Paraspara e-KootaBandhu for quicker news

2Oct/120

SHAKALA RUK SAHINTHA YAGA

ಶಾಕಲಾ ಋಕ್ ಸಂಹಿತಾ ಮಹಾ ಯಾಗ :- ದಿನಾಂಕ 17.11.2012 ರಿಂದ 25.11.2012ರವರೆಗೆ ಶ್ರೀದೇವಳದಲ್ಲಿ ಬೆಂಗಳೂರಿನ "ಇಂದ್ರಪ್ರಸ್ಥ" ಶ್ರೀ ಪ್ರಕಾಶ ಮಯ್ಯ ಇವರಿಂದ ಶಾಕಲ ಋಕ್ ಸಹಿಂತಾ ಯಾಗವನ್ನು ಮಾಡಿಸಲಿದ್ದಾರೆ ಎಲ್ಲಾ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಶ್ರೀ ಪ್ರಕಾಶ ಮಯ್ಯ ಮತ್ತು ಶ್ರೀದೇವಳದ ಆಡಳಿತ ಮಂಡಳಿ ಕೋರಿದೆ.

2Oct/120

Sampradyika Dharmika Karykramagla Munnota

  • ತುಲಾ ಸಂಕ್ರಾಂತಿ :- ದಿನಾಂಕ 17.10.2012, ಗಣಹೋಮ ಉತ್ಸವ ಬಲಿ
  • ನವರಾತ್ರಿ :- ದಿನಾಂಕ 16.10.2012 ರಿಂದ 23.10.2012 ರವರೆಗೆ ಶ್ರೀದುರ್ಗಾಪರಮೇಶ್ವರಿ ದೇವರಿಗೆ ವಿಶೇಷ ಪೂಜೆ, ಪ್ರತಿ ದಿನ ಚಂಡಿಕಾ ಸಪ್ತಶತಿ ಪಾರಾಯಣ
  • ದುರ್ಗಾ ಹೋಮ :- 21.10.2012 ರಂದು ಕಿರಿಮಂಜೇಶ್ವರ ಸುಬ್ರಮಣ್ಯ ನಾವಡರಿಂದ, 22.10.2012 ರಂದು ಬೆಂಗಳೂರು ವಾಸುದೇವ ಮಧ್ಯಸ್ಥರಿಂದ (ಶಾಶ್ವತ) ಸೇವೆ.
  • ಶಾರದಾ ಪೂಜೆ :- 20.10.2012
  • ಕಿರಿರಂಗಪೂಜೆ ಪಲ್ಲಕಿ ಉತ್ಸವ :- ದಿನಾಂಕ 23.10.2012ರ ರಾತ್ರಿ ಐರೋಡಿ ಪಲ್ಲಕಿ ಕಾರಂತ ಕುಟುಂಬಸ್ಥರಿಂದ (ಶಾಶ್ವತ) ಸೇವೆ.
  • ವಿಜಯದಶಮಿ :- ದಿನಾಂಕ 24.10.2012
  • ದೀಪಾವಳಿ :- ದಿನಾಂಕ 12.11.2012 ರಂದು ನರಕ ಚತುರ್ದಶಿ, ದಿನಾಂಕ 13.11.2012ರಂದು ದೀಪಾವಳಿ ಬಲೀಂದ್ರ ಪೂಜೆ
  • ವ್ರಶ್ಚಿಕ ಸಂಕ್ರಾಂತಿ :- ದಿನಾಂಕ 16.11.2012 ರಂದು ಗಣಹೋಮ ಉತ್ಸವ ಬಲಿ
  • ಉತ್ಥಾನ ದ್ವಾದಶಿ ಕ್ಷೀರಾಬ್ದಿ ಪೂಜೆ (ತುಳಸಿ ಪೂಜೆ ) :- ದಿನಾಂಕ 25.11.2012ರ ಸಂಜೆ
  • ಮುಡುಗಣಪತಿ ಸೇವೆ :- 28.11.2012 ರಂದು ರಾತ್ರಿ ಸಾವಿರದ ಒಂದು ಕಾಯಿ ಮುಡುಗಣಪತಿ ಸೇವೆ
  • ಮನೆಯಕ್ಕಿ ಸಮಾರಾಧನೆ :- 29.11.2012ರ ಮಧ್ಯಾಹ್ನ ಸಮಾರಾಧನೆ
  • ದೀಪೋತ್ಸವ :- ದಿನಾಂಕ 12.12.2012 ರಂದು ಲಕ್ಷದೀಪೋತ್ಸವ, ಹಿರಿರಂಗಪೂಜೆ, ಪುಷ್ಫರಥೋತ್ಸವ, ತೆಪ್ಪೋತ್ಸವ

ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದೆ.

