Paraspara e-KootaBandhu for quicker news

24Jun/110

Sri Gurunarasimha Temple :- details of Trustees

ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಉಡುಪಿ ಜಿಲ್ಲೆ - 576225 ಉಡುಪಿ ಜಿಲ್ಲೆ

ಆಡಳಿತ ಮಂಡಳಿ 2010--2015 ಇದರ ಸದಸ್ಯರುಗಳ ಸಂಕ್ಷಿಪ್ತ ವಿವರ

* ****  *****  *****  ***** ***** ** * ** ***** ***** ***** ***** ***** *

ಅಧ್ಯಕ್ಷ  :-  ಶ್ರೀ ಎ. ಜಗದೀಶ ಕಾರಂತ

ಹುಟ್ಟೂರು :- ಉಡುಪಿ ತಾಲೋಕಿನ ಐರೋಡಿ ಗ್ರಾಮ

ತಂದೆ ತಾಯಿ :- ದಿವಂಗತ ಶ್ರೀನಿವಾಸ ಕಾರಂತ ಮತ್ತು ಶಾರದಮ್ಮ ಇವರ ಮಗನಾಗಿ ತುಂಬು ಕುಟುಂಬದಲ್ಲಿ ಜನನ

ಶಿಕ್ಷಣ :- ನ್ಯಾಷನಲ್ ಹೈಸ್ಕೂಲ್ ಬಾರ್ಕೂರನಲ್ಲಿ ಪ್ರೌಢ ಶಿಕ್ಷಣ, ಬಾಲ್ಯದಲ್ಲಿ ನಾಯಕತ್ವದ ಗುಣ - ವಿದ್ಯಾರ್ಥಿ ಮುಂಖಂಡನಾಗಿ ಕಾರ್ಯನಿರ್ವಹಣೆ, ಸಮಾಜ ಸೇವೆಯ ತುಡಿತ ಪಿಯುಸಿಗೆ ಶಿಕ್ಷಣ ಮೊಟಕು

ಜನಸೇವೆಯಲ್ಲಿ ತಮ್ಮನ್ನು ಸಂಪೂರ್ನವಾಗಿ ತೊಂಡಗಿಸಿಕೊಂಡರು, ಶ್ರಮಜೀವಿ - ಆದರ್ಶ ಕ್ರಷಿಕ - ನಿಷ್ಠುರವಾದಿ-- ಸತ್ಯಪ್ರತಿಪಾದಕ

ಸಮಾಜ ಸೇವೆ :-

 • 23 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಾಸ್ತಾನ ಸೇವಾ ಸಹಕಾರಿ ಬ್ಯಾಂಕಿನ ಆಡಳಿತಮಂಡಳಿಯ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, 6 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ - ಬ್ಯಾಂಕಿಗೆ ಭದ್ರ ಬುನಾದಿ
 • ಐರೋಡಿ ಮಂಡಲ ಪಂಚಾಯತ್ ಅಧ್ಯಕ್ಷರಾಗಿ 2 ಅವಧಿಗೆ ಸೇವೆ , ಅಧ್ಯಕ್ಷರಾಗಿ ಅನುಪಮ ಸೇವೆ
 • ಉಡುಪಿ ಭೂ ಅಭಿವ್ರದ್ಧಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ
 • ಬಾರ್ಕೂರಿನ ಕ್ರೆಡಿಟ್ ಕೋಆಪರೇಟೀವ್ ಬ್ಯಾಂಕಿನ ಸ್ಥಾಪಕ ನಿರ್ದೇಶಕ
 • ಸಾಸ್ತಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ
 • ಅವಿಭಕ್ತ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ , 2 ಬಾರಿ ಅಧ್ಯಕ್ಷರಾಗಿ ಆಯ್ಕೆ- ಈಗಲೂ ನಿದೇಶಕರಾಗಿ ದುಡಿಯುತ್ತಿದ್ದಾರೆ, ಹಾಲು ಉತ್ಪಾದಕರ ಭಿಷ್ಮಾಚಾರ್ಯರೆಂದೇ ಪ್ರಸಿದ್ದಿ
 • ಐರೋಡಿ ಶ್ರೀ ಅಣಲಾಡಿ ಮಠದ ಆಡಳಿತ ಮುಕ್ತೇಸರರು
 • ಶ್ರೀಗುರುನರಸಿಂಹ ಆಡಳಿತ ಮಂಡಳಿ ಸದಸ್ಯರಾಗಿ , ಉಪಾಧ್ಯಕ್ಷರಾಗಿ, 2010- ರಿಂದ ಅಧ್ಯಕ್ಷರಾಗಿ ದುಡಿಯುತ್ತಿದ್ದಾರೆ
 • ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ
 • ಚೇತನ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸಕ್ರಿಯ ಸದಸ್ಯರು
 • ಕೆ.ಎಂ.ಎಫ್. ಬೆಂಗಳೂರು ಇದರ ರಾಜ್ಯ ನಿರ್ದೇಶಕರಾಗಿ 1 ವರ್ಷದ ಅವಧಿಗೆ ಆಯ್ಕೆ,
 • ಸಾಂಸ್ಕ್ರತಿಕ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತರು. ಕಂಬಳದಂತಹ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವಲ್ಲಿ ಸಕ್ರೀಯರು.
 • ದೇಶವಿದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಜ್ಞಾನಾರ್ಜನೆಯ ತಮ್ಮ ತುಡಿತ, ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಅವರಲ್ಲಿ ನಾವು ಗಮನಿಸಬಹುದಾಗಿದೆ.

ಈ ಎಲ್ಲಾ ಸಾಧನೆಗಳಿಗಾಗಿ ಸಂಘಸಂಸ್ಥೆಗಳಿಂದ ಪಡೆದ ಅಭಿನಂದನೆ, ಪ್ರಶಸ್ತಿ ಹಲವಾರು. ಕರ್ನಾಟಕ ಸರ್ಕಾರದಿಂದ " ಉತ್ತಮ ಸಹಕಾರಿ " ಎಂಬ ಪ್ರಶಸ್ತಿ ಪಾತ್ರಕ್ಕೆ ಭಾಜನ

ಇದೀಗ ಶ್ರೀಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಕಂಕಣ ಬದ್ಧರಾಗಿ ದುಡಿಯುತ್ತಿದ್ದಾರೆ.

PH NO. 0820-2584605,  9972095779

-----------------------------------------------------------------------------------------------

ಉಪಾಧ್ಯಕ್ಷ :- ವರ್ಕಾಡಿ ಭಾಸ್ಕರ ನಾವಡ

ಹುಟ್ಟಿದ ಊರು, ದಿನಾಂಕ :- ವರ್ಕಾಡಿ ದಿನಾಂಕ :- 05-03-1942

ವಿದ್ಯಾರ್ಹತೆ :- ಸಂತ ಎಲ್ಯೋಸೀಯಸ್ ಕಾಲೇಜಿನಲ್ಲಿ ಪದವಿ

ಉದ್ಯೋಗ :- ಆದಿಶ್ರೀ ಕಾವೇರಿ ಬಸ್ ಸರ್ವಿಸನಲ್ಲಿ ಉದ್ಯೋಗ, 1966 ರಲ್ಲಿ ವಿಜಯಾ ಬ್ಯಾಂಕಿಗೆ ಸೇರ್ಪಡೆ, ಹಂತ ಹಂತವಾಗಿ ಮೇಲೇರಿ ಸಿನಿಯರ್ ಮೆನೇಜರ್ ಆಗಿ ವಿ.ಆರ್.ಎಸ್ ನೆಲೆಯಲ್ಲಿ ನಿವ್ರತ್ತಿ.

ಶಿಸ್ತು ಬದ್ದವಾಗಿ ಸಂಸ್ಥೆಯ ಹಿತದ್ರಷ್ಟಿಯಲ್ಲಿ 34 ವರ್ಷಗಳ ಸೇವೆ, ಬ್ಯಾಂಕಿನ ಹಾಗು ವೈಯುಕ್ತಕವಾಗಿ ಭಾರತ ದೇಶದ ಎಲ್ಲಾ ಸ್ಥಳಗಳ ಹಾಗೂ ಅಮೇರಿಕಾ ಸಂದರ್ಶನ.

ಸಮಾಜ ಸೇವೆ :- ವಿಜಯಶ್ರೀ ಕ್ರೆಡಿಟ್ ಸೇವಾ ಸಂಘದ ಸ್ಥಾಪನೆ ಹಾಗೂ ಅಧ್ಯಕ್ಷನಾಗಿ ಸಂಘದ ಪ್ರಗತಿಗಾಗಿ 5 ವರ್ಷ ದುಡಿದ ಅನುಭವ ಇದೀಗ ಸಂಘದ ನಿರ್ದೇಶಕರಾಗಿ ಸೇವೆ.

ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಮಂಗಳೂರು ಅಂಗಸಂಸ್ಥೆಯ ಪದಾಧಿಕಾರಿಯಾಗಿ ಹಾಗೂ ಅಧ್ಯಕ್ಷನಾಗಿ 5 ವರ್ಷಗಳ ಕಾಲ ಸೇವೆ ಕೂಟಬಂಧುಗಳ ಸಂಘಟನೆಗೆ ಹಲವಾರು ಯೋಜನೆಗಳ ಅನುಷ್ಠಾನ ಹಾಗೂ ಆಂಗಸಂಸ್ಥೆಯ ಗೌರವ ಅಧ್ಯಕ್ಷನಾಗಿ ಆಯ್ಕೆ, ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಅಂಗಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಸಹಮತದ ಅಭ್ಯರ್ಥಿಯಾಗಿ ಶ್ರೀಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನಾಗಿ ಸರ್ವಾನುಮತದಿಂದ ಆಯ್ಕೆ. ಇದೀಗ ಆಡಳಿತ ಮಂಡಳಿಯ ಉಪಾಧ್ಯಕ್ಷನಾಗಿ ಆಯ್ಕೆಯಾಗಿ ಕಾರ್ಯನಿರ್ವಹಣೆ

PH NO. 9343560811

-----------------------------------------------------------------------------------------------

 

ಕಾರ್ಯದರ್ಶಿ :- ಶ್ರೀ ಆನಂದರಾಮ ಮಧ್ಯಸ್ತ,

ತಂದೆಯ ಹೆಸರು :- ದಿ. ಪಾ ಶ್ರೀನಿವಾಸ ಮಧ್ಯಸ್ತ

ತಾಯಿಯ ಹೆಸರು :- ದಿ ಗಿರಿಜಮ್ಮ

ಹುಟ್ಟಿದ ಸ್ಥಳ :- ಪಾರಂಪಳ್ಳಿ ಗ್ರಾಮ, ಸಾಲಿಗ್ರಾಮ

ಹುಟ್ಟಿದ ದಿನಾಂಕ :- 13-05-1947

ವಿದ್ಯೆ : - BA  (ಸಹ್ಯಾದ್ರಿ ಕಾಲೇಜ ಶಿವಮೊಗ್ಗ)

ವ್ರತ್ತಿ :- ಪ್ರೌಢ ಶಾಲೆ ಶಿಕ್ಷಕನಾಗಿ ವ್ರತ್ತಿ ಪ್ರಾರಂಭ, ನಂತರ ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ಸೇರಿ ತಹಶೀಲ್ದರನಾಗಿ  ಸೇವೆ ಸಲ್ಲಿಸಿ 31-05-2005 ರಂದು ಶೀರಾದಲ್ಲಿ ಸೇವೆಯಿಂದ ನಿವ್ರತ್ತಿ.

ಪುರಸ್ಕಾರ :- 2011ನೇ ಇಸವಿಯಲ್ಲಿ ನಡೆದ ರಾಷ್ಟ್ರೀಯ ಜನಗಣತಿಯಲ್ಲಿ ರಾಷ್ಟ್ರಪತಿಗಳ ಬೆಳ್ಳಿ ಪದಕ   ಪುರಸ್ಕ್ರತ

ವಿಳಾಸ :- ಆನಂದರಾಮ ಮಧ್ಯಸ್ತ,  "ಶ್ರೀಗಿರ ಭಾಸ್ಕರ" ಪಾರಂಪಳ್ಳಿ ಗ್ರಾಮ ಮತ್ತು ಅಂಚೆ, ಸಾಲಿಗ್ರಾಮ 576225, ಉಡುಪಿ ಜಿಲ್ಲೆ ಮತ್ತು ತಾಲೂಕು. ದೂರವಾಣಿ :- 0820-2565105, 9448213634

-----------------------------------------------------------------------------------------------

ಕೋಶಾಧಿಕಾರಿ :- ವೈ ಸದಾರಾಮ ಹೇರ್ಳೆ

ಉಡುಪಿ ತಾಲೂಕುನ ಕೋಟ ಹೋಬಳಿಯ, ಮುಡಹಡು ಗ್ರಾಮದ, "ಮುಂಡಾಸು ಹೇರ್ಳೆ" ಎಂದೇ ಪ್ರಸಿದ್ಧಿ ಪಡೆದ ಎಡಬೆಟ್ಟು ಹೇರ್ಳೆ ಮನೆತನದ ದಿವಂಗತ ಮರಿಯಪ್ಪ ಹೇರ್ಳೆ ಮತ್ತು ಮುಕಾಂಬಿಕಾಮ್ಮ ದಂಪತಿಗಳ ಸುಪುತ್ರರಾಗಿ 22-3-1958 ರಲ್ಲಿ ಜನನ

ಹುಟ್ಟೂರಿನ ವಿದ್ಯೋದಯ ಹಿರಿಯ ಪ್ರಾಥಮಿಕ ಶಿಕ್ಷಣ ನಂತರ ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವದ ಶಿಕ್ಷಣ ಮತ್ತು ಭಂಡಾರಕಾರಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಶಿಕ್ಷಣ ಪೂರೈಸಿ 1982 ರಲ್ಲಿ ಪ್ರತಿಷ್ಟಿತ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವ್ರತ್ತಿಪರ ಬದುಕು ಆರಂಭ ಹಂತ ಹಂತವಾಗಿ ಪದನ್ನೋತಿ ಹೊಂದಿ, ಪ್ರಸ್ತುತ ಆಸ್ಪತ್ರೆಯ ಹಣಕಾಸು ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿ (ಸಿನಿಯರ್ ಆಫೀಸರ್) ನಿಯುಕ್ತಿ,

ಪ್ರಕ್ರತ ಮಣಿಪಾಲದ ಸಪ್ತಗಿರಿ ನಗರದಲ್ಲಿರುವ ಸ್ವಗ್ರಹದಲ್ಲಿ ಪತ್ನಿ ಶ್ರೀಮತಿ ವಿನೋದ ಹೇರ್ಳೆ ಹಾಗೂ ಇಬ್ಬರು ಮಕ್ಕಳೊಂದಿಗೆ  ಖಾಯಂ ನಿವಾಸ

ಸಮಾಜ ಸೇವೆ - ವಿವಿಧ ಸಂಘ ಚಟುವಟಿಕೆಗಳ ಪರಿಚಯ : 

 • ಸಾಸ್ತಾನ ಮಂಡಲ ಪಂಚಾಯತ್ ಸದಸ್ಯರಾಗಿ ಸತತ ಐದು ವರ್ಷಗಳ ಸೇವೆ.
 • ಸಾಸ್ತಾನ ಸಹಕಾರಿ ಬ್ಯಾಂಕಿನ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿ ಸುಮಾರು ಎರಡು ದಶಕಗಳ ನಿರಂತರ ಸೇವೆ.
 • ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿಸಂಘದ ಸದಸ್ಯ ಹಾಗೂ ತದ ನಂತರ ಅಧ್ಯಕ್ಷರಾಗಿ 3 ವರ್ಷಗಳ ಸೇವೆ.
 • ಸಾಲಿಗ್ರಾಮ ಕಿನಾರಾ ಸರ್ವೀಸ್ ಕೋಆಪರೆಟೀವ್ ಸೊಸೈಟಿಯ ಸ್ಥಾಪಕ ನಿರ್ದೇಶಕ
 • ಪ್ರಸನ್ನ ಗಣಪತಿ ದೇವಸ್ಥಾನ, ಹುಡ್ಕೋ ಕಾಲನಿ ಮಣಿಪಾಲ - ಇದರ ಒಬ್ಬ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ.
 • ಮಣಿಪಾಲ ಮಾಧವ ಕ್ರಪಾ ಆಂಗ್ಲ ಮಾಧ್ಯಮ ಶಾಲೆಯ, ಹಾಗೂ ಮಣಿಪಾಲ ಪದವಿಪೂರ್ವ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ 6 ವರ್ಷಗಳ ಸೇವೆ
 • ಮಣಿಪಾಲದ ಸಪ್ತಗಿರಿ ನಿವೇಶನದಾರರ ಸಂಘದ ಅಧ್ಯಕ್ಷರಾಗಿ ಸೇವೆ
 • ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಇದರ ಉಡುಪಿ ಅಂಗಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಹಾಗೂ ತದನಂತರದಲ್ಲಿ ಒಂದು ಅವಧಿಯ ಅಧ್ಯಕ್ಷರಾಗಿ ಸೇವೆ

