Paraspara e-KootaBandhu for quicker news

2Feb/110

Rajata Dwara Samarapana

ರಜತ ದ್ವಾರ ಸಮರ್ಪಣೆ :

             ಶ್ರೀಗುರುನರಸಿಂಹ ದೇವಸ್ಥಾನದ ಗರ್ಭಗ್ರಹದ ಪ್ರಧಾನ ದ್ವಾರಕ್ಕೆ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ರಜತ ಹೊದಿಕೆಯನ್ನು ಅತ್ಯಂತ ಆಕರ್ಷಕ ಕುಸುರಿ ಕೆಲಸದೊಂದಿಗೆ ರಚಿಸಿ ಶ್ರೀದೇವರಿಗೆ  ಸಾಸ್ತಾನದ ಎಡಬೆಟ್ಟು ಗ್ರಾಮದ ಶೆಟ್ಟಿಕೆರೆಯ ಹೋಟೆಲ್ ದ್ವಾರಕಾ ಬೆಂಗಳೂರು ಇದರ ಮಾಲಕ ಶ್ರೀಶ್ರೀಧರ ಹೊಳ್ಳ ದಂಪತಿಗಳು ತಮ್ಮ ಕೊಡುಗೆಯಾಗಿ ದಿನಾಂಕ 10.01.2011 ರಂದು ಸಮರ್ಪಿಸಿದರು.

          ಆ ದಿನ ಬೆಳಿಗ್ಗೆ ಶ್ರೀಶ್ರೀಧರ ಹೊಳ್ಳ ದಂಪತಿಗಳು ತಮ್ಮ ಬಂಧು ಬಾಂದವರನ್ನು ಕೂಡಿಕೊಂಡು ತಮ್ಮ ಕುಲಪುರೋಹಿತರಾದ ವೇ.ಮು.ಶ್ರೀ ವೆಂಕಪ್ಪಯ್ಯ ಭಟ್ಟರನ್ನು ಮುಂದಿಟ್ಟುಕೊಂಡು ಧಾರ್ಮಿಕ ವಿಧಿ ವಿಧಾನದಂತೆ ಹೋಮ ಹವನಗಳ ತರುವಾಯ ದ್ವಾರವನ್ನು ಶ್ರೀದೇವರಿಗೆ ಒಪ್ಪಿಸಿ ಧನ್ಯತೆಯ ಭಾವವನ್ನು ಹೊಂದಿದರು.

           ಅವರ ಕೊಡುಗೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಮತ್ತು ಸಹಧರ್ಮದರ್ಶಿಗಳು ಸ್ವಿಕರಿಸಿ, ಶ್ರೀಶ್ರೀಧರ ಹೊಳ್ಳ ದಂಪತಿಗಳು ಶ್ರೀ ವೆ.ಮು.ವೇಕಪ್ಪಯ್ಯ ಭಟ್ ಹಾಗೂ ಕಲಾತ್ಮಕವಾದ ದ್ವಾರದ ಶಿಲ್ಪಿ ಕೊಟೇಶ್ವರದ ಶ್ರೀ ಪ್ರಭಾಕರ ಆಚಾರ್ಯ ಸಹೋದರರನ್ನು ಶ್ರೀದೇವರ ಪ್ರಸಾದ ನೀಡಿ  ಶ್ರೀದೇವಳದ ಸಂಪ್ರದಾಯದಂತೆ ಫಲ ಪುಷ್ಫ ನೀಡಿ ಗೌರವಿಸಿದರು.

         ನಂತರ ಶ್ರೀಶ್ರೀಧರ ಹೊಳ್ಳರು ಅಂದಿನ ಸಂಪೂರ್ಣ ಅನ್ನಸಂತರ್ಪಣೆಯ ಜವಬ್ದಾರಿಯನ್ನು ವಹಿಸಿಕೊಂಡರು ಸಾಧರಣ 550 ಜನ ಭಕ್ತಾದಿಗಳು ಶ್ರೀದೇವರ ಭೋಜನ ಪ್ರಸಾದವನ್ನು ಸ್ವೀಕರಿಸಿದರು.

1Feb/110

Dhunu Masa

17.12.2010  ರಿಂದ 13.01.2011 ರವರೆಗೆ ಶ್ರೀದೇವಳದಲ್ಲಿ  ನೂರಾರು ಸೇವಾಕರ್ತರು ಶ್ರೀ ದೇವರಿಗೆ ಧನು ಪೂಜೆ ಮಾಡಿ ಅನ್ನದಾನವನ್ನು ಮಾಡುವುದರ ಮುಲಕ ಶ್ರೀಗುರುನರಸಿಂಹ ಹಾಗೂ ಪರಿವಾರ ದೇವತೆಗಳ ಕ್ರಪೆಗೆ ಪಾತ್ರರಾದರು.

ಈ ಧರ್ನುಮಾಸದಲ್ಲಿ ಸಮಾರಾಧನೆ ಸೇವೆ ಶ್ರೀ ದೇವರಿಗೆ ಅತ್ಯಂತ ಪ್ರಿಯವಾದ ಸೇವೆಯಾಗಿದೆ.

ಈ ಮಾಸದಲ್ಲಿ 4 ಶನಿವಾರಗಳಂದು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ ಮತ್ತು ಮಹಿಳಾ ವೇದಿಕೆ ಕೂ.ಮ.ಜ ಸಾಲಿಗ್ರಾಮ ಅಂಗಸಂಸ್ಥೆ ಮತ್ತು ಶ್ರೀದೇವಳದ ಸಹಯೋಗದಿಂದ ವಿವಿಧ ವೈವಿದ್ಯಮಯ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು.

ಕುಮಾರಿ ಭೂಮಿಕಾ ಹೊಳ್ಳ ಇವರಿಂದ ಭರತನಾಟ್ಯ

ಕುಮಾರಿ ಭೂಮಿಕಾ ಹೊಳ್ಳ ಇವರಿಂದ ಭರತನಾಟ್ಯ

 

ಕೂಟಮಹಾಜಗತ್ತು ಬೆಳ್ತಂಗಡಿ ಅಂಗಸಂಸ್ಥೆ ಇವರ ಪ್ರಸಿದ್ದ ಕಲಾವಿದರಿಂದ ತಾಳಮದ್ದಲೆಯನ್ನು ನಡೆಸಿಕೊಟ್ಟರು.

ಹಾಗೂ ಕೂ.ಮ.ಜ ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯಿಂದ ಭಕ್ತಿ ರಸಮಂಜರಿ ಮತ್ತು ವೈವಿದ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು