Paraspara e-KootaBandhu for quicker news

15Oct/100

Major Development Plan

          ಶ್ರೀ ಗುರುನರಸಿಂಹ ದೇವಸ್ಥಾನದ ಉತ್ತರ, ದಕ್ಷಿಣ, ಪಶ್ಚಿಮ ದಿಕ್ಕಿನ ಹೊರಪೌಳಿಯ ಕಾಮಗಾರಿಯು ಮುಗಿದಿದ್ದರೂ ಪಶ್ಚಿಮ ದಕ್ಷಿಣ ಮುಲೆಯ ಪೌಳಿಯನ್ನು ನವೀಕರೀಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ.

           ಇದೀಗ ಶ್ರೀದೇವಳದ ಆಡಳಿತ ಮಂಡಳಿಯು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ರೂಪಾಯಿ 15 ಲಕ್ಷದ ಅಂದಾಜು ಪಟ್ಟಿಯನ್ನು ತಯಾರಿಸಿ ಕಾರ್ಯೋನ್ಮುಖವಾಗಿದೆ.

               ಈ ಕಾಮಗಾರಿಯನ್ನು ಇಡಿಯಾಗಿ ಪ್ರಾಯೋಜಿಸಲು ಅಪೇಕ್ಷಿಸುವ ಸದ ಭಕ್ತರು ದೇವಳದ ಕಛೇರಿಯನ್ನು ಯಾ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಸಂಪರ್ಕಿಸುವಂತೆ ಕೋರಿದೆ.

15Oct/100

Sri Yogananda Chikitstalaya

ಶ್ರೀಗುರುನರಸಿಂಹ ದೇವಸ್ಥಾನದ ವತಿಯಿಂದ ಹಲವು ವರ್ಷಗಳಿಂದ ಉಚಿತ ವೈದ್ಯ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡುತ್ತಿದ್ದು ಹಲವು ಜನರು ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ.

ವಾರದ ಪ್ರತಿ ಸೋಮವಾರ ಬೆಳಿಗ್ಗೆ 10-ರಿಂದ 12- ರವರೆಗೆ ಮಣಿಪಾಲ ದಂತ ಚಿಕಿತ್ಸಾಲಯದಿಂದ ಉಚಿತ ದಂತ ಚಿಕಿತ್ಸೆ ನಡೆಯುತ್ತದೆ

ಸೋಮವಾರದಿಂದ ಗುರುವಾರದವರೆಗೆ ಪ್ರತಿ ದಿನ ಸಂಜೆ 4.30 ರಿಂದ 6.30 ರವರೆಗೆ ಅಲೋಪತಿ ವೈದ್ಯರಿಂದ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಬುಧವಾರ ಮಧ್ಯಾಹ್ನ 2-30 ರಿಂದ 3.30 ರವರೆಗೆ ಮುಳೆ ಹಾಗೂ ಕಣ್ಣಿನ ಚಿಕಿತ್ಸೆಯನ್ನು ನೀಡಲಾಗುತ್ತದೆ

ಗುರುವಾರ ಮಧ್ಯಾಹ್ನ 5.30 ರಿಂದ 7.30 ರವರೆಗೆ ಮಾನಸಿಕ ತಜ್ಞರಿಂದ ತಪಾಸಣೆ ನಡೆಯುತ್ತದೆ

ಪ್ರತಿ ಗುರುವಾರ ಮತ್ತು ಶುಕ್ರವಾರ 2.30 ರಿಂದ 4.00 ರವರೆಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುತ್ತದೆ

ಈ ಎಲ್ಲಾ ಚಿಕಿತ್ಸೆಗಳು ಉಚಿತವಾಗಿದ್ದು ಹಾಗೂ ಉಚಿತವಾಗಿ ಔಷಧವನ್ನು ವಿತರಿಸಲಾಗುತ್ತಿದೆ. ಎಲ್ಲಾ ಜನರು ಇದರ ಸದುಪಯೋಗವನ್ನು ಪಡೆಯಬೇಕೆಂದು ಆಡಳಿತ ಮಂಡಳಿ ಕೋರಿದೆ.

