Paraspara e-KootaBandhu for quicker news

25Jul/100

Shakala Ruk Shintha Yaga

      

ಯುವ ಮತ್ತು ವಿಪ್ರ ವ್ರಂದ ಕುಂದಾಪುರ

ಯುವ ಮತ್ತು ವಿಪ್ರ ವ್ರಂದ ಕುಂದಾಪುರ

        ಶ್ರೀದೇವಳದಲ್ಲಿ ದಿನಾಂಕ 15.07.2010 ರಿಂದ 22.07.2010 ರವರೆಗೆ  ಯುವ ಮತ್ತು ವಿಪ್ರ ವ್ರಂದ ಕುಂದಾಪುರ ಇವರು ಶ್ರೀದೇವಳದ ಸಹಕಾರದೊಂದಿಗೆ ಶಾಕಲ ಋಕ್ ಸಂಹಿತಾಯಾಗ ಯಶಸ್ವಿಯಾಗಿ ನೇರವೇರಿಸಿದರು

      8 ದಿನಗಳ ಕಾಲ ಬೆಳಿಗ್ಗೆ 6-00 ರಿಂದ 12-00 ರತನಕ ಯಾಗ ಮಧ್ಯಾಹ್ನ 1-00 ಕ್ಕೆ ಭೋಜನ ಪ್ರಸಾದ ಹಾಗೂ 7 ದಿನಗಳ ಸಂಜೆ 6-00 ಕ್ಕೆ ಅಷ್ಟವಧಾನ ಸೇವೆ ಮತ್ತು ಪಾನಕ ಪನೀವಾರ ವಿತರಣೆ. ಕೊನೆ ದಿನ 22-07-2010 ರಂದು ಪೂರ್ಣಾಹುತಿ ನಡೆದಿದ್ದು ಸುಮಾರು 1,000 ಜನ ಭಾಗವಹಿಸಿದ್ದರು ಹಾಗೂ ಒಟ್ಟು 8 ದಿನಗಳ ಯಾಗದಲ್ಲಿ ಸೂಮಾರು 3,000 ಭಕ್ತಾದಿಗಳು ಭಾಗವಹಿಸಿದ್ದರು.

         ಈ ಯಾಗದ ಯಶಸ್ವಿಗೆ ಶ್ರೀದೇವಳದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಸಂಪೂರ್ಣ

ಸಹಕಾರ   ಕಾರಣ ಎಂದು ಕುಂದಾಪುರದ ವಿಪ್ರ ವ್ರಂದ ಪ್ರಶಂಸಿದ್ದಾರೆ.

       Shakala

          ಶ್ರೀದೇವಳದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದು, ಹೀಗೆ ಬ್ರಹತ್ ಮಟ್ಟದ ದೇವತಾ ಕಾರ್ಯವನ್ನು ನಡೆಸಲು ಶ್ರೀದೇವಳದಲ್ಲಿ ಅವಕಾಶ ಹಾಗೂ ಸಂಪೂರ್ಣ ಸಹಕಾರವನ್ನು ನೀಡಲಾಗುವುದು. ಆಸಕ್ತ ಕರ್ತರು ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಿ ಎಂದು ಆಡಳಿತ ಮಂಡಳಿ ಅಧ್ಯಕ್ಷ  ಶ್ರೀ ಎ. ಜಗದೀಶ ಕಾರಂತರು ಹೇಳಿದರು.

Comments (0) Trackbacks (0)

No comments yet.


Leave a comment


No trackbacks yet.