Paraspara e-KootaBandhu for quicker news

18Feb/110

Donation Recived

ಸಾಲಿಗ್ರಾಮ :  ಶ್ರೀಗುರುನರಸಿಂಹ ದೇವಸ್ಥಾನದ ನೌಕರರು ಹಾಗೂ ಅವರೇ ರಚಿಸಿಕೊಂಡ ಶ್ರೀಗುರುನರಸಿಂಹ ನವೋದಯ ಸ್ವಸಹಾಯ ಸಂಘದ ಸದಸ್ಯರು ಶ್ರೀದೇವಳದ ಬ್ರಹತ್ ಅಭಿವ್ರದ್ಧಿ ಯೋಜನೆಗೆ ರೂಪಾಯಿ ಒಂದು ಲಕ್ಷ ದೇಣಿಗೆಯನ್ನು ನೀಡಿದರು. ಈ ದೇಣಿಗೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಮತ್ತು ಎಲ್ಲಾ ಸಹ ಧರ್ಮದರ್ಶಿಗಳ ಸಮಕ್ಷಮ ಸ್ವೀಕರಿಸುತ್ತಾ ದೇವಳದ ನೌಕರರಿಗೆ ಉತ್ತಮ ಸೇವಾ ಸವಲತ್ತುಗಳನ್ನು ನೀಡುವ ಭರವಸೆ ನೀಡಿದರು. ಹಾಗೂ ಎಲ್ಲರಿಗೂ ದೇವರು ಒಳಿತನ್ನುಂಟು ಮಾಡಲೆಂದು ಹಾರೈಸಿದರು.

16Feb/110

Yoga Raksha Shibira

ಉಚಿತ ಯೋಗ ರಕ್ಷಾ ಶಿಬಿರ

ದಿನಾಂಕ 01.02.11 ಸೋಮವಾರ ಶ್ರೀದೇವಳದ ಜ್ಞಾನಮಂದಿರ ಸಭಾ ಭವನದಲ್ಲಿ ಡಿವೈನ್ ಪಾರ್ಕ ಟ್ರಸ್ಟ್ ಸಾಲಿಗ್ರಾಮ, ವಿವೇಕ ಜಾಗ್ರತ ಬಳಗ, ಉಡುಪಿ ಇವರುಗಳು ಶ್ರೀದೇವಳದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಒಂದು ದಿನದ ಉಚಿತ ಯೋಗ ರಕ್ಷಾ ಶಿಬಿರವನ್ನು ಏರ್ಪಡಿಸಿದರು.

ಆ ದಿನ ಪೂರ್ವಾಹ್ನ 9.30 ಕ್ಕೆ ಶಿಬಿರದ ಉದ್ಘಟನಾ ಕಾರ್ಯಕ್ರಮವು ಶ್ರೀದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿ  ಶ್ರೀಆನಂದರಾಮ ಮಧ್ಯಸ್ತರ ಅಧ್ಯಕ್ಷತೆಯಲ್ಲಿ ನಡೆಯಿತು., ಪ್ರಾರ್ಥನೆ, ಸ್ವಾಗತ, ತರುವಾಯ ಡಾ|| ವಿವೇಕ ಉಡುಪರು ಇಂದಿನ ಆರೋಗ್ಯ ಸಮಸ್ಯೆಗಳು ಅವುಗಳಿಗೆ ಸರಳ ಯೋಗದ ಪರಿಹಾರೋಪಾಯವನ್ನು ಸಾಕಷ್ಟು ಉದಹಾರಣೆಗಳೊಂದಿಗೆ ಮನಮುಟ್ಟವಂತೆ ವಿವರಿಸಿದರು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಆನಂದರಾಮ ಮಧ್ಯಸ್ತರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ನಡೆಯಬೇಕಾಗಿದೆ. ಯೋಗದ ಮಹತ್ವ ಜನಸಾಮಾನ್ಯರಿಗೆ ತಿಳಿಯುವಂತಾಗಬೇಕೆಂದು ಎಂದು ಆಶಿಸುತ್ತಾ ಡಾ. ವಿವೇಕ ಉಡುಪ ಮತ್ತು ಅವರ ಬಳಗದ ಸದಸ್ಯರ ಸೇವಾ ಮನೋಭಾವನೆಯನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳ ಯಶಸ್ಸಿಗೆ ದೇವಳದ ಬೆಂಬಲದ ಭರವಸೆಯನ್ನು ನೀಡಿದರು. ಸಂಜೆ 6 ರವರೆಗೆ ನಡೆದ ಈ ಶಿಬಿರದಿಂದ ನೂರಾರು ಜನರು ಪ್ರಯೋಜನವನ್ನು ಪಡೆದರು. ಡಾ| ಉಡುಪರಿಗೆ ಶ್ರೀ ಷಣ್ಮುಖ ಕುತ್ಯಾಳ್, ಶ್ರೀ ಗಣೇಶ್ ಎಚ್ ಆರ್‍ ಇವರುಗಳಲ್ದೆ ಹಲವು ಜನ ವಿವೇಕ ಜಾಗ್ರತ ಬಳಗದ ಸದಸ್ಯರು ಸಹಕರಿಸಿದರು.