3Oct/100

Adalita Mandali & Salaha Samiti Sabhe

         ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿ ಸಭೆ

                 ಶ್ರೀಗುರುನರಸಿಂಹ ದೇವಸ್ಥಾನ ಇದರ ಆಡಳಿತ ಸಲಹಾ ಸಮಿತಿಯ ಸಭೆಯು ದಿನಾಂಕ 26.09.2010 ರಂದು ಪೂರ್ವಾಹ್ನ ಗಂಟೆ 10-30 ಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರ ಅಧ್ಯಕ್ಷತೆಯಲ್ಲಿ ಜ್ಞಾನಮಂದಿರದ ಸಭಾ ಭವನದಲ್ಲಿ ಜರಗಿತು. ಸಲಹಾ ಸಮಿತಿಯ 76 ಜನ ಸದಸ್ಯರು ಭಾಗವಹಿಸಿದ್ದರು.

          ಕಾರ್ಯಕ್ರಮದಂತೆ ವೇದೋಕ್ತ ಪ್ರಾರ್ಥನೆ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಆನಂತಪದ್ಮನಾಭ ಐತಾಳರಿಂದ ನಡೆಯಿತು. ನಿಯಾಮಾನುಸಾರ ಮೀಟಿಂಗ್ ನೋಟೀಸನ್ನು ಓದಿ ಹೇಳಿ ದಾಖಲಿಸಲಾಯಿತು. ಆಗಮಿಸಿದ ಎಲ್ಲಾ ಸದಸ್ಯರನ್ನು ಆಡಳಿತಮಂಡಳಿಯ ಉಪಾಧ್ಯಕ್ಷರಾದ ಶ್ರೀಭಾಸ್ಕರ ನಾವಡರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಆನಂದರಾಮ ಮಧ್ಯಸ್ತರು ಪ್ರಸ್ತಾವನೆ ಮಾಡುತ್ತಾ ಸಭೆಯ ಉದ್ದೇಶ, ಕಾರ್ಯವ್ಯಾಪ್ತಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ದೇವಳದ ಸಿಬ್ಬಂದಿ ಶ್ರೀಪ್ರಭಾಕರ ಮಯ್ಯರು ಗತ ಸಭೆಯ ವರದಿಯನ್ನು ಓದಿದರು. ಒಂದು ವರ್ಷದ ಶ್ರೀದೇವಳದ ಕಾರ್ಯಚಟುವಟಿಕೆಗಳ ವರದಿಯನ್ನು ದೇವಳದ ವ್ಯವಸ್ಥಾಪಕರಾದ ಶ್ರೀ G.S.N. ಹೇರ್ಳೆ ಸಭೆಯ ಗಮನಕ್ಕೆ ತಂದರು. 2009-10ನೇ ಸಾಲಿನ ಅಡಿಟ್ ವರದಿಯನ್ನು ಎಲ್ಲಾ ಸದಸ್ಯರಿಗೂ ಕಳುಹಿಸಿದ್ದು ಕೋಶಾಧಿಕಾರಿ ಶ್ರೀ ಸದಾರಾಮ ಹೇರ್ಳೆಯವರು ಸಾಕಷ್ಟು ವಿವರಣೆಯೊಂದಿಗೆ ದೇವಳದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಿಳಿಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀ ಕೆ.ಯಜ್ಞನಾರಾಯಣ ಹೇರ್ಳೆಯವರು ಅಭಿವ್ರದ್ಧಿ ಯೋಜನೆಯ ದ್ವಿತೀಯ ಹಂತದ ಬಗ್ಗೆ ವಿವರಿಸುತ್ತಾ ಸರ್ವರ ಸಹಕಾರವನ್ನು ಬಯಸಿದರು. ಆಗಮಿಸಿದ ಎಲ್ಲಾ ಸದಸ್ಯರಿಗೆ ತಮ್ಮ ನೆನಪಿನ ಕಾಣಿಕೆಯಾಗಿ ಶ್ರೀದೇವರ ಭಾವಚಿತ್ರವಿರುವ ಗೋಲ್ಡ್ ಚೈನ್ ವಾಚನ್ನು ನೀಡಿದರು.

