ ನಾವಡ, ಮಂಗಳೂರು.

                              ಉಪಾಧ್ಯಾಕ್ಷರು, ಆಡಳಿತ ಮಂಡಳಿ  ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ

                                  ಶ್ರೀ ಕೆ. ವೆಂಕಟರಮಣ ತುಂಗ

ಕರ್ನಾಟಕ ಬ್ಯಾಂಕಿನ ನಿವ್ರತ್ತ ಉಪಮಹಾ ಪ್ರಬಂಧಕರು ಹಾಗೂ  ಕೋಶಾಧಿಕಾರಿ. ಕೂ.ಮ.ಜ. ಕೇಂದ್ರ ಸಂಸ್ಥೆ

 • ಸನ್ಮಾನ- ಹಿರಿಯ ಕೂಟಬಂಧುಗಳು
 •   ಶ್ರೀಮತಿ ಕಾಶಿಯಮ್ಮ w/o ದಿ.ವೈಕುಂಠ ಹೇರ್ಳೆ, ಐರೋಡಿ
 •   ಶ್ರೀಮತಿ ವಿಶಾಲಾಕ್ಷಿಯಮ್ಮ w/o ದಿ.ವೇ.ಮು.ಕೆ. ವೈಕುಂಠ ಸೋಮಯಾಜಿ ಕಾರ್ಕಡ
 •    ಶ್ರೀಮತಿ ಕಾಶಿಯಮ್ಮ w/o ದಿ. ತಮ್ಮಯ್ಯ ಹಂದೆ ಗುಂಡ್ಮಿ.
 •    ಶ್ರೀಮತಿ ಸಾವಿತ್ರಿ ಮಯ್ಯ w/o ದಿ.ಪರಮೇಶ್ವರ ಮಯ್ಯ ಮಣೂರು.
 •    ಶ್ರೀ ಜನಾರ್ಧನ ಹೇರ್ಳೆ ಪಾರಂಪಳ್ಳಿ.

 

 • ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ವಿತರಣೆ : SSLC & PUC ಯಲ್ಲಿ ಅಂಕ ಗಳಿಸಿದ ಕೂಟಬಂಧುಗಳ ವಿದ್ಯಾರ್ಥಿ- ವಿದ್ಯಾಥಿನಿಯರಿಗೆ
 • ವಿದ್ಯಾರ್ಥಿ ವೇತನ ವಿತರಣೆ : ಆರ್ಥಿಕವಾಗಿ ಹಿಂದುಳಿದ ಸಮಾಜದ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ.
 • ಕಾರ್ಯಸೂಚಿ :- *ಪ್ರಾರ್ಥನೆ *ಆಸನ ಸ್ವೀಕಾರ *ಸ್ವಾಗತ *ಪ್ರಾಸ್ತಾವಿಕ ಭಾಷಣ *ವರದಿ *2009-10 ರ ಆಯವ್ಯಯ ಮಂಡನೆ * ಪ್ರತಿಭಾ ಪುರಸ್ಕಾರ *ದತ್ತಿನಿಧಿ ವಿತರಣೆ *ಸನ್ಮಾನ *ಸನ್ಮಾನಿತರ ಅನಿಸಿಕೆ *ಮುಖ್ಯ ಅತಿಥಿಗಳ ಹಿತನುಡಿ *ಅಧ್ಯಕ್ಷರ ಭಾಷಣ *ಧನ್ಯವಾದ *ಲಘು ಉಪಹಾರ.

ವಿ.ಸೂ.:- ಶ್ರೀ ಗುರುನರಸಿಂಹ ದೇವಸ್ಥಾನದ ಸರ್ವೋತೋಮುಖ ಅಭಿವ್ರದ್ಧಿ ಯೋಜನೆಗಳನ್ನೊಳಗೊಂಡ ಬ್ರಹತ್ ಅಭಿವ್ರದ್ಧಿ ಯೋಜನೆಗೆ ಸಮಾಜದ ಪ್ರತಿ ಕುಟುಂಬದವರೂ ಧನಸಹಾಯ ನೀಡಿ ಶ್ರೀದೇವರ ಕ್ರಪೆಗೆ ಪಾತ್ರರಾಗಬೇಕಾಗಿ ವನಂತಿ.