ಮುಂದಿನ ಉಚಿತ ಯೋಗ ಶಿಬಿರ   :-        1-05-2011

16Feb/110

Ratha Sapthami

ದಿನಾಂಕ 10.02.2011 ರಂದು ಗುರುವಾರ ಶ್ರೀದೇವಳದಲ್ಲಿ ರಥಸಪ್ತಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀದೇವಳದ ತಂತ್ರಿಗಳಾದ ವೇ.ಮು.ಶ್ರೀ ಕಾರ್ತಟ್ಟು ಶಂಕರನಾರಾಯಣ ಸೋಮಯಾಜಿ ಅರ್ಚಕ ಶ್ರೀ ಪಿ.ಜನಾರ್ದನ ಅಡಿಗ ಹಾಗೂ ಉಪಾಧಿವಂತರ ನೆರವಿನೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಿಕೊಟ್ಟರು. ಪೂರ್ವಾಹ್ನ ನರಸಿಂಹ ಹೋಮ, ಸಹಿಂತಾಭಿಷೇಕ, ಮಧಾಹ್ನ ಮಹಾಪೂಜೆ, ಪುಷ್ಫ ರಥೋತ್ಸವ ಹಾಗೂ ಸಮಾರಾಧನೆಗಳು ನಡೆದವು.

ಈ ಎಲ್ಲಾ ಕಾರ್ಯಕ್ರಮಗಳನ್ನು ಪಾರಂಪಳ್ಳಿ ಪಡುಕೆರೆ ಮಂಟಪ ಉಪಾಧ್ಯ ಕುಟುಂಬದವರು ಸೇವಾರೂಪದಲ್ಲಿ ನಡೆಸಿಕೊಂಡು ಬರುತ್ತಿದ್ದು ಅದರಂತೆ ಈ ವರ್ಷ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯ ಇವರು ಅದ್ದೂರಿಯಾಗಿ ನಡೆಸಿಕೊಟ್ಟರು.

16Feb/110

Brahma Rathotsava

DSC_0286

 

ತಾ. 16.01.2011 ರ ರವಿವಾರ ಬೆಳಗಿನಿಂದ ವಿಶೇಪೂಜೆ ಹಾಗೂ ಸುತ್ತು ಸೇವೆ ಮೆರವಣಿಗೆಯನ್ನು ನೆರವೇರಿಸಿ  ದಿವಾ ಗಂಟೆ 10.50 ಮೀನ ಲಗ್ನದಲ್ಲಿ ರಥಾರೋಹಣವನ್ನು ನೆರವೇರಿಸಲಾಯಿತು. ಹಾಗೂ ಸಂಜೆ 6 ಕ್ಕೆ ರಥಾವರೋಹಣ ಅಷ್ಟವಧಾನ ಸೇವೆ, ಭೂತಬಲಿ, ಶಯನೋತ್ಸವನ್ನು ನೆರವೇರಿಸಲಾಯಿತು.

ವಾಲಗ ಮಂಟಪದಲ್ಲಿ ಅಷ್ಞವಧಾನ ಸೇವೆಯನ್ನು ಶ್ರೀರಾಮಚಂದ್ರ ಐತಾಳ ಮತ್ತು ಸಂಗಡಿಗರಿಂದ ವೀಣಾ ವಾದನವನ್ನು ನಡೆಸಿಕೊಟ್ಟರು.

ವೀಣಾವಾದನ

ವೀಣಾವಾದನ

ದಿ ನಾಗಪ್ಪ ಹೇರ್ಳೆ ಇವರ ಪತ್ನಿ ದಿ. ಸಾವಿತ್ರಮ್ಮ  ಇವರ ಸ್ಮರಣಾರ್ಥ ಶ್ರೀಮತಿ ಜಯಲಕ್ಷ್ಮೀ ಯಜ್ಞನಾರಾಯಣ ಹೇರ್ಳೆ ಇವರು ಈ ದಿನದ ಮಹಾ ಅನ್ನಸಂತರ್ಪಣೆಯನ್ನು ನಡೆಸಿದರು. ಸಾಧರಣ 5 ರಿಂದ 6 ಸಾವಿರ ಭಕ್ತಾದಿಗಳು ಶ್ರೀದೇವರ ಭೋಜನ ಪ್ರಸಾದವನ್ನು ಸ್ವೀಕರಸಿದರು.

DSC_0008

ಮಧ್ಯಾಹ್ನ ಓರ್ವ ಭಕ್ತರಿಂದ ಹಾಗೂ ದಿ.ಎ.ವಿ. ವೂಕುಂಠ ಕಾರಂತ ಹಾಗೂ ಅವರ ಧರ್ಮಪತ್ನಿಯ ಸ್ಮರಣಾರ್ಥ ಮಕ್ಕಳಿಂದ ನೆರೆದಿದ್ದ ಸಾವಿರಾರು ಭಕ್ತರಿಗೆ ಪಾನಕವನ್ನು ವಿತರಿಸಿ ಭಕ್ತರ ಬಾಯಾರಿಕೆಯನ್ನು ನಿವಾರಿಸದರು.

