Paraspara e-KootaBandhu for quicker news

20Feb/120

Donation

ದಿನಾಂಕ 29.01.2012ರಂದು ಸಾಲಿಗ್ರಾಮದ ನಾಗೇಶ ಪೈ ಇವರು ಶ್ರೀದೇವಳದ ಬ್ರಹತ್ ಅಭಿವ್ರದ್ಧಿ ಯೋಜನೆಗೆ ರೂ.1,25,000-00 ದೇಣಿಗೆ ನೀಡಿದರು. ದೇಣಿಗೆಯನ್ನು ಸ್ವೀಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

1

20Feb/120

Amarutanna Kuteera, Jalagara & Yagamantapa

ಸಾಲಿಗ್ರಾಮ :- ಶ್ರೀ ಬಿ.ವಾಸುದೇವ ಐತಾಳ ಮತ್ತು ಮಕ್ಕಳು ಶ್ರೀ ಚಂದ್ರಶೇಖರ ಐತಾಳರ ನೇತ್ರತ್ವದಲ್ಲಿ  ಅಮ್ರತಾನ್ನ ಕುಟೀರ (ನೈವೇಧ್ಯ ಕೋಣೆ)  ನವೀಕರಣಗೊಳಿಸಿ ಶ್ರೀದೇವರಿಗೆ ಸಮರ್ಪಿಸಿದರು. (ಅಂ.ಬೆಲೆ. ರೂ 40,000-00)

ಶ್ರೀ ಬಿ.ನಾರಾಯಣ ಐತಾಳ ಮತ್ತು ಮಕ್ಕಳು ಶ್ರೀ ಬಿ. ಶಿವಕಿರಣ ಐತಾಳರ ನೇತ್ರತ್ವದಲ್ಲಿ ಜಲಾಗಾರ (ಬಾವಿಕಟ್ಟೆ) ಮತ್ತು ಯಾಗಮಂಟಪದ ನವೀಕರಣ ಮಾಡಿ ಶ್ರೀದೇವರಿಗೆ ಸಮರ್ಪಿಸಿದರು. (ಅಂ.ಬೆಲೆ. 40,000-00)

28012012499

2801201249528012012502

ಶ್ರೀದೇವಳದ ಆಡಳಿತಮಂಡಳಿಯ ಸದಸ್ಯ ಶ್ರೀ ಆನಂತಪದ್ಮನಾಭ ಐತಾಳರು ಈ ಕೊಡುಗೆಯನ್ನು ಸ್ವೀಕರಿಸಿ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

20Feb/120

Pushpa Kannadi

ಸಾಲಿಗ್ರಾಮ :- ಹಿಂದಿನ ಆಡಳಿತ ಮಂಡಳಿಯ ಕಾರ್ಯದರ್ಶಿ  ಶ್ರೀ ಬಿ .ನಾರಾಯಣ ಸೋಮಯಾಜಿಯವರು ಶ್ರೀದೇವರ ಉತ್ಸವ ಮುರ್ತಿಯ ಹಿಂದಿನ ಪುಷ್ಫಕನ್ನಡಿಯ ನವೀಕರಣಕ್ಕೆ ರೂ.1,00,008-00 ದೇಣಿಗೆಯನ್ನು ನೀಡಿದರು.

NSOMAYAJI2NSOMAYAJI4ಶ್ರೀಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಭಾಸ್ಕರ ನಾವಡ ಮತ್ತು ಸಹಧರ್ಮದರ್ಶಿಗಳು ಈ ಕೊಡುಗೆಯನ್ನು ಸ್ವೀಕರಿಸಿ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

20Feb/120

Rajata Palaki Samarpane

ರಜತ ಪಲ್ಲಕಿ

ರಜತ ಪಲ್ಲಕಿ

ರೂ .95,000-00 ವೆಚ್ಚದಲ್ಲಿ ಬೆಳ್ಳಿ ಪಲ್ಲಕಿಯನ್ನು ಶ್ರೀಮತಿ ಇಂದಿರಾ ಮತ್ತು ಡಾ|| ಎ.ಎಸ್. ಕ್ರಷ್ಣಮುರ್ತಿ ಕಾರಂತ್ ಹಾಗೂ ಶ್ರೀಮತಿ ಶಾಂತಲಾ ಮತ್ತು ಶ್ರೀ ಮುರುಳೀಧರ ಕಾರಂತ ಬೆಂಗಳೂರು ಇವರು ನವೀಕರಣಗೊಳಿಸಿ ದಿನಾಂಕ 14.01.2012 ರಂದು ಶ್ರೀದೇವರಿಗೆ ಸಮರ್ಪಿಸಿದರು. ಈ ಕೊಡುಗೆಯನ್ನು ಸ್ವೀಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ದಿನಾಂಕ 25.01.2012 ರಂದು ಶ್ರೀಮತಿ ಶಾಂತಲಾ ಮತ್ತು ಶ್ರೀ ಮುರುಳೀಧರ ಕಾರಂತರು ಶ್ರೀದೇವಳದ ಬೆಳ್ಳಿರಥ ನಿರ್ಮಾಣಕ್ಕೆ 2.KG 100 ಗ್ರಾಂ (ಅಂ.ಬೆಲೆ.1,17,600-00) ಶ್ರೀದೇವರಿಗೆ  ಸಮರ್ಪಿಸಿದರು. ಈ ಕೊಡುಗೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಸ್ವೀಕರಿಸಿ ಇನ್ನು ಹೆಚ್ಚಿನ ಕೊಡುಗೆಯನ್ನು ಕೋಡುವಂತಾಗಲಿ ಎಂದು ಶ್ರೀದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ನೀಡಿ ಗೌರವಿಸಿದರು.

20Feb/120

Gana Yaga

ಸಾಲಿಗ್ರಾಮ :- ದಿನಾಂಕ 26.01.2012 ನೇ ಗುರುವಾರ ಸ್ವಸ್ತಿ ಶ್ರೀ ಖರನಾಮ ಸಂವತ್ಸರದ ಮಾಘ ಶುದ್ಧ ತದಿಗೆಯಂದು ಶ್ರೀಗುರುನರಸಿಂಹ ದೇವರ ಸನ್ನಿಧಿಯಲ್ಲಿ ವೇದಮೂರ್ತಿ ರಘೂರಾಮ ಸೋಮಯಾಜಿಯವರ ನೇತ್ರತ್ವದಲ್ಲಿ (1,111ಕಾಯಿ) ಏಕಾದಶೋತ್ತರ ಏಕಶತಾಧಿಕ ಏಕಸಹಸ್ರ ನಾಳಿಕೇರ ಮಹಾಗಣಪತಿಯಾಗ ಮತ್ತು ಸಹಸ್ರಾವರ್ತನ ಗಣಪತ್ಯಥರ್ವ ಶೀರ್ಶಜಪವನ್ನು ಶ್ರದ್ಧಾಪೂರ್ವಕವಾಗಿ ಶ್ರೀಮತಿ ಜಿ ಮಂಜುಳಾ ಮತ್ತು ಶ್ರೀ ಜಿ. ಪ್ರಕಾಶ ಮಯ್ಯ, ಹೊಟೇಲ್ ಇಂದ್ರಪ್ರಸ್ಥ ವಿಜಯನಗರ ಬೆಂಗಳೂರು ಇವರು ನಡೆಸಿಕೊಟ್ಟರು.

ಸಾಧಾರಣ 1,500 ಜನ ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು. ಈ ಮಹಾಯಾಗವನ್ನು ಯಾವುದೇ ರೀತಿಯ ತೊಂದರೆಯಿಲ್ಲದೆ ಅಚ್ಚುಕಟ್ಟಾಗಿ ಹಾಗೂ ಅದ್ಧೂರಿಯಾಗಿ ನೇರವೇರಲು ಪೌರಹಿತ್ಯ ವರ್ಗ, ಶ್ರೀದೇವಳದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯವರ ಸಹಕಾರವೇ ಕಾರಣ ಎಂದು ಪ್ರಕಾಶ ಮಯ್ಯರು ಕ್ರತಜ್ಞತೆ ಸಲ್ಲಿಸಿದರು.

ಈ ಶುಭ ಸಂಧರ್ಭದಲ್ಲಿ ಶ್ರೀದೇವಳದ ಬೆಳ್ಳಿರಥ ನಿರ್ಮಾಣಕ್ಕೆ 10.KG 50 ಗ್ರಾಂ ಬೆಳ್ಳಿ (ಅಂ.ಬೆಲೆ 5,62,800-00) ಶ್ರೀ ಜಿ.ಪ್ರಕಾಶ ಮಯ್ಯ ಮತ್ತು ದಂಪತಿಗಳು ಶ್ರೀದೇವರಿಗೆ ಸಮರ್ಪಿಸಿದರು. ಈ ಕೊಡುಗೆಯನ್ನು ಸ್ವೀಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಇಂತಹ ಒಂದು ಮಹಾಯಾಗವನ್ನು ಶ್ರೀದೇವಳದಲ್ಲಿ ಯಶಸ್ವಿಯಾಗಿ ಮಾಡಿದಿರಿ ಇದು ಬೇರೆಯವರಿಗೆ ಮಾರ್ಗದರ್ಶನವಾಗಿದೆ. ಇನ್ನೂ ಹೆಚ್ಚಿನ ಬ್ರಹತ್ ಯಾಗ ನಿಮ್ಮಿಂದ ನಡೆಯುವಂತಾಗಲಿ ಹಾಗೂ ಇನ್ನೂ ಹೆಚ್ಚಿನ ಕೊಡುಗೆಯನ್ನು ನೀಡುವಂತಾಗಲಿ ಎಂದು ಶ್ರೀದೇವರಲ್ಲಿ ಪ್ರಾರ್ಥಿಸುತ್ತಾ ಹಾರೈಸಿದರು.

20Feb/120

Nairutya Hora Powali Samarpane

ಸಾಲಿಗ್ರಾಮ :- ದಿನಾಂಕ 14.01.2012ರ ಶನಿವಾರ ನವೀಕರಣಗೊಂಡ ನೈರುತ್ಯ ಹೋರಪೌಳಿಯನ್ನು ವಾಸ್ತುಪೂಜೆ ಮತ್ತು ರಕ್ಷೋಘ್ನ ಹೋಮವನ್ನು ಮಾಡಿ ಶ್ರೀದೇವರಿಗೆ ಸಮರ್ಪಿಸಲಾಯಿತು. ಬ್ರಹತ್ ಮೊತ್ತದ ದೇಣಿಗೆ ನೀಡಿದ ಕಿರಿಮಂಜೇಶ್ವರವರ ಅಂಗಸಂಸ್ಥೆಯ ಪರವಾಗಿ ಅಧ್ಯಕ್ಷರಾದ ಶ್ರೀ ಬಿ.ಸುಬ್ರಮಣ್ಯ ನಾವಡ ಮತ್ತು ದಂಪತಿಯ ಯಜಮಾನತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ನೇರವೇರಿಸಲಾಯಿತು.

ವಾಸ್ತುಪೂಜೆ, ರಕ್ಷೋಘ್ನ ಹೋಮ

ವಾಸ್ತುಪೂಜೆ, ರಕ್ಷೋಘ್ನ ಹೋಮ

ಪೌಳಿ ಉಧ್ಘಾಟನೆ

ಪೌಳಿ ಉಧ್ಘಾಟನೆ

ಬ್ರಹತ್ ದೇಣಿಗೆ ನೀಡಿದ ಶ್ರೀ ಗುಂಡ್ಮಿ ರಾಘವೇಂದ್ರ ನಾವಡರು ಪೌಳಿಯನ್ನು ಉದ್ಘಾಟಿಸುವುದರು. ನಂತರ ಪಾನಕ ಪನೀವಾರವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ ಜಗದೀಶ ಕಾರಂತ್ ಮತ್ತು ಸಹಧರ್ಮದರ್ಶಿಗಳು, ಮತ್ತು ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

19Feb/120

Jatra Samskrtika Vaibhva

ಸಾಲಿಗ್ರಾಮ :- ಶ್ರೀಗುರುನರಸಿಂಹ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವದ ಅಂಗವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ 13.01.2012 ಸಂಜೆ 6.30 ಸರಿಯಾಗಿ ಮಾಡಲಾಯಿತು . ನಂತರ ಗೌರವಾರ್ಪಣಾ ಕಾರ್ಯಕ್ರಮದಲ್ಲಿ ಶ್ರೀದೇವಳದ ನಿತ್ಯಭೋಜನದ ಪ್ರಧಾನ ಬಾಣಸಿಗರಾದ ಶ್ರೀ ಜಿ ಸುಬ್ರಮಣ್ಯ ಐತಾಳರನ್ನು ಮತ್ತು ಹಿರಿಯ ಸ್ವಚ್ಛತಾ ಕೆಲಸಗಾರಳಾದ ಶ್ರೀಮತಿ ನಾಗು ದೇವಾಡಿಗ ಇವರುಗಳ ಸೇವಾತತ್ಪರತೆಯನ್ನು ಗಮನಿಸಿದ ಆಡಳಿತ ಮಂಡಳಿಯು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು

ಪ್ರಧಾನ ಬಾಣಸಿಗರಾದ ಶ್ರೀ ಸುಬ್ರಮಣ್ಯ ಐತಾಳ

ಪ್ರಧಾನ ಬಾಣಸಿಗರಾದ ಶ್ರೀ ಸುಬ್ರಮಣ್ಯ ಐತಾಳ

ಶ್ರೀಮತಿ ನಾಗು ದೇವಾಡಿಗ

ಶ್ರೀಮತಿ ನಾಗು ದೇವಾಡಿಗ

ನಂತರ ಶ್ರೀದೇವಳದ ನಿಗಮಾಗಮ ಪಾಠ ಶಾಲೆಯ ವೇದ ಹಾಗೂ ಆಗಮ ಅಧ್ಯಯನ ಪೂರ್ಣಗೊಂಡ ವಿದ್ಯಾರ್ಥಿಗಳಾದ ಶ್ರೀಸಂಜಯ ಕಾರಂತ, ಶಿವಾನಂದ ನಾವಡ ಮತ್ತು ವೇದ ಅಧ್ಯಯನ ಪೂರ್ಣಗೊಳಿಸಿದ ವಿದ್ಯಾರ್ಥಿಗಳಾದ ಶ್ರೀಸಂತೋಷ ಅಡಿಗ, ಅವಿನಾಶ ಎಚ್.ಎಸ್. ಇವರುಗಳಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಶ್ರೀಅವಿನಾಶ್ ಎಚ್.ಎಸ್., ಶ್ರೀಸಂತೋಷ ಅಡಿಗ, ಶ್ರೀಶಿವಾನಂದ ನಾವಡ, ಸಂಜಯ ಕಾರಂತ

ಶ್ರೀಅವಿನಾಶ್ ಎಚ್.ಎಸ್., ಶ್ರೀಸಂತೋಷ ಅಡಿಗ, ಶ್ರೀಶಿವಾನಂದ ನಾವಡ, ಶ್ರೀಸಂಜಯ ಕಾರಂತ

ನಂತರ ನೆರೆದ ಸಾವಿರಾರು ಪ್ರೇಕ್ಷಕರಿಗೆ ಶ್ರೀ ಚಾಂತಾರು ಗೋವಿಂದ ಹೆಬ್ಬಾರು ಲಘು ಉಪಹಾರ, ಪಾನೀಯವನ್ನು ವಿತರಿಸಿದರು.

7-30 ರಿಂದ ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಮಹಿಳಾ ವೇದಿಕೆಯ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳಿಂದ ನೆರೆದ ಪ್ರೇಕ್ಷಕರ ಮನರಂಜಿಸಿದರು.

ಕೂ.ಮ.ಜ.ಸಾಲಿಗ್ರಾಮ ಮಹಿಳಾವೇದಿಕೆ ಸದಸ್ಯೆಯರಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ

ಕೂ.ಮ.ಜ.ಸಾಲಿಗ್ರಾಮ ಮಹಿಳಾವೇದಿಕೆ ಸದಸ್ಯೆಯರಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ

14-01-2012 :- ಸಂಜೆ 6.30 ರಿಂದ ತಂಜಾವೂರು ಶೈಲಿ ಭರತನಾಟ್ಯವನ್ನು ರಂಜಿತಾ ಹೆಬ್ರಿ ನಡೆಸಿಕೊಟ್ಟರು, ನಂತರ ವಿವಿಧ ನ್ರತ್ಯವನ್ನು ಶ್ರೀರಾಧಕ್ರಷ್ಣ ನ್ರತ್ಯನೀಕೇತನ ಉಡುಪಿ ಇವರು ನಡೆಸಿಕೊಟ್ಟರು, ಕೊನೆದಾಗಿ ಶ್ರೀಕಾಂತ ಪೈ ಮತ್ತು ಬಳಗದವರಿಂದ ಭಕ್ತಿ ರಸಮಂಜರಿಯನ್ನು ನಡೆಸಿಕೊಟ್ಟರು.

ರಂಜಿತಾ ಹೆಬ್ರಿ (ತಂಜಾವೂರು ಶೈಲಿ ಭರತನಾಟ್ಯ)

ರಂಜಿತಾ ಹೆಬ್ರಿ (ತಂಜಾವೂರು ಶೈಲಿ ಭರತನಾಟ್ಯ)

ಶ್ರೀ ರಾಧಾಕ್ರಷ್ಣ ನ್ರತ್ಯನೀಕೇತನ ಉಡುಪಿ ಇವರಿಂದ ನ್ರತ್ಯ ವೈವಿಧ್ಯ

ಶ್ರೀ ರಾಧಾಕ್ರಷ್ಣ ನ್ರತ್ಯನೀಕೇತನ ಉಡುಪಿ ಇವರಿಂದ ನ್ರತ್ಯ ವೈವಿಧ್ಯ

15.01.2012 :-ಸಂಜೆ 6.30 ರಿಂದ  ಶ್ರೀಮತಿ ಪ್ರಮದಾ ಆದಿತ್ಯ ಮಂಟಪ ಇವರು ಕಥಕ್ ನ್ರತ್ಯವನ್ನು ನಡೆಸಿಕೊಟ್ಟರು.

ಕಥಕ್ ನ್ರತ್ಯ ಪ್ರಮದಾ ಆದಿತ್ಯ ಮಂಟಪ ಇವರಿಂದ

ಕಥಕ್ ನ್ರತ್ಯ ಪ್ರಮದಾ ಆದಿತ್ಯ ಮಂಟಪ ಇವರಿಂದ

ರಾತ್ರಿ 8-ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಅಧ್ಯಕ್ಷರಾಗಿ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತ, ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ಕೆ ರಾಜು ಪೂಜಾರಿ, ಮತ್ತು ಶ್ರೀದೇವಳದ ಸಹ ಧರ್ಮದರ್ಶಿಗಳು ವೇದಿಕೆಯನ್ನು ಅಲಂಕರಿಸಿದ್ದರು. ಈ ಶುಭ ಸಂದರ್ಭದಲ್ಲಿ ಶ್ರೀದೇವಳದ ಆಡಳಿತ ಮಂಡಳಿ ಪ್ರತಿ ವರ್ಷದಂತೆ ಈ ಬಾರಿಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಾರ್ಪಣೆಯನ್ನು ಆಯೋಜಿಸಿ ಖ್ಯಾತ ಸೌರವಿದ್ಯುತ್ ತಜ್ಞ ಮ್ಯಾಗಸ್ಸೆ ಪ್ರಶಸ್ತಿ ಪುರಸ್ಕ್ರತ  ಡಾ|| ಹರೀಶ ಹಂದೆ, ಖ್ಯಾತ ಏಕವ್ಯಕ್ತಿ ಯಕ್ಷಗಾನ ಕಲಾವಿದ ಶ್ರೀ ಪಿ. ಮಂಟಪ ಪ್ರಭಾಕರ ಉಪಾಧ್ಯ, ವಿಕಲಚೇತನ ಈಜುಪಟು ಶ್ರೀ ಪ್ರಕಾಶ ಖಾರ್ವಿ, ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಿದ್ವಾನ ಏಚ್.ಎಸ್.ನಾಗರಾಜ ರನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಅಲ್ಲದೆ ಯುವ ವಿಜ್ಞಾನಿ ಕುಮಾರಿ ತ್ರಪ್ತಿ ಕೆ.ಆರ್‍, ಹಿರಿಯರ ರಾಷ್ಟ್ರೀಯ ಈಜು ಸ್ಪರ್ಧಿಯಲ್ಲಿ 4 ಬಹುಮಾನ ಪಡೆದ 60 ರ ಯುವಕ ಶ್ರೀಗೋಪಾಲ ಅಡಿಗ ಪಾರಂಪಳ್ಳಿ ಇವರನ್ನು ಶ್ರೀದೇವರ ಪ್ರಸಾದ ನೀಡಿ ಸನ್ಮಾನಿಸಲಾಯಿತು.

ಡಾ|| ಎಚ್.ಹರೀಶ ಹಂದೆ

ಡಾ|| ಎಚ್.ಹರೀಶ ಹಂದೆ

ಶ್ರೀ ಪಿ.ಮಂಟಪ ಪ್ರಭಾಕರ ಉಪಾಧ್ಯ

ಶ್ರೀ ಪಿ.ಮಂಟಪ ಪ್ರಭಾಕರ ಉಪಾಧ್ಯ

ಶ್ರೀ ಪ್ರಕಾಶ ಖಾರ್ವಿ

ಶ್ರೀ ಪ್ರಕಾಶ ಖಾರ್ವಿ

ವಿದ್ವಾನ್ ಶ್ರಂಗೇರಿ ಎಚ್. ನಾಗರಾಜ್  ಶಿವಮೊಗ್ಗ

ವಿದ್ವಾನ್ ಶ್ರಂಗೇರಿ ಎಚ್. ನಾಗರಾಜ್ ಶಿವಮೊಗ್ಗ

ಕುಮಾರಿ ತ್ರಪ್ತಿ ಕೆ.ಆರ್‍

ಕುಮಾರಿ ತ್ರಪ್ತಿ ಕೆ.ಆರ್‍

ಶ್ರೀ ಪಾರಂಪಳ್ಳಿ ಗೋಪಾಲ ಅಡಿಗ

ಶ್ರೀ ಪಾರಂಪಳ್ಳಿ ಗೋಪಾಲ ಅಡಿಗ

ನಂತರ ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಮಹಿಳಾ ವೇದಿಕೆ ಶ್ರಂಗೇರಿ ಅಂಗಸಂಸ್ಥೆ ಇದರ ಸದಸ್ಯೆಯರು ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶ್ರೀರಾಮಚಂದ್ರ ಐತಾಳ ಮತ್ತು ಸಂಗಡಿಗರಿಂದ ವೀಣಾವಾದನ

ಶ್ರೀರಾಮಚಂದ್ರ ಐತಾಳ ಮತ್ತು ಸಂಗಡಿಗರಿಂದ ವೀಣಾವಾದನ

16.01.2012 :-  ಸಂಜೆ 6.30 ರಿಂದ ಓಲಗ ಮಂಟಪದಲ್ಲಿ ಶ್ರೀಪಾರಂಪಳ್ಳಿ ರಾಮಚಂದ್ರ ಐತಾಳ ಮತ್ತು ಸಂಗಡಿಗರು ವೀಣಾವಾದನವನ್ನು ನಡೆಸಿಕೊಟ್ಟರು. 9.30ರಿಂದ ಶ್ರೀ ಅಮ್ರತೇಶ್ವರಿ ಯಕ್ಷಗಾನ ಮಂಡಳಿ, ಕೋಟ ಇವರಿಂದ ಯಕ್ಷಗಾನವನ್ನು ನಡೆಸುವುದರ ಮುಲಕ ಜಾತ್ರೆಯ ಸಾಂಸ್ಕ್ರತಿಕ ವೈಭವ ಕೊನೆಗೊಂಡಿತು.

