Paraspara e-KootaBandhu for quicker news

24Jan/130

Deepotsava

ಸಾಲಿಗ್ರಾಮ :- ದಿನಾಂಕ 12.12.2012 ರ ಬೆಳಗ್ಗೆ ನವಕಪ್ರಧಾನ ಕಲಾಶಾಭಿಷೇಕ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀದೇವಳಧ ತಂತ್ರಿಗಳಾದ ವೇ.ಮು.ಕ್ರಷ್ಣ ಸೋಮಯಾಜಿ ಮತ್ತು ಅರ್ಚಕರಾದ ಶ್ರೀ ವಿಜಯಕುಮಾರ ಅಡಿಗರ ಸಹಕರದೊಂದಿಗೆ ನೇರವೆರಿಸಲಾಯಿತು.

ಅಲಂಕ್ರಗೊಂಡ ಶ್ರೀದೇವರ ಉತ್ಸವಮುರ್ತಿ

ಅಲಂಕ್ರತಗೊಂಡ ಶ್ರೀದೇವರ ಉತ್ಸವಮುರ್ತಿ

ದೀಪೋತ್ಸವದಂದು ಶ್ರೀ ದೇವರಿಗೆ ಮಹಾಮಂಗಳಾರತಿ

ದೀಪೋತ್ಸವದಂದು ಶ್ರೀ ದೇವರಿಗೆ ಮಹಾಮಂಗಳಾರತಿ

ಹಿರಿರಂಗಪೂಜೆಯ ಒಂದು ನೋಟ

ಹಿರಿರಂಗಪೂಜೆಯ ಒಂದು ನೋಟ

ಸಂಜೆ  ದೇವಳದ ಪರಿಸರ, ರಥಬೀದಿ, ಶಂಖ ಮತ್ತು ಚಕ್ರತೀರ್ಥ ಕೆರೆ ಹೀಗೆ ಎಲ್ಲೆಲ್ಲೂ ಹಣತೆ ದೀಪಗಳ ಚಿತ್ತಾರದ ಸೊಬಗು ಎಂತವರನ್ನು ಭಕ್ತಿಯ ಲೋಕಕ್ಕೆ ಕರೆದೊಯ್ಯುವಂತಿತ್ತು .  7.30 ಕ್ಕೆ ಮಹಾಪೂಜೆ, ನಂತರ ಹಿರಿರಂಗಪೂಜೆಯನ್ನು ಮಾಡಲಾಯಿತು, ನಂತರ ವೇದ ಘೋಷ, ಮಿರುದು ಬಾವಲಿ ಮಂಗಳ ವಾದ್ಯದೊಂದಿಗೆ ಉತ್ಸವದಲ್ಲಿ ಹೋರಟ ಶ್ರೀದೇವರು ಉತ್ಸವಬಲಿಯನ್ನು ಪೂರೈಸಿ

ಶ್ರೀದೇವರ ಉತ್ಸವ ಬಲಿಯ ಒಂದು ನೋಟ

ಶ್ರೀದೇವರ ಉತ್ಸವ ಬಲಿಯ ಒಂದು ನೋಟ

ಪುಷ್ಫರಥದಲ್ಲಿ ಶ್ರೀಆಂಜನೇಯ ದೇವಳಕ್ಕೆ ಪ್ರವೇಶಿಸಲಾಯಿತು. ಅಲ್ಲಿ ಮಹಾಪೂಜೆ ಅಷ್ಟಾವಧಾನ ಸೇವೆಗಳನ್ನು ಪೂರೈಸಿ ಪುಷ್ಫರಥದಲ್ಲಿ ಹಿಂದುರುಗಿ ಶಂಖ ತೀರ್ಥ ಸರೋವರದಲ್ಲಿ ತೆಪ್ಪದಲ್ಲಿ ಕುಳ್ಳಿರಿಸಿ ತೆಪ್ಪೋತ್ಸವನ್ನು ಮಾಡಲಾಯಿತು. ನಂತರ ಶ್ರೀದೇವಳಕ್ಕೆ ಹಿಂದುರುಗಿ ಮಹಾಮಂಗಳಾರತಿಯನ್ನು ಮಾಡಿ ದೀಪೋತ್ಸವನ್ನು ಅದ್ದೂರಿಯಾಗಿ ಸಂಪನ್ನಗೊಳಿಸಿಲಾಯಿತು.