ಸಂಜೆ 7 ಕ್ಕೆ ಬಾಳೆಬೆಟ್ಟು ಶ್ರೀ ಎಂ. ಸೂರ್ಯನಾರಾಯಣ ಮಯ್ಯ ಮತ್ತು ಮಕ್ಕಳಿಂದ ಸಹಸ್ರಾರು ಸಂಖ್ಯೆಯ ಭಕ್ತರಿಗೆ ಪಾನಕ ಹಾಗೂ ಪನೀವಾರವನ್ನು ವಿತರಿಸಿದರು.

ದಿನಾಂಕ 15.01.11 ಮತ್ತು 16.01.2011 ರಂದು ವಿಶೇಷ ಆಕರ್ಷಣೆಯಾಗಿ ಚೇತನ ಚಂಡೆ ಬಳಗ ಐರೋಡಿ ಮತ್ತು ಶಿವಕ್ರಪ ಚಂಡೆ ಬಳಗ ಸಾಸ್ತಾನ ಹಾಗೂ ಶ್ರೀಗುರುಆಂಜನೇಯ ನಾಸಿಕ್ ಬ್ಯಾಂಡ್ ಇವರು ಶ್ರೀದೇವರಿಗೆ ಸೇವೆಯನ್ನು ಸಲ್ಲಿಸಿದರು.

ಜಾತ್ರೆಯ  ಕೆಲವೊಂದು ಸನ್ನಿವೇಶದ ಛಾಯವಿತ್ರಗಳು.

DSC_6820

DSC_0277

DSC_0258

ಶ್ರೀದೇವಳದ ಜಾತ್ರೆಗೆ ಸಾಧರಣ 60,000 ಕ್ಕೂ ಮಿಕ್ಕಿ ಜನ ಭಕ್ತಾದಿಗಳು ಶ್ರೀದೇವರ ಉತ್ಸವಾದಿಗಳಲ್ಲಿ ಪಾಲ್ಗೊಂಡರು.

DSC_0108

 

DSC_6932

 

DSC_0256

16Feb/110

Prabodothsava

DSC_0175

ಪ್ರಬೋಧೋತ್ಸವ  ದಿನಾಂಕ 17.01.2011 ರಂದು ಓಕುಳಿ ಹೊಂಡದ ಶಾಸ್ತ್ರವನ್ನು ಶ್ರೀದೇವಳದ ವಾಲಗ ಮಂಟಪದಲ್ಲಿ ಮಾಡಿ ಶ್ರೀದೇವರ ಉತ್ಸವಮೂರ್ತಿ  ಶ್ರೀದೇವಳದಿಂದ ಒಂದೂವರೆ ಕಿ.ಮೀ. ದೂರವಿರುವ ಹಂದೆ ದೇವಸ್ಥಾನಕ್ಕೆ ಪಾಲ್ಕಿಯಲ್ಲಿ  ವೇದಘೋಷ, ಮಂಗಲವಾದ್ಯ, ಬಿರುದಾವಳಿಯೊಂದಿಗೆ ಮೆರವಣಿಗೆಯಲ್ಲಿ ಹೋಗಿ ಶ್ರೀದೇವರನ್ನು ಹಂದೆ ದೇವಸ್ಥಾನದ ಕೆರೆಯಲ್ಲಿ  ಅವಭ್ರತ ಸ್ನಾನ ಮಾಡಿಸಿ ಹಂದೆ ದೇವಸ್ಥಾನ ಶ್ರೀವಿಷ್ಣು ದೇವರ ಎದುರು ಅಷ್ಟವಧಾನ ಸೇವೆ ಸಲ್ಲಿಸಿ  ವಸಂತವನ್ನು ಪೂರೈಸಿ ದಾರಿಯಲ್ಲಿ ಬರುವಾಗ ವಿವಿಧ ನಿಗದಿತ ಸ್ಥಳಗಳಲ್ಲಿ ಕಟ್ಟೆಪೂಜೆಯನ್ನು ಪೂರೈಸಿ ಶ್ರೀದೇವಳಕ್ಕೆ ಹಿಂತಿರುಗಿದರು.

ಶ್ರೀದೇವಳದಲ್ಲಿ ಮೊದಲು ಮಾಡಿದ್ದ ನರಸಿಂಹ ಹೋಮಕ್ಕೆ  ಪೂರ್ಣಾಹುತಿ ಮಾಡಿ. ಧ್ವಜಸ್ತಂಭಕ್ಕೆ ಪೂಜೆ ಮಾಡಿ ಗರುಡಪಟವನ್ನು ಇಳಿಸಿದರು. 

ಅನಂತರ ಉತ್ಸವಮೂರ್ತಿಯು ಮೆರವಣಿಗೆಯೊಂದಿಗೆ ಶ್ರೀದೇವಳದ ಗರ್ಭಗುಡಿಯನ್ನು ಪ್ರವೇಶವಾಗಿ ಮಹಾಮಂಗಳಾರತಿಯನ್ನು ಮಾಡಿದರು. ನಂತರ ಮಂತ್ರಾಕ್ಷತೆಯೊಂದಿಗೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯಗೊಂಡಿತು.

18.01.2011 ರಂದು ಸಂಪ್ರೋಕ್ಷಣೆ   ಶ್ರೀದೇವರಿಗೆ ನವಕಪ್ರಧಾನ ಕಲಶಾಭಿಷೇಕ ಮಾಡಿ ಮತ್ತು ಶ್ರೀದೇವಳನ್ನು ಪ್ರೋಕ್ಷಣೆ ಮಾಡಿ ಶುದ್ಧ ಮಾಡಿದರು.

16Feb/110

Ruk Samhithaabhisheka and Katte Pooje

ದಿನಾಂಕ 15.01.2011 ರಂದು ಜಾತ್ರೆಯ ಪ್ರಯುಕ್ತ ಬೆಳಿಗ್ಗೆ ನರಸಿಂಹ ಹೋಮ ಹಾಗೂ ಋಗ್ವೇದ ಸಂಹೀತಾ ಪಾರಾಯಣ ಮತ್ತು ಕಲಾಶಾಭಿಷೇಕವನ್ನು ನೆರವೇರಿಸಲಾಯಿತು. ಸಂಜೆ ಶ್ರೀದೇವರಿಗೆ ವಿಶೇಷ ಪೂಜೆ ಹಾಗೂ ಸುತ್ತು ಸೇವೆ ಮತ್ತು ರಜತ ಪಲ್ಲಕಿಯಲ್ಲಿ ಪುರಮೆರವಣಿಗೆ ಮಾಡಿ ಹಲವು ಕಡೆ ಕಟ್ಟೆಪೂಜೆಯನ್ನು ಸಲ್ಲಿಸಲಾಯಿತು. ನಂತರ ಹಿರೇರಂಗಪೂಜೆಯನ್ನು ನೆರವೆರಸಿ ಪುಷ್ಫರಥೋತ್ಸವನ್ನು ನಡೆಸಿ ಶ್ರೀಆಂಜನೇಯ ದೇವರಿಗೆ ರಂಗಪೂಜೆ ಮಾಡಿ. ನಂತರ ಅಷ್ಟವಧಾನ ಸೇವೆಯನ್ನು ಮಾಡಲಾಯಿತು.

ಇಂದಿನ ಮಧ್ಯಾಹ್ನದ ಮಹಾ ಅನ್ನಸಂತರ್ಪಣೆಯನ್ನು ದಿ ಪಾರಂಪಳ್ಳಿ ನಾರಾಯಣ ಉಪಾಧ್ಯರ ಸ್ಮರಣಾರ್ಥ ಅವರ ಪತ್ನಿ ಶ್ರೀಮತಿ ಸುಲೋಚನ ಉಪಾಧ್ಯ ಮತ್ತು ಮನೆಯವರು ನೆರವೇರಿಸದರು. ಸಾಧಾರಣ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳೂ ಭೋಜನ ಪ್ರಸಾದವನ್ನು ಸ್ವೀಕರಿಸಿದರು.

 

ಸುತ್ತು ಸೇವೆ

ಸುತ್ತು ಸೇವೆ

 

ಸುತ್ತು ಸೇವೆ

ಸುತ್ತು ಸೇವೆ

 

ಕಟ್ಟಪೂಜೆ (ಶ್ರೀಆಂಜನೇಯ ದೇವಸ್ಥಾನ)

ಕಟ್ಟಪೂಜೆ (ಶ್ರೀಆಂಜನೇಯ ದೇವಸ್ಥಾನ)

ಅಶ್ವತನ ಕಟ್ಟೆ ಪೂಜೆ

ಅಶ್ವತನ ಕಟ್ಟೆ ಪೂಜೆ

 

ಸಾಯಂಕಾಲ ಗಂಟೆ 6.30 ಯಿಂದ 10.30 ವರೆಗೆ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಲಾಯಿತು.

ಮಕ್ಕಳ ಮೇಳ ಸಾಲಿಗ್ರಾಮ ಇವರಿಂದ "ಕ್ರಷ್ಣಾರ್ಜುನ ಎನ್ನುವ ಪ್ರಸಂಗವನ್ನು ಆಡಿ ತೋರಿಸಲಾಯಿತು

ಮಕ್ಕಳ ಮೇಳ ಸಾಲಿಗ್ರಾಮ ಇವರಿಂದ "ಕ್ರಷ್ಣಾರ್ಜುನ ಎನ್ನುವ ಪ್ರಸಂಗವನ್ನು ಆಡಿ ತೋರಿಸಲಾಯಿತು

ಕೂ.ಮ.ಜ ಬೆಳ್ತಂಗಡಿ ಅಂಗಸಂಸ್ಥೆ ಇವರಿಂದ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ನೇರವೇರಿಸಿದರು.

ಕೂ.ಮ.ಜ ಬೆಳ್ತಂಗಡಿ ಅಂಗಸಂಸ್ಥೆ ಇವರಿಂದ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ನೇರವೇರಿಸಿದರು.

ಶ್ರೀದೇವಳದ ಅಭಿವ್ರದ್ಧಿಗೆ ಗಣನೀಯ ಸೇವೆ ಸಲ್ಲಿಸಿದ ಶ್ರೀಮತಿ ಶ್ರೀಮತಿ ಅಡಿಗ (0.47 ಎಕರೆ ಭೂಮಿ ಕೊಡುಗೆ ಅಂದಾಜು 50 ಲಕ್ಷ))  ಶ್ರೀ ಶ್ರೀಧರ ಹೊಳ್ಳ ಶೆಟ್ಟಿಕೆರೆ (ಶ್ರೀದೇವಳದ ಗರ್ಭಗುಡಿ ದ್ವಾರಕ್ಕೆ ಬೆಳ್ಳಿ ಹೊದಿಕೆ ಸಾಧಾರಣ 8 ಲಕ್ಷ)  ಶ್ರೀ ಶ್ರೀದರ ಮಯ್ಯ ಹರ್ತಟ್ಟು (ಶ್ರೀದೇವಳದ ಒಳ ಪೌಳಿಗೆ ಗೋಡೆಗೆ ಗ್ರೈನೇಟ್ ಹಾಸು ಹಾಗೂ ಅಷ್ಟೋತ್ತರ ನಾಮಪಲಕದ ಕೊಡುಗೆ ಸಾಧರಣ 2.75 ಲಕ್ಷ) ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ ಶ್ರೀ ಪುತ್ತಿಗೆ ರಘುರಾಮ ಹೊಳ್ಳ (ಶ್ರೀಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದ (ತೆಂಕುತಿಟ್ಟು)ಪ್ರಸಿದ್ದ ಭಾಗವತರು) ಶ್ರೀ ಗೋಪಾಲ ಅಡಿಗ (ಪ್ರಸಿದ್ದ ಈಜು ಪಟು) ಶ್ರೀ ಗಪಾಲ ಖಾರ್ವಿ (ರಾಜ್ಯಪ್ರಶಸ್ತಿ ವಿಜೇತ ಪ್ರಸಿದ್ದ ಈಜುಪಟು) ಇವರೆಲ್ಲರನ್ನು ಶ್ರೀದೇವರ ಪ್ರಸಾದ ನೀಡಿ ಶಾಲು ಹೊದೆಸಿ ಫಲಪುಷ್ಫಗಳನ್ನು ನೀಡಿ ಸನ್ಮಾನಿಸಲಾಯಿತು.

ಶ್ರೀಮತಿ ಶ್ರೀಮತಿ ಅಡಿಗ ಅವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಶ್ರೀಮತಿ ಅಡಿಗ ಅವರನ್ನು ಸನ್ಮಾನಿಸಲಾಯಿತು.

 

ಶ್ರೀಶ್ರೀಧರ ಹೊಳ್ಳ ಶೆಟ್ಟಿಕೆರೆ ಸಾಸ್ತಾನ ಇವರನ್ನು ಸನ್ಮಾನಿಸಲಾಯಿತು

ಶ್ರೀಶ್ರೀಧರ ಹೊಳ್ಳ ಶೆಟ್ಟಿಕೆರೆ ಸಾಸ್ತಾನ ಇವರನ್ನು ಸನ್ಮಾನಿಸಲಾಯಿತು

 

ಶ್ರೀಶ್ರೀದರ ಮಯ್ಯ ಪಡುಹರ್ತಟ್ಟು ಇವರನ್ನು ಸನ್ಮಾನಿಸಲಾಯಿತು

ಶ್ರೀಶ್ರೀದರ ಮಯ್ಯ ಪಡುಹರ್ತಟ್ಟು ಇವರನ್ನು ಸನ್ಮಾನಿಸಲಾಯಿತು

ಪುತ್ತಿಗೆ ರಘುರಾಮ ಹೊಳ್ಳ, ಇವರನ್ನು ಸನ್ಮಾನಿಸಲಾಯಿತು.

ಪುತ್ತಿಗೆ ರಘುರಾಮ ಹೊಳ್ಳ, ಇವರನ್ನು ಸನ್ಮಾನಿಸಲಾಯಿತು.

ಶ್ರೀಗೋಪಾಲ ಅಡಿಗರನ್ನು ಸ್ಮಾನಿಸಲಾಯಿತು.

ಶ್ರೀಗೋಪಾಲ ಅಡಿಗರನ್ನು ಸ್ಮಾನಿಸಲಾಯಿತು.

ಶ್ರೀಗೋಪಾಲ ಖಾರ್ವಿ ಇವರನ್ನು ಸನ್ಮಾನಿಸಲಾಯಿತು.

ಶ್ರೀಗೋಪಾಲ ಖಾರ್ವಿ ಇವರನ್ನು ಸನ್ಮಾನಿಸಲಾಯಿತು.

14Feb/110

Muhurtha Bali and Cultural Programs

ತಾ.13.01.2011 ಸಾಯಂ.7.30 ಯ ಕರ್ಕಾಟಕ ಲಗ್ನ ಜಾತ್ರೆಯ ಮುರ್ಹೂತ ಬಲಿಯನ್ನು ಶ್ರೀದೇವಳದ ತಂತ್ರಿಗಳಾದ ವೇ.ಮು.ಶ್ರೀ ಶಂಕರನಾರಾಯಣ ಸೋಮಯಾಜಿಯವರ ನೇತ್ರತ್ವದಲ್ಲಿ ನೇರವೇರಿಸಲಾಯಿತು.