1Oct/120

Sabhe

ಸಲಹಾ ಸಮಿತಿ ಮತ್ತು ಆಡಳಿತ ಮಂಡಳಿ ಸಭೆ :- ಗಣ್ಯ ವ್ಯಕ್ತಿಗಳು, ದಾನಿಗಳು, ಗ್ರಾಮಮೋಕ್ತೇಸರರು, ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಇದರ ಕೇಂದ್ರ ಸಂಸ್ಥೆ ಸೇರಿ 36 ಅಂಗಸಂಸ್ಥೆಗಳ ಅಯ್ದ ಸದಸ್ಯರು ದಿನಾಂಕ 23.09.2012ರ ಮಧ್ಯಾಹ್ನ 2.30ಕ್ಕೆ ನಡೆದ ಸಲಹಾ ಸಮಿತಿಯಲ್ಲಿ ಶ್ರೀದೇವಳದ ಅಭಿವ್ರದ್ಧಿ ಬಗ್ಗೆ ಚರ್ಚಿಸಿ ಉತ್ತಮ ಸಲಹೆಯನ್ನು ನೀಡಿದರು. ಆಡಳಿ ಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಿ ಶ್ರೀದೇವಳದ ನಡಾವಳಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಎ.ಜಗದೀಶ ಕಾರಂತರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೂ ಕೂ.ಮ.ಜ.ಸಾಲಿಗ್ರಾಮ (ರಿ) ಇದರ ಕೇಂದ್ರ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪಿ.ವೆಂಕಟ್ರಾವ್ ಉತ್ತರಹಳ್ಳಿ ಬೆಂಗಳೂರು ಇವರನ್ನು ಶ್ರೀದೇವಳದ ಸಂಪ್ರದಾಯದಂತೆ ಗೌರವಿಸಿದರು.

ಕೂ.ಮ.ಜ. ಸಾಲಿಗ್ರಾಮ(ರಿ) 59ನೇ ವಾರ್ಷಿಕ ಮಹಾಸಭೆ :- ಶ್ರೀದೇವಸ್ಥಾನ, ಕೂ.ಮ.ಜ ಸಾಲಿಗ್ರಾಮ (ರಿ) ಅಂಗಸಂಸ್ಥೆ:- ಸಾಲಿಗ್ರಾಮ ಮತ್ತು ಮಹಿಳಾವೇದಿಕೆ ಸಹಕಾರದೊಂದಿಗೆ ಕೇಂದ್ರ ಸಂಸ್ಥೆಯ 59ನೇ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ನಡೆಯಿತು. ಸಭೆಯ  ಅಧ್ಯಕ್ಷ ಸ್ಥಾನವನ್ನು ಕೇಂದ್ರ ಕೂ.ಮ.ಜ. ಸಾಲಿಗ್ರಾಮ (ರಿ) ಇದರ ಅಧ್ಯಕ್ಷರಾದ ಡಾ|| ಕೆ.ಎಸ್.ಕಾರಂತ್ ಇವರು ವಹಿಸಿದ್ದರು. ಈ ಸಭೆಯಲ್ಲಿ ಉತ್ತರಹಳ್ಳಿ ಅಂಗಸಂಸ್ಥೆಯ ಅಧ್ಯಕ್ಷರಾದ ಶ್ರೀ.ಪಿ ವೆಂಕಟ್ರಾವ್ ಇವರು ನೂತನ ಕೇಂದ್ರ ಅಧ್ಯಕ್ಷರಾಗಿ ಆಯ್ಕೆಗೊಂಡರು. ದಿನಾಂಕ 07.10.2012ರಂದು ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ ಮತ್ತು ನೂತ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.