  ಪ್ರಶಸ್ತಿ :-   " ಉತ್ಕ್ರಷ್ಟ ಸಮಾಜ ಸೇವೆಗಾಗಿ ನವದೆಹಲಿಯ ಅಂತರಾಷ್ಟ್ರೀಯ  ಅಧ್ಯಯನ           ಸಂಸ್ಥಾನವು 2002 ನೇ ವರ್ಷದ " ರಾಜೀವ ಗಾಂಧಿ ಉತ್ಕ್ರಷ್ಟತಾ ಪ್ರಶಸ್ತಿ ಹಾಗೂ ಸ್ವರ್ಣಪದಕ "  ದಿಂದ ಪುರಸ್ಕ್ರತ.

PH NO. 9448724164

------------------------------------------------------------------------------------------

  ಸದಸ್ಯ : - ಎನ್ ಕ್ರಷ್ಣ ಹೊಳ್ಳ

          ಸಮಾಜದ ಅಭಿವ್ರದ್ಧಿಯಲ್ಲಿ ಗಣನೀಯವಾದ ಸೇವೆಗೈದು ಧಾರ್ಮಿಕ ಹಾಗು ಸಾಂಸ್ಕ್ರತಿಕ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿತ್ವ ಎನ್ ಕ್ರಷ್ಣ ಹೊಳ್ಳ ಅವರದು. ನೀರಾಳ ಗೋಪಾಲಕ್ರಷ್ಣ ಹೊಳ್ಳ ಹಾಗು ಕಾಶ್ಯಮ್ಮ ದಂಪತಿಗಳ ಸುಪುತ್ರನಾಗಿ 30-11-1953 ರಲ್ಲಿ ಕಾಸರಗೋಡಿನ ಸಮೀಪದ ನೀರಾಳದಲ್ಲಿ ಜನಿಸಿದರು.

          ಕಾಸರಗೋಡಿನ ಬಿ.ಇ.ಎಂ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸವನ್ನು ಪೂರ್ತಿಗೊಳಸಿದ ಇವರು ಕುಟುಂಬದ ಭಾರವನ್ನು ನಿರ್ವಹಿಸಬೇಕಾಗಿ ಬಂದುದರಿಂದ ಕ್ರಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಬಸ್ಸೊಂದನ್ನು ಖರೀದಿಸಿದರು ಇದನ್ನು ಯಶಸ್ವಿಯಗಿ ಮುನ್ನಡೆಸಿಕೊಂಡು ಇವರು ಇದೀಗ 3 ಬಸ್ಸುಗಳನ್ನು ಹೊಂದಿರುತ್ತಾರೆ.

         ಕಾಸರಗೋಡು ಜಿಲ್ಲಾ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳಾಗಿಯು ಪ್ರಸ್ತುತ ಇದರ ಜತೆ ಕಾರ್ಯದರ್ಶಿಯಾಗಿಯು ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

         ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಇದರ ಕಾಸರಗೋಡು ಅಂಗಸಂಸ್ಥೆಯ ಪದಾಧಿಕಾರಿಗಳಾಗಿ  ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಕಳೆದ 9 ವರ್ಷಗಳಿಂದ ಇದರ ಅಧ್ಯಕ್ಷರಾಗಿ ಸುತರ್ಹವಾದ ಸೇವೆಸಲ್ಲಿಸುತ್ತಿದ್ದಾರೆ. ಈ ಪ್ರದೇಶದ ಸಮಾಜ ಬಾಂಧವರನ್ನು ಸಂಘಟಿಸಿ, ಜಾಗ್ರತಿಯನ್ನು ಮುಡಿಸುವಲ್ಲಿ ಯಶಸ್ವಿಯಾದ ಇವರ ನೇತ್ರತ್ವದಲ್ಲಿ ಕಳೆದ ದಶಂಬರ ತಿಂಗಳಲ್ಲಿ ಕಾಸರಗೋಡು ಅಂಗಸಂಸ್ಥೆಯ ಬೆಳ್ಳಿ ಹಬ್ಬವು ಬಹಳ ವಿಜ್ರಂಭಣೆಯಿಂದ ಆಚರಿಸಲ್ಪಟ್ಟಿತು. ಮಂಜೇಶ್ವರದ ಶ್ರೀಗುರುನರಸಿಂಹ ದತ್ತಿಮಂಡಳಿಯ ಉಪಾಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.

            ಕಾಸರಗೋಡು ಪರಿಸರದ ವಿವಿಧ ದೇವಾಲಯದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯು, ಕಾರ್ಯದರ್ಶಿಗಳಾಗಿಯು, ಕಾರ್ಯನಿರ್ವಹಿಸುತ್ತಿದ್ದಾರೆ. ಪುಳ್ಕೂರು ಶ್ರೀಮಹಾಲಿಂಗೇಶ್ವರ ದೇವಾಲಯ, ಬೆದ್ರಡ್ಕದ ಪ್ರಮಾಣಿ ಕಿನ್ನಿಮಾಣಿ ದೇವಸ್ಥಾನ, ದೇಶಮಂಗಲದ ಕುಟ್ಟಿಚ್ಛಾತ ಶಂಕರನಾರಾಯಣ ದೇವಾಲಯವು ಇವುಗಳಲ್ಲಿ ಪ್ರಮುಖವಾದದು.

            ಆರು ಜನ ಸಹೋದರರು ಹಾಗೂ 3 ಜನ ಸಹೋದರಿಯರನ್ನೊಳಗೊಂಡ ತುಂಬು ಸಂಸಾರ ಇವರದ್ದು, ಇವರ ಧರ್ಮಪತ್ನಿ ಯಶೋದ ಪಾವೂರಿನ ಶ್ರೀರಾಮಕ್ರಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ, ಮಗಳು ಕ್ರಪಾ  ಹೊಳ್ಳ ವಿದ್ಯಾರ್ಥಿನಿ.

PH. NO. 09495534763

-----------------------------------------------------------------------------------------------

Filed under: Articles No Comments
22Jun/110

Sri Gurunarasimha Nigama Agama Patha Shale

ಶ್ರೀಗುರುನರಸಿಂಹ ನಿಗಮಾಗಮ ಪಾಠ ಶಾಲೆ ಸಾಲಿಗ್ರಾಮ ಉಡುಪಿ ಜಿಲ್ಲೆ

          6 ವರ್ಷಗಳ ಋಗ್ವೇದಾಧ್ಯಯನ ಹಾಗೂ ಆಗಮ ಶಾಸ್ತ್ರವನ್ನು ಕಲಿಸುವ ಗುರಿಯನ್ನು ಹೊಂದಿರುವ ನಿಗಮಾಗಮ ಪಾಠಶಾಲೆಯು ಕಳೆದ 7 ವರ್ಷಗಳಿಂದ  ಕಾರ್ಯನಿರ್ವಹಿಸುತ್ತಿದೆ.

        ಉತ್ತಮ ಆಡಳಿತ , ಉತ್ತಮ ಶಿಕ್ಷಕವ್ರಂದವನ್ನು ಹೊಂದಿರುವ ಈ ಸಂಸ್ಥೆಗೆ ಸೇರ ಬಯಸುವ ಉಪನಯನವಾದ ವಿದ್ಯಾರ್ಥಿಗಳು ಕೂಡಲೇ ಪ್ರಾಂಶುಪಾಲರನ್ನು ಸಂಪರ್ಕಿಸುವುದು.

