Paraspara e-KootaBandhu for quicker news

4Feb/110

Granite

ನವೀಕ್ರತ ಕಾಮಗಾರಿಯ ಸಮರ್ಪಣಾ ಸಮಾರಂಭ

                ಸಾಲಿಗ್ರಾಮ : ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಒಳಪೌಳಿಯ ಒಳಮೈ ಗೋಡೆಗೆ ಗ್ರೈನೆಟ್ ಹೊದಿಕೆಯನ್ನು ಹಾಕಿಸುವರೆ ಶ್ರೀದೇವಳದ ಆಡಳಿತ ಮಂಡಳಿಯು ನಿಶ್ಚಯಿಸಿದಾಗ ಈ ಕಾಮಗಾರಿಯನ್ನು ವಾರ್ಷಿಕ ಜಾತ್ರೆಯ ಮೊದಲೇ ಮಾಡಿಸಿಕೊಡುವುದಾಗಿ ಆಶ್ವಾಸನೆ ನೀಡಿ ಅದರಂತೆ ಮಾಡಿ ತೊರಿಸಿದ ಬೆಂಗಳೂರಿನ ವೈಭವ ಗ್ರೂಪ್ಸ್ ಮಾಲಕ ಶ್ರೀಶ್ರೀಧರ ಮಯ್ಯರು ಎಲ್ಲರಿಂದಲೂ ಸೈ ಎನಿಸಿಕೊಂಡರು. ಈ ಕಾಮಗಾರಿಯ ಜೊತೆಗೆ ಶ್ರಿನರಸಿಂಹ ದೇವರ ಅಷ್ಟೋತ್ತರ ಶತನಾಮಾವಳಿಗಳನ್ನು ಶಿಲಾಫಲಕದಲ್ಲಿ ಬರೆಸಿ ಗೋಡೆಗೆ ಅಳವಡಿಸಿಕೊಟ್ಟರು.

                  ಈ ಕಾಮಗಾರಿಯನ್ನು ದೇವರಿಗೆ ಒಪ್ಪಿಸುವ ಹಾಗೂ ದಾನಿಗಳ ಮಾತಾಪಿತ್ರಗಳ ಹೆಸರಿನ ಶಿಲಾಫಲಕವನ್ನು ಅನಾವರಣ ಮಾಡುವ ಕಾರ್ಯಕ್ರಮ ದಿನಾಂಕ 15.01.2011  ರಂದು ಸರಳವಾಗಿ ನಡೆಯಿತು. ಶ್ರೀಶ್ರೀಧರ ಮಯ್ಯರು ತನ್ನ ಸಹೋದರರನ್ನು ಬಂಧು ಬಾಂಧವರನ್ನು ಕೂಡಿಕೊಂಡು ಬಂದು ತನ್ನ ಹಿರಿಯ ಸಹೋದರರ ಅಮ್ರತ ಹಸ್ತದಿಂದ ಫಲಕವನ್ನು ಅನಾವರಣ ಮಾಡಿದರು.

                ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ ಜಗದೀಶ ಕಾರಂತರು ಈ ಕೊಡುಗೆಯನ್ನು ಸ್ವೀಕರಿಸುತ್ತಾ ಮುಂದೆಯು ಎಲ್ಲರ ಸಹಕಾರ ಪ್ರೋತ್ಸಾಹವನ್ನು ಬಯಸಿದರು. ಹಾಗೂ ಶ್ರೀದೇವರ ಪ್ರಸಾದ ನೀಡಿ ಸಾಂಪ್ರದಾಯಿಕವಾಗಿ ಫಲ ಪುಷ್ಫ ನೀಡಿ ಗೌರವಿಸಿದರು.

                 ಆಡಳಿತ ಮಂಡಳಿಯ ಸದಸ್ಯರು ಹಾಗೂ ಶ್ರೀಶ್ರೀದರ ಮಯ್ಯರ ಕುಲ ಪುರೋಹಿತರಾದ ವೇ.ಮು.ಶ್ರೀ ಆನಂತಪದ್ಮನಾಭ ಐತಾಳರು ಈ ಎಲ್ಲಾ ಕಾರ್ಯಕ್ರಮದ ಉಸ್ತವಾರಿಯನ್ನು ವಹಿಸಿಕೊಂಡಿದ್ದರು.

Comments (0) Trackbacks (0)

No comments yet.


Leave a comment


No trackbacks yet.