Paraspara e-KootaBandhu for quicker news

31Dec/100

Guest

          ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿಗೆ ದಿನಾಂಕ 20.12.10 ರ ರವಿವಾರ ಪೂರ್ವಾಹ್ನ ಕರ್ನಾಟಕ ರಾಜ್ಯ ಉಚ್ಛನ್ಯಾಯಲಾಯದ ನ್ಯಾಯಮುರ್ತಿ ಇವರು ಸಪತ್ನಿಕರಾಗಿ ಉಡುಪಿಯ ಪ್ರಸಿದ್ಧ ನ್ಯಾಯವಾದಿ ಶ್ರೀಮಟ್ಟಿ ರಾಮಚಂದ್ರ ರಾವ್ ಇವರೊಂದಿಗೆ ಬೇಟಿ ನೀಡಿದರು.

           ದೇವಳದ ಸುಂದರ ಪರಿಸರ, ಚಕ್ರತೀರ್ಥ, ಶಂಖತೀರ್ಥ ಸರೋವರಗಳ ಮಹತ್ವ, ಅಡುಗೆ ಮನೆಯ ಸ್ವಚ್ಛತೆ, ಸಾಂಸ್ಕ್ರತಿಕ ಸಭಾಮಂದಿರ, ವೇದಪಾಠ ಶಾಲೆ, ಸಾರ್ವಜನಿಕ ಉಚಿತ ಚಿಕಿತ್ಸಲಾಯ ಮುಂತಾದ ದೇವಳದ ಸಮಾಜಮುಖಿ ಚಟುವಟಿಕೆಗಳನ್ನು ವೀಕ್ಷಿಸಿದರು. ಶ್ರೀದೇವರ ದರ್ಶನ ಪಡೆದು ತೀರ್ಥಪ್ರಸಾದ ಸ್ವೀಕರಿಸಿದರು. ದೇವಳದ ವತಿಯಿಂದ ಆಡಳಿತಮಂಡಳಿಯ ಅಧ್ಯಕ್ಷ ಶ್ರೀ ಎ. ಜಗದೀಶ ಕಾರಂತರು ಮತ್ತು ಸಹಧರ್ಮದರ್ಶಿಗಳು ಇವರನ್ನು ಕೂಡಿಕೊಂಡು ನ್ಯಾಯಮುರ್ತಿ ದಂಪತಿಗಳನ್ನು ಶಾಲುಹೊದೆಸಿ ಫಲಪುಷ್ಫ, ಪ್ರಸಾದ ನೀಡಿ ಗೌರವಿಸಿದರು. ತದ ನಂತರ ಕ್ಷೇತ್ರದ ಉಪಸನ್ನಿಧಿ ಶ್ರೀಆಂಜನೇಯನ ದರ್ಶನ ಪಡೆದು ತಮ್ಮ ಪ್ರಯಾಣವನ್ನು ಮುಂದುವರಿಸಿದರು.

18Dec/100

Religious

ಧಾರ್ಮಿಕ ಚಟುವಟಿಕೆಗಳು

ಗಣಹೋಮ :-

                           ಶ್ರೀದೇವಳದಲ್ಲಿ ಪ್ರತಿ ಸಂಕ್ರಮಣದಂದು ಗಣಹೋಮ ಕಾರ್ಯಕ್ರಮವು ಅನಾದಿಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದೆ ಬೇರೆ ದಿನಗಳಲ್ಲೂ ಭಕ್ತರಿಂದ ಈ ಸೇವೆ ನಡೆಯುತ್ತಾ ಬಂದಿದೆ.

                             ಇದೀಗ ನೂತನ ಆಡಳಿತ ಮಂಡಳಿಯು ಪ್ರತಿ ಸಂಕಷ್ಟಹರ ಚತುರ್ಥಿಯ ದಿನದಂದು ಸಾರ್ವಜನಿಕರ ಸಹಭಾಗಿತ್ವದಲ್ಲಿ ಗಣಹೋಮ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದ್ದು ಈಗಾಗಲೇ 70 ಕ್ಕಿಂತ ಹೆಚ್ಚಿನ ಜನರು ಈ ಸೇವೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುವ ಈ ಸೇವೆಯಲ್ಲಿ ಹೆಚ್ಚು ಹೆಚ್ಚು ಜನ ಭಕ್ತರು ಸ್ವತಃ ಹಾಜರಿದ್ದು ಕ್ರತಾರ್ಥರಾಗುತ್ತಿದ್ದಾರೆ.

ನವಕಪ್ರಧಾನ ಕಲಾಶಾಭಿಷೇಕ

                          ಶ್ರೀ ಕ್ಷೇತ್ರದ ಉಪಸನ್ನಿಧಿಗಳಲ್ಲೊಂದಾದ ಶ್ರೀಆಂಜನೇಯನ ಸನ್ನಿಧಿಯು ಅತ್ಯಂತ ಕಾರಣಿಕ ಸ್ಥಳವೆಂಬುದು ಎಲ್ಲರಿಗೂ ತಿಳಿದ ವಿಚಾರವೇ  ಆಗಿದೆ. ಪ್ರತಿ ದಿನ ನಡೆಯುವ ರಂಗಪೂಜೆ, ನಂದಾದೀಪಕ್ಕೆ ಎಣ್ಣೆ ಹುಯ್ಯುವ, ಚಂದ್ರಬೆಣ್ಣೆ ಲೇಪನದಂತ ಈ ಸೇವೆಗಳು ಇದಕ್ಕೆ ನಿದರ್ಶನಗಳಾಗಿವೆ.

                           ಇದೀಗ ದೇವಳದ ಆಡಳಿತ ಮಂಡಳಿಯು ಪ್ರತಿ ಹುಣ್ಣಿಮೆಯ ದಿನ ನವಕ ಪ್ರಧಾನ ಕಲಾಶಾಭಿಷೇಕ, ಹೋಮಗಳನ್ನು ನಡೆಸಲು ಉದ್ದೇಶಿಸಿದೆ, ಮತ್ತು ಶ್ರೀನಾಗದೇವರಿಗೂ ಪ್ರತಿ ಸ್ರಷ್ಟಿಯ ದಿನ ವಿಶೇಷ ಪೂಜೆಯನ್ನು ನಡೆಸಲು ಉದ್ದೇಶಿಸಿದೆ. ಇದನ್ನು 2011ನೇ ವರ್ಷದಿಂದ ಪ್ರಾರಂಬಿಸಲು ನಿರ್ಣಯಿಸಿದೆ. ಈ ಸೇವೆಗಳಲ್ಲೂ ಸಾರ್ವಜನಿಕರ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿದೆ. ಕಲಶವೊಂದರ ರೂ.200/- ನೀಡಿ ಸೇವೆಯಲ್ಲಿ ಭಾಗಿಗಳಾಗಿ ಹಣ್ಣುಕಾಯಿ ಪ್ರಸಾದವನ್ನು ಪಡೆಯಬಹುದಾಗಿದೆ. ಆಂಜನೇಯನ ಕ್ರಪಾರ್ಶೀವಾದ ಬಯಸುವ ಅಸಂಖ್ಯ ಭಕ್ತರು ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಭರವಸೆ ಆಡಳಿತ ಮಂಡಳಿಗಿದೆ.

17Dec/100

Developments

ಶ್ರೀದೇವಳದ ಅಭಿವ್ರದ್ಧಿ ಪಥದತ್ತ ಒಂದು ನೋಟ

ರಜತ ದ್ವಾರ :

                          ಶ್ರೀದೇವಳದ ಗರ್ಭಗುಡಿಯ 3ನೇಯ ಪ್ರಧಾನ  ದ್ವಾರಕ್ಕೆ ಬೆಳ್ಳಿ ಮಡಾಯಿಸಿಕೊಡುವ ಅಂದಾಜು ರೂ.7 ರಿಂದ 8 ಲಕ್ಷದ ಕಾಮಗಾರಿಯ ಹೊಣೆ ಹೊತ್ತಿರುವ ಶ್ರೀದೇವರ ಭಕ್ತರಾದ ಶೆಟ್ಟಿಕೆರೆ ಶ್ರೀಶ್ರೀಧರ ಹೊಳ್ಳರು ಕುಸುರಿ ಕೆಲಸದಲ್ಲಿ ಪ್ರಖ್ಯಾತರಾದ ಶ್ರೀಪ್ರಭಾಕರ ಆಚಾರ್ಯ ಮತ್ತು ಸಹೋದರರು, ಕೋಟೇಶ್ವರ ಇವರಿಗೆ ವಹಿಸಿದ್ದು ವಾರ್ಷಿಕ ಬ್ರಹ್ಮರಥೋತ್ಸವದ (16.01.2011) ಒಳಗೆ ಇದನ್ನು ಶ್ರೀಗುರುದೇವರಿಗೆ ಅರ್ಪಿಸುವ ಸಂಕಲ್ಪ ಹೊಂದಿದ್ದು ಕೆಲಸ ಭರದಿಂದ ನಡೆಯುತ್ತಿದ್ದು ಸಂಕಲ್ಪಿಸಿದಂತೆ ಸಮರ್ಪಣೆಯಾಗುವ ನಿರೀಕ್ಷೆ ಇದೆ. ಈ ಕೊಡುಗೆಯನ್ನು ದೇವಳವು ಪಡೆಯುವಲ್ಲಿ ಸಾಸ್ತಾನ ಎಡಬೆಟ್ಟಿನ ವೇ.ಮು.ಶ್ರೀವೆಂಕಪ್ಪಯ್ಯ ಭಟ್ಟರ ಪಾತ್ರ ಬಹಳ ಮುಖ್ಯವಾಗಿರುವುದನ್ನು ಆಡಳಿತಮಂಡಳಿಯು ಗೌರವಪೂರ್ವಕವಾಗಿ ಸ್ಮರಿಸುತ್ತದೆ.

ಒಳಪೌಳಿಯ ಒಳಮೈ ಗೋಡೆಗೆ ಗ್ರೈನೇಟ್ ಹಾಸು

            ಶ್ರೀದೇವಳದ ಒಳ ಪೌಳಿಯ ಒಳಮೈ ಗೋಡೆಯು ಬಹಳ ವರ್ಷಗಳ ಹಿಂದಿನ ಸುಣ್ಣದ ಗಾರೆಯನ್ನು ಹೊಂದಿದ್ದು ಗೋಡೆಯಲ್ಲಿ ಶ್ರೀದೇವರ ಶತನಾಮಾವಳಿಗಳನ್ನು ಕಾರ್ಡ ಬೋರ್ಡಿನಲ್ಲಿ ಶ್ರೀ ಶ್ಯಾಮಸುಂದರ್‍ ಇವರು ಕೊಡುಗೆ ರೂಪದಲ್ಲಿ ಬರೆಸಿದ್ದರು.

            ಅದು ಈಗ ಬಹಳ ಜೀರ್ಣಾವಸ್ಥೆಯನ್ನು ಹೊಂದಿದ್ದು ಆಡಳಿತ ಮಂಡಳಿಯು ಗ್ರೈನೇಟಿನಲ್ಲಿ ಬರೆಸಲು ನಿರ್ಣಯಿಸಿತು. ಆಗ ಶ್ರೀದೇವಳದ ಓರ್ವ ಭಕ್ತರಾದ ಈಗ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಪಡುಹರ್ತಟ್ಟು ಶ್ರೀಶ್ರೀಧರ ಮಯ್ಯರ ಒಳಗೋಡೆಗೆ ಗ್ರೈನೇಟ್ ಹೊದಿಕೆಯೊಂದಿಗೆ ಅಷ್ಟೋತ್ತರಗಳನ್ನು ಗ್ರೈನೇಟಿನಲ್ಲಿ ಬರೆಸಿ ಸಮರ್ಪಿಸಲು ಅಪೇಕ್ಷಿಸಿದ್ದು ಈ ಕಾಮಗಾರಿಯು ದೇವಳದಲ್ಲಿ ಭರದಿಂದ ಸಾಗುತ್ತಿದ್ದು ವಾರ್ಷಿಕ ಜಾತ್ರೆಯ ಒಳಗ ಮುಗಿಯುವ ವಿಶ್ವಾಸವಿದೆ. ಅಂದಾಜು ಮೌಲ್ಯ ರೂ. 2.5 ಲಕ್ಷ

ಸ್ಥಳ ಖರೀದಿ

            ಹಿಂದಿನ ಆಡಳಿತ ಮಂಡಳಿಯು ಶ್ರೀಮತಿ ಸಾವಿತ್ರಮ್ಮ ದಿವಂಗತ ಅನಂತ ಅಡಿಗಳ ಪತ್ನಿ ಇವರಿಂದ ದೇವಳಕ್ಕೆ ಹೊಂದಿಕೊಂಡಿರುವ 20 ಸೆಂಟ್ಸ್ ಸ್ಥಳವನ್ನು ಖರೀದಿಸಲು ಮುಂಗಡ ನೀಡಿ ಒಪ್ಪಂದ ಮಾಡಿಕೊಂಡಿದ್ದು ಇದೀಗ ಆ ಸ್ಥಳವನ್ನು ಪೂರ್ಣ ಮೊತ್ತ ಪಾವತಿಸಿ ದೇವಳದ ಹೆಸರಿಗೆ ಖರೀದಿಸುವ ಪ್ರಕ್ರಿಯೆಯನ್ನು ಪ್ರಚಲಿತ ಆಡಳಿತ ಮಂಡಳಿಯು ಮಾಡಿ ಮುಗಿಸಿರುತ್ತದೆ.

ಖರೀದಿ ಒಪ್ಪಂದ

         ಚಕ್ರತೀರ್ಥ ಸರೋವರದ ಉತ್ತರಕ್ಕಿರುವ 7.ಸೆಂಟ್ಸ್ ಸ್ಥಳವು ದೇವಳದ ಅಭಿವ್ರದ್ಧಿಯ ಮುನ್ನೋಟದ ದ್ರಷ್ಟಿಯಿಂದ ಅಗತ್ಯವೆಂದು ಕಂಡು ಬಂದಿರುವುದರಿಂದ ದೇವಳದ ಆಡಳಿತ ಮಂಡಳಿಯು ರೂ.75 ಸಾವಿರ ಮುಂಗಡ ಹಣವನ್ನು ಆ ಸ್ಥಳದ ಮಾಲೀಕ ಶ್ರೀ ಅಣ್ಣಪ್ಪಯ್ಯ ಹೆಬ್ಬಾರ ಅವರಿಗೆ ನೀಡಿ ಕ್ರಯ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ.

ಅಭಿವ್ರದ್ದಿ ಚಟುವಟಿಕೆಗಳು

              ದಿ. ಕ್ರಷ್ಣ ಅಡಿಗಳ ಪತ್ನಿ ಮತ್ತು ಪುತ್ರರು  ದೇವಳಕ್ಕೆ ದಾನ ರೂಪವಾಗಿ ನೀಡಿದ ಸ್ಥಳಕ್ಕೆ ಆವರಣ ಗೋಡೆ ನಿರ್ಮಾಣ ಮಾಡುವರೆ ಈಗಾಗಲೇ ಟೆಂಡರ‍ ಪ್ರಕಟನೆ ನೀಡಿದ್ದು ಈ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು.

             ದೇವಳದ ಪಶ್ಚಿಮ ದಕ್ಷಿಣ ಮುಲೆಯ ಹಳೆಯ ಪೌಳಿಯ ನವೀಕರಣ ಕಾಮಗಾರಿಯು ಅಂದಾಜು ಪತ್ರ ತಯಾರಿಸಿದ್ದು ವಾರ್ಷಿಕ ಜಾತ್ರೆ ಮುಗಿದೊಡನೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಆಡಳಿತಮಂಡಳಿ ಉತ್ಸುಕವಾಗಿದೆ.

17Dec/100

Donation

 ದೇಣಿಗೆ

1. ಶ್ರೀಮತಿ ಸರೋಜ ಪಿ. ರಾಗವೇಂದ್ರ ರಾವ್ ಗುಂಟೂರು ಇವರಿಂದ 3 ಊಟದ ಸ್ಟೀಲ್ ಟೇಬಲ್ ಮತ್ತು 10 ಪ್ಲಾಸ್ಟೀಕ್ ಕುರ್ಚಿ

2.  ಕೂಟಮಹಾಜಗತ್ತು  ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ ಇವರಿಂದ 50 ಪ್ಲಾಸ್ಟೀಕ್ ಕುರ್ಚಿ

3. ಶ್ರೀ ಪಿ.ಸೂರ್ಯನಾರಾಯಣ ರಾವ್ ಪತ್ತುಮುಡಿ ಮಂಗಳೂರು ಇವರಿಂದ 175 ಪ್ಲಾಸ್ಟೀಕ್ ಕುರ್ಚಿ

4. ದಿವಂಗತ ರಮಾದೇವಿಯರ ಸವಿನೆನಪಿನಲ್ಲಿ ಶ್ರೀಶ್ರೀಧರ  ಐತಾಳ್ ಬನಶಂಕರಿ ೧ನೇ ಹಂತ ಬೆಂಗಳೂರು-  ರೂ. 1,00,000/- ಭೋಜನ ನಿಧಿಗೆ (ಶಾಶ್ವತ ಸೇವೆ)

5. ಶ್ರೀಮತಿ ಸಾವಿತ್ರಮ್ಮ ಕೆ ಗೋಪಾಲಭಟ್ಟರ ಸವಿನೆನಪಿನಲ್ಲಿ ಶ್ರೀ .ಕೆ.ಜಿ.ಕೇಶವಮುರ್ತಿ ಕಲ್ಮನೆ ಊಂಟುರು ತೀರ್ಥಹಳ್ಳಿ  ರೂ.50,000/- ವೇದಾಧ್ಯಯನ ನಿಧಿಗೆ

6. ಎಕ್ಸಕ್ಯೂಟೀವ್ ಆಫಿಸರ್‍ ತಿರುಪತಿ ದೇವಸ್ಥಾನ (ಟಿ.ಟಿ.ಡಿ) ತಿರುಪತಿ ರೂ. 1,46,601/- ವೇದಾಧ್ಯಯನ ನಿಧಿಗೆ.

ಶ್ರೀದೇವಳದ ಆಡಳಿತ ಮಂಡಳಿಯು ಇವರುಗಳಿಂದ ಸೊತ್ತುಗಳನ್ನು ಕ್ರತಜ್ಞತಾಪೂರ್ವಕವಾಗಿ ಸ್ವೀಕರಿಸಿದರು.

 

 

  

11Dec/100

Sri Krishna Vana

"ಶ್ರೀ ಕ್ರಷ್ಣ ವನ" ಶಿಲಾಫಲಕ ಅನಾವರಣ

DSC_0010

 

        ಶ್ರೀ ದೇವಳಕ್ಕೆ ಹೊಂದಿಕೊಂಡಿರುವ ಚಿತ್ರಪಾಡಿ ಗ್ರಾಮದ ಅಂದಾಜು 50.ಲಕ್ಷ ಬೆಲೆ ಬಾಳುವ ಸ್ಥಳವನ್ನು ಶ್ರೀದೇವಳದ ಉಪಯೋಗಕ್ಕಾಗಿ ದಿ|| ಕ್ರಷ್ಣ ಅಡಿಗ ಪಾರಂಪಳ್ಳಿ ಇವರ ಪತ್ನಿ ಶ್ರೀಮತಿ ಅಡಿಗ ಮತ್ತು ಮಕ್ಕಳು ಉದಾರವಾಗಿ ನೀಡಿರುತ್ತಾರೆ. ಈ ಸ್ಥಳದಲ್ಲಿ ದಿವಗಂತರ ಹೆಸರನ್ನು ಶಾಶ್ವತವಾಗಿರಿಸುವ ಹಾಗೂ ಇತರ ಭಕ್ತರಿಗೆ ಪ್ರೇರಣೆ ನೀಡುವ ದ್ರಷ್ಟಿಯಿಂದ ಶಿಲಾಫಲಕವನ್ನು ಸ್ಥಾಪಿಸಲು ಆಡಳಿತ ಮಂಡಳಿಯು ನಿರ್ಣಯಿಸಿರುತ್ತದೆ.

       ಅದರಂತೆ ತಯಾರಿಸಿದ ಭವ್ಯವಾದ ಶಿಲಾಫಲಕವನ್ನು ದಿನಾಂಕ 05.12.10 ರಂದು ಶ್ರೀಮತಿ ಶ್ರೀಮತಿ ಅಡಿಗರು ಅನಾವರಣ ಮಾಡಿದರು. ಈ ಸಮಾರಂಭದಲ್ಲಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತ, ಹಾಗೂ ಉಪಾಧ್ಯಕ್ಷ ಶ್ರೀ ಭಾಸ್ಕರ ನಾವಡ ಕೋಶಾಧಿಕಾರಿ ಶ್ರೀ ಸದಾರಾಮ ಹೇರ್ಳೆ ಸದಸ್ಯರುಗಳಾದ ಶ್ರೀ ಕೆ ಯಜ್ಞನಾರಾಯಣ ಹೇರ್ಳೆ, ಶ್ರೀ ನೀರಾಳ ಕ್ರಷ್ಣ ಹೊಳ್ಳ, ಶ್ರೀ ಧರ್ಮರಾಯ ಹಂದೆ ಎಚ್ ಹಾಗೂ ಅಪಾರ ಸಂಖ್ಯೆಯ ದೇವಳದ ಭಕ್ತರು ಹಾಗೂ ದಿ|| ಕ್ರಷ್ಣ ಅಡಿಗಳ ಒಡನಾಡಿಗಳು, ಬಂಧುವರ್ಗ, ಹಿತೈಷಿಗಳು, ಹಾಜರಿದ್ದು ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿದರು.