         ಉಚಿತ ಊಟ, ವಸತಿ ವ್ಯವಸ್ಥೆ ಇದೆ, ಶಿಕ್ಷಣ ಶುಲ್ಕ ಇರುದಿಲ್ಲ ಕನಿಷ್ಠ SSLC ಪಾಸಾದವರಿಗೆ ಪ್ರವೇಶದಲ್ಲಿ ಆದ್ಯತೆ ನೀಡಲಾಗುತ್ತದೆ.

 ಹೆಚ್ಚಿನ ಮಾಹಿತಿಗಾಗಿ ದೇವಳದ ನಿಗಾಮಗಮ ಪಾಠಶಾಲೆಯ ಕಛೇರಿ ಅಥವಾ ಶ್ರೀದೇವಳದ ಕಛೇರಿಯನ್ನ ಸಂಪರ್ಕಿಸಬೇಕಾಗಿ ಕೋರಲಾಗಿದೆ.

          ಅಧ್ಯಕ್ಷರು                                                              ಪ್ರಾಂಶುಪಾಲರು                                                                                                                                                                                                                                     

ಶ್ರೀ ಗುರುನರಸಿಂಹ ದೇವಸ್ಥಾನ                              ಶ್ರೀ ಗುರುನರಸಿಂಹ ನಿಗಮಾಗಮ ಪಾಠಶಾಲೆ

 ಸಾಲಿಗ್ರಾಮ --576225                                              ಸಾಲಿಗ್ರಾಮ --576225

ph.No. 2564544, 3204544,                                M.No. 9480228495

22Jun/110

Vasantha Veda Shibira

ಸಾಲಿಗ್ರಾಮ :- ಶ್ರೀದೇವಳದಲ್ಲಿ ಪ್ರತಿವರ್ಷದಂತೆ ವಸಂತ ವೇದ ಶಿಬಿರವು ದಿನಾಂಕ 15-04-2011 ರಿಂದ 09-05-11 ರವರೆಗೆ ಸಂಪನ್ನಗೊಂಡಿತ್ತು. ಒಟ್ಟು 5 ವರ್ಷಗಳ 5 ಹಂತದ 1 ತಿಂಗಳ ಈ ಶಿಬಿರದಲ್ಲಿ ಒಟ್ಟು 353 ಶಿಬಿರಾರ್ಥಿಗಳು ಬಾಗವಹಿಸಿದ್ದರು. ಡಾ|| ನಿಟಿಲಾಪುರ ಕ್ರಷ್ಣಮೂರ್ತಿ ಮತ್ತು ಶ್ರೀ ಗುಂಡ್ಮಿ ಗಣಪಯ್ಯ ಹೊಳ್ಳರ ಮಾರ್ಗದರ್ಶನದಲ್ಲಿ 13 ಜನ ತರುಣರು ಗುರುಗಳಾಗಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರು.  ಶ್ರೀದೇವಳದ ಆಡಳಿತ ಮಂಡಳಿಯು ಶಿಬಿರದ ಯಶಸ್ವಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿತು.

ದಿನಾಂಕ 9-05-11 ರಂದು ಈ ಶಿಬಿರದ ಸಮಾರೋಪ ಸಮಾರಂಭವು ಆಡಳಿತಮಂಡಳಿಯ ಅಧ್ಯಕ್ಷ ಶ್ರೀ ಎ ಜಗದೀಶ ಕಾರಂತರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಗಳಾಗಿ ದಾವಣಗೆರೆಯ ಪ್ರಸಿದ್ದ ಉದ್ಯಮಿ ಶ್ರೀ ಮೋತಿ ಪಿ. ರಾಮ ರಾವ್ ಬಾಗವಹಿಸಿದ್ದರು, ವೇದಿಕೆಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀಆನಂದರಾಮ ಮಧ್ಯಸ್ತ  ಸದಸ್ಯರಾದ ಶ್ರೀ.ಎಚ್ ಧರ್ಮರಾಯ ಹಂದೆ, ನೀರಾಳ ಕ್ರಷ್ನ ಹೊಳ್ಳ, ಶಿಬಿರದ ನಿರ್ದೇಶಕ ನಿಟಿಲಾಪುರ ಕ್ರಷ್ಣಮುರ್ತಿಯವರು ಆಸೀನರಾಗಿದ್ದರು.

ಗುರುಪ್ರಾರ್ಥನೆಯೊಂದಿ ಸಭೆ ಪ್ರಾರಂಭವಾಗಿ ಆಡಳಿತ ಮಂಡಳಿಯ ಕಾರ್ಯದಶಿಗಳು ಎಲ್ಲರನ್ನು ಸ್ವಾಗತಿಸುತ್ತಾ ಶಿಬಿರದ ದ್ಧೇಯೋದ್ಧೇಶಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು, ಶಿಬಿರದ ವರದಿಯನ್ನು ದೇವಳದ ವ್ಯವಸ್ಥಾಪಕರು ವಾಚಿಸಿದರು, ಮುಖ್ಯ ಅತಿಥಿಗಳು ಪ್ರತಿ ತರಗತಿಗಳಲ್ಲಿ  (ಒಟ್ಟು 12) ಕಲಿಕೆಯಲ್ಲಿ ಪ್ರತಿಭಾನ್ವಿತರಾದ ಈರ್ವರನ್ನು ಬಹುಮಾನ ನೀಡಿ ಗೌರವಿಸಿದರು, ಗುರುಗಲಾಗಿ ಕೆಲಸ ನಿರ್ವಹಿಸಿದವರಿಗೆ ಅಧ್ಯಕ್ಷರು ಗೌರವ ಸಂಭಾವನೆ ನೀಡಿ ಗೌರವಿಸಿದರು. , ಮುಖ್ಯ ಅತಿಥಿ ಮೋತಿ ಪಿ. ರಾಮ್ ರಾವ್ ಮಾತನಾಡುತ್ತಾ  ಶಿಬಿರದ ಕಾರ್ಯಚಟುವಟಿಕೆಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾ  ಉಚಿತವಾಗಿ ನೀಡುತ್ತಿರುವ ಈ ಧಾರ್ಮಿಕ ಶಿಕ್ಷಣವು ನಮ್ಮ ಬ್ರಾಹ್ಮಣ್ಯವನ್ನು ಹಾಗೂ ನಮ್ಮ ಪರಂಪರೆಯನ್ನು ಉಳಿಸುತ್ತಿದೆ ಹಾಗೂ ಇದು ಜೀವನಕ್ಕೆ ಅತ್ಯವಶ್ಯವಕವು ಆಗಿದೆ ಆದ್ದರಿಂದ ಇನ್ನು ಹೆಚ್ಚಿನ ಬ್ರಾಹ್ಮಣ ವಟುಗಳು ಇದರ ಸಂಪೂರ್ಣ ಅಗತ್ಯತೆಯನ್ನು ಪಡೆಯಬೇಕೆಂದು ತಿಳಿಸಿದರು, ಶಬಿರದ ನಿದೇಶಕ ನಿಟಿಲಾಪುರ ಕ್ರಷ್ಣಮೂತಿ ಇವರು  ಶಿಬಿರದ ಉದ್ದೇಶ ಪಾಠ ಪಠ್ಯಗಳ ವಿವರ ಶಿಬಿರದ ತಮ್ಮ ಅನುಭವಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಹೆತ್ತವರ ಪರವಾಗಿ ಶ್ರೀಅರವಿಂದ ಸೋಮಯಾಜಿ ಮ್ತು ಶ್ರೀಮತಿ ವಿಶಾಕ್ಷಿ ಆರ್‍ ಮಯ್ಯ ಇವರು ತಮ್ಮ ಅಭಿಪ್ರಾಯವನ್ನು ಹಗೂ ಮೆಚ್ಚುಗೆಯನ್ನು ತಿಳಿಸಿದರು.