           ದೇವಳದ ಕಾರ್ಯಚಟುವಟಿಕೆ ಮುಂದಿನ ಯೋಜನೆಗಳ ಬಗ್ಗೆ ಉಪಯುಕ್ತ ಸಲಹೆಗಳು ಸಭೆಯಿಂದ ವ್ಯಕ್ತವಾಯಿತು. ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಸದಸ್ಯರುಗಳನ್ನು ಅಭಿನಂದಿಸುತ್ತಾ ಉಪಯುಕ್ತ ಸಲಹೆಗಳಿಗೆ ಕ್ರತಜ್ಞತೆ ಸಲ್ಲಿಸಿದರು. ಎಲ್ಲ ಸಮಾಜ ಬಂಧುಗಳ ಪೂರ್ಣ ಸಹಕಾರದ ಭರವಸೆ ಹೊಂದಿರುವುದಾಗಿ ತಿಳಿಸಿದರು. ಶ್ರೀ ಗುರುದೇವರು ನಮ್ಮೆಲ್ಲರಿಗೆ ಸನ್ಮಂಗಲವನ್ನುಂಟು ಮಾಡಲೆಂದು ಪ್ರಾರ್ಥಿಸಿದರು. ವೇದಿಕೆಯಲ್ಲಿ ಆಸೀಸರಾಗಿದ್ದ ನಿಕಟಪೂರ್ವ ಆಡಳಿತಮಂಡಳಿಯ ಅಧ್ಯಕ್ಷ ಶ್ರೀ ಪಿ.ಸೂರ್ಯನಾರಾಯಣ ಹೇರ್ಳೆ ಕೂಟಮಹಾಜಗತ್ತಿನ ಕೇಂದ್ರಾಧ್ಯಕ್ಷ ಡಾ. ಕೆ.ಎಸ್ ಕಾರಂತರು ಮೌನ ಸಮ್ಮತಿಯೊಂದಿಗೆ ದೇವಳದ ಪ್ರಗತಿಗೆ ಪೂರ್ಣ ಬೆಂಬಲವನ್ನು ಸೂಚಿಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀ ನಾಗರಾಜ್ ಶ್ರಂಗೇರಿ ಇವರು ಧನ್ಯವಾದ ಸಮರ್ಪಿಸಿದರೆ ಸಾಮೂಹಿಕ ಐಕ್ಯ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು.

2Oct/100

Donation Recived

ಶ್ರೀಗುರುನರಸಿಂಹ ದೇವಸ್ಥಾನದ ವತಿಯಿಂದ ನಡೆಸುತ್ತಿರುವ ನಿಗಮಾಗಮ ಪಾಠಶಾಲೆಯ ಒಂದು ತರಗತಿ ಕೋಣೆಯ ಪ್ರಾಯೋಜಕರಾಗಿ ಕಾರ್ಕಡ ದಿ| ವೆಂಕಟೇಶ ಐತಾಳ ಇವರ ಧರ್ಮಪತ್ನಿ ದಿ| ಶ್ರೀದೇವಿಯಮ್ಮ ಇವರ ಸ್ಮರಣಾರ್ಥ ಅವರ ಸುಪುತ್ರ ಶ್ರೀರಾಮಚಂದ್ರ ಐತಾಳ ಪತ್ನಿ ಶ್ರೀಮತಿ ಲಕ್ಷ್ಮೀ ಮತ್ತು ಮಕ್ಕಳಿಂದ ರೂ.1,50,001/-  ದೊಡ್ಡ ಮೊತ್ತದ ದೇಣಿಗೆಯನ್ನು ಶ್ರೀದೇವಳಕ್ಕೆ ಸಮರ್ಪಿಸಿದರು. ದೇಣಿಗೆಯನ್ನು ಸ್ವೀಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ. ಜಗದೀಶ ಕಾರಂತರು ಸಾಂಪ್ರದಾಯಿಕವಾಗಿ ಶ್ರೀದೇವರ ಪ್ರಸಾದ ನೀಡಿ ಶಾಲು ಹೊದೆಸಿ ಫಲಪುಷ್ಫ ನೀಡಿ ಗೌರವಿಸಿದರು. sadarama-2

ತದ ನಂತರ ಶ್ರೀರಾಮಚಂದ್ರ ಐತಾಳರ ಕುಟುಬಿಕರು ಸ್ನೇಹಿತರನ್ನು ಕೂಡಿಕೊಂಡು ತರಗತಿ ಕೋಣೆಯ ಎದುರಿನ ಶಾಶ್ವತ ಶಿಲಾ ಫಲಕವನ್ನು ಅನಾವರಣ ಮಾಡಿದರು. ಧಾರ್ಮಿಕ ಕಾರ್ಯಕ್ರಮ ಗಣಹೋಮವನ್ನು  ವ್ಯವಸ್ಥೆಗೊಳಿಸಿದ್ದು ಎಲ್ಲರೂ ಭೋಜನ ಪ್ರಸಾಧವನ್ನು ಸ್ವೀಕರಿಸಿ ಚದುರಿದರು.

sadarama_0002

ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಭಾಸ್ಕರ ನಾವಡ, ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ತ ಕೋಶಾಧಿಕಾರಿ ಸದಾರಾಮ ಹೇರ್ಳೆ ಆಧ್ಯಕ್ಷ ಶ್ರೀ.ಎ.ಜಗದೀಶ ಕಾರಂತ, ಸದಸ್ಯರಾದ ಶ್ರೀ ಧರ್ಮರಾಯ ಹಂದೆ ಕಾರ್ಯಕ್ರಮದುದ್ದಕ್ಕೂ ಜಾಜರಿದ್ದು ಯಶಸ್ವಿಗೊಳಿಸಿದರು.

 

1Oct/100

Ganapathi Habba

                 ದಿನಾಂಕ 11.09.2010 ರಂದು ಶ್ರೀದೇವಳದಲ್ಲಿ ಗಣೇಶ ಚೌತಿಯ ಪ್ರಯುಕ್ತ ಶ್ರೀದೇವಳದಲ್ಲಿ ತಂತ್ರಿಗಳ ಮನೆಯಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ದಶಭುಜ ಗಣಪತಿಯ ಪೂಜೆ ಹಾಗೂ 120 ಕಾಯಿ ಗಣಹೋಮವು ಶ್ರೀದೇವಳದ ತಂತ್ರಿಗಳಾದ ವೇ.ಮು.ಶ್ರೀ ಶಂಕರನಾರಾಯಣ ಸೋಮಯಾಜಿ ಮತ್ತು ಶ್ರೀ ಗಣೇಶ ಐತಾಳರ ಯಜಮಾನತ್ವದಲ್ಲಿ ನಡೆಯಿತು. ಹಾಗೂ ಶ್ರೀ ವೇ.ಮು.ಶ್ರೀ ಸಿ. ಮಂಜುನಾಥ ಉಪಾಧ್ಯ ಮತ್ತು  ಇವರ ನೇತ್ರತ್ವದಲ್ಲಿ ನರಸಿಂಹ ಹೋಮ ನಡೆಯಿತು.. ಅರ್ಚಕರಾದ ಶ್ರೀ ವೇ.ಮು. ಶ್ರೀ ಜನಾರ್ಧನ ಅಡಿಗರು ಶ್ರೀಗಣಪತಿ ದೇವರಿಗೆ ವಿಶೇಷ ಪೂಜೆ ಹಾಗೂ ಶ್ರೀದೇವಳದಿಂದ ಪಂಚ ಭಕ್ಷಗಳನ್ನು ಸಮರ್ಪಿಸಲಾಯಿತು..  ಮಧ್ಯಾಹ್ನ ವಿಶೇಷ ಭೋಜನವನ್ನು ಭಕ್ತರಿಗೆ ಏರ್ಪಡಿಸಲಾಗಿತ್ತು.  ಸಂಜೆ ಶ್ರೀನರಸಿಂಹ ದೇವರಿಗೆ ಕಿರಿರಂಗಪೂಜೆ ಮತ್ತು ಶ್ರೀಗಣಪತಿ ದೇವರಿಗೆ ರಂಗಪೂಜೆ ಮತ್ತು ಸೋಣೆ ಆರತಿಯನ್ನು ನಡೆಸಲಾಯಿತು.  ಹಾಗೂ ಪನೀವಾರವನ್ನು ವಿತರಿಸಲಾಯಿತು. .

ಸಾಧಾರಣ 800 ಜನ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳ್ಲಿ ಭಾಗವಹಿಸಿದ್ದರು.

1Oct/100

Yakshagana– Veera Vrshasena

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಉಡುಪಿ ಜಿಲ್ಲೆ ಇವರ ಹಿರಿತನದಲ್ಲಿ ಶ್ರೀಗುರುನರಸಿಂಹ ದೇವಳದ ಜ್ಞಾನಮಂದಿರ ಸಭಾಭವನದಲ್ಲಿ ಸಾಲಿಗ್ರಾಮ ಮಕ್ಕಳಮೇಳದವರಿಂದ " ವೀರ ವ್ರಷಸೇನ " ಯಕ್ಷಗಾನ ಕಾರ್ಯಕ್ರಮವು ಜರುಗಿತು. ಶ್ರೀದೇವಳದ ಆಡಳಿತ ಮಂಡಳಿ ಸದಸ್ಯರು, ಶ್ರೀ.ಕೆ.ಎಂ.ಉಡುಪ, ಶ್ರೀ ಎಚ್ ಶ್ರೀಧರ ಹಂದೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯ ಕಲಾಭಿಮಾನಿಗಳು ಕಾರ್ಯಕ್ರಮವನ್ನು ನೋಡಿ ಸಂತಸಪಟ್ಟರು. ಈ ಕಾರ್ಯಕ್ರಮವನ್ನು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯು ಸಂಯೋಜಿಸಿದರು. ಶ್ರೀದೇವಳದ ಕಾರ್ಯದರ್ಶಿ ಶ್ರೀ ಆನಂದರಾಮ ಮದ್ಯಸ್ತರು ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.