DSC_0011

10Dec/100

Deepotsava

 ದೀಪೋತ್ಸವ

          ದಿನಾಂಕ 05.12.2010  ರಂದು ಶ್ರೀದೇವಳದಲ್ಲಿ ದೀಪೋತ್ಸವವು ಅದ್ದೂರಿಯಿಂದ ನಡೆಯಿತು. ಅಂದು ಬೆಳಿಗ್ಗೆ ಶ್ರೀದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಾಶಿಭಿಷೇಕ, ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀದೇವಳದ ತಂತ್ರಿಗಳಾದ ವೇ.ಮು. ಶ್ರೀ ಶಂಕರನಾರಾಯಣ ಸೋಮಯಾಜಿಯವರು ನಡೆಸಿಕೊಟ್ಟರು.

          ಸಂಜೆ ದೇವಳದ ಪರಿಸರ, ರಥಬೀದಿ ಹೀಗೆ ಎಲ್ಲೆಲ್ಲೂ ಹಣತೆ ದೀಪಗಳು ರಾರಾಜಿಸುತ್ತಿದ್ದವು. ಹಣತೆ ದೀಪಗಳ ಚಿತ್ತಾರವು ಆಕರ್ಷಕವಾಗಿದ್ದು ಹೊಸ ಲೋಕವನ್ನೆ ನೋಡಿದಂತಹ ಅನುಭವನ್ನು ತರುತ್ತಿತ್ತು. ಹಿರಿರಂಗಪೂಜೆಯ ನಂತರ ದೇವಳದ ಬಿರುದು ಬಾವಲಿಗಳು, ಮಂಗಲವಾದ್ಯ, ಹಾಗೂ ವೇದ ವಿದ್ಯಾರ್ಥಿಗಳ ಮಂತ್ರ ಘೋಷದೊಂದಿಗೆ ಉತ್ಸವವು ಸಾಲಂಕ್ರತ ಮೆರವಣಿಗೆಯೊಂದಿಗೆ ಸಾಗಿ ಪುಷ್ಫರತೋತ್ಸವದೊಂದಿಗೆ ಶ್ರೀ ಆಂಜನೇಯ ದೇವಳಕ್ಕೆ ಚಲಿಸಿ ಅಲ್ಲಿ ಆಂಜನೇಯ ದೇವರಿಗೆ ಮಹಾರಂಗಪೂಜೆ, ಅಷ್ಟಾವಧಾನ ಸೇವೆಯನ್ನು ನಡೆಸಿ ನಂತರ ಪುಷ್ಫರಥವು ಶ್ರೀ ದೇವಳಕ್ಕೆ ಹಿಂದುರುಗಿ ಶ್ರೀ ದೇವಳದ ಶಂಖ ತೀರ್ಥ ಸರೋವರದಲ್ಲಿ ತೆಪ್ಪೋತ್ಸವವನ್ನು ನೇರವೆರಿಸಲಾಯಿತು. ತೆಪ್ಪದಲ್ಲಿ ಶ್ರೀ ದೇವರ ಮೆರವಣಿಗೆ ಕೆರೆಯಲ್ಲಿ ಸಾಗಿ ನಂತರ ಶ್ರೀದೇವರ ಉತ್ಸವವು ಶ್ರೀದೇವಳಕ್ಕೆ ಬಂದು ಶ್ರೀದೇವರಿಗೆ ಪೂಜೆ ಹಾಗೂ ಮಂಗಳಾರತಿಯನ್ನು ನೇರವೇರಿಸಲಾಯಿತು.