ಅಧ್ಯಕ್ಷರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಶಿಬಿರವು ಯಶಸ್ವಿಯಾಗಲು ಹೆತ್ತವರ ಆಸಕ್ತ  ಶಿಬಿರಾರ್ಥಿಗಳ ಸಹಕಾರಬೇಕು, ದೇವಳವು ದೊಡ್ಡ ಮೊತ್ತದ ಹಣವನ್ನು ಈ ಉದ್ದೇಶಕ್ಕಾಗಿ ವ್ಯಯಿಸುತ್ತಿದೆ. ಎಲ್ಲಾ  ಶಿಬಿರಾರ್ಥಿಗಳು ಇಲ್ಲಿ ಕಲಿತದ್ದನ್ನು ಮನೆಯಲ್ಲಿ ಅಧ್ಯಯನ ಮಾಡಬೇಕು ಹಾಗೂ ಇಲ್ಲಿ ಕಲಿಸಿದ ಎಲ್ಲಾ ಶಿಷ್ಟಾಚಾರಗಳನ್ನು ಮನೆಗೆ ಹೋದ ಮೆಲೆ ಮುಂದುವರಿಸಬೇಕು ಹಾಗು ಇದಕ್ಕೆ ಮನೆಯವರು ಸಂಪೂರ್ಣವಾಗಿ  ಪ್ರೋತ್ಸಾಹವನ್ನು ನೀಡಿದಲ್ಲಿ ನಮ್ಮ ಉದ್ದೇಶ ಸಾರ್ಥಕವಾಗುತ್ತದೆ, ಮುಂಬರುಬವ ಶಿಬಿರದಲ್ಲಿ ಇನ್ನು ಹೆಚ್ಚಿನ ಶಿಬಿರಾರ್ಥಿಗಳು ಭಾಗವಹಿಸಬೇಕೆಂದು ಹಾಗೂ ಇದಕ್ಕಾಗಿ ಇನ್ನು ಹೆಚ್ಚಿನ ಅನುಕೂಲತೆಯನ್ನು ಒದಗಿಸುವುದಾಗಿ ಭರವಸೆ ನೀಡಿದರು. ಈ  ಶಿಬಿರದ ಸಂಪೂರ್ಣ ಯಶಸ್ಸಿಗಾಗಿ ಸಿಬ್ಬಂದಿಗಳ ಸಂಪೂರ್ಣ ಸಹಕಾರವನ್ನು ಹಾಗೂ ತಾಳ್ಮೆಯನ್ನು ಮನಃಪೂರ್ವಕವಾಗಿ ಶ್ಲಾಘಿಸಿದರು.

ಆಡಳಿತಮಂಡಳಿ ಸದಸ್ಯರಾದ ಶ್ರೀ ಧರ್ಮರಾಯ ಹಂದೆ ಎಚ್ ಇವರು ಸಂಬಧಿಸಿದ ಎಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

22Jun/110

Kanyaka Samskruthi Shibira

ಸಾಲಿಗ್ರಾಮ :- ಶ್ರೀಗುರುನರಸಿಂಹ ದೇವಸ್ಥಾನ ಇಲ್ಲಿ ಸಂಸ್ಕ್ರತಿ ಆಚಾರ ವಿಚಾರಗಳ ಬಗ್ಗೆ ಇಂದಿನ ಕನ್ನಿಕೆಯರಿಗೆ ತಿಳಿಸಿಕೊಡುವ ಕಿರುಪ್ರಯತ್ನದ ಅಂಗವಾಗಿ 3 ದಿನಗಳ ಕನ್ಯಾಕ ಸಂಸ್ಕ್ರತಿ ಶಿಬಿರವನ್ನು ದಿನಾಂಕ 12-04-11 ರಿಂದ 14-04-11 ರವರೆಗೆ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸಂಪೂರ್ಣ ಸಹಕಾರದೊಂದಿಗೆ ಆಡಳಿತ ಮಂಡಳಿಯು ವ್ಯವಸ್ಥೆಗೊಳಿಸಿತ್ತು. ಈ ಶಿಬಿರದಲ್ಲಿ 60 ಜನ ಕನ್ನಿಕೆ ಶಿಬಿರಾರ್ಥಿಗಳು ಅವರ ಪಾಲಕರು, ಮಹಿಳಾವೇದಿಕೆಯ ಸಕ್ರಿಯ ಸದಸ್ಯರು ಹಾಜರಿದ್ದರು.

ದೇವಳದ ಆಡಳಿತ ಮಂಡಳಿಯ ಸದಸ್ಯ ವೇ.ಮು.ಶ್ರೀ ಅನಂತಪದ್ಮನಾಭ ಐತಾಳರ ಅಧ್ಯಕ್ಷತೆಯಲ್ಲಿ ಶ್ರೀಮತಿ ಯಶೋದ ಐತಾಳ ಉಡುಪಿ ಇವರು ಶಿಬಿರವನ್ನು  ಉದ್ಘಾಟಿಸಿದರು, ಶಿಬಿರದ ಅವಧಿಯಲ್ಲಿ ನಿತ್ಯಜೀವನದಲ್ಲಿ ಹೊಂದಾಣಿಕೆ , ಯೋಗ, ಮುಢನಂಬಿಕೆ, ನ ಭಯಂ ಚಸ್ತಿ ಜಾಗ್ರತಃ ಈ ವಿಷಯಗಳ ಕುರಿತು ಶ್ರೀಮತಿ ಭಾರತಿ ಮಯ್ಯ, ಡಾ|| ವೀಣಾ ಭಟ್, ಶ್ರೀ ಜಿ.ನಾಗೇಶ ಮಯ್ಯ ಮತ್ತು ಶ್ರೀ ಶ್ರೀಪತಿ ಹೇರ್ಳೆಯವರು ಉಪಯುಕ್ತ ಉಪನ್ಯಾಸಗಳನ್ನು ನೀಡಿದರು, ಸಾಲಿಗ್ರಾಮ ಮಹಿಳಾ ವೇದಿಕೆಯ ಸದಸ್ಯೆಯರು ರಂಗೋಲಿ, ಪೇಪರ ಹೂ ತಯಾರಿ ಮೊದಲಾದ ಕೈಕೆಲಸಗಳನ್ನು ಕಲಿಸುವುದರ ಜೊತೆಗೆ ನಮ್ಮ ಹಿರಿಯರ ಪರಂಪರಾಗತ ಜೀವನ ವಿಧಾನ ಮತ್ತು ಸಂಸ್ಕಾರಗಳ ಬಗ್ಗೆ ಉಪನ್ಯಾಸ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.

ದಿನಾಂಕ 14-04-11 ರಂದು ಪೂರ್ವಾಹ್ನ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ ಜಗದೀಶ ಕಾರಂತರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅಥಿಗಳಾಗಿ  ಶ್ರೀಮತಿ ಲಲಿತಾ ತುಂಗಾ ಇವರು ಶಿಖರೋಪನ್ಯಾಸವನ್ನು ನೀಡಿದರು. ಮಹಿಲಾವೇದಿಕೆ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಮದ್ಯಸ್ತರು ಎಲ್ಲರನ್ನೂ ಸ್ವಾಗತಿಸಿದರೆ ಕಾರ್ಯದರ್ಶಿ ಶ್ರೀಮತಿ ವನಿತಾ ಉಪಾಧ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೂ.ಮ.ಜ. ಸಾಲಿಗ್ರಾಮ ಉಪಾಧ್ಯಕ್ಷ ಕೆ.ಶಂಕರನಾರಾಯಣ ಹೊಳ್ಳರ ಎಲ್ಲರನ್ನೂ ವಂದಿಸಿದರು, ದೇವಳದ ವತಿಯಿಂದ ಶಿಬಿರಾರ್ಥಿಗಳಿಗೆಲ್ಲ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.

22Jun/110

Smagra Navagraha Yaga

ಅಷ್ಟೋತ್ತರ ಶತ ನಾರೀಕೇಳ ಗಣಯಾಗ ಮತ್ತು ಸಮಗ್ರ ನವಗ್ರಹ ಯಾಗ ಮತ್ತು ಬ್ರಹ್ಮ ಕಲಾಶಾಭಿಷೇಕ

ಸಾಲಿಗ್ರಾಮ :- ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂಬ ನಿಲುವನ್ನು ಹೊಂದಿರುವ ಶ್ರೀದೇವಳದ ಆಡಳಿತ ಮಂಡಳಿಯು ಇದೇ ಮಾರ್ಚ 22 ರಂದು ಅಷ್ಟೋತ್ತರ ಶತನಾರಿಕೇಳ ಯಾಗ ಗಣಯಾಗ, ಉಪಸನ್ನಿಧಿಯಾದ ಶ್ರೀಆಂಜನೇಯ, ಶ್ರೀಗಣಪತಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಶ್ರೀನಾಗದೇವರ ಸನ್ನಿಧಿಯಲ್ಲಿ  ನವಕಪ್ರಧಾನ ಕಲಶಾಭಿಷೇಕವನ್ನು  ನಡೆಸಲಾಯಿತು, ತಾ 23 ರಂದು ಶ್ರೀನರಸಿಂಹ ದೇವರಿಗೆ ಬ್ರಹ್ಮಕಲಶ ಮತ್ತು ಸಮಗ್ರ ನವಗ್ರಹ ಯಾಗವನ್ನು ಹಾಗೂ ರಾತ್ರಿ ಹಿರಿರಂಗಪೂಜೆಯನ್ನು ಭಕ್ತರ ನೇರವಿನಿಂದ ಅದ್ದೂರಿಯಾಗಿ ನಡೆಸಿತು.