ದಾನಿಗಳು, ದಯಾಳುಗಳು ಆದ ಕೂಟ ಸಮಾಜ ಬಾಂಧವರು ವಿದ್ಯಾರ್ಥಿ- ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿ ದತ್ತಿನಿಧಿಗೆ ತನು ಮನ ಹಾಗೂ ಧನಗಳಿಂದ ಸಹಾಯ ಮಾಡಬೇಕಾಗಿ ವಿನಂತಿ.

ಶ್ರೀಗುರುನರಸಿಂಹ ಬಿಲಿಯನ್ ಪೌಂಡೇಷನ್ ಹನಿಗೂಡಿ ಹಳ್ಳ ಎಂಬಂತೆ ದಿನ ಒಂದರ 0.50 ಪೈಸೆಯ ಗುಣಕದಲ್ಲಿ ಸಂಚಯ ನಿಧಿ ಹುಂಡಿಯಲ್ಲಿ ಶೇಖರಿಸಿ ಪ್ರತೀ ವರ್ಷ ನರಸಿಂಹ ಜಯಂತಿಯ ಶುಭ ದಿನದಂದು ಯಾ ಪ್ರತಿ ಮಾಸದಲ್ಲಿ ಶ್ರೀ ಗುರುನರಸಿಂಹಾರ್ಪಣ ಮಸ್ತು ಎಂದು ಪ್ರತಿ ವರ್ಷ ರೂ.182.50 ರಿಂದ 5,000-00 ವರೆಗೆ ನೀಡಬೇಕಾಗಿ ವಿನಂತಿ.

ಶ್ರಾವಣ ಮಾಸದ ಕಾರ್ಯಕ್ರಮಗಳು

 • 14-08-2010 ಶನಿವಾರ  ಶ್ರೀಗುರುನರಸಿಂಹ ದೇವಳ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಕಾರದೊಂದಿಗೆ ಮಹಿಳಾ ವೇದಿಕೆಯಿಂದ ಸಾಂಸ್ಕ್ರತಿಕ ಕಾರ್ಯಕ್ರಮ
 • 22.08.2010 ಆದಿತ್ಯವಾರ "ಯಕ್ಷಗಾನ" - ಸಾಲಿಗ್ರಾಮ ಮಕ್ಕಳ ಮೇಳದಿಂದ
 • 29.08.2010 ಆದಿತ್ಯವಾರ ತಾಳಮದ್ದಲೆ " ವಾಲಿವಧೆ " -  ಪ್ರಸಿದ್ಧ ಕಲಾವಿದರಿಂದ
 • 05.09.2010 ಆದಿತ್ಯವಾರ ಕೂಟ ಬಂಧುಗಳಿಂದ " ನಾಟ್ಯಾಂಜಲಿ "

ತಮೆಗಲ್ಲರಿಗೂ ಆದರದ ಸ್ವಾಗತ. ನೀವು ನಿಮ್ಮವರೊಡನೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.

ಅಧ್ಯಕ್ಷರು ಮತ್ತು ಸರ್ವ ಸದಸ್ಯರು

ಕೂಟಮಹಾಜಗತ್ತು ಸಾಲಿಗ್ರಾಮ (ರಿ)