           ದೀಪೋತ್ಸವದ ಅಂಗವಾಗಿ ಸಾಂಸ್ಕ್ರತಿಕ ಕಾರ್ಯಕ್ರಮ " ಕಂಸ ಜನನ - ಕಂಸ ದಿಗ್ವಿಜಯ" ಎಂಬ ಯಕ್ಷಗಾನ ಕಥಾ ಭಾಗವನ್ನು ಸಂಜೆ 6.30 ರಿಂದ 10.30 ವರೆಗೆ " ಯಕ್ಷ ಮಿತ್ರರು " ಕಾರ್ಕಡ ಇವರು ಆಡಿ ತೋರಿಸಿದರು. ಈ ಕಾರ್ಯಕ್ರಮವು ಅಪಾರ ಸಂಖ್ಯೆಯ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

            ಹೀಗೆ ದೀಪೋತ್ಸವವು ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನೇರವೇರಿತು. ಅರ್ಚಕರಾಗಿ ತಮ್ಮ ಪಾತ್ರದನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ವೇ.ಮು.ಶ್ರೀ ವಿಜಯಕುನಾರ ಅಡಿಗಳ, ದೇವಳದ ಸಿಬಂಧಿ ವರ್ಗದವರ ಪಾತ್ರ ಎಲ್ಲರ ಗಮನ ಸೆಳೆಯಿತು.

            ಕಳೆದ ವರ್ಷ ಕಾರಣಾಂತರದಿಂದ ನಿಂತಿದ್ದ ಸುಡುಮದ್ದು ಪ್ರದರ್ಶನ ಈ ವರ್ಷ ಮರು ಹುಟ್ಟು ಪಡೆದು ಎಲ್ಲರ ಗಮನವನ್ನು ತನ್ನಡೆಗೆ ಸೆಳೆದುಕೊಂಡಿತ್ತು. ಅಪಾರ ಸಂಖ್ಯೆಯ ಭಕ್ತರು ಈ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣೀಭೂತರಾಗಿದ್ದರು.

      

9Dec/100

Guest

ಗಣ್ಯರ ಬೇಟಿ

     IMG_0001

        57 ನೇಯ ರಾಷ್ಟ್ರೀಯ ಚಲನ ಚಿತ್ರೋತ್ಸವದ ಸ್ವರ್ಣ ಕಮಲ ಪ್ರಶಸ್ತಿ ವಿಜೇತ " ಪುಟಾಣಿ ಪಾರ್ಟಿ " ಮಕ್ಕಳ ಚಲನ ಚಿತ್ರದ ನಿರ್ದೇಶಕ ಶ್ರೀ ರಾಮಚಂದ್ರ ಇವರು ಇತ್ತಿಚೆಗೆ ದೇವಳಕ್ಕೆ ಭೇಟಿ ನೀಡಿದ್ದರು. ಎಳೆಯ ವಯಸ್ಸಿನ ಅವರ ಈ ಸಾಧನೆಯನ್ನು ಗುರುತಿಸಿ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಶ್ರೀದೇವಳದ ಪ್ರಸಾದರೂಪವಾಗಿ ಫಲಪುಷ್ಫ ನೀಡಿ ಶಾಲು ಹೊದೆಸಿ ಗೌರವಿಸುತ್ತಾ ಮುಂದಿನ ದಿನಗಳಲ್ಲಿ ಶ್ರೀಗುರುನರಸಿಂಹ ದೇವರ ಅನುಗ್ರಹದಿಂದ ಅಂತರಾಷ್ಟ್ರೀಯ ಖ್ಯಾತಿ ಗಳಿಸುವಂತಾಗಲೆಂದು ಹಾರೈಸಿದರು.

       ಈ ಸಂಧರ್ಭದಲ್ಲಿ ದೇವಳದ ಧರ್ಮದರ್ಶಿಗಳಾದ ಶ್ರೀಆನಂದರಾಮ ಮಧ್ಯಸ್ತ, ಶ್ರೀ ಸದಾರಾಮ ಹೇರಳೆ ಗಣ್ಯರಾದ ಶ್ರೀ ಎಚ್. ಮಧುಸೂಧನ ಐತಾಳ ಮತ್ತಿತ್ತರು ಹಾಜರಿದ್ದರು.

IMG_0002