Paraspara e-KootaBandhu for quicker news

1Sep/100

Sankasta chowati Ganahoma

ಸಂಕಷ್ಟ ಚೌತಿ ಗಣಹೋಮ:-  ಗಣಪತಿ ಯಂತ್ರದ ಮೇಲೆ ಸ್ಥಾಪಿತಗೊಂಡ, ಗಣಪತಿಯ ಉಪಸನ್ನಿಧಿಯನ್ನು ಹೊಂದಿದ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ. ಇಲ್ಲಿ ಈಗಾಗಲೇ ಪ್ರತಿ ಸಂಕ್ರಮಣದಂದು ಗಣಹೋಮ ನಡೆಯುತ್ತಿದ್ದು ಇದೀಗ ಬಹು ಜನರ ಬೇಡಿಕೆಯಂತೆ ಪ್ರತಿ ಸಂಕಷ್ಟಚೌತಿಯ ದಿನದಂದು ಶ್ರೀಕ್ಷೇತ್ರದಲ್ಲಿ  ಸಾರ್ವಜನಿಕ ನೆಲೆಯಲ್ಲಿ ಗಣಹೋಮ ನಡೆಸಲು ಆಡಳಿತ ಮಂಡಳಿಯು ನಿಶ್ಚಯಿಸಿ ಇದೇ ದಿನಾಂಕ 28.08.2010  ಶ್ರಾವಣ ಶನಿವಾರದ ಶುಭ ದಿನದಂದು ಪ್ರಾರಂಭಿಸಿರುತ್ತದೆ.

ಈ ಗಣಹೋಮವು ಪ್ರತಿ ಸಂಕಷ್ಟ ಚೌತಿಯಂದು ಪೂರ್ವಾಹ್ನ 7-00 ಗಂಟೆಗೆ ಪ್ರಾರಂಭಗೊಂಡು 9-00 ಗಂಟೆ ಹೊತ್ತಿಗೆ ಮುಗಿಯುತ್ತದೆ. ಈ ಸೇವೆಗೆ ಒಂದು ವರ್ಷಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವರು ರೂ.500/- ಹಾಗೂ ಪ್ರತಿ ಸಂಕಷ್ಟ ಚೌತಿ ಗಣಹೋಮಷದ ಒಂದು ಕಾಯಿ ಸೇವೆಗೆ ರೂ.50/- ನ್ನು ಪಾವತಿಸಬೇಕಾಗುತ್ತದೆ.  ಹಾಜರಿರಲು ಸಾಧ್ಯವಾಗದ ಸೇವಾಕರ್ತ್ರಗಳಿಗೆ ಅಂಚೆ ಮೂಲಕ ಪ್ರಸಾದವನ್ನು ಕಳುಹಿಸಲಾಗುವುದು.

ಹೆಚ್ಚಿನ ಭಕ್ತಾದಿಗಳು ಈ ಸೇವೆಯಲ್ಲಿ ಭಾಗವಹಿಸುವಂತೆ ಶ್ರೀದೇವಳದ ಆಡಳಿತ ಮಂಡಳಿಯು ಕೋರಿದೆ.

Comments (0) Trackbacks (0)

No comments yet.


Leave a comment


No trackbacks yet.