Paraspara e-KootaBandhu for quicker news

10Aug/110

Farwell Party (ಬಿಳ್ಗೊಡುಗೆ ಸಮಾರಂಭ)

ವ್ಯವಸ್ಥಾಪಕರ ಬಿಳ್ಗೊಡುಗೆ ಸಮಾರಾಂಭ

DSC_0037

ಸಾಲಿಗ್ರಾಮ :-        ಶ್ರೀಗುರುನರಸಿಂಹ ದೇವಳದಲ್ಲಿ ಕಳೆದ 1೦ ವರ್ಷಗಳಿಂದ ವ್ಯವಸ್ಥಾಪಕರಾಗಿ (ಮೇನೆಜರ್) ನಿಸ್ವಾರ್ಥಿಯಾಗಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಶ್ರೀದೇವಳದ ಸರ್ವೂತೋಮುಖ ಅಭಿವ್ರದ್ದಿಗೆ ಶ್ರಮಿಸಿದ ಶ್ರೀ ಜಿ.ಎಸ್. ನಾರಾಯಣ ಹೇರ್ಳೆ ಇವರು ದಿನಾಂಕ 31.07.2011 ರಂದು ಸೇವೆಯಿಂದ ನಿವ್ರತ್ತರಾಗಿದ್ದು . ಇವರ ಬಿಳ್ಕೋಡುವ ಸಮಾರಂಭವನ್ನು ದಿನಾಂಕ 09.08.2011 ರಂದು ಶ್ರೀದೇವಳದ ಜ್ಞಾನಮಂದಿರದ ಸಬಾಭವನದಲ್ಲಿ ಶ್ರೀದೇವಳದ ಸಿಬ್ಬಂದಿ, ಅರ್ಚಕರು, ಶ್ರೀದೇವಳದ ವೇದ ಪಾಠ ಶಾಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಗೂ ಶ್ರೀಗುರುನರಸಿಂಹ ನವೋದಯ ಸ್ವಸಹಾಯ ಸಂಘದ ಸದಸ್ಯರು ವ್ಯವಸ್ಥೆಗೊಳಿಸಿದ್ದರು.

          DSC_0040  

         ಸಮಾರಂಭದ ಅಧ್ಯಕ್ಷತೆಯನ್ನು ಶ್ರೀದೇವಳದ ಅರ್ವಕರಾದ ವೇ.ಮು.ಶ್ರೀ ಪಿ. ಜನಾರ್ದನ ಅಡಿಗರು ವಹಿಸಿದ್ದರು, ವೇದಿಕೆಯಲ್ಲಿ ಸನ್ಮಾನಿತರೊಡನೆ, ನಿಗಮಾಗಮ ಪಾಠಶಾಲೆಯ ಪ್ರಾಂಶುಪಾಲರು, ದೇವಳದ ನೂತನ ವ್ಯವಸ್ಥಾಪಕರಾದ ಶ್ರೀ ಕೆ.ಪರಮೇಶ್ವರ ಬಾಸ್ರಿಯವರಲ್ಲದೆ, ಕೂ.ಮ.ಜ. ಸಾಲಿಗ್ರಾಮ ಅಂಗಸಂಸ್ಥೆಯ ಉಪಾಧ್ಯಾಕ್ಷರಾದ ಶ್ರೀ ಶಂಕರನಾರಾಯಣ ಹೊಳ್ಳರು ಉಪಸ್ಥತರಿದ್ದರು.

