Paraspara e-KootaBandhu for quicker news

1Jul/120

Anjaneya Jayanthi

ಶ್ರೀದೇವಳದ ಉಪಸನ್ನಿಧಿ ಹಾಗೂ ಭಕ್ತರಿಂದ ಬಹುಮುಖ ಸೇವೆಯನ್ನು ಪಡೆಯುತ್ತಾ ಅವರನ್ನು ಅನುಗ್ರಹಿಸುತ್ತಿರುವ ಶ್ರೀ ಹನುಮಂತನ ಸನ್ನಿಧಿಯಲ್ಲಿ ದಿನಾಂಕ 06-04-2012 ರಂದು ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಂದು ಸೂರ್ಯೋದಯಕ್ಕೆ ಸರಿಯಾಗಿ ನವಕ ಪ್ರಧಾನ ಕಲಾಶಾಭಿಷೇಕ ಹೋಮಗಳನ್ನು  ನೇರವೇರಿಸಲಾಯಿತು.

ಸಂಜೆ ಮಹಾರಂಗಪೂಜೆ ಹಾಗೂ ರಥಬೀದಿಯುದ್ಧಕ್ಕೂ ಕರ್ಪೂರ ದೀಪಗಳ ಸಾಲು ಅತ್ಯಂತ ಮನೋಹರವಾಗಿತ್ತು. ಸಾವಿರಾರು ಜನರು ಈ ಸೇವೆಯಲ್ಲಿ ಪಾಲ್ಗೋಂಡಿದ್ದರು. ಶ್ರೀದೇವಳದ ವತಿಯಿಂದ ಪಾನಕ ಪನೀವಾರ ಹಾಗೂ ಆಂಜನೇಯ ಸೇವಾ ಸಮಿತಿಯವರ ವಿಶೇಷ ಸಿಹಿತಿಂಡಿ ಹಣ್ಣುಗಳ ವಿತರಣೆ ಹಾಗೂ ಸ್ಥಳಿಯ ಸಂಘದವರಿಂದ ಮನೋರಂಜನಾ ಕಾರ್ಯಕ್ರಮಗಳು ನೇರವೇರಿದವು

1Jul/120

Narasimha Jayanthi

ನರಸಿಂಹ ಜಯಂತಿ :- ದಿನಾಂಕ  04-05-2012 ರಂದು ಶ್ರೀದೇವಳದಲ್ಲಿ ನರಸಿಂಹ ಜಯಂತಿಯು ಸಂಭ್ರಮದಿಂದ ಆಚರಿಸಲ್ಪಟ್ಟಿತು. ಬೆಳಗಿನಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. , ಬೆಳಿಗ್ಗೆ ಸಂಹಿತಾಭಿಷೇಕ, ನರಸಿಂಹ ಹೋಮಗಳು ವಿಧಿವತ್ತಾಗಿ ನಡೆದವು, ಮಧ್ಯಾಹ್ನ ವಿಶೇಷ ಪೂಜೆಯೊಂದಿಗಎ ಮಹಾಮಂಗಳಾರತಿ  ನಿತ್ಯ ಬಲಿ ಮುಗಿದೊಡನೆ ಎಲ್ಲಾರೂ ಕೂಡಿ ಭೋಜನ ಪ್ರಸಾದ ಸ್ವೀಕರಿಸಿದರು.

ಸಂಜೆ 6--00 ಗಂಟೆಗೆ ಪಂಚಾಮ್ರತ ಸಹಿತ ವಿಶೇಷ ಪೂಜೆ ಓಲಗ ಮಂಟಪದಲ್ಲಿ ಅಷ್ಟಾವಧಾನ ಸೇವೆಗಳು ಶಾಸ್ತ್ರೋಕ್ತವಾಗಿ  ನಡೆದವು ,ಅಪಾರ ಸಂಖ್ಯೆಯಲ್ಲಿ ನೆರೆದ ಜನರಿಗೆ ಪಾನಕ ಪನೀವಾರವನ್ನು ವಿತರಿಸಲಾಯಿತು.

ರಾತ್ರಿ 8-00 ಗಂಟೆಗೆ ಹಿರಿರಂಗಪೂಜೆ, ಉತ್ಸವ ಬಲಿ, ಪುಷ್ಫರಥೋತ್ಸವ, ನಡೆದು ಮಂತ್ರಾಕ್ಷತೆಯೊಂದಿಗೆ ಉತ್ಸವಕ್ಕೆ ಮಂಗಲ ಹಾಡಲಾಯಿತು.  ನರಸಿಂಹ ಜಯಂತಿಯ ಅದ್ದೂರಿಯ ಆಚರಣೆಗಾಗಿ ಶ್ರೀಗುರುಪ್ರಸಾದ ಕಾರಂತ ಬೆಂಗಳೂರು ಕಾರ್ಯಕ್ರಮದ ಹಿರಿತನವಹಿಸಿದ್ದರು. ಸಂಜೆ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ ಶ್ರೀಸಾಲಿಗ್ರಾಮ ಕ್ಷೇತ್ರ ಮಹಾತ್ಮೆ ಎನ್ನವ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಿದರು.