Paraspara e-KootaBandhu for quicker news

6Feb/130

Sakaranthi Ratasapatmi

ದಿನಾಂಕ 12.02.2013 ನೇ ಮಂಗಳವಾರ ಕುಂಭ ಸಂಕ್ರಮಣ :- ಗಣಹೋಮ, ಪುಷ್ಫರಥೋತ್ಸವ

ದಿನಾಂಕ 17.02.2013