Paraspara e-KootaBandhu for quicker news

1Oct/120

Sri Gurunarasimha Bayalu Ranga Mandira

ಶ್ರೀ ಗುರುನರಸಿಂಹ ಓಲಗ ಮಂಟಪ / ಬಯಲು ರಂಗಮಂದಿರ ಲೋಕಾರ್ಪಣೆ

ಶ್ರೀದೇವಳಕ್ಕೆ ಪಾರಂಪಳ್ಳಿ ದಿ|| ಕ್ರಷ್ಣ ಅಡಿಗರ ಸ್ಮರಣಾರ್ಥ ಇವರ ಪತ್ನಿ ಶ್ರೀಮತಿ ಶ್ರೀಮತಿ ಅಡಿಗ ಮತ್ತು ಮಕ್ಕಳು ದಾನವಾಗಿ ನೀಡಿದ ಸ್ಥಳದಲ್ಲಿ ದೇವಸ್ಥಾನ, ಕರ್ನಾಟಕ ಘನ ಸರ್ಕಾರ ಮತ್ತು ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಇವರೆಲ್ಲರ ಆರ್ಥಿಕ ನೆರವಿನೊಂದಿಗೆ ರಚಿತವಾದ ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರವನ್ನು ದಿನಾಂಕ 19.09.2012ರ ಗಣೇಶನ ಹಬ್ಬದ ಶುಭ ದಿನದಂದು ಶ್ರೀದೇವರಿಗೆ ಸಮರ್ಪಿಸಲಾಯಿತು. ಈ ವೇದಿಕೆಯಲ್ಲಿ ಸಾಲಿಗ್ರಾಮದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯವರು 21 ನೇ ಗಣೇಶೋತ್ಸವನ್ನು ವಿಶೇಷವಾಗಿ ಆಚರಿಸುವುದರ ಮುಲಕ ಬಯಲು ರಂಗಮಂದಿರದ ಮೆರಗನ್ನು ಹೆಚ್ಚಿಸಿ ಇದರ ಸಾರ್ಥಕತೆಯ ಅರಿವನ್ನು ಮುಡಿಸಿದರು.


ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರ ಲೋಕಾರ್ಪಣೆ ಪ್ರಯುಕ್ತ ದಿನಾಂಕ 17.09.2012 ರ ರಾತ್ರಿ ವಾಸ್ತುಪೂಜೆ, ಸುದರ್ಶನ ಹೋಮವನ್ನು ಮಾಡಲಾಯಿತು. ದಿನಾಂಕ 18.09.2012ರ ಬೆಳಗ್ಗೆ ಶ್ರೀಗುರುನರಸಿಂಹ ದೇವರಿಗೆ ಪಂಚವಿಶತಿ ಕಲಾಶಾಭಿಷೇಕವನ್ನು ಮಾಡಲಾಯಿತು

ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರ ಲೋಕಾರ್ಪಣೆ ಪ್ರಯುಕ್ತ ದಿನಾಂಕ 17.09.2012 ರ ರಾತ್ರಿ ವಾಸ್ತುಪೂಜೆ, ಸುದರ್ಶನ ಹೋಮವನ್ನು ಮಾಡಲಾಯಿತು. ದಿನಾಂಕ 18.09.2012ರ ಬೆಳಗ್ಗೆ ಶ್ರೀಗುರುನರಸಿಂಹ ದೇವರಿಗೆ ಪಂಚವಿಶತಿ ಕಲಾಶಾಭಿಷೇಕವನ್ನು ಮಾಡಲಾಯಿತು

ದಿನಾಂಕ 19.09.2012ರ ಬೆಳಗ್ಗೆ ಕರ್ನಾಟಕ ರಾಜ್ಯದ ಮಾನ್ಯ ಮುಜರಾಯಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯರು ದೀಪ ಬೆಳಗಿಸಿ ಓಲಗ ಮಂಟಪವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ರಾಜು ಪೂಜಾರಿ, ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವಸಚಿವರಾದ

ದಿನಾಂಕ 19.09.2012ರ ಬೆಳಗ್ಗೆ ಕರ್ನಾಟಕ ರಾಜ್ಯದ ಮಾನ್ಯ ಮುಜರಾಯಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯರು ದೀಪ ಬೆಳಗಿಸಿ ಓಲಗ ಮಂಟಪವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ರಾಜು ಪೂಜಾರಿ, ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ ಶ್ಯಾನುಬಾಗ್, ಕಾರ್ಕಡದ ಶ್ರೀ ಶಿವರಾಮ ಉಡುಪ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ.ಎ ಜಗದೀಶ ಕಾರಂತರು ವಹಿಸಿದ್ದರು ಮತ್ತು ಸಹಧರ್ಮದರ್ಶೀಗಳಾದ ಶ್ರೀ.ಸದಾರಾಮ ಹೇರ್ಳೆ, ಶ್ರೀನೀರಾಳ ಕ್ರಷ್ಣ ಹೊಳ್ಳ, ಶ್ರೀ ಅನಂದರಾಮ ಮಧ್ಯಸ್ಥರು ಸಭೇಯಲ್ಲಿ ಉಪಸ್ಥಿತರಿದ್ದರು. ಶ್ರೀರಾಮಚಂದ್ರ ಐತಾಳರು ಸಭೇಯ ನಡಾವಳಿಯ ಜವಬ್ದಾರಿಯನ್ನು ಹೊತ್ತಿದ್ದರು.Comments (0) Trackbacks (0)

No comments yet.


Leave a comment


No trackbacks yet.