Veda Panditara Sabe
ಸಾಲಿಗ್ರಾಮ :- ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಪರಿಸರದ ವೇದ ವಿದ್ವಾಂಸರ, ವೈದೀಕರ ಸಭೆಯನ್ನು ದೇವಳದ ಜ್ಞಾನಮಂದಿರದ ಸಭಾಭವನದಲ್ಲಿ ದಿನಾಂಕ 25.01.2011 ರಂದು ಕರೆಯಲಾಗಿತ್ತು, ಈ ಪರಿಸರದ 45 ಕ್ಕೂ ಮಿಕ್ಕಿ ವೇದ ವಿದ್ವಾಂಸರು ಈ ಸಭೆಯಲ್ಲಿ ಭಾಗವಹಿಸಿದರು. ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ. ಜಗದೀಶ ಕಾರಂತರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು, ದೇವಳದ ತಂತ್ರಿಗಳಾದ ವೇ.ಮು.ಶ್ರೀಶಂಕರನಾರಾಯಣ ಸೋಮಯಾಜಿ ಮತ್ತು ವಯೋವ್ರದ್ಧ ವೇದ ವಿದ್ವಾಂಸ ಹಂದಟ್ಟು ಶ್ರೀಯಜ್ಞನಾರಾಯಣ ಐತಾಳರು ಆಸೀನರಾಗಿದ್ದರು. ವೇದೋಕ್ತ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ಶ್ರೀದೇವಳದಲ್ಲಿ ಒಂದು ಬ್ರಹತ್ ಧಾರ್ಮಿಕ ಕಾರ್ಯಕ್ರಮ ನಡೆಸುವ ಉದ್ಧೇಶವನ್ನು ಶ್ರೀ ಎ ಜಗದೀಶ ಕಾರಂತರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಸಾಕಷ್ಟು ವಿಚಾರ ವಿಮರ್ಶೆ ನಡೆಸಿ ಮಾರ್ಚ 22 ರಂದು 108 ಕಾಯಿ ಗಣಹೋಮ ಉಪಸನ್ನಿಧಿಗಳಿಗೆ ಕುಂಭಾಭಿಷೇಕ ಸಂಜೆ ಅಷ್ಟೋತ್ತರ ಶತಕಲಶ ಸ್ಥಾಪನೆ, ಅಧಿವಾಸಪೂಜೆ 23 ಮಾರ್ಚ 2011 ರಂದು ಸಮಗ್ರ ನವಗ್ರಹಯಾಗ ಬ್ರಹ್ಮಕಲಾಶಾಭಿಷೇಕ ಮಹಾಸಂತರ್ಪಣೆ ಮಂತ್ರಾಕ್ಷತೆ ಕಿರಿರಂಗಪೂಜೆ ಡೆಸಲು ನಿಶ್ಚಯಿಸಲಾಯಿತು. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿಯ ಸದಸ್ಯ ವೇ.ಮು.ಶ್ರೀ ಆನಂತಪ್ಮನಾಭ ಐತಾಳರಿಗೆ ಅಧಿಕಾರ ನೀಡಲಾಯಿತು. ನಂತರ ಧನ್ಯವಾದ ಸಮರ್ಪಣೆಯೊಂದಿಗೆ ಸಭೆಯನ್ನು ಮುಗಿಸಲಾಯಿತು.