Paraspara e-KootaBandhu for quicker news

1May/110

Hanuma Jayanthi

ಶ್ರೀದೇವಳದ ಉಪಸನ್ನಿಧಿ ಹಾಗೂ ಭಕ್ತರಿಂದ ಬಹುಮುಖ ಸೇವೆಯನ್ನು ಪಡೆಯುತ್ತಾ ಅವರನ್ನು ಅನುಗ್ರಹಿಸುತ್ತಿರುವ ಶ್ರೀ ಹನುಮಂತನ ಸನ್ನಿಧಿಯಲ್ಲಿ ದಿನಾಂಕ 18-04-2011 ರಂದು ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಂದು ಸೂರ್ಯೋದಯಕ್ಕೆ ಸರಿಯಾಗಿ ನವಕ ಪ್ರಧಾನ ಕಲಾಶಾಭಿಷೇಕ ಹೋಮಗಳನ್ನು  ನೇರವೇರಿಸಲಾಯಿತು.

ಸಂಜೆ ಮಹಾರಂಗಪೂಜೆ ಹಾಗೂ ರಥಬೀದಿಯುದ್ಧಕ್ಕೂ ಕರ್ಪೂರ ದೀಪಗಳ ಸಾಲು ಅತ್ಯಂತ ಮನೋಹರವಾಗಿತ್ತು. ಸಾವಿರಾರು ಜನರು ಈ ಸೇವೆಯಲ್ಲಿ ಪಾಲ್ಗೋಂಡಿದ್ದರು. ಶ್ರೀದೇವಳದ ವತಿಯಿಂದ ಪಾನಕ ಪನೀವಾರ ಹಾಗೂ ಆಂಜನೇಯ ಸೇವಾ ಸಮಿತಿಯವರ ವಿಶೇಷ ಸಿಹಿತಿಂಡಿ ಹಣ್ಣುಗಳ ವಿತರಣೆ ಹಾಗೂ ಸ್ಥಳಿಯ ಸಂಘದವರಿಂದ ಮನೋರಂಜನಾ ಕಾರ್ಯಕ್ರಮಗಳು ನೇರವೇರಿದವು