Paraspara e-KootaBandhu for quicker news

1Oct/100

Ganapathi Habba

                 ದಿನಾಂಕ 11.09.2010 ರಂದು ಶ್ರೀದೇವಳದಲ್ಲಿ ಗಣೇಶ ಚೌತಿಯ ಪ್ರಯುಕ್ತ ಶ್ರೀದೇವಳದಲ್ಲಿ ತಂತ್ರಿಗಳ ಮನೆಯಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ದಶಭುಜ ಗಣಪತಿಯ ಪೂಜೆ ಹಾಗೂ 120 ಕಾಯಿ ಗಣಹೋಮವು ಶ್ರೀದೇವಳದ ತಂತ್ರಿಗಳಾದ ವೇ.ಮು.ಶ್ರೀ ಶಂಕರನಾರಾಯಣ ಸೋಮಯಾಜಿ ಮತ್ತು ಶ್ರೀ ಗಣೇಶ ಐತಾಳರ ಯಜಮಾನತ್ವದಲ್ಲಿ ನಡೆಯಿತು. ಹಾಗೂ ಶ್ರೀ ವೇ.ಮು.ಶ್ರೀ ಸಿ. ಮಂಜುನಾಥ ಉಪಾಧ್ಯ ಮತ್ತು  ಇವರ ನೇತ್ರತ್ವದಲ್ಲಿ ನರಸಿಂಹ ಹೋಮ ನಡೆಯಿತು.. ಅರ್ಚಕರಾದ ಶ್ರೀ ವೇ.ಮು. ಶ್ರೀ ಜನಾರ್ಧನ ಅಡಿಗರು ಶ್ರೀಗಣಪತಿ ದೇವರಿಗೆ ವಿಶೇಷ ಪೂಜೆ ಹಾಗೂ ಶ್ರೀದೇವಳದಿಂದ ಪಂಚ ಭಕ್ಷಗಳನ್ನು ಸಮರ್ಪಿಸಲಾಯಿತು..  ಮಧ್ಯಾಹ್ನ ವಿಶೇಷ ಭೋಜನವನ್ನು ಭಕ್ತರಿಗೆ ಏರ್ಪಡಿಸಲಾಗಿತ್ತು.  ಸಂಜೆ ಶ್ರೀನರಸಿಂಹ ದೇವರಿಗೆ ಕಿರಿರಂಗಪೂಜೆ ಮತ್ತು ಶ್ರೀಗಣಪತಿ ದೇವರಿಗೆ ರಂಗಪೂಜೆ ಮತ್ತು ಸೋಣೆ ಆರತಿಯನ್ನು ನಡೆಸಲಾಯಿತು.  ಹಾಗೂ ಪನೀವಾರವನ್ನು ವಿತರಿಸಲಾಯಿತು. .

ಸಾಧಾರಣ 800 ಜನ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳ್ಲಿ ಭಾಗವಹಿಸಿದ್ದರು.

1Oct/100

Yakshagana– Veera Vrshasena

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಉಡುಪಿ ಜಿಲ್ಲೆ ಇವರ ಹಿರಿತನದಲ್ಲಿ ಶ್ರೀಗುರುನರಸಿಂಹ ದೇವಳದ ಜ್ಞಾನಮಂದಿರ ಸಭಾಭವನದಲ್ಲಿ ಸಾಲಿಗ್ರಾಮ ಮಕ್ಕಳಮೇಳದವರಿಂದ " ವೀರ ವ್ರಷಸೇನ " ಯಕ್ಷಗಾನ ಕಾರ್ಯಕ್ರಮವು ಜರುಗಿತು. ಶ್ರೀದೇವಳದ ಆಡಳಿತ ಮಂಡಳಿ ಸದಸ್ಯರು, ಶ್ರೀ.ಕೆ.ಎಂ.ಉಡುಪ, ಶ್ರೀ ಎಚ್ ಶ್ರೀಧರ ಹಂದೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯ ಕಲಾಭಿಮಾನಿಗಳು ಕಾರ್ಯಕ್ರಮವನ್ನು ನೋಡಿ ಸಂತಸಪಟ್ಟರು. ಈ ಕಾರ್ಯಕ್ರಮವನ್ನು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯು ಸಂಯೋಜಿಸಿದರು. ಶ್ರೀದೇವಳದ ಕಾರ್ಯದರ್ಶಿ ಶ್ರೀ ಆನಂದರಾಮ ಮದ್ಯಸ್ತರು ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.

1Oct/100

Natyanjali

ದಿನಾಂಕ 05.09.2010 ರವಿವಾರ ಶ್ರೀದೇವಳದ ಜ್ಞಾನಮಂದಿರ ಸಭಾಭವನದಲ್ಲಿ ಕೂಟಬಂಧು ಕಲಾವಿದೆಯರಿಂದ ನಾಟ್ಯಾಂಜಲಿ ಎಂಬ ವಿನೂತನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೇರವೇರಿತು.

ದೇವಳದ ಆಡಳಿತ ಮಂಡಳಿಯ ಕಾರ್ಯದಶಿ೯ ಶ್ರೀ ಆನಂದರಾಮ ಮದ್ಯಸ್ತ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮೂರ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾ ಮಹಿಳಾ ವೇದಿಕೆಯ ಅಧ್ಯಕ್ಷ ಶ್ರೀಮತಿ ಜಯಶ್ರೀ ಮಧ್ಯಸ್ತ ಮತ್ತವರ ರ್ಕಾ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.

1Oct/100

Yakshagana Talamaddale Koota

ದಿನಾಂಕ 29.8.10 ರವಿವಾರ ಸಂಜೆ ಗಂಟೆ 4-00 ರಿಂದ 7-00 ರವರೆಗೆ ಯಕ್ಷಗಾನ ತಾಳಮದ್ದಲೆ " ವಾಲಿವಧೆ " ಈ ಕಥಾನಕವನ್ನು ಶ್ರೀದೇವಳದ ಜ್ಞಾನಮಂದಿರ ಸಭಾಭವನದಲ್ಲಿ ನಡೆಯಿತು. ಶ್ರೀದೇವಳದ ಆಡಳಿತ ಮಂಡಳಿ ಹಾಗೂ ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಿಮ್ಮೇಳನದಲ್ಲಿ ಸರ್ವ ಶ್ರೀ ಕೆ.ಪಿ. ಹೆಗ್ಡೆ ತೋನ್ಸೆ, ಜಯಂತಕುಮಾರ ಎನ್.ಜಿ. ಹೆಗ್ಡೆ, ಮಂದರ್ತಿ ರಾಮ, ಅರ್ಥಧಾರಿಗಳಾಗಿ ಸರ್ವಶ್ರೀ ತಾರಾನಾಥ ಬಲ್ಯಾಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಕೊರ್ಗಿ ವೆಂಕಟೇಶ ಉಪಾಧ್ಯಾಯ, ಉಜ್ರೆ ಅಶೋಕ ಭಟ್, ಸುಜಯೀಂದ್ರ ಹಂದೆ ಇವರುಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಂಘಟಕರಾಗಿ ಮಕ್ಕಳ ಮೇಳ ಸಾಲಿಗ್ರಾಮದ ಸಂಚಾಲಕರಾದ ಶ್ರೀ ಶ್ರೀಧರ ಹಂದೆಯವರ ಪರಿಶ್ರಮವನ್ನು ಆಡಳಿತಮಂಡಳಿಯು ಕ್ರತಜ್ಞತೆಯಿಂದ ಸ್ಮರಿಸಿಕೊಂಡಿತು.

ಎಲ್ಲಾ ಕಲಾವಿದರಿಗೆ ಶ್ರೀದೇವರ ಪ್ರಸಾದ, ರಕ್ಷಾಕವಚ, ಕಿರು ಸಂಭಾವನೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ. ಜಗದೀಶ ಕಾರಂತರು ನೀಡಿ ಗೌರವಿಸಿದರು.

1Oct/100

Sri Krishna jnmastami and Vitlpindi

ಕ್ರಷ್ಣ ಜಯಂತಿ:- ಶ್ರೀದೇವಳದಲ್ಲಿ ದಿನಾಂಕ 01.09.2010 ರಂದು ರಾತ್ರಿ ಕ್ರಷ್ಣ ಜಯಂತಿಯ ಪ್ರಯುಕ್ತ ವಿಶೇಷ ಪೂಜೆ ಹಾಗೂ ಪನೀವಾರ ವಿತರಣೆ ನಡೆಯಿತು.

