Paraspara e-KootaBandhu for quicker news

1Aug/120

Shravana Shanivara

ಸಾಲಿಗ್ರಾಮ :- ದಿನಾಂಕ 21.07.12 & 28.07.12 & 04.08.12 & 11.08.2012 ರ 4 ಶನಿವಾರಗಳು ಶ್ರೀದೇವಳದಲ್ಲಿ ವಿಶೇಷ ದಿನಗಳಾಗಿದ್ದು ಶ್ರಾವಣ ಶನಿವಾರ ಎಂದೆ ಪ್ರಸಿದ್ದಿ ಹೊಂದಿದೆ ಈ ಎಲ್ಲಾ ದಿನಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವರಿಗೆ ಸೇವೆ ಸಲ್ಲಿಸಿದರು. ಈ ವಾತವಾರಣವು ಸಾಲಿಗ್ರಾಮ ಹಬ್ಬದ ನೆನಪನ್ನು ಮಾಡುವಂತಿತ್ತು ಎಲ್ಲಾ ದಿನಗಳಲ್ಲಿ ಸಾವಿರ ಸಂಖ್ಯೆಯ ಭಕ್ತರು ಭೋಜನ ಪ್ರಸಾದವನ್ನು ಸ್ವೀಕರಿಸಿದರು. ಕೊನೆಯ ಶ್ರಾವಣ ಶನಿವಾರ ಸುಮಾರು 5,000 ಜನ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

ಶ್ರಾವಣ ಸಂಜೆ :- 21.07.12ರ ಶ್ರಾವಣ ಶನಿವಾರದಂದು ಶ್ರೀಗುರುನರಸಿಂಹ ದೇವಸ್ಥಾನ, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಅಂಗಸಂಸ್ಥೆ :- ಸಾಲಿಗ್ರಾಮ, ರಂಗ ಬಳಗ ಕೋಟ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀದೇವಳದ ಜ್ಞಾನಮಂದಿರದಲ್ಲಿ ಯಕ್ಷಗಾನ ಮೇಳದ ಯಜಮಾನರೆಂದು ಪ್ರಸಿದ್ದಿ ಹೊಂದಿದ ಪಾರಂಪಳ್ಳಿ ಶ್ರೀಶ್ರೀಧರ ಹಂದೆ ಸಂಸ್ಮರಣೆ ಹಾಗೂ ತಾಳಮದ್ದಲೆ (ಪ್ರಸಂಗ :- ಸತ್ಯ ಹರಿಶ್ಚಂದ್ರ ) ನಡೆಸಿಕೊಡಲಾಯಿತು. ಸುಮಾರು 300  ಜನ ಪ್ರೇಕ್ಷಕರು ಈ ಕಾರ್ಯಕ್ರಮವನ್ನು ವಿಕ್ಷಿಸಿದರು.

DSC02023

Comments (0) Trackbacks (0)

No comments yet.


Leave a comment


No trackbacks yet.