ಅದೇ ದಿನ ಸಂಜೆ ಗಂಟೆ 6.15 ಕ್ಕೆ ಜಾತ್ರೆಯ ಪ್ರಯುಕ್ತ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ಹಾಗೂ ಸಹಧರ್ಮದರ್ಶಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

 

ಕುಮಾರಿ ಮೇಘನಾ ಕಾರಂತ ಇವರಿಂದ ಭರತನಾಟ್ಯ ಕಾರ್ಯಕ್ರಮ

ಕುಮಾರಿ ಮೇಘನಾ ಕಾರಂತ ಇವರಿಂದ ಭರತನಾಟ್ಯ ಕಾರ್ಯಕ್ರಮ

 

ನೃತ್ಯ ವೈವಿಧ್ಯ Z ವಾಹಿನಿಯ ಪ್ರಶಸ್ತಿ ವಿಜೇತೆ ಕುಮಾರಿ ಜ್ಞಾನ ಐತಾಳ ಹಾಗು ಸಂಗಡಿಗರಿಂದ ಇವರಿಂದ

ನೃತ್ಯ ವೈವಿಧ್ಯ Z ವಾಹಿನಿಯ ಪ್ರಶಸ್ತಿ ವಿಜೇತೆ ಕುಮಾರಿ ಜ್ಞಾನ ಐತಾಳ ಹಾಗು ಸಂಗಡಿಗರಿಂದ ಇವರಿಂದ

 

ಕುಮಾರ ಶೋದನ ಐತಾಳ ಮಂಗಳೂರು ಇವರಿಂದ ವೀಣಾವಾದನ

ಕುಮಾರ ಶೋದನ ಐತಾಳ ಮಂಗಳೂರು ಇವರಿಂದ ವೀಣಾವಾದನ

10Feb/110

Dhwajarohana

ದಿನಾಂಕ 14.01.2011 ರ ಮಕರ ಸಂಕ್ರಾಂತಿಯಂದು ಮಧ್ಯಾಹ್ನ ವಿಶೇಷಪೂಜೆ ಹಾಗೂ ಗಣಹೋಮ ಮತ್ತು ಮಧ್ಯಾಹ್ನ ಪುಷ್ಫರಥೋತ್ಸವನ್ನು ನೇರವೇರಿಸಲಾಯಿತು. ರಾತ್ರಿ 7.30 ಗೆ ಕರ್ಕಾಟಕ ಲಗ್ನ ಮಹೂರ್ತದಲ್ಲಿ ಕಾರ್ಕಡದ ತೆಂಕುಹೋಳಿಯವರು ಧ್ವಜ ಮರವನ್ನು ಕಾರ್ಕಡದಿಂದ (ಅಡಕೆ ಮರ) ಮೆರವಣಿಗೆಯಲ್ಲಿ ಶ್ರೀದೇವಳಕ್ಕೆ ತಂದು ಸ್ಥಾಪನೆ ಮಾಡಲಾಯಿತು. ಹಾಗೇ ಚಿತ್ರಪಾಡಿ ಗ್ರಾಮದವರು ಮೆರವಣಿಗೆಯನ್ನು ಎದುರುಗೊಂಡು ಬಾಳೆಮರವನ್ನು ಮೆರವಣಿಗೆಯಲ್ಲ ತಂದು ಧ್ವಜಸ್ತಂಭದಲ್ಲಿ ಸ್ಥಾಪನೆ ಮಾಡಿದರು. ನಂತರ ಗರುಡ ಹೋಮ ಮಾಡಿ ಗರುಡಪಟವನ್ನು ಪೂಜೆಗೊಳಿಸಲಾಯಿತು. ಹಾಗೂ ವಿಶೇಷ ಪೂಜೆಯನ್ನು ಶ್ರೀದೇವರಿಗೆ ಮಾಡಲಾಗಿ ನಂತರ ಧ್ವಜಸ್ತಂಭವನ್ನು ಪೂಜೆಗೊಳಿಸಿ ಗರುಡ ಪಟವನ್ನು ಏರಿಸಲಾಯಿತು.

ನೆರದಿದ್ದ ಸಾವಿರಾಉ ಜನರಿಗೆ ಪಾನಕ ಪನೀವಾರವನ್ನು ವಿತರಿಸಲಾಯಿತು. ಹಾಗೂ ಶ್ರೀದೇವರಿಗೆ ಕಿರಿರಂಗಪೂಜೆ ಮತ್ತು ವಿಶೇಷ ಉತ್ಸವ ಬಲಿಯನ್ನು ನೇರವೇರಿಸಲಾಯಿತು.

ಕಾರ್ಕಡದಿಂದ ಧ್ವಜಮರ(ಅಡಕೆ ಮರ) ವನ್ನು ಮೆರವಣಿಗೆಯಲ್ಲಿ ತರುವುದು

ಕಾರ್ಕಡದಿಂದ ಧ್ವಜಮರ(ಅಡಕೆ ಮರ) ವನ್ನು ಮೆರವಣಿಗೆಯಲ್ಲಿ ತರುವುದು

ಧ್ವಜಸ್ತಂಭಕ್ಕೆ ಅಡಕೆ ಮರವನ್ನು ಸ್ಥಾಪಿಸುವುದು

ಧ್ವಜಸ್ತಂಭಕ್ಕೆ ಅಡಕೆ ಮರವನ್ನು ಸ್ಥಾಪಿಸುವುದು

ಬಾಳೆಮರವನ್ನು ಧ್ವಜಸ್ತಂಭಕ್ಕೆ ಸ್ತಾಪಿಸುವುದು.