ಸಾಲಿಗ್ರಾಮ ಅಂಗಸಂಸ್ಥೆ. ಸಾಲಿಗ್ರಾಮ -

14Jul/100

India Power Lifting Federation

ಜೆಮಶೆಡಪುರದಲ್ಲಿ ನಡೆದ India Power Lifting Federation, National Dead Lift Championship-2010 ಇದರಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ ತಂಡ ಜಯಗಳಿಸಿದ್ದು  75.ಕೆಜಿ.ಯ ವಿಭಾಗದಲ್ಲಿ ಶ್ರೀ ಗುರುನರಸಿಂಹ ದೇವಸ್ಥಾನದ ಸಿಬ್ಬಂದಿಯಾದ ಕ್ರಷ್ಣ ದೇವಾಡಿಗ ಭಾಗವಹಿಸಿದ್ದು ಅವರು ಚಿನ್ನದ ಪದಕವನ್ನು ಗಳಿಸಿದ್ದಾರೆ. ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಇವರ ಸಾಧನೆಗೆ ಶ್ರೀದೇವಳದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Filed under: General No Comments
6Jul/100

Donation To MDP

ದಿನಾಂಕ 03.07.10. ರಂದು ಆಂದ್ರಪ್ರದೇಶದ ಚಿತ್ತೂರಿನ ಪಿ.ಎನ್.ಮಹಾಬಲೇಶ್ವರ ಹೇರ್ಳೆ ಮತ್ತು ಸಹೋದರರಿಂದ ದೇವಸ್ಥಾನದ ಬ್ರಹತ್ ಅಭಿವ್ರದ್ಧಿ ಯೋಜನೆಗೆ ರೂ.50,000/- ದೇಣಿಗೆಯಾಗಿ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ.ಎ.ಜಗದೀಶ ಕಾರಂತರು ದೇಣಿಗೆಯನ್ನು ಸ್ವೀಕರಿಸಿ ಶ್ರೀದೇವಳದ ಸಂಪ್ರದಾಯದಂತೆ ಪ್ರಸಾದ ನೀಡಿ ಗೌರವಿಸಿದರು.

2Jul/100

Shakal Ruk Samhita Yaga

ಜುಲೈ 15-10 ರಿಂದ 22.7.10 ರವರೆಗೆ ಶ್ರೀದೇವಳದಲ್ಲಿ  ಲೋಕಕಲ್ಯಾಣಾರ್ಥವಾಗಿ ಶ್ರೀದೇವಳದ ಸಹಕಾರದೊಂದಿಗೆ ಕುಂದಾಪುರದ ಯುವ ಹಾಗೂ ವಿಪ್ರ ಬಾಂಧವರಿಂದ  ಶಾಕಲ ಋಕ್ ಸಂಹಿತಾ ಯಾಗ ನಡೆಯಲಿದ್ದು ಈ ಪುಣ್ಯ ಕಾರ್ಯದಲ್ಲಿ ಆಸಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದೆ.

1Jul/100

Donation- Electric- Panch Vadhya

ದಿನಾಂಕ 26.06.2010. ಬ್ರಹ್ಮಾವರದ ಮಟಪಾಡಿ ಊರಿನವರಾದ ಶ್ರೀ ರಾಮಕ್ರಷ್ಣ ಶೆಟ್ಟಿಯವರು ಶ್ರೀಗುರುನರಸಿಂಹ ದೇವರ ಉಪಸನ್ನಿಧಿಯಾದ ಹಾಗೂ ಅತ್ಯಂತ ಕಾರಣಿಕವಾದ ಶ್ರೀಆಂಜನೇಯ ದೇವಳಕ್ಕೆ ವಿದ್ಯುತ್ ಚಾಲಿತ ಸುಮಾರು ರೂ10,000/- ಮೌಲ್ಯದ ಪಂಚವಾದ್ಯವನ್ನು ಕೊಡುಗೆಯಾಗಿ ನೀಡಿರುತ್ತಾರೆ.

ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಸ್ವೀಕರಿಸಿ ಶ್ರೀದೇವಳದ ಸಂಪ್ರದಾಯದಂತೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ನಿತ್ಯ ನಡೆಯುವ ಪೂಜೆ ಮತ್ತು ರಂಗಪೂಜೆಗಳಿಗೆ ಪಂಚವಾದ್ಯವನ್ನು ಉಪಯೋಗಿಸಲು ಈ ಕೊಡುಗೆ ಬಹಳ ಮಹತ್ತರವೆನಿಸಿದೆ.