9Feb/120

Saligrama Habba

ಸಾಲಿಗ್ರಾಮ :- ‌ ಶ್ರೀಗುರುರನರಸಿಂಹ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವು  ದಿನಾಂಕ 16.01.12 ರಂದು ಅದ್ದೂರಿಯಾಗಿ ನೇರವೇರಿತು ಎಂದು ಹೇಳಲು ಸಂತೋಷವಾಗುತ್ತಿದೆ. ಈ ಯಶಸ್ಸಿಗೆ ಶ್ರೀದೇವಳದ ಎಲ್ಲಾ ಭಕ್ತರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರವೇ ಕಾರಣ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎ. ಜಗದೀಶ ಕಾರಂತರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

guru

ಜಾತ್ರೆಯ ಪೂರ್ವಭಾವಿಯಾಗಿ ದಿನಾಂಕ 13.01.12 ರ ಸಂಜೆ ಮಹೂರ್ತಬಲಿಯನ್ನು ಮಾಡಲಾಯಿತು.

ದಿನಾಂಕ 14.01.12ರ ಮಕರ ಸಂಕ್ರಮಣ ಪ್ರಯುಕ್ತ ಗಣಹೋಮ, ನರಸಿಂಹ ಹೋಮ, ಮಧ್ಯಾಹ್ನ ಉತ್ಸವಬಲಿ, ಪುಷ್ಫರಥೋತ್ಸವನ್ನು ನೇರವೇರಿಸಲಾಯಿತು.

ಸಂಜೆ ಕಾರ್ಕಡ ಗ್ರಾಮಸ್ಥರಿಂದ (ತೆಂಕುಹೋಳಿ) ಧ್ವಜಮರ (ಅಡಕೆಮರ) ಹಾಗೂ ಚಿತ್ರಪಾಡಿ ಗ್ರಾಮಸ್ಥರಿಂದ ಬಾಳೆಮರವನ್ನು ಪೂಜಿಸಿ ಮೆರವಣಿಗೆಯಲ್ಲಿ ತಂದು ಶ್ರೀದೇವಳದ ಧ್ವಜಸ್ತಂಭಕ್ಕೆ ಏರಿಸಲಾಯಿತು.

DSC_0110

ಧ್ವಜ(ಅಡಕೆ ಮರ) ಮೆರವಣೆಗೆಯಲ್ಲಿ ತರುವುದು

DSC_0126

ಗರುಡಪಟ (ಧ್ವಜ) ಪೂಜೆ

DSC_0157

ಧ್ವಜಾರೋಹಣ

ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ನೇರವೇರಿಸಿ ಧ್ವಜಸ್ತಂಭಕ್ಕೆ ಕಲಶಾಭಿಷೇಕ ಹಾಗೂ ಪೂಜೆಯನ್ನು ಮಾಡಿ ಧ್ವಜವನ್ನು (ಗರುಡ ಪಟ) ವನ್ನು ಏರಿಸಲಾಯಿತು. ನಂತರ ಶ್ರೀದೇವರಿಗೆ ಕಿರಿರಂಗಪೂಜೆ (ಶ್ರೀಮತಿ ಚಂದ್ರಮತಿ ಮತ್ತು ಮಕ್ಕಳಿಂದ AP} ಮತ್ತು ಉತ್ಸವಬಲಿಯನ್ನು ಮಾಡಲಾಯಿತು.

ದಿನಾಂಕ 15.01.2012 :- ಬೆಳಗ್ಗೆ ಋಕ್ಸಂಹಿತಾ ಪಾರಾಯಣ ಮತ್ತು ಸಹಿಂತಾಭಿಷೇಕದೊಂದಿಗೆ ಮಹಾಪೂಜೆಯನ್ನು ಶ್ರೀದೇವರಿಗೆ ಮಾಡಲಾಯಿತು.  ಮಧ್ಯಾಹ್ನದ ಅನ್ನಸಂತರ್ಪಣೆಯನ್ನು ಶ್ರೀಮತಿ ಸುಲೋಚನಾ ಉಪಾಧ್ಯ ಮತ್ತು ಮನೆಯವರು ಜನತಾ ಕಾಫಿ ಸಪ್ಲಾಯಿಸ್ ಬೆಂಗಳೂರು ಇವರು ನೇರವೇರಿಸಿಕೊಟ್ಟರು.

DSC_0069

ಉತ್ಸವ

ಸಂಜೆ ಬಯನಬಲಿ, ಚಂಡೆಸುತ್ತುಸೇವೆ, ಕಟ್ಟೆ ಓಲಗ, ರಜತ ಪಲ್ಲಕಿ ಉತ್ಸವನ್ನು ಮಾಡಿ ಹಿರಿರಂಗಪೂಜೆ ಮತ್ತು ಪುಷ್ಠರಥೋತ್ಸವನ್ನು ಮಾಡಲಾಯಿತು.