ಬಾಳೆಮರವನ್ನು ಧ್ವಜಸ್ತಂಭಕ್ಕೆ ಸ್ತಾಪಿಸುವುದು.

ಪೂಜೆಗೊಳಿಸಿದ ಗರುಡಪಟವನ್ನು ಏರಿಸುವುದ.

ಪೂಜೆಗೊಳಿಸಿದ ಗರುಡಪಟವನ್ನು ಏರಿಸುವುದ.

ಈ ಎಲ್ಲಾ ಕಾರ್ಯಕ್ರಮಗಳನ್ನು ವೇ.ಮು.ಶ್ರೀ ಕ್ರಷ್ಣ ಸೋಮಯಾಜಿಯವರ ನೇತ್ರತ್ವದಲ್ಲಿ ನೇರವೇರಿಸಲಾಯಿತು.

ಈ ಎಲ್ಲಾ ಕಾರ್ಯಕ್ರಮಗಳನ್ನು ವೇ.ಮು.ಶ್ರೀ ಕ್ರಷ್ಣ ಸೋಮಯಾಜಿಯವರ ನೇತ್ರತ್ವದಲ್ಲಿ ನೇರವೇರಿಸಲಾಯಿತು.

 

ಸಂಜೆ 6.30 ರಿಂದ 11 ರವರೆಗೆ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಸಂಜೆ 6.30 ರಿಂದ 7.30 ರವರೆಗೆ ಕೂ.ಮ.ಜ. ಕುಂದಾಪುರ ಅಂಗಸಂಸ್ಥೆ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶ್ರೀಮತಿ ಮಂಜುಳಾ ಜಿ ರಾವ್ ಇರಾ ಬೆಂಗಳೂರು ಇವರು ಹರಿಕಥೆಯನ್ನು ಮಾಡಿದರು

ಶ್ರೀಮತಿ ಮಂಜುಳಾ ಜಿ ರಾವ್ ಇರಾ ಬೆಂಗಳೂರು ಇವರು ಹರಿಕಥೆಯನ್ನು ಮಾಡಿದರು

 

ಮಹಿಳಾ ವೇದಿಕೆ ಕೂ.ಮ.ಜ. ಸಾಲಿಗ್ರಾಮ ಅಂಗಸಂಸ್ಥೆ ಇವರು ವೈವಿಧ್ಯಮಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮಹಿಳಾ ವೇದಿಕೆ ಕೂ.ಮ.ಜ. ಸಾಲಿಗ್ರಾಮ ಅಂಗಸಂಸ್ಥೆ ಇವರು ವೈವಿಧ್ಯಮಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

 

DSC_0092

5Feb/110

Sudarshana Saligrama Saramale

ಸಾಲಿಗ್ರಾಮ :-       ಶ್ರೀಗುರುನರಸಿಂಹ ದೇವರಿಗೆ ಸುದರ್ಶನ ಸಾಲಿಗ್ರಾಮದ ಹಾರವನ್ನು ಸಮರ್ಪಿಸಿ ಆ ಸೊಬಗನ್ನು ಕಣ್ ತುಂಬಿಕೊಳ್ಳುವ ಬಯಕೆ ಇದೀಗ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಪಣಂಬೂರು ಶ್ರೀನಾರಾಯಣ ಐತಾಳರದು.

              ಅವರ ಈ ಆಸೆಯನ್ನು ಈ ದಿನ ಪೂರೈಸಿಕೊಂಡು ಧನ್ಯತೆಯ ಭಾವ ಹೊಂದಿದರು. ಉತ್ತರ ಭಾರತದ ಕೇದಾರನಾಥದಿಂದ ತಂದ 32 ಸುದರ್ಶನ ಸಾಲಿಗ್ರಾಮಗಳನ್ನು ಅರ್ಧ ಕೆಜಿ ಬೆಳ್ಳಿಯಲ್ಲಿ ಪೋಣಿಸಿ ನವಕಪ್ರಧಾನ ಕಲಶಾಭಿಷೇಕ, ಹೋಮಗಳನ್ನು ದೇವಳದ ತಂತ್ರಿಗಳಾದ ವೇ.ಮು.ಶ್ರೀ ಕೆ.ಶಂಕರನಾರಾಯಣ ಸೋಮಯಾಜಿಯವರು ಅರ್ಚಕ ವೇ.ಮು.ಶ್ರೀ ಜನಾರ್ದನ ಅಡಿಗಳ ಸಹಕಾರದೊಂದಿಗೆ ವಿಧಿವತ್ತಾಗಿ ನಡೆಸಿ ಶ್ರೀದೇವರಿಗೆ ಹಾರವನ್ನು ಸಮರ್ಪಿಸಿದರು. ಅಂದಾಜು ರೂ. 54,000/- ಬೆಲೆಯ ಈ  ಅಪರೂಪದ ಈ ಹಾರವನ್ನು ಸಮರ್ಪಿಸಿದ ಶ್ರೀ ಪಿ.ನಾರಾಯಣ ಐತಾಳರನ್ನು ದೇವಳದ ಸಂಪ್ರದಾಯದಂತೆ ರಕ್ಷಾಕವಚ ಹೊದೆಸಿ ಶ್ರೀದೇವರ ಪ್ರಸಾದದೊಂದಿಗೆ ಫಲ ತಾಂಬೂಲ ನೀಡಿ ಆಡಳಿತಮಂಡಳಿಯ ಸದಸ್ಯ ಶ್ರೀ ಎಚ್ ಧರ್ಮರಾಯ ಹಂದೆಯವರು ಗೌರವಿಸಿದರು.