1Oct/100

Natyanjali

ದಿನಾಂಕ 05.09.2010 ರವಿವಾರ ಶ್ರೀದೇವಳದ ಜ್ಞಾನಮಂದಿರ ಸಭಾಭವನದಲ್ಲಿ ಕೂಟಬಂಧು ಕಲಾವಿದೆಯರಿಂದ ನಾಟ್ಯಾಂಜಲಿ ಎಂಬ ವಿನೂತನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೇರವೇರಿತು.

ದೇವಳದ ಆಡಳಿತ ಮಂಡಳಿಯ ಕಾರ್ಯದಶಿ೯ ಶ್ರೀ ಆನಂದರಾಮ ಮದ್ಯಸ್ತ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮೂರ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾ ಮಹಿಳಾ ವೇದಿಕೆಯ ಅಧ್ಯಕ್ಷ ಶ್ರೀಮತಿ ಜಯಶ್ರೀ ಮಧ್ಯಸ್ತ ಮತ್ತವರ ರ್ಕಾ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.

1Oct/100

Yakshagana Talamaddale Koota

ದಿನಾಂಕ 29.8.10 ರವಿವಾರ ಸಂಜೆ ಗಂಟೆ 4-00 ರಿಂದ 7-00 ರವರೆಗೆ ಯಕ್ಷಗಾನ ತಾಳಮದ್ದಲೆ " ವಾಲಿವಧೆ " ಈ ಕಥಾನಕವನ್ನು ಶ್ರೀದೇವಳದ ಜ್ಞಾನಮಂದಿರ ಸಭಾಭವನದಲ್ಲಿ ನಡೆಯಿತು. ಶ್ರೀದೇವಳದ ಆಡಳಿತ ಮಂಡಳಿ ಹಾಗೂ ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಿಮ್ಮೇಳನದಲ್ಲಿ ಸರ್ವ ಶ್ರೀ ಕೆ.ಪಿ. ಹೆಗ್ಡೆ ತೋನ್ಸೆ, ಜಯಂತಕುಮಾರ ಎನ್.ಜಿ. ಹೆಗ್ಡೆ, ಮಂದರ್ತಿ ರಾಮ, ಅರ್ಥಧಾರಿಗಳಾಗಿ ಸರ್ವಶ್ರೀ ತಾರಾನಾಥ ಬಲ್ಯಾಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಕೊರ್ಗಿ ವೆಂಕಟೇಶ ಉಪಾಧ್ಯಾಯ, ಉಜ್ರೆ ಅಶೋಕ ಭಟ್, ಸುಜಯೀಂದ್ರ ಹಂದೆ ಇವರುಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಂಘಟಕರಾಗಿ ಮಕ್ಕಳ ಮೇಳ ಸಾಲಿಗ್ರಾಮದ ಸಂಚಾಲಕರಾದ ಶ್ರೀ ಶ್ರೀಧರ ಹಂದೆಯವರ ಪರಿಶ್ರಮವನ್ನು ಆಡಳಿತಮಂಡಳಿಯು ಕ್ರತಜ್ಞತೆಯಿಂದ ಸ್ಮರಿಸಿಕೊಂಡಿತು.

ಎಲ್ಲಾ ಕಲಾವಿದರಿಗೆ ಶ್ರೀದೇವರ ಪ್ರಸಾದ, ರಕ್ಷಾಕವಚ, ಕಿರು ಸಂಭಾವನೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ. ಜಗದೀಶ ಕಾರಂತರು ನೀಡಿ ಗೌರವಿಸಿದರು.

1Oct/100

Sri Krishna jnmastami and Vitlpindi

ಕ್ರಷ್ಣ ಜಯಂತಿ:- ಶ್ರೀದೇವಳದಲ್ಲಿ ದಿನಾಂಕ 01.09.2010 ರಂದು ರಾತ್ರಿ ಕ್ರಷ್ಣ ಜಯಂತಿಯ ಪ್ರಯುಕ್ತ ವಿಶೇಷ ಪೂಜೆ ಹಾಗೂ ಪನೀವಾರ ವಿತರಣೆ ನಡೆಯಿತು.