ಅಶ್ವತಕಟ್ಟೆ ಪೂಜೆ

ಅಶ್ವತಕಟ್ಟೆ ಪೂಜೆ

ದಿನಾಂಕ 16.01.2012 :-   ರಥಶುದ್ಧಿ ನವಗ್ರಹಹೋಮ, ಕಲಾತತ್ವಹೋಮ, ಕಲಾಶಾಭಿಷೇಕ, ಸವಾರಿ, ನಿತ್ಯಬಲಿ ಮಾಡಿ, ಮಹಾಪೂಜೆಯನ್ನು ನೇರವೇರಿಸಿ ಉತ್ಸವಬಲಿ ಹಾಗೂ ಚಂಡೆಸುತ್ತುಸೇವೆಯೊಂದಿಗೆ 10-15 ರ ಕುಂಭಲಗ್ನದಲ್ಲಿ ರಥಾರೋಹಣವನ್ನು ಮಾಡಿ ವಿಶೇಷಪೂಜೆಯನ್ನು ಮತ್ತು ಧಾರ್ಮಿಕವಿಧಿವಿಧಾನಗಳನ್ನು ಪೂರೈಸಿ ನೆರದಿದ್ದ ಭಕ್ತರು ಭಕ್ತಿಪೂರ್ವಕವಾಗಿ ರಥವನ್ನು ಎಳೆಯಲಾಯಿತು.

ಸುತ್ತುಸೇವೆ

ಸುತ್ತುಸೇವೆ

ರಥಾವರೋಹಣ

ರಥಾವರೋಹಣ

ಬ್ರಹ್ಮರಥ

ಬ್ರಹ್ಮರಥ

ನೆರದಿದ್ದ ಭಕ್ತರ ಬಿಸಿಲಿನ ಬೇಗೆಯನ್ನು ತಣಿಸಲು ಪ್ರತಿ ವರ್ಷದಂತೆ ಬೆಂಗಳೂರಿನ ಓರ್ವ ಭಕ್ತ ಮತ್ತು ಐರೋಡಿ ವೈಕುಂಠ ಕಾರಂತರ ಸ್ಮರಣಾರ್ತ ಮಕ್ಕಳು ಪಾನಕ ವಿತರಣೆ ಮಾಡಿದರು. ಮಧ್ಯಾಹ್ನದ ಅನ್ನಸಂತರ್ಪಣೆಯನ್ನು ಶ್ರೀಮತಿ ಜಯಲಕ್ಷ್ಮೀ ಯಜ್ಞನಾರಾಯಣ ಹೇರ್ಳೆ ಇವರು ನೇರವೆರಿಸದರು. ಸಾಧಾರಣ ನಾಲ್ಕು ಸಾವಿರ ಜನ ಭೋಜನಪ್ರಸಾದವನ್ನು ಸ್ವೀಕರಿಸದರು.

ಅನ್ನದಾನ

ಭೋಜನಪ್ರಸಾದ

ಸಂಜೆ 6.ಕ್ಕೆ ನೆರದಿದ್ದ ಸಹಸ್ರಾರು ಭಕ್ತರ ಸಹಕಾರದೊಂದಿಗೆ ಬ್ರಹ್ಮರಥವನ್ನು ಶ್ರೀಆಂಜನೇಯ ದೇವಸ್ಥಾನದವರೆಗೆ ಎಳೆದು ನಂತರ ತಿರುಗಿ ಶ್ರೀದೇವಳಕ್ಕೆ ಬರುವುದರ ಮೂಲಕ ರಥಾವರೋಹಣವನ್ನು ಮಾಡಲಾಯಿತು.

ಬ್ರಹ್ಮರಥೋತ್ಸವ

ಬ್ರಹ್ಮರಥೋತ್ಸವ

ನಂತರ  ಶ್ರೀದೇವರ ಉತ್ಸವಮುರ್ತಿಯನ್ನು ರಜತಪಲ್ಲಕಿಯ ಮೆರವಣಿಗೆಯಲ್ಲಿ ಓಲಗಮಂಟಪದಲ್ಲಿ ಕುಳ್ಳಿರಿಸಿ ಅಷ್ಟವಧಾನ ಸೇವೆಯನ್ನು ಮಾಡಲಾಯಿತು. ಅಷ್ಟವಧಾನದ ಪ್ರಯುಕ್ತ ಶ್ರೀಪಾರಂಪಳ್ಳಿ ರಾಮಚಂದ್ರ ಐತಾಳ ಮತ್ತು ಸಂಗಡಿಗರಿಂದ ವೀಣಾವಾದನ ಸೇವೆಯನ್ನು ಮಾಡಲಾಯಿತು.  ನಂತರ ನೆರದಿದ್ದ ಸಹಸ್ರ ಸಂಖ್ಯೆಯ ಭಕ್ತಾದಿಗಳಿಗೆ ಎಂ ಸೂರ್ಯನಾರಾಯಣ ಮಯ್ಯ ನ್ಯಾಯವಾದಿ ಉಡುಪಿ ಇವರು ವಸಂತೋತ್ಸವವನ್ನು ಮಾಡಿ ಪನ್ಯಾರ ಹಾಗೂ ಪಾನಕವನ್ನು ವಿತರಣೆ ಮಾಡಿದರು. ನಂತರ ನಿತ್ಯಬಲಿ, ಭೂತಬಲಿ, ಶಯನೋತ್ಸವದೊಂದಿಗೆ ಅಂದಿನ ಧಾರ್ಮಿಕ ಕಾರ್ಯಕ್ರಮಗಳನ್ನು ಮುಕ್ತಾಯಗೊಂಡಿತು.