ಶ್ರೀಆಂಜನೇಯ ದೇವಳದಲ್ಲಿ ಮಹಾಪೂಜೆ ಮತ್ತು ಅಷ್ಟಾವಧಾನ ಸೇವೆ

ಶ್ರೀಆಂಜನೇಯ ದೇವಳದಲ್ಲಿ ಮಹಾಪೂಜೆ ಮತ್ತು ಅಷ್ಟಾವಧಾನ ಸೇವೆ

ಶಂಖ ತೀರ್ಥ ಸರೋವರದಲ್ಲಿ ತೆಪ್ಪೋತ್ಸವ

ಶಂಖ ತೀರ್ಥ ಸರೋವರದಲ್ಲಿ ತೆಪ್ಪೋತ್ಸವ

ದೀಪೋತ್ಸವದ ಅಂಗವಾಗಿ ಸಂಜೆ ಗಂಟೆ 6.30 ರಿಂದ 9.30 ರವರೆಗೆ "ಮೀನಾಕ್ಷಿ ಕಲ್ಯಾಣ" ಎನ್ನುವ ಯಕ್ಷಗಾನ ಕಥಾ ಭಾಗವನ್ನು ಕಾರ್ಕಡದ ಯಕ್ಷಮಿತ್ರರು ಆಡಿ ಜನ ಮೆಚ್ಚುಗೆ ಗಳಿಸಿದರು.

"ಮೀನಾಕ್ಷಿ ಕಲ್ಯಾಣ" ಯಕ್ಷಗಾನದ ಒಂದು ನೋಟ

"ಮೀನಾಕ್ಷಿ ಕಲ್ಯಾಣ" ಯಕ್ಷಗಾನದ ಒಂದು ನೋಟ

ಹಿತವಾದ ಮಿತವಾದ ಅದ್ದೂರಿಯ ಸಿಡಿಮದ್ದು ಪ್ರದರ್ಶನ ನೆರದಿದ್ದ ಎಲ್ಲ ಭಕ್ತರ ಮನಸೂರೆಗೊಂಡಿದ್ದು ಒಂದು ವಿಶೇಷವಾಗಿತ್ತು. ಎಲ್ಲ ಭಕ್ತರಿಗೆ ಪಾನಕ ಪನೀವಾರವನ್ನು ಶ್ರೀದೇವರ ಪ್ರಸಾದವಾಗಿ ಹಂಚಲಾಯಿತು.

ಕ್ಷೇತ್ರಪಾಲ ಪೂಜೆ

ಕ್ಷೇತ್ರಪಾಲ ಪೂಜೆ

ರಥೋತ್ಸವಕ್ಕೆ ಸಜ್ಜಾಗಿ ನಿಂತಿರುವ ಪುಷ್ಫರಥ

ರಥೋತ್ಸವಕ್ಕೆ ಸಜ್ಜಾಗಿ ನಿಂತಿರುವ ಪುಷ್ಫರಥ

ಪುಷ್ಫರಥದಲ್ಲಿ ಅಲಂಕ್ರತನಾಗಿ ಪೂಜೆಗೊಳ್ಳುತ್ತಿರುವ ಶ್ರೀಗುರುನರಸಿಂಹ ದೇವರು

ಪುಷ್ಫರಥದಲ್ಲಿ ಅಲಂಕ್ರತನಾಗಿ ಪೂಜೆಗೊಳ್ಳುತ್ತಿರುವ ಶ್ರೀಗುರುನರಸಿಂಹ ದೇವರು

ದೀಪೋತ್ಸವದ ವಿಹಂಗಮ ನೋಟ

ದೀಪೋತ್ಸವದ ವಿಹಂಗಮ ನೋಟ

ಶ್ರೀಆಂಜನೇಯ ದೇವಳದಲ್ಲಿ ಸಾಂಪ್ರದಾಯಿಕ ಅಚ್ಚಡ ಸುಡುವ ನೋಟ

ಶ್ರೀಆಂಜನೇಯ ದೇವಳದಲ್ಲಿ ಸಾಂಪ್ರದಾಯಿಕ ಅಚ್ಚಡ ಸುಡುವ ನೋಟ

Comments (0) Trackbacks (0)

No comments yet.


Leave a comment


No trackbacks yet.