Paraspara e-KootaBandhu for quicker news

24Jan/130

Muduganapathi & Mane Akki Samaradhane

ಸಾಲಿಗ್ರಾಮ :- ಶ್ರೀಗುರುನರಸಿಂಹ ದೇವಳದ ಇತಿಹಾಸ ಪ್ರಸಿದ್ದ ಸಾಂಪ್ರದಾಯಿಕ ಸೇವೆಯಾದ ಮುಡುಗಣಪತಿ ಸೇವೆಯನ್ನು ದಿನಾಂಕ 28.11.2012 ರಾತ್ರಿ 7.30 ಕ್ಕೆ ಶ್ರೀಗುರುನರಸಿಂಹ ದೇವರು ಮತ್ತು ಉಪದೇವತೆಗಳಿಗೆ ಸಮರ್ಪಿಸಲಾಯಿತು. ಮನೆಅಕ್ಕಿ ಸಮಾರಾಧನೆಯನ್ನು  ದಿನಾಂಕ 29.11.2012 ರ ಮಧ್ಯಾಹ್ನ ಮಾಡಲಾಯಿತು.

ಶ್ರೀಗುರುನರಸಿಂಹ ದೇವರಿಗೆ 100೧  ಕಾಯಿ ಮುಡುಗಣಪತಿ ಸೇವೆ

ಶ್ರೀಗುರುನರಸಿಂಹ ದೇವರಿಗೆ 1001 ಕಾಯಿ ಮುಡುಗಣಪತಿ ಸೇವೆ

ಪ್ರತಿ ವರ್ಷವು ಕೋಟ ಗ್ರಾಮದ 14 ಗ್ರಾಮಗಳ ಕೋಟ ಬ್ರಾಹ್ಮಣರು ಮತ್ತು ಭಕ್ತರಿಂದ  ತೆಂಗಿನಕಾಯಿ, ಅಕ್ಕಿ ಧಾನ್ಯ, ನಗದುಗಳನ್ನು ಆಯಾಯ ಗ್ರಾಮಕ್ಕೆ ಸಂಬಂಧಿಸಿದ  ಗ್ರಾಮಮೋಕ್ತೇಸರರು ಸಂಗ್ರಹಿಸಿ  ಈ ಸೇವೆಗಳನ್ನು ಶ್ರೀದೇವಳದ ಆಡಳಿತ ಮಂಡಳಿಯ ಮಾರ್ಗದರ್ಶನದೊಂದಿಗೆ ಮಾಡಲಾಗುತ್ತಿದ್ದು ಇದೊಂದು ಕಾರಣಿಕ ಸೇವೆಯಾಗಿದೆ.

ಶ್ರೀಮಹಾಗಣಪತಿ ದೇವರು

ಶ್ರೀಮಹಾಗಣಪತಿ ದೇವರು

ದಿನಾಂಕ 29.11.2012 ರಂದು ಶ್ರೀದೇವರಿಗೆ ಋಕ್ ಸಂಹಿತಾಭಿಷೇಕ, ಶ್ರೀಗಣಪತಿ ದೇವರಿಗೆ ಗಣಹೋಮ, ಶ್ರೀದುರ್ಗಾಪರಮೇಶ್ವರಿಗೆ ಚಂಡಿಕಾಪಾರಾಯಣ, ಶ್ರೀಆಂಜನೇಯ ಸ್ವಾಮಿಗೆ ಸುಂದರಕಾಂಡ ಪಾರಾಯಣ, ಶ್ರೀನಾಗದೇವರಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು.

ಶ್ರೀದುರ್ಗಾಪರಮೇಶ್ವರಿ ದೇವರು

ಶ್ರೀದುರ್ಗಾಪರಮೇಶ್ವರಿ ದೇವರು

ಇದೇ ದಿನ ಮಧ್ಯಾಹ್ನ ಮನೆ ಅಕ್ಕಿ ಸಮಾರಾಧನೆಯಲ್ಲಿ ಸಾಧರಾಣ 650 ಜನ ಭಕ್ತರು ಭೋಜನಪ್ರಸಾದವನ್ನು ಸ್ವೀಕರಿಸಿದರು.

ಶ್ರೀಆಂಜನೇಯ ದೇವರು

ಶ್ರೀಆಂಜನೇಯ ದೇವರು

ಎಲ್ಲಾ 27 ಜನ ಗ್ರಾಮಮೋಕ್ತೇಸರರು, ಶ್ರೀದೇವಳದ ಆಡಳಿತ ಮಂಡಳಿಯ ಸರ್ವ ಧರ್ಮದರ್ಶಿಗಳು, ಸಿಬ್ಬಿಂದಿವರ್ಗ ಕೂಟ ಮಹಾಜಗತ್ತು ಸಾಲಿಗ್ರಾಮ(ರಿ) ಇದರ ಎಲ್ಲಾ ಅಂಗಸಂಸ್ಥೆಯ ಸರ್ವ ಸದಸ್ಯರು ಹಾಗೂ ಭಕ್ತರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರದೊಂದಿಗೆ ಈ ಐತಿಹಾಸಿಕ ಸೇವೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.

Comments (0) Trackbacks (0)

No comments yet.


Leave a comment


No trackbacks yet.