 22-03-11 ರಂದು ಪೂರ್ವಾಹ್ನ ಗಂಟೆ 8-00 ಕ್ಕೆ ಸಾಮೂಹಿಕ ಗುರುಪ್ರಾರ್ಥನೆಯ ತರುವಾಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತ ದಂಪತಿಗಳಿಂದ ಮಹಾ ಸಂಕಲ್ಪ ನಡೆದು ಗಣಯಾಗ ಕರ್ತ್ರ ಶ್ರೀ ಬಿ.ಗಣೇಶ ರಾವ್ ದಂಪತಿಗಳು ಕಾರ್ಯನಿರ್ವಹಿಸಿದರು. ವೇ.ಮು.ಶ್ರೀ ಗೋಪಾಲಕ್ರಷ್ಣ ಸೋಮಯಾಜಿಯವರು ಪ್ರಧಾನ ಋತ್ವಿಜರಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೇರವೇರಿಸಿಕೊಟ್ಟರು, ಅದೇ ದಿನ ಎಲ್ಲಾ ಪರಿವಾರದೇವತೆಗಳಿಗೆ ನವಕಪ್ರಧಾನ ಕಲಾಶಾಭಿಷೇಕವನ್ನು ವಿಧಿವತ್ತಾಗಿ ನೇರವೇರಿಸಲಾಯಿತು. ಹಾಗೂ ಮರುದಿನ ನಡೆಸುವ ಸಮಗ್ರ ನವಗ್ರಹ ಯಾಗದ ಪೂರ್ವಭಾವಿಯಾಗಿ ನವಗ್ರಹ ಜಪವನ್ನು 60 ಜನ ಋತ್ವಿಜರು ನಡೆಸಿಕೊಟ್ಟರು ಸಂಜೆ 7.00 ಕ್ಕೆ ಅಷ್ಟೋತ್ತರ ಕಲಶ ಸ್ಥಾಪನೆ ಅಧಿವಾಸಪೂಜೆಗಳು ನಡೆದವು.

ತಾ 23-03-11 ರಂದು ನವಕುಂಡಗಳಲ್ಲಿ ಸಹಸ್ರ ಸಂಖ್ಯೆಯ ಆಹುತಿಗಳನ್ನು ಸಮರ್ಪಿಸಿ ಸಮಗ್ರಹ ಯಾಗವನ್ನು ದೇವಳದ ಮುಂಭಾಗದ ರಾಜಾಂಗಣದಲ್ಲಿ ಅಲಂಕ್ರತ ಯಾಗ ಮಂಟಪದಲ್ಲಿ ನಡೆಸಲಾಯಿತು. ಶ್ರೀದೇವರಿಗೆ ವೆ.ಮು.ಶ್ರೀ ಶಂಕರನಾರಾಯಣ ಸೋಮಯಾಜಿ ಮತ್ತು ವೇ.ಮು.ಶ್ರೀ ಜನಾರ್ದನ ಅಡಿಗಳ ಸಹಕಾರದೊಂದಿಗೆ ಬ್ರಹ್ಮಕಲಶಾಭಿಷೇಕವನ್ನು ನೇರವೇರಿಸಿದರು.

ಸಮಗ್ರ ನವಗ್ರಹ ಯಾಗದ  ಕರ್ತ್ರುಗಳಾಗಿ ಸರ್ವಶ್ರೀ ವಸಂತ್ ರಾವ್ ದಂಪತಿಗಳು ಧರ್ಮಸ್ಥಳ,  ಕೋಡಿ ಕಾಳಿಂಗ ನಾವಡ ದಂಪತಿಗಳು ಸಾಸ್ತಾನ, ಜಯರಾಮ ಭಟ್ ದಂಪತಿಗಳು ಬೆಂಗಳೂರು, ರಮೇಶ ಹೊಳ್ಳ ದಂಪತಿಗಳು ಕುಂದಾಪುರ, ಸದಾಶಿವ ಮಯ್ಯ ದಂಪತಿಗಳು ಉಡುಪಿ, ರಮೇಶ ಮದ್ಯಸ್ತ ದಂಪತಿಗಳು  ಪಾರಂಪಳ್ಳಿ ಕೋಣಿ ರಮೇಶ ಹೆಬ್ಬಾರ್ ದಂಪತಿಗಳು ಕುಂದಾಪುರ,  ಭಾಸ್ಕರ ತುಂಗ ದಂಪತಿಗಳು ಸಾಸ್ತಾನ ಮತ್ತು ಶ್ರಂಗೇಶ ದಂಪತಿಗಳು  ಮೈಸೂರು, ಇವರುಗಳು ಶ್ರದ್ಧಾಪೂರ್ವಕವಾಗಿ ಬಾಗವಹಿಸಿದ್ದರು,

ಈ ಯಾಗದ ಅಂಗವಾಗಿ ಆದಿತ್ಯ ಯಾಗದಲ್ಲಿ ಪಂಡಿತ್ ಸತ್ಯನಾರಾಯಣ ಉಪಾಧ್ಯ , ಚಂದ್ರ ಯಾಗದಲ್ಲಿ ವೇ.ಮು.ಶ್ರೀಕಲ್ಮಾಡಿ ಕ್ರಷ್ಣಮೂರ್ತಿ ಐತಾಳ, ಅಂಗಾರಕ ಯಾಗದಲ್ಲಿ ವೇ.ಮು.ಶ್ರೀ ನರಸಿಂಹ ಭಟ್, ಬುಧ ಯಾಗದಲ್ಲಿ ವೇ.ಮು.ಶ್ರೀ ಮಹಾಬಲೇಶ್ವರ ಐತಾಳ, ಗುರು ಯಾಗದಲ್ಲಿ ವೇ.ಮು.ಶ್ರೀ ಗೋಪಾಲಕ್ರಷ್ಣ ಸೋಮಯಾಜಿ, ಶುಕ್ರ ಯಾಗದಲ್ಲಿ ವೇ.ಮು.ಶ್ರೀ ರತ್ನಾಕರ ಸೋಮಯಾಜಿ,  ಶನಿ ಯಾಗದಲ್ಲಿ ವೇ.ಮು. ಶ್ರೀ ರಘುರಾಮ ಸೋಮಯಾಜಿ,  ರಾಹು ಯಾಗದಲ್ಲಿ  ವೇ.ಮು.ಶ್ರೀ ರಾಮಕ್ರಷ್ಣ  ಐತಾಳ, ಕೇತು ಯಾಗದಲ್ಲಿ ವೇ.ಮು.ಶ್ರೀ ಸುಬ್ರಾಯ ಐತಾಳ ಇವರುಗಳು ಪ್ರಧಾನ ಋತ್ವಿಜರಾಗಿ ಈ ಪ್ರದೇಶದ ವೇದ ವಿದ್ವಾಂಸರ ನರವಿನೊಂದಿಗೆ ನಡೆಸಿಕೊಟ್ಟರು. ನವಗ್ರಹ ಮಂಡಲ ಪೂಜೆಯನ್ನು ಜ್ಯೋತಿಷಿ ವಿದ್ವಾನ್ ಶ್ರೀ ಶ್ರೀನಿವಾಸ ಅಡಿಗರು ನೇರವೇರಿಸದರು.