1Oct/120

Smt. Nagu Devadiga

50 ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಮತಿ ನಾಗು ದೇವಾಡಿಗ ಇವರಿಗೆ ಗೌರವಪೂರ್ವಕ ನಮನ

50 ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಮತಿ ನಾಗು ದೇವಾಡಿಗ ಇವರಿಗೆ ಗೌರವಪೂರ್ವಕ ಬಿಳ್ಕೋಡುಗೆ

ಸುಮಾರು 50 ವರ್ಷಗಳ ಕಾಲ ನಿರಂತರ ಶ್ರೀಗುರುನರಸಿಂಹ ದೇವರ ಸೇವೆ ಮಾಡಿದ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ನಾಗು ದೇವಾಡಿಗ ಇವರು ದಿನಾಂಕ 31.08.2012 ರಂದು ಸ್ವಯಂ ನಿವ್ರತ್ತಿಯನ್ನು ಪಡೆದಿರುತ್ತಾರೆ. ಆಡಳಿತ ಮಂಡಳಿಯು ಇವರ ಸೇವೆಯನ್ನು ಗೌರವಿಸಿ ದಿನಾಂಕ 23.09.2012ರಂದು ಮಾಸಿಕ ಸಭೆಯಲ್ಲಿ ಶ್ರೀದೇವಳದ ಸಂಪ್ರದಾಯದಂತೆ ಗೌರವಿಸಿ ಗೌರವ ಧನವನ್ನು ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ಮಾತನಾಡುತ್ತಾ ಇವರ ಸೇವೆ ನಮಗೆ  ಇನ್ನು ಮುಂದೆಯು ಅಗತ್ಯವಿದೆ ಆದರೆ ಅವರ ಇಚ್ಚೆಯಂತೆ ಅವರಿಗೆ ನಿವ್ರತ್ತಿಯನ್ನು ನೀಡಲಾಗಿದೆ. ಮುಂದಿನ ಬದುಕು ನೆಮ್ಮದಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಶ್ರೀದೇವರಲ್ಲಿ ಪ್ರಾರ್ಥಿಸಿ ಹಾರೈಸಿದರು.

1Oct/120

Sri Gurunarasimha Bayalu Ranga Mandira

ಶ್ರೀ ಗುರುನರಸಿಂಹ ಓಲಗ ಮಂಟಪ / ಬಯಲು ರಂಗಮಂದಿರ ಲೋಕಾರ್ಪಣೆ

ಶ್ರೀದೇವಳಕ್ಕೆ ಪಾರಂಪಳ್ಳಿ ದಿ|| ಕ್ರಷ್ಣ ಅಡಿಗರ ಸ್ಮರಣಾರ್ಥ ಇವರ ಪತ್ನಿ ಶ್ರೀಮತಿ ಶ್ರೀಮತಿ ಅಡಿಗ ಮತ್ತು ಮಕ್ಕಳು ದಾನವಾಗಿ ನೀಡಿದ ಸ್ಥಳದಲ್ಲಿ ದೇವಸ್ಥಾನ, ಕರ್ನಾಟಕ ಘನ ಸರ್ಕಾರ ಮತ್ತು ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಇವರೆಲ್ಲರ ಆರ್ಥಿಕ ನೆರವಿನೊಂದಿಗೆ ರಚಿತವಾದ ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರವನ್ನು ದಿನಾಂಕ 19.09.2012ರ ಗಣೇಶನ ಹಬ್ಬದ ಶುಭ ದಿನದಂದು ಶ್ರೀದೇವರಿಗೆ ಸಮರ್ಪಿಸಲಾಯಿತು. ಈ ವೇದಿಕೆಯಲ್ಲಿ ಸಾಲಿಗ್ರಾಮದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯವರು 21 ನೇ ಗಣೇಶೋತ್ಸವನ್ನು ವಿಶೇಷವಾಗಿ ಆಚರಿಸುವುದರ ಮುಲಕ ಬಯಲು ರಂಗಮಂದಿರದ ಮೆರಗನ್ನು ಹೆಚ್ಚಿಸಿ ಇದರ ಸಾರ್ಥಕತೆಯ ಅರಿವನ್ನು ಮುಡಿಸಿದರು.


ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರ ಲೋಕಾರ್ಪಣೆ ಪ್ರಯುಕ್ತ ದಿನಾಂಕ 17.09.2012 ರ ರಾತ್ರಿ ವಾಸ್ತುಪೂಜೆ, ಸುದರ್ಶನ ಹೋಮವನ್ನು ಮಾಡಲಾಯಿತು. ದಿನಾಂಕ 18.09.2012ರ ಬೆಳಗ್ಗೆ ಶ್ರೀಗುರುನರಸಿಂಹ ದೇವರಿಗೆ ಪಂಚವಿಶತಿ ಕಲಾಶಾಭಿಷೇಕವನ್ನು ಮಾಡಲಾಯಿತು

ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರ ಲೋಕಾರ್ಪಣೆ ಪ್ರಯುಕ್ತ ದಿನಾಂಕ 17.09.2012 ರ ರಾತ್ರಿ ವಾಸ್ತುಪೂಜೆ, ಸುದರ್ಶನ ಹೋಮವನ್ನು ಮಾಡಲಾಯಿತು. ದಿನಾಂಕ 18.09.2012ರ ಬೆಳಗ್ಗೆ ಶ್ರೀಗುರುನರಸಿಂಹ ದೇವರಿಗೆ ಪಂಚವಿಶತಿ ಕಲಾಶಾಭಿಷೇಕವನ್ನು ಮಾಡಲಾಯಿತು

ದಿನಾಂಕ 19.09.2012ರ ಬೆಳಗ್ಗೆ ಕರ್ನಾಟಕ ರಾಜ್ಯದ ಮಾನ್ಯ ಮುಜರಾಯಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯರು ದೀಪ ಬೆಳಗಿಸಿ ಓಲಗ ಮಂಟಪವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ರಾಜು ಪೂಜಾರಿ, ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವಸಚಿವರಾದ

ದಿನಾಂಕ 19.09.2012ರ ಬೆಳಗ್ಗೆ ಕರ್ನಾಟಕ ರಾಜ್ಯದ ಮಾನ್ಯ ಮುಜರಾಯಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯರು ದೀಪ ಬೆಳಗಿಸಿ ಓಲಗ ಮಂಟಪವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ರಾಜು ಪೂಜಾರಿ, ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ ಶ್ಯಾನುಬಾಗ್, ಕಾರ್ಕಡದ ಶ್ರೀ ಶಿವರಾಮ ಉಡುಪ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ.ಎ ಜಗದೀಶ ಕಾರಂತರು ವಹಿಸಿದ್ದರು ಮತ್ತು ಸಹಧರ್ಮದರ್ಶೀಗಳಾದ ಶ್ರೀ.ಸದಾರಾಮ ಹೇರ್ಳೆ, ಶ್ರೀನೀರಾಳ ಕ್ರಷ್ಣ ಹೊಳ್ಳ, ಶ್ರೀ ಅನಂದರಾಮ ಮಧ್ಯಸ್ಥರು ಸಭೇಯಲ್ಲಿ ಉಪಸ್ಥಿತರಿದ್ದರು. ಶ್ರೀರಾಮಚಂದ್ರ ಐತಾಳರು ಸಭೇಯ ನಡಾವಳಿಯ ಜವಬ್ದಾರಿಯನ್ನು ಹೊತ್ತಿದ್ದರು.



1Oct/120

Kadiru Habba

ಕದಿರು ಹಬ್ಬ :- ದಿನಾಂಕ 30.09.2012 ರಂದು ಸಂಪ್ರದಾಯದಂತೆ ಭತ್ತದ ಕದಿರನ್ನು ಸಂಗ್ರಹಿಸಿ ಬೆಳಗ್ಗೆ -6.15 ಕ್ಕೆ ಪೂಜೆಗೊಳಿಸಿ ಧಾನ್ಯವನ್ನು ಸಂಗ್ರಹಿಸಲಾಯಿತು. ಸಂಪ್ರದಾಯದಂತೆ ಈ ಪೂಜೆಗೊಳಿಸಿದ ಈ ಧಾನ್ಯವನ್ನು ಭಕ್ತರು ಮನೆಗೆ ಕೊಂಡ್ಯೊಯ್ದ ಹಬ್ಬವನ್ನು ಆಚರಿಸುವ ಪದ್ದತಿ ಇದೆ. ಅದರಂತೆ ಭಕ್ತರು ಪೂಜೆಗೊಳಿಸಿದ ಕದಿರನ್ನು ಮನೆಗೆ ಪ್ರಸಾದರೂಪವಾಗಿ ಮನೆಗೆ ಕೊಂಡಯ್ದರು.

1Oct/120

Ganesh Habba

ಸಾಂಪ್ರದಾಯಿಕ ಗಣಹೋಮ ಹಾಗೂ ನರಸಿಂಹ ಹೋಮ ಗಣೇಶ ಚತುರ್ಥಿಯ ದಿನ ನಡೆಯಿತು.

ಸಾಂಪ್ರದಾಯಿಕ ಗಣಹೋಮ ಹಾಗೂ ನರಸಿಂಹ ಹೋಮ ಗಣೇಶ ಚತುರ್ಥಿಯ ದಿನ ನಡೆಯಿತು.

ಗಣೇಶ ಚತುರ್ಥಿ :- ದಿನಾಂಕ 19.09.2012ರಂದು ಸಂಪ್ರದಾಯದಂತೆ ಶ್ರೀಗಣಪತಿ ದೇವರಿಗೆ ವಿಶೇಷ ಪೂಜೆ, ಪಂಚಭಕ್ಷ ಪರಮಾನ್ನ ನೈವೇಧ್ಯ, 120 ಕಾಯಿ ಗಣಹೋಮ, ಮುಡುಗಣಪತಿ ಸೇವೆ, ಸಂಜೆ ಶ್ರೀಗಣಪತಿ ಮತ್ತು ನರಸಿಂಹ ದೇವರಿಗೆ ರಂಗಪೂಜೆಗಳನ್ನು ಮಾಡಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಶ್ರೀಗುರುನರಸಿಂಹ ದೇವರನ್ನು ಗಣಪತಿ ಯಂತ್ರದ ಮೇಲೆ ಸ್ಥಾಪನೆ ಮಾಡಿರುವುದರಿಂದ ಇಲ್ಲಿ ಶ್ರೀದೇವರಿಗೆ ಗಣಹೋಮ, ಮುಡುಗಣಪತಿ ಸೇವೆ ಬಹಳ ವಿಶೇಷವಾಗಿದೆ.

1Oct/120

Krishna Janmasstami, Vittlpindi Utsva

DSC02021

ಕ್ರಷ್ಣ ಜನ್ಮಾಷ್ಠಮಿ :- ದಿನಾಂಕ 08.09.2012 ರಾತ್ರಿ ಶ್ರೀಗುರುನರಸಿಂಹ ದೇವರಿಗೆ ಮತ್ತು ವೇಣಗೋಪಾಲ ಕ್ರಷ್ಣ ದೇವರಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ಮಾಡಿ ಕ್ರಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.

ವಿಟ್ಲಪಿಂಡಿ ಉತ್ಸವ :- ದಿನಾಂಕ 09.09.2012ರ ಸಂಜೆ 4-30ಕ್ಕೆ ಸರಿಯಾಗಿ ಶ್ರೀಗುರುನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕಿಯಲ್ಲಿ ವೇದ ವಿದ್ಯಾರ್ಥಿಗಳ,ಉಪಾಧಿವಂತರ,ಅರ್ಚಕವರ್ಗದವರ ಮಂತ್ರಘೋಷ, ಪಂಚವಾದ್ಯ, ತೋರಣ ಪತಾಕೆ ಬಿರುದಾವಳಿಗಳ ಅದ್ದೂರಿ ಮೆರವಣಿಗೆಯೊಂದಿಗೆ ಸಂಪ್ರದಾಯದದಂತೆ ಮೊಸರು ಕುಡಿಕೆಗಳನ್ನು ಒಡೆಯುತ್ತಾ ಎಡಬೆಟ್ಟು (ಮುಡಹಡು) ಗ್ರಾಮದಲ್ಲಿರುವ ಶ್ರೀವೇಣುಗೋಪಾಲ ದೇವಸ್ಥಾಕ್ಕೆ ಹೋಗಿ ಅಲ್ಲಿ ಸಾಂಪ್ರದಾಯಿಕ ಪೂಜೆ ಮತ್ತು ಅಷ್ಟಾವಧಾನ ಪೂಜೆಗಳನ್ನು ಸ್ವೀಕರಿಸಿ ಅಲ್ಲಿಂದ ಮೆರವಣಿಗೆಯಲ್ಲಿ ಶ್ರೀಆಂಜನೇಯ ಸ್ವಾಮಿ ದೇವಳಕ್ಕೆ ಬಂದು ಅಲ್ಲಿ ಸೋಣೆ ಆರತಿ ಮತ್ತು ಅಷ್ಟಾವಧಾನ ಸೇವೆ ಪೂರೈಸಿ ಶ್ರೀದೇವಳಕ್ಕೆ ಹಿಂತುರುಗಿ ಮಹಾಪೂಜೆಯನ್ನು ಮಾಡಲಾಯಿತು.