4Feb/110

Granite

ನವೀಕ್ರತ ಕಾಮಗಾರಿಯ ಸಮರ್ಪಣಾ ಸಮಾರಂಭ

                ಸಾಲಿಗ್ರಾಮ : ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಒಳಪೌಳಿಯ ಒಳಮೈ ಗೋಡೆಗೆ ಗ್ರೈನೆಟ್ ಹೊದಿಕೆಯನ್ನು ಹಾಕಿಸುವರೆ ಶ್ರೀದೇವಳದ ಆಡಳಿತ ಮಂಡಳಿಯು ನಿಶ್ಚಯಿಸಿದಾಗ ಈ ಕಾಮಗಾರಿಯನ್ನು ವಾರ್ಷಿಕ ಜಾತ್ರೆಯ ಮೊದಲೇ ಮಾಡಿಸಿಕೊಡುವುದಾಗಿ ಆಶ್ವಾಸನೆ ನೀಡಿ ಅದರಂತೆ ಮಾಡಿ ತೊರಿಸಿದ ಬೆಂಗಳೂರಿನ ವೈಭವ ಗ್ರೂಪ್ಸ್ ಮಾಲಕ ಶ್ರೀಶ್ರೀಧರ ಮಯ್ಯರು ಎಲ್ಲರಿಂದಲೂ ಸೈ ಎನಿಸಿಕೊಂಡರು. ಈ ಕಾಮಗಾರಿಯ ಜೊತೆಗೆ ಶ್ರಿನರಸಿಂಹ ದೇವರ ಅಷ್ಟೋತ್ತರ ಶತನಾಮಾವಳಿಗಳನ್ನು ಶಿಲಾಫಲಕದಲ್ಲಿ ಬರೆಸಿ ಗೋಡೆಗೆ ಅಳವಡಿಸಿಕೊಟ್ಟರು.

                  ಈ ಕಾಮಗಾರಿಯನ್ನು ದೇವರಿಗೆ ಒಪ್ಪಿಸುವ ಹಾಗೂ ದಾನಿಗಳ ಮಾತಾಪಿತ್ರಗಳ ಹೆಸರಿನ ಶಿಲಾಫಲಕವನ್ನು ಅನಾವರಣ ಮಾಡುವ ಕಾರ್ಯಕ್ರಮ ದಿನಾಂಕ 15.01.2011  ರಂದು ಸರಳವಾಗಿ ನಡೆಯಿತು. ಶ್ರೀಶ್ರೀಧರ ಮಯ್ಯರು ತನ್ನ ಸಹೋದರರನ್ನು ಬಂಧು ಬಾಂಧವರನ್ನು ಕೂಡಿಕೊಂಡು ಬಂದು ತನ್ನ ಹಿರಿಯ ಸಹೋದರರ ಅಮ್ರತ ಹಸ್ತದಿಂದ ಫಲಕವನ್ನು ಅನಾವರಣ ಮಾಡಿದರು.

                ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ ಜಗದೀಶ ಕಾರಂತರು ಈ ಕೊಡುಗೆಯನ್ನು ಸ್ವೀಕರಿಸುತ್ತಾ ಮುಂದೆಯು ಎಲ್ಲರ ಸಹಕಾರ ಪ್ರೋತ್ಸಾಹವನ್ನು ಬಯಸಿದರು. ಹಾಗೂ ಶ್ರೀದೇವರ ಪ್ರಸಾದ ನೀಡಿ ಸಾಂಪ್ರದಾಯಿಕವಾಗಿ ಫಲ ಪುಷ್ಫ ನೀಡಿ ಗೌರವಿಸಿದರು.

                 ಆಡಳಿತ ಮಂಡಳಿಯ ಸದಸ್ಯರು ಹಾಗೂ ಶ್ರೀಶ್ರೀದರ ಮಯ್ಯರ ಕುಲ ಪುರೋಹಿತರಾದ ವೇ.ಮು.ಶ್ರೀ ಆನಂತಪದ್ಮನಾಭ ಐತಾಳರು ಈ ಎಲ್ಲಾ ಕಾರ್ಯಕ್ರಮದ ಉಸ್ತವಾರಿಯನ್ನು ವಹಿಸಿಕೊಂಡಿದ್ದರು.