ದೇವಳದ ಆಡಳಿತ ಮಂಡಳಿಯ ಇಂದಿನ ಮತ್ತು ಹಿಂದಿನ ಸದಸ್ಯರು, ಕೂ.ಮ.ಜ. ಅಂಗಸಂಸ್ಥೆಗಳ ಸದಸ್ಯರು, ಗ್ರಾಮಮೋಕ್ತೇಸರರು, ದೇವಳದ ಸಿಬಂಧಿಗಳ ಪರಿಶ್ರಮ  ಇಲ್ಲಿ ಉಲ್ಲೇಖನಿಯ, ಮಧ್ಯಾಹ್ನ 2,500 ಜನ ಭಕ್ತಾದಿಗಳು ಶ್ರೀದೇವರ ಭೋಜನ ಪ್ರಸಾದವನ್ನು ಸ್ವೀಕರಿಸಿದರು. ಮಂತ್ರಾಕ್ಷತೆ, ದೇವಳದ ಅರ್ಚಕರ ಸೇವಾರೂಪದ ಹಿರಿರಂಗಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಲ ಹಾಡಲಾಯಿತು. ಈ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಆಡಳಿತ ಮಂಡಳಿಯ ಸದಸ್ಯರೂ ಆದ ಶ್ರೀ ವೇ.ಮು.ಶ್ರೀ ಆನಂತಪದ್ಮನಾಭ ಐತಾಳರು, ವೇ.ಮು.ಶ್ರೀ.ಸೀತರಾಮ ಉಪಾಧ್ಯ, ವೇ.ಮು.ಶ್ರೀ ವೆಂಕಪ್ಪಯ್ಯ ಭಟ್, ವೇ.ಮು.ಶ್ರೀ ರತ್ನಾಕರ ಸೋಮಯಾಜಿ. ವೇ.ಮು.ಶ್ರೀ ಪ್ರಸನ್ನ ತುಂಗ ಸಾಸ್ತಾನ ಇವರುಗಳ ನೇರವಿನೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟರು ,

ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಎ.ಜಗದೀಶ ಕಾರಂತರು ಯಾಗದ ಸಂಪೂರ್ಣ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗು ಕ್ರತಜ್ಞತೆ ಸೂಚಿಸಿದರು, ಲೋಕಕಲ್ಯಾಣಾರ್ಥವಾಗಿ ಮಾಡಿದ ಈ ಅಪರೂಪದ ಸಮಗ್ರ ನವಗ್ರಹ ಯಾಗವು ಸಂಪೂರ್ಣ ಯಶಸ್ವಿಯಾಗಿರುವುದಕ್ಕೆ ಶ್ರೀದೇವರ ಕ್ರಪೆ ಹಾಗೂ ಭಕ್ತಭಿಮಾನಿಗಳೆ ಕಾರಣ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ಒದಗಲಿ ಎಂದು ಶ್ರೀಗುರುನರಸಿಂಹ ದೇವರನ್ನು ಪ್ರಾರ್ಥಸಿದರು.

19Jun/110

Elanira Abisheka

ದಿನಾಂಕ 15-06-11 ರಂದು ಶ್ರೀದೇವಳದ ಉಪಸನ್ನಿಧಿ ಶ್ರೀಆಂಜನೇಯ ದೇವಳದಲ್ಲಿ ಸೂರ್ಯೋದಯಕ್ಕೆ  ಸರಿಯಾಗಿ ಪ್ರತಿ ಹುಣ್ಣಿಮೆಯಂದು ನಡೆಯುವಂತೆ ನವಕಪ್ರಧಾನ ಕಲಾಶಾಭಿಷೇಕವನ್ನು  ನೇರವೇರಿಸಲಾಯಿತು.

ಶ್ರೀಗುರು ಸನ್ನಿಧಿಯಲ್ಲಿ ಸಂಕ್ರಾಂತಿಯ ಪ್ರಯುಕ್ತ ಗಣಹೋಮ ಹಾಗೂ 10-30 ಕ್ಕ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಶ್ರೀಗುರುನರಸಿಂಹ ಹಾಗೂ ಪರಿವಾರ ದೇವತೆಗಳಿಗೆ ಎಳನೀರಿನ ಅಭಿಷೇಕವನ್ನು ನೇರವೇರಿಸಲಾಯಿತು.

ಸುಮಾರು 12.30 ಕ್ಕೆ ಈ ವರ್ಷದ ಉತ್ತರಾಯಣದ ಕೊನೆಯ ಪುಷ್ಫರಥೋತ್ಸವನ್ನು  ಅದ್ದೂರಿಯಾಗಿ ನೇರವೇರಿಸಲಾಯಿತು.

15Jun/110

Silver Star

ಕೋಟೇಶ್ವರದ ಧನ್ಯ ನರ್ಸರಿಯ ಮಾಲಕರಾದ ಶ್ರೀನಾಗರಾಜ ಧನ್ಯ ಇವರು ದಿನಾಂಕ 11-06-11 ರಂದು ಶನಿವಾರ ಶ್ರೀಗುರುನರಸಿಂಹ ದೇವರ ಮುಂಭಾಗದಲ್ಲಿ ಕಂಗೋಳಿಸುತ್ತಿದ್ದ ಹಿತ್ತಾಳೆ ನಕ್ಷತ್ರ ಮಾಲೆಗೆ ಬೆಳ್ಳಿ ಮಡಾಯಿಸಿ ಮತ್ತು ಬಲಿ ಹಾಕಲು ಬೆಳ್ಳಿ ಹಾವಿಗೆಯನ್ನು ಶ್ರೀದೇವಳಕ್ಕೆ ಸಮರ್ಪಿಸಿದರು.  1.ಕೆಜಿ ಬೆಳ್ಳಿಯ ರೂ. 60,000/- ಮೌಲ್ಯವು ಇದಾಗಿದೆ. 

ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ  ಎ ಜಗದೀಶ ಕಾರಂತರು ಈ ಕೊಡುಗೆಯನ್ನು ಸ್ವೀಕರಸಿ ಅವರನ್ನು ಶ್ರೀದೇವಳದ ಸಂಪ್ರದಾಯದಂತೆ ಪ್ರಸಾದ ನೀಡಿ ಗೌರವಿಸಿದರು.

10Jun/110

K.M.J. S. (R) Kirimanjeshwara

ದಿನಾಂಕ 22.05.11 ರಿಂದ 29.05.11 ರವರೆಗೆ ಶ್ರೀದೇವಳದಲ್ಲಿ ಅದ್ದೂರಿಯಾಗಿ ಶಾಕಲ ಋಕ್ ಸಹಿಂತಾಯಾಗವನ್ನು ಕೂಟ ಮಹಾಜಗತ್ತು ಸಾಲಿಗ್ರಾಮ (ರಿ)  ಅಂಗಸಂಸ್ಥೆ- ಕಿರಿಮಂಜೇಶ್ವರ  ಇವರು ನಡೆಸಿದ್ದು ಯಾಗಕ್ಕೆ ಸಂಬಂದಿಸಿದಂತೆ ತಾವು ಸಂಗ್ರಹಿಸಿದ ಬ್ರಹತ್ ಮೊತ್ತದಲ್ಲಿ ಯಾಗದ ಖರ್ಚು ವಜಾ ಹೊಗ್ತಾ ಉಳಿದ ಹಣವನ್ನು ದೇವಳದ ಬ್ರಹತ್ ಅಭಿವ್ರದ್ಧಿ ಯೋಜನೆಗೆ 1.5 ಲಕ್ಷ  ಮತ್ತು ಯಾಗದ ದಿನಗಳಲ್ಲಿ ಭೋಜನ ವ್ಯವಸ್ಥೆಯನ್ನು ದೇವಳವೇ ಭರಿಸಿರುವುದನ್ನು ಗೌರವಿಸಿ ಭೋಜನ ನಿಧಿಗೆ ರೂ. 71,625-00 ನ್ನು ನೀಡಿ ತಮ್ಮ ಹಿರಿಮೆಯನ್ನು ಮೆರೆದರು.

DSC_0006

ಈ ದೇಣಿಗೆ ನೀಡಿಕೆಯ ಸಮಾರಂಭ ದಿನಾಂಕ 07-06-2011 ರಂದು ಪೂರ್ವಾಹ್ನ 10-00 ಗಂಟೆಗೆ ಅತ್ಯಂತ  ಸರಳವಾಗಿ ನಡೆಯಿತು.  ಕಿರಿಮಂಜೇಶ್ವರ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಸುಬ್ರಹ್ಮಣ್ಯ ನಾವಡ ತಮ್ಮ ಪದಾದಿಕಾರಿಗಳನ್ನು ಕೂಡಿಕೊಂಡು ದೇವಳಕ್ಕ ಆಗಮಿಸಿ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ ಜಗದೀಶ ಕಾರಂತರಿಗೆ ಚೆಕ್ಕುಗಳನ್ನು ಹಸ್ತಾಂತಿಸಿದರು.

