Paraspara e-KootaBandhu for quicker news

3Oct/100

Adalita Mandali & Salaha Samiti Sabhe

         ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿ ಸಭೆ

                 ಶ್ರೀಗುರುನರಸಿಂಹ ದೇವಸ್ಥಾನ ಇದರ ಆಡಳಿತ ಸಲಹಾ ಸಮಿತಿಯ ಸಭೆಯು ದಿನಾಂಕ 26.09.2010 ರಂದು ಪೂರ್ವಾಹ್ನ ಗಂಟೆ 10-30 ಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರ ಅಧ್ಯಕ್ಷತೆಯಲ್ಲಿ ಜ್ಞಾನಮಂದಿರದ ಸಭಾ ಭವನದಲ್ಲಿ ಜರಗಿತು. ಸಲಹಾ ಸಮಿತಿಯ 76 ಜನ ಸದಸ್ಯರು ಭಾಗವಹಿಸಿದ್ದರು.

          ಕಾರ್ಯಕ್ರಮದಂತೆ ವೇದೋಕ್ತ ಪ್ರಾರ್ಥನೆ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಆನಂತಪದ್ಮನಾಭ ಐತಾಳರಿಂದ ನಡೆಯಿತು. ನಿಯಾಮಾನುಸಾರ ಮೀಟಿಂಗ್ ನೋಟೀಸನ್ನು ಓದಿ ಹೇಳಿ ದಾಖಲಿಸಲಾಯಿತು. ಆಗಮಿಸಿದ ಎಲ್ಲಾ ಸದಸ್ಯರನ್ನು ಆಡಳಿತಮಂಡಳಿಯ ಉಪಾಧ್ಯಕ್ಷರಾದ ಶ್ರೀಭಾಸ್ಕರ ನಾವಡರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಆನಂದರಾಮ ಮಧ್ಯಸ್ತರು ಪ್ರಸ್ತಾವನೆ ಮಾಡುತ್ತಾ ಸಭೆಯ ಉದ್ದೇಶ, ಕಾರ್ಯವ್ಯಾಪ್ತಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ದೇವಳದ ಸಿಬ್ಬಂದಿ ಶ್ರೀಪ್ರಭಾಕರ ಮಯ್ಯರು ಗತ ಸಭೆಯ ವರದಿಯನ್ನು ಓದಿದರು. ಒಂದು ವರ್ಷದ ಶ್ರೀದೇವಳದ ಕಾರ್ಯಚಟುವಟಿಕೆಗಳ ವರದಿಯನ್ನು ದೇವಳದ ವ್ಯವಸ್ಥಾಪಕರಾದ ಶ್ರೀ G.S.N. ಹೇರ್ಳೆ ಸಭೆಯ ಗಮನಕ್ಕೆ ತಂದರು. 2009-10ನೇ ಸಾಲಿನ ಅಡಿಟ್ ವರದಿಯನ್ನು ಎಲ್ಲಾ ಸದಸ್ಯರಿಗೂ ಕಳುಹಿಸಿದ್ದು ಕೋಶಾಧಿಕಾರಿ ಶ್ರೀ ಸದಾರಾಮ ಹೇರ್ಳೆಯವರು ಸಾಕಷ್ಟು ವಿವರಣೆಯೊಂದಿಗೆ ದೇವಳದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಿಳಿಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀ ಕೆ.ಯಜ್ಞನಾರಾಯಣ ಹೇರ್ಳೆಯವರು ಅಭಿವ್ರದ್ಧಿ ಯೋಜನೆಯ ದ್ವಿತೀಯ ಹಂತದ ಬಗ್ಗೆ ವಿವರಿಸುತ್ತಾ ಸರ್ವರ ಸಹಕಾರವನ್ನು ಬಯಸಿದರು. ಆಗಮಿಸಿದ ಎಲ್ಲಾ ಸದಸ್ಯರಿಗೆ ತಮ್ಮ ನೆನಪಿನ ಕಾಣಿಕೆಯಾಗಿ ಶ್ರೀದೇವರ ಭಾವಚಿತ್ರವಿರುವ ಗೋಲ್ಡ್ ಚೈನ್ ವಾಚನ್ನು ನೀಡಿದರು.

           ದೇವಳದ ಕಾರ್ಯಚಟುವಟಿಕೆ ಮುಂದಿನ ಯೋಜನೆಗಳ ಬಗ್ಗೆ ಉಪಯುಕ್ತ ಸಲಹೆಗಳು ಸಭೆಯಿಂದ ವ್ಯಕ್ತವಾಯಿತು. ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಸದಸ್ಯರುಗಳನ್ನು ಅಭಿನಂದಿಸುತ್ತಾ ಉಪಯುಕ್ತ ಸಲಹೆಗಳಿಗೆ ಕ್ರತಜ್ಞತೆ ಸಲ್ಲಿಸಿದರು. ಎಲ್ಲ ಸಮಾಜ ಬಂಧುಗಳ ಪೂರ್ಣ ಸಹಕಾರದ ಭರವಸೆ ಹೊಂದಿರುವುದಾಗಿ ತಿಳಿಸಿದರು. ಶ್ರೀ ಗುರುದೇವರು ನಮ್ಮೆಲ್ಲರಿಗೆ ಸನ್ಮಂಗಲವನ್ನುಂಟು ಮಾಡಲೆಂದು ಪ್ರಾರ್ಥಿಸಿದರು. ವೇದಿಕೆಯಲ್ಲಿ ಆಸೀಸರಾಗಿದ್ದ ನಿಕಟಪೂರ್ವ ಆಡಳಿತಮಂಡಳಿಯ ಅಧ್ಯಕ್ಷ ಶ್ರೀ ಪಿ.ಸೂರ್ಯನಾರಾಯಣ ಹೇರ್ಳೆ ಕೂಟಮಹಾಜಗತ್ತಿನ ಕೇಂದ್ರಾಧ್ಯಕ್ಷ ಡಾ. ಕೆ.ಎಸ್ ಕಾರಂತರು ಮೌನ ಸಮ್ಮತಿಯೊಂದಿಗೆ ದೇವಳದ ಪ್ರಗತಿಗೆ ಪೂರ್ಣ ಬೆಂಬಲವನ್ನು ಸೂಚಿಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀ ನಾಗರಾಜ್ ಶ್ರಂಗೇರಿ ಇವರು ಧನ್ಯವಾದ ಸಮರ್ಪಿಸಿದರೆ ಸಾಮೂಹಿಕ ಐಕ್ಯ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು.

Comments (0) Trackbacks (0)

No comments yet.


Leave a comment


No trackbacks yet.