ಓಲಗಮಂಟಪ

ಓಲಗಮಂಟಪ

ದಿನಾಂಕ 17.01.2012 :- ಬೆಳಗ್ಗೆ 8-00 ಕ್ಕೆ ಪ್ರಭೋದೋತ್ಸವನ್ನು  ಮಾಡುವುದರ ಮುಲಕ ಶ್ರೀದೇವರನ್ನು ಶಯನದಿಂದ ಎಳಿಸಲಾಯಿತು.

ಪ್ರಬೋದೋತ್ಸವ

ಪ್ರಬೋದೋತ್ಸವ

ಉತ್ಸವಮುರ್ತಿ (ಬಲಿಮುರ್ತಿ)

ಉತ್ಸವಮುರ್ತಿ (ಬಲಿಮುರ್ತಿ)

ಸಂಜೆ 6-00 ಕ್ಕೆ ನಿತ್ಯ ಬಲಿ ಹಾಗೂ ಉತ್ಸವಬಲಿಯನ್ನು ಮಾಡಿ ಓಕುಳಿಯನ್ನು ಮತ್ತು ಓಲಗ ಮಂಟಪಸೇವೆಯನ್ನು ಮಾಡಿ ಮೆರವಣಿಗೆಯೊಂದಿಗೆ ಕೋಟದ ಶ್ರೀಹಂದೆಮಹಾಗಣಪತಿ ದೇವಸ್ಥಾನಕ್ಕೆ ಹೋಗಿ ವರುಣಹೋಮ ಹಾಗೂ ಕೆರೆಯಲ್ಲಿ ಅಭವ್ರತ ಸ್ನಾನವನ್ನು ಶ್ರೀದೇವರಿಗೆ ಮಾಡಿ ಓಲಗಮಂಟಪ ಸೇವೆ, ಅಷ್ಟವಧಾನ ಸೇವೆಯನ್ನು ಮಾಡಿ, ನಂತರ ಉತ್ಸವ ಹೊರಟು ದಾರಿಯಲ್ಲಿ ಹಲಾವರು ಸಾಂಪ್ರದಾಯಿಕ ಕಟ್ಟೆಪೂಜೆಯನ್ನು ಮಾಡಿಕೊಂಡು ಶ್ರೀದೇವಳಕ್ಕೆ ಮರುಳಲಾಯಿತು. ನಂತರ ಹೋಮದ ಪೂರ್ಣಾಹುತಿ ಹಾಗೂ ಹಲವು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಧ್ವಜಾವರೋಹಣವನ್ನು (ಗರುಡಪಟ) ಮಾಡಲಾಗಿ, ಶ್ರೀದೇವರ ಉತ್ಸವು ಶ್ರೀದೇವಳದ ಓಲಗೆ ಪ್ರವೇಶಿಸಿ ಶ್ರೀದೇವರಿಗೆ ಮಹಾಮಂಗಳಾರತಿಯನ್ನು ಮಾಡಲಾಯಿತು. ನಂತರ ಮಂತ್ರಾಕ್ಷತೆಯನ್ನು ಮಾಡಿ ಶ್ರೀದೇವರ ಬ್ರಹ್ಮರಥೋತ್ಸವದ ಕಾರ್ಯಕ್ರಮದ ಸಮಾಪನೆಗೊಳಿಸಲಾಯಿತು.

ದಿನಾಂಕ :- 18.01.2012 ರಂದು ಸಂಪ್ರೋಕ್ಷಣೆಯನ್ನು ಮಾಡಲಾಯಿತು.

ಶ್ರೀಆಂಜನೇಯ ಸ್ವಾಮಿ

ಶ್ರೀಆಂಜನೇಯ ಸ್ವಾಮಿ

ಶ್ರೀಮಹಾಗಣತಿ ದೇವರು

ಶ್ರೀಮಹಾಗಣತಿ ದೇವರು

ಶ್ರೀದುರ್ಗಾಪರಮೇಶ್ವರಿ ದೇವರು

ಶ್ರೀದುರ್ಗಾಪರಮೇಶ್ವರಿ ದೇವರು