 DSC_0039 copy

             ವೇದಪಾಠಶಾಲೆಯ ವಿದ್ಯಾರ್ಥಿಗಳಿಂದ ದೇವತಾ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು, ನಿವ್ರತ್ತರ ಕುರಿತು ವೇದಪಾಠಶಾಲೆಯ ಗುರುಗಳಾದ ವೇ.ಮು.ಶ್ರೀ ರಾಧಕ್ಕ್ರಷ್ಣ ಭಾಗವತ, ಪ್ರಾಂಶುಪಾಲರಾದ ಡಾ|ನಿಟಿಲಾಪುರ ಕ್ರಷ್ಣಮೂರ್ತಿಯವರು ತಮ್ಮ ಅನಿಸಿಕೆಯನ್ನು ತಿಳಿಸಿದರು. ಅಧ್ಯಕ್ಷರು ಸಿಬ್ಬಂದಿಗಳೆಲ್ಲರ ಪರವಾಗಿ ಶಾಲು ಹೊದೆಸಿ ಫಲಪುಷ್ಫ ಮತ್ತು ಶ್ರೀದೇವರ ಪ್ರಸಾದ ನೀಡಿದರು. ಮತ್ತು ಇಷ್ಷು ದಿನ ಅವರೊಂದಿಗೆ ಕೆಲಸ ಮಾಡಿದ ಸವಿನೆನಪಿಗಾಗಿ, ಪ್ರೀತಿಯ ಹಾಗೂ ಬಾಂದವ್ಯದ ಸಂಕೇತವಾಗಿ ಚಿನ್ನದ ಉಂಗುರವನ್ನು ತೊಡೆಸಿ ಗೌರವಿಸಿದರು.

            ಸನ್ಮಾನ ಸ್ವೀಕರಿಸಿದ G.S.ನಾರಾಯಣ ಹೇರ್ಳೆಯವರು 10 ವರ್ಷಗಳ ತಮ್ಮ ಅನುಭವನ್ನು ಹಂಚಿಕೊಂಡರು. ತಾನು ಏನಾದರು ಸಾಧನೆ ಮಾಡಿದ್ದಲ್ಲಿ ಅದಕ್ಕೆ ಶ್ರೀದೇವರ ಆರ್ಶೀವಾದ, ಅಂದಂದಿನ ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಅತಿ ಮುಖ್ಯವಾಗಿ ದೇವಳದ ಸಿಬ್ಬಂದಿಯವರ ಸಹಕಾರವೇ ಕಾರಣ ಎಂದರು. ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಸಹಕರಿಸಿದ ಎಲ್ಲರಿಗೆ ಕ್ರತಜ್ಞತೆಯನ್ನು ಸೂಚಿಸುತ್ತಾ  ನೂತನ ವ್ಯವಸ್ಪಾಪಕರ ನೇತ್ರತ್ವದಲ್ಲಿ ದೇವಳವು ಪ್ರಗತಿಯನ್ನು ಕಾಣುವಂತಾಗಲಿ , ಸಿಬಂಧಿಯವರ ಎಲ್ಲ ಸಮಸ್ಯೆಗಳಿಗೆ ನ್ಯಾಯೋಚಿತ ಪರಿಹಾರ ಸಿಗುವಂತಾಗಲೆಂದು ಹಾರೈಸಿದರು. ನೂತನ ವ್ಯವಸ್ಥಾಪಕ ಶ್ರೀಪರಮೇಶ್ವರ ಬಾಸ್ರಿಯವರು ಎಲ್ಲರ ಸಹಕಾರವನ್ನು ಬಯಸುತ್ತಾ ತನ್ನ ಇತಿಮಿತಿಯೊಳಗೆ ನೌಕರರ ಸಮಸ್ಯಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

           ಅಧ್ಯಕ್ಷ ಶ್ರೀ ಪಿ.ಜನಾರ್ದನ ಅಡಿಗರು ಎಲ್ಲರನ್ನೂ ಆರ್ಶೀವದಿಸುತ್ತಾ ಮುಖ್ಯವಾಗಿ ಶ್ರೀ ಹೇರ್ಳೆಯವರಿಗೆ ಶ್ರೀಗುರುನರಸಿಂಹ ಹಾಗೂ ಪರಿವಾರ ದೇವತೆಗಳ ಪೂರ್ಣಾನುಗ್ರಹ ಸದಾ ಇರಲೆಂದು ಶ್ರೀದೇವರಲ್ಲಿ ಪ್ರಾರ್ಥಿಸಿದರು.

DSC_0055

           ಶ್ರೀ ಕೆ.ಶಂಕರನಾರಾಯಣ ಹೊಳ್ಳರು ಕಾರ್ಯಕ್ರಮ ನಿರ್ವಹಣೆಯೊಂದಿಗೆ ಧನ್ಯವಾದ ಸಮರ್ಪಿಸಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.