DSC_0010

6Jun/110

Sahasra Sihalabisheka

ದಿನಾಂಕ 15-06-11 ರ ಉತ್ತರಾಯಣದ ಕೊನೆಯ ಸಂಕ್ರಮಣವಾದ ಮಿಥುನ ಸಂಕ್ರಮಣದಂದು ಉತ್ತಮ ಮಳೆ ಬೆಳೆ ಹಾಗೂ ಸಮಾಜದ ಒಳಿತಿಗಾಗಿ ಶ್ರೀದೇವರಲ್ಲಿ ಪ್ರಾರ್ಥಿಸಿ ಶ್ರೀದೇವರಿಗೆ ಹಾಗೂ ಪರಿವಾರ ದೇವತೆಗಳಿಗೆ ಸಹಸ್ರ ಸೀಯಾಳಭಿಷೇಕವನ್ನು  ಮಾಡಲಾಗುವುದು. ಮಧ್ಯಾಹ್ನ ಪುಷ್ಫರಥೋತ್ಸವ ನಡೆಯುದು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸೀಯಾಳವನ್ನು ಶ್ರೀದೇವಳಕ್ಕೆ ತರಬೇಕೆಂದು ಕೋರಲಾಗಿದೆ.

                                                ಅಧ್ಯಕ್ಷರು

                            ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ

1Jun/110

Shakala Ruk Shimita Yaga

ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಕಿರಿಮಂಜೇಶ್ವರ ಅಂಗಸಂಸ್ಥೆಯವರು ಬಹಳ ಹಿಂದೆಯೇ ಸಂಕಲ್ಪಿಸಿದಂತೆ ದಿನಾಂಕ 22-05-2011 ರಿಂದ 29-11-11 ರವರೆಗೆ ಶಾಕಲ ಋಕ್ ಸಂಹಿತಾ ಮಹಾಯಾಗವನ್ನು ನಡೆಸಿಕೊಟ್ಟರು.

DSC_0106

ದಿನಾಂಕ 21-05-2011 ರಂದು ಯಾಗದ ಮುನ್ನಾ ದಿನ ಸರ್ವ ವಿಘ್ನ ವಿನಾಶಕನಾದ ಗಣಪತಿ ಪ್ರೀತ್ಯರ್ಥ ಗಣಯಾಗ ಮತ್ತು ನವಗ್ರಹ ಯಾಗಗಳು ನಡೆದವು. ಸಂಜೆ ಯಾಗ ಮಂಟಪ ಸಂಸ್ಕಾರವೇ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಮರುದಿನ ಬೆಳಗ್ಗೆ ಮಹಾಯಾಗವು ಪ್ರಾರಂಭಗೊಂಡಿತು.  ವೆ.ಮು.ಶ್ರೀ ಗೋಪಾಲ ಸೋಮಯಾಜಿ ಪ್ರಧಾನ ಋತ್ವಿಜರಾಗಿ ಸ್ಥಳಿಯ ಮತ್ತು ಪರ ಊರ ವೇದ ವಿದ್ವಾಂಸರ ಬೆಂಬಲ ದೇವಳದ ತಂತ್ರಿ ಮತ್ತು ಅರ್ಚಕರ ಸಹಾಕಾರದೊಂದಿಗೆ ಋಗ್ವೇದದ ಒಂದೋಂದು ಅಷ್ಟಕದ ಮಂತ್ರದೊಂದಿಗೆ ಆಜ್ಯಾಹುತಿ ನೀಡಿ ವೇದ ಬ್ರಹ್ಮನನ್ನು ಸುಸ್ತಿಸಲಾಯಿತು. ಸಂಜೆ ಪೂಜೆ ಅಷ್ಟಾವಧಾನ ಸೇವೆ ಪಾನಕ ಪನೀವಾರ ವಿತರಣೆಯೊಂದಿಗೆ ದೈನಂದಿನ ಕಾರ್ಯಕ್ರಮಗಳು ಮುಗಿಯುತ್ತಿದ್ದವು. ಹೀಗೆ 8 ದಿನಗಳ ಕಾಲ ನಡೆದ ಮಹಾಯಾಗವು ದಿನಾಂಕ 29-05-2011 ರಂದು ಪೂರ್ಣಾಹುತಿಯೊಂದಿಗೆ ಸಮಾಪ್ತಿಗೊಂಡಿತು.

ಯಾಗದ ಯಜಮಾನತ್ವವನ್ನು ಕಿರಿಮಂಜೇಶ್ವರ ಅಂಗಸಂಸ್ಥೆಯ ಪರವಾಗಿ ಅಂಗಸಂಸ್ಥೆಯ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ನಾವಡ ದಂಪತಿಗಳು ಬಹಳ ಶ್ರದ್ಧೆ ಭಕ್ತಿಯಿಂದ ನಿರ್ವಹಿಸಿದರು. ಕಿರಿಮಂಜೇಶ್ವರ ಅಂಗಸಂಸ್ಥೆಯವರು ಸಮಾಜ ಬಾಂಧವರನ್ನು ಸಂಘಟಿಸುವ ಹಾಗೂ ಸಮಾಜದ ಸರ್ವೋತೋಮುಖ ಅಭಿವ್ರದ್ಧಿಗಾಗಿ  ಕೈಕೊಂಡ ಯಾಗವು ಅತ್ಯಂತ ಯಶಸ್ವಿಯಾಯಿತು. ಪ್ರತಿ ದಿನ ಕಿರಿಮಂಜೇಶ್ವರ ಅಂಗಸಂಸ್ಥೆಯ ವ್ಯಾಪ್ತಿಯ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಎಲ್ಲಾ ಕೆಲಸಗಳನ್ನು ಭಕ್ತಿ ಭಾವದಿಂದ ನಿರ್ವಹಿಸುತ್ತಿದ್ದುದು ಎಲ್ಲರ ಗಮನ ಸೆಳೆಯಿತು

ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ ಜಗದೀಶ ಕಾರಂತರು ಹಾಗೂ ಇತರೆ ಸದಸ್ಯರು ಪ್ರತಿ ದಿನ ಹಾಜರಿದ್ದು  ಯಾಗದ ಯಶಸ್ವಿಗೆ ಸಹಕರಿಸಿದರು ಸಾವಿರಾರು ಜನ ಭಕ್ತರು , ಬೇರೆ ಬೇರೆ ಅಂಗಸಂಸ್ಥೆಯ ಸದಸ್ಯರು ಯಾಗದ ದಿನಗಳಲ್ಲಿ ದೇವಳಕ್ಕೆ ಭೇಟಿ ನೀಡಿ ಕ್ರತಾರ್ಥರಾದರು. ಯಾಗದ ಯಶಸ್ಸಿಗೆ ಶ್ರಮಿಸಿದ ಕಿರಿಮಂಜೇಶ್ವರ ಅಂಗಸಂಸ್ಥೆಯ ಸರ್ವ ಸದಸ್ಯರನ್ನು ಆಡಳಿತ ಮಂಡಳಿಯ ಅಧ್ಯಕ್ಷರು ಅಭಿನಂದಿಸಿದರು ಹಾಗೂ ಇದೊಂದು ಸಮಾಜ ಬಾಂಧವರಿಗೆ ಒಂದು ಮಾರ್ಗದರ್ಶನವಾಗಿದೆ, ಬೇರೆಯವರು ಬ್ರಹತ್ ಪ್ರಮಾಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀದೇವಳದಲ್ಲಿ ನಡೆಸುವುದಾದರೆ ನಾವು ಸಂಪೂರ್ಣ ಸಹಕಾರವನ್ನು ನೀಡುವೆವು ಎಂದು ತಿಳಿಸದರು.

DSC_0102

ಶ್ರೀದೇವಳದ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಬೇರೆ ಬೇರೆ ಅಂಗಸಂಸ್ಥೆಗಳ ಸಹಾಕಾರಕ್ಕೆ ಕಿರಿಮಂಜೇಶ್ವರ ಅಂಗಸಂಸ್ಥೆಯ ಸರ್ವ ಸದಸ್ಯರು ತಮ್ಮ ಕ್ರತಜ್ಞತೆಯನ್ನು ಸೂಚಿಸಿದರು.