Paraspara e-KootaBandhu for quicker news

31Aug/100

Laksha Tulasi Archane

           tulasiarchane

ಲಕ್ಷ ತುಳಸಿ ಅರ್ಚನೆ :-  ಅಲಂಕಾರ ಪ್ರಿಯ ನರಸಿಂಹನಿಗೆ ತುಳಸಿ ಅರ್ಚನೆ ಒಂದು ಅಪರೂಪದ ಸೇವೆ. ಈ ಸೇವೆಯನ್ನು ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯವರು ದಿನಾಂಕ 05.09.2010 ರ ರವಿವಾರದಂದು ರಂದು ಭಕ್ತಿ ಪೂರ್ವಕವಾಗಿ ನೇರವೇರಿಸಿದರು.  ಅಂಗಸಂಸ್ಥೆಯ ಸದಸ್ಯರು ಮತ್ತು ಭಕ್ತಾದಿಗಳು ತಂದ ತುಳಸಿ ಕುಡಿಗಳ ಜೊತೆಗೆ ಬೆಂಗಳೂರಿನ ಶ್ರೀ.ಎ.ಪಿ.ಶ್ರೀಧರ ಕಾರಂತರು ನಾಲ್ಕು ಬುಟ್ಟಿ ತುಳಸಿಯನ್ನು ಕಳುಹಿಸಿದ್ದು ಅಲಂಕಾರದಲ್ಲಿ ನಿಪುಣರೆನಿಸಿದ ಅರ್ಚಕ ವೇ.ಮು ಶ್ರೀ ಜನಾರ್ಧನ ಅಡಿಗರ ಶ್ರದ್ಧಾಪೂರ್ವಕ ಅಲಂಕಾರ, ನಿಗಾಮಾಗಮ ಪಾಠ ಶಾಲೆಯ ವಿದ್ಯಾರ್ಥಿಗಳ ಸಹಸ್ರನಾಮಾರ್ಚನೆಯ ಮಂತ್ರ ಘೋಷ ದೇವಳದ ಪರಿಸರದಲ್ಲಿ ಭಕ್ತಿಲೋಕವನ್ನೇ ಸ್ರಷ್ಟಿಸಿದಂತಿತ್ತು. ಅಂಗಸಂಸ್ಥೆಯ ಹಾಗೂ ದೇವಳದ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತ, ಅಂಗಸಂಸ್ಥೆಯ ಪದಾಧಿಕಾರಿಗಳು, ಆಡಳಿತ ಮಂಡಳಿಯ ಸದಸ್ಯರು, ಮಹಿಳಾವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

tulasiarchane1

31Aug/100

Sanmana Smarambha

          Krishandevadiga

              ಶ್ರೀದೇವಳದ ರಾತ್ರಿ ಕಾವಲುಗಾರ ಶ್ರೀಕ್ರಷ್ಣ ದೇವಾಡಿಗ ಇವರು ಕಳೆದ 7-8 ವರ್ಷಗಳಿಂದ ದೇವಳದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ದೇವಸ್ಥಾನದ ತನ್ನ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಮಾಡಕೊಂಡು ಬರುವುದರ ಜೊತೆಗೆ ಹಿಂದಿನಿಂದಲೂ ತಾನು ಬೆಳಸಿಕೊಂಡು ಬಂದಿದ್ದ ಹವ್ಯಾಸವಾದ ಭಾರ ಎತ್ತುವ ಕ್ರೀಡೆಯಲ್ಲಿ ತನ್ನ ಅಭ್ಯಾಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದರು.

            ಇದರ ಫಲವಾಗಿಯೇ 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರ ವಿಭಾಗದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಜಿಲ್ಲೆ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಯಶಾಲಿಗಳಾಗಿದ್ದು ಇದೀಗ ಮೊನ್ನೆ ಜೆಮಶೆಡ್ ಪುರದಲ್ಲಿ ನಡೆದ ರಾಷ್ಟ್ರಮಟ್ಟದ ಪವರ ಲಿಪ್ಟಿಂಗ್ ಸ್ಪರ್ಧೆಯಲ್ಲಿ 75.ಕೆಜಿ. ವಿಭಾಗದಲ್ಲಿ ದಾಖಲೆಯ ಭಾರ ಎತ್ತಿ ಮೊದಲಿಗರಾಗಿ ಸ್ವರ್ಣಪದಕವನ್ನು ಪಡೆದಿರುತ್ತಾರೆ.

               ಇವರ ಈ ಸಾಧನೆಗಾಗಿ ಶ್ರೀಗುರುನರಸಿಂಹ ದೇವಸ್ಥಾನದ ಆಡಳಿತಮಂಡಳಿಯ ಅಧ್ಯಕ್ಷರಾದ ಶ್ರೀಎ.ಜಗದೀಶ ಕಾರಂತರು ಸಾಲಿಗ್ರಾಮ ಅಂಗಸಂಸ್ಥೆಯ ವಾರ್ಷಿಕ ಮಹಾಸಭೆಯ ವೇದಿಕೆಯಲ್ಲಿ ಅಭಿಮಾನದಿಂದ ಶಾಲು ಹೊದೆಸಿ ಫಲ ತಾಂಬುಲ ನೀಡಿ ಹಾಗೂ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಶ್ರೀಯುತರಿಗೆ ಯಶಸ್ಸು ದೊರಕಲೆಂದು ಹಾರೈಸಿದರು.

ಶ್ರೀಕ್ರಷ್ಣ ದೇವಡಿಗರು ತನ್ನ ಯಶಸ್ಸಿಗೆ ಶ್ರೀಗುರುನರಸಿಂಹ ದೇವರ ಕ್ರಪೆ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಸರ, ಸಿಬ್ಬಂದಿ ವರ್ಗದವರ ಮತ್ತು ಅಭಿಮಾನಿಗಳ ಪ್ರೋತ್ಸಾಹವೇ ಕಾರಣ ಎಂದರು.