ವಿಟ್ಲಪಿಂಡಿ ಉತ್ಸವ :- ದಿನಾಂಕ 02.09.10 ರಂದು ಶ್ರೀದೇವರಿಗೆ ಮಧ್ಯಾಹ್ನ 4-00 ಗಂಟೆಗೆ ವಿಶೇಷ ಪೂಜೆ ನಂತರ ಪಲ್ಲಕ್ಕಿಯಲ್ಲಿ ಉತ್ಸವ ಮುರ್ತಿಯನ್ನು ಕೂಡಿಸಿಕೊಂಡು ವೇದ ವಿದ್ಯಾರ್ಥಿಗಳ, ಉಪಾಧಿವಂತರು,ಅರ್ಚಕರು, ಹಾಗೂ ತಂತ್ರಿಗಳ ವೇದ ಘೊಷದೊಂದಿಗೆ, ಮಂಗಳ ವಾದ್ಯದೊಂದಿಗೆ ಉತ್ಸವವು ದಾರಿಯಲ್ಲಿ ಹಲವು ಕಡೆ ಮೊಸರು ಕುಡಿಕೆಯನ್ನು ಒಡೆಯುತ್ತಾ ಸಾದಾರಣ 2 ಕಿ.ಮೀ ಕ್ರಮಿಸಿ ಎಡಬೆಟ್ಟು ಗ್ರಾಮದ ಶ್ರೀಗೋಪಾಲಕ್ರಷ್ಣ ದೇವಳವನ್ನು ಪ್ರವೇಶಿಸಿ ಅಲ್ಲಿಯ ಗ್ರಾಮಸ್ಥರಿಂದ ಶ್ರೀದೇವರಿಗೆ ಅಷ್ಟವಧಾನ ಸೇವೆ ಹಾಗೂ ಗೋಪಾಲಕ್ರಷ್ಣ ದೇವರಿಗೆ ವಿಶೇಷ ಪೂಜೆಯನ್ನು ಸ್ವೀಕರಿಸಿ ಭಕ್ತರಿಗೆ ಪಾನಕ ಪನೀವಾರವನ್ನು ಹಂಚಲಾಯಿತು.  ನಂತರ ಶ್ರೀದೇವಳದ ಉಪಸನ್ನಿಧಿಯಾದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಅಷ್ಟವಧಾನ ಸೇವೆ ಹಾಗೂ ಶ್ರೀ ಆಂಜನೇಯ ದೇವರಿಗೆ ರಂಗಪೂಜೆ ನೇರವೇರಿಸಿ ಉತ್ಸವವು ಶ್ರೀದೇವಳಕ್ಕೆ  ಹಿಂದುರುಗಿತು.. ಭಕ್ತಾದಿಗಳಿಗೆ ಪಾನಕ ಪನೀವಾರವನ್ನು ಶ್ರೀ ಆಂಜನೇಯ ದೇವಳದಲ್ಲಿ ಹಂಚಲಾಯಿತು. ಸುಮಾರು 1,000  ಪಾಲ್ಗೊಂಡಿದ್ದರು.

1Oct/100

Independence Day

ಶ್ರೀಗುರುನರಸಿಂಹ ನಿಗಮಾಗಮ ಪಾಠಶಾಲೆಯಲ್ಲಿ ದೇಶದ ಸ್ವಾತಂತ್ರ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಉತ್ಸವದಲ್ಲಿ ಭಾಗಿಗಳಾಗಿದ್ದ ವಿದ್ಯಾರ್ಥಿಗಳಿಗೆ ಹಾಗೂ ಅಂದು ದೇವಳದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ಸ್ವೀಕರಿಸಿದ ಎಲ್ಲ ಭಕ್ತರಿಗೆ ಶ್ರೀ ಶ್ರೀಧರ ಉರಾಳ "ಉರಾಳ್ ಸ್ವೀಟ್ಸ್" ಕುಂದಾಪುರ ಇವರು ಸಿಹಿತಿಂಡಿ ಲಾಡನ್ನು ನೀಡಿ ಶ್ರೀಗುರುದೇವರ ಕ್ರಪೆಗೆ ಪಾತ್ರರಾದರು ಶ್ರೀ ಉರಾಳರಿಗೆ ಶ್ರೀದೇವಳದ ಆಡಳಿತ ಮಡಳಿಯು ತನ್ನ ಕ್ರತಜ್ಞತೆಯನ್ನು ಸಲ್ಲಿಸಿತು.