ವಿಟ್ಲಪಿಂಡಿ ಉತ್ಸವ :- ದಿನಾಂಕ 02.09.10 ರಂದು ಶ್ರೀದೇವರಿಗೆ ಮಧ್ಯಾಹ್ನ 4-00 ಗಂಟೆಗೆ ವಿಶೇಷ ಪೂಜೆ ನಂತರ ಪಲ್ಲಕ್ಕಿಯಲ್ಲಿ ಉತ್ಸವ ಮುರ್ತಿಯನ್ನು ಕೂಡಿಸಿಕೊಂಡು ವೇದ ವಿದ್ಯಾರ್ಥಿಗಳ, ಉಪಾಧಿವಂತರು,ಅರ್ಚಕರು, ಹಾಗೂ ತಂತ್ರಿಗಳ ವೇದ ಘೊಷದೊಂದಿಗೆ, ಮಂಗಳ ವಾದ್ಯದೊಂದಿಗೆ ಉತ್ಸವವು ದಾರಿಯಲ್ಲಿ ಹಲವು ಕಡೆ ಮೊಸರು ಕುಡಿಕೆಯನ್ನು ಒಡೆಯುತ್ತಾ ಸಾದಾರಣ 2 ಕಿ.ಮೀ ಕ್ರಮಿಸಿ ಎಡಬೆಟ್ಟು ಗ್ರಾಮದ ಶ್ರೀಗೋಪಾಲಕ್ರಷ್ಣ ದೇವಳವನ್ನು ಪ್ರವೇಶಿಸಿ ಅಲ್ಲಿಯ ಗ್ರಾಮಸ್ಥರಿಂದ ಶ್ರೀದೇವರಿಗೆ ಅಷ್ಟವಧಾನ ಸೇವೆ ಹಾಗೂ ಗೋಪಾಲಕ್ರಷ್ಣ ದೇವರಿಗೆ ವಿಶೇಷ ಪೂಜೆಯನ್ನು ಸ್ವೀಕರಿಸಿ ಭಕ್ತರಿಗೆ ಪಾನಕ ಪನೀವಾರವನ್ನು ಹಂಚಲಾಯಿತು.  ನಂತರ ಶ್ರೀದೇವಳದ ಉಪಸನ್ನಿಧಿಯಾದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಅಷ್ಟವಧಾನ ಸೇವೆ ಹಾಗೂ ಶ್ರೀ ಆಂಜನೇಯ ದೇವರಿಗೆ ರಂಗಪೂಜೆ ನೇರವೇರಿಸಿ ಉತ್ಸವವು ಶ್ರೀದೇವಳಕ್ಕೆ  ಹಿಂದುರುಗಿತು.. ಭಕ್ತಾದಿಗಳಿಗೆ ಪಾನಕ ಪನೀವಾರವನ್ನು ಶ್ರೀ ಆಂಜನೇಯ ದೇವಳದಲ್ಲಿ ಹಂಚಲಾಯಿತು. ಸುಮಾರು 1,000  ಪಾಲ್ಗೊಂಡಿದ್ದರು.

1Oct/100

Independence Day

ಶ್ರೀಗುರುನರಸಿಂಹ ನಿಗಮಾಗಮ ಪಾಠಶಾಲೆಯಲ್ಲಿ ದೇಶದ ಸ್ವಾತಂತ್ರ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಉತ್ಸವದಲ್ಲಿ ಭಾಗಿಗಳಾಗಿದ್ದ ವಿದ್ಯಾರ್ಥಿಗಳಿಗೆ ಹಾಗೂ ಅಂದು ದೇವಳದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ಸ್ವೀಕರಿಸಿದ ಎಲ್ಲ ಭಕ್ತರಿಗೆ ಶ್ರೀ ಶ್ರೀಧರ ಉರಾಳ "ಉರಾಳ್ ಸ್ವೀಟ್ಸ್" ಕುಂದಾಪುರ ಇವರು ಸಿಹಿತಿಂಡಿ ಲಾಡನ್ನು ನೀಡಿ ಶ್ರೀಗುರುದೇವರ ಕ್ರಪೆಗೆ ಪಾತ್ರರಾದರು ಶ್ರೀ ಉರಾಳರಿಗೆ ಶ್ರೀದೇವಳದ ಆಡಳಿತ ಮಡಳಿಯು ತನ್ನ ಕ್ರತಜ್ಞತೆಯನ್ನು ಸಲ್ಲಿಸಿತು.

1Oct/100

Vana Mahostava

ಹಸಿರು ವನ ಉಳಿಸಿ ಬೆಳೆಸುವ ಸದುದ್ದೇಶದಿಂದ ಶ್ರೀದೇವಳದ ಆಡಳಿತ ಮಂಡಳಿಯು ಶ್ರೀದೇವಳದ ಒಡೆತನದ ಬೋಳಾಗಿದ್ದ ದೇವರ ಹಾಡಿಯಲ್ಲಿ 1,000 ಗಾಳೀ ಸಸಿಗಳನ್ನು ನೆಡುವುದರ ಮೂಲಕ ವನ ಮಹೋತ್ಸವನ್ನು ದಿನಾಂಕ 7.08.2010 ಶನಿವಾರದಂದು ಪೂರ್ವಾಹ್ನ ಸರಳವಾಗಿ ಆಚರಿಸಿತು. ಜನರಲ್ಲಿ ಹಸಿರೇ ಉಸಿರು ಎನ್ನುವ ಪ್ರಜ್ಞೆ ಮೂಡುವಂತಾದರೆ ಆಡಳಿತ ಮಂಡಳಿಯ ಶ್ರಮ ಸಾರ್ಥಕವಾಗುತ್ತದೆ. ಈ ವನವನ್ನು ಉಳಿಸಿ ಬೆಳೆಸುವಲ್ಲಿ ಸ್ಥಳೀಯರ ಸಹಕಾರವನ್ನು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ. ಜಗದೀಶ ಕಾರಂತರು ಬಯಸಿದರು.