Paraspara e-KootaBandhu for quicker news

24Jan/130

Shakal Ruk Samitha Yaga

ಸಾಲಿಗ್ರಾಮ :- ಶ್ರೀಗುರುನರಸಿಂಹ ದೇವಳದಲ್ಲಿ ಶ್ರೀ ಪ್ರಕಾಶ ಮಯ್ಯ "ಇಂದ್ರಪ್ರಸ್ಥ" ಬೆಂಗಳೂರು ಇವರು ದಿನಾಂಕ 17.11.2012 ರಿಂದ 25.11.2012 ರವರೆಗೆ  ಶಾಕಲ ಋಕ್ ಸಂಹಿತಾ ಯಾಗವನ್ನು ಯಶಸ್ವಿಯಾಗಿ ವೇ.ಮು.ರಘುರಾಮ ಸೋಮಯಾಜಿ ಮತ್ತು ವೇ.ಮು.ಹಂದಟ್ಟು ಸದಾಶಿವ ಐತಾಳರ ನೇತ್ರತ್ವದಲ್ಲಿ ಸಂಪನ್ನಗೊಳಿಸಿದರು.

ಶ್ರೀಮತಿ ಮಂಜುಳಾ ಪ್ರಕಾಶ ಮಯ್ಯ, ಶ್ರೀ ಪ್ರಕಾಶ ಮಯ್ಯ ಮತ್ತು ವೇ.ಮು.ಹಂದಟ್ಟು ಸದಾಶಿವ ಐತಾಳರು

ಶ್ರೀಮತಿ ಮಂಜುಳಾ ಪ್ರಕಾಶ ಮಯ್ಯ, ಶ್ರೀ ಪ್ರಕಾಶ ಮಯ್ಯ ಮತ್ತು ವೇ.ಮು.ಹಂದಟ್ಟು ಸದಾಶಿವ ಐತಾಳರು

ಪ್ರತಿದಿನ ವಿಶೇಷ ಭೊಜನ ಪ್ರಸಾದವನ್ನು ಭಕ್ತರಿಗೆ ಏರ್ಪಡಿಸಲಾಗಿದ್ದು ಎಲ್ಲಾ ದಿನ ಸೇರಿ ಒಟ್ಟು 9,000 ಜನ ಭಕ್ತರು ಪ್ರಸಾದವನ್ನು ಸ್ವೀಕರಿಸಿದರು,. ಈ ಎಲ್ಲಾ ದಿನಗಳಲ್ಲಿ ಆಡಳಿತ ಮಂಡಳಿಯ ಎಲ್ಲಾ ಧರ್ಮದರ್ಶಿಗಳು ,ಕೂಟ ಮಹಾಜಗತ್ತು ಅಂಗಂಸ್ಥೆ ಸಾಲಿಗ್ರಾಮ ಮತ್ತು ಇತರೆ ಅಂಗಸಂಸ್ಥೆಯ ಪದಾಧಿಕಾರಿಗಳು ,ಸದಸ್ಯರು, ಹಾಗೂ ಕೂ.ಮ.ಜ. ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾ ವೇದಿಕೆಯ ಸದಸ್ಯೆಯರು, ಶ್ರೀದೇವಳದ ಸಿಬ್ಬಂಧಿ ವರ್ಗದವರು ಯಾಗದ ಯಶಸ್ಸಿಗಾಗಿ ಸಹಕಾರವನ್ನು ನೀಡಿದರು.

ಈ ಎಲ್ಲರ ಸಹಕಾರವನ್ನು ಮನಸಾರೆ ಶ್ಲಾಘಿಸಿದ ಪ್ರಕಾಶ ಮಯ್ಯರು ಇನ್ನು ಮುಂದೆ ಪ್ರತಿ ವರ್ಷವೂ ಋಕ್ ಸಂಹಿತಾ ಯಾಗ ಮತ್ತು ಬ್ರಹತ್ ಯಾಗವನ್ನು ಶ್ರೀದೇವಳದಲ್ಲಿ ಮಾಡುವ ಬಯಕೆಯನ್ನು ಹೊಂದಿದ್ದೇನೆ ಅಂತ ತಿಳಿಸಿದರು.

Comments (0) Trackbacks (0)

No comments yet.


Leave a comment


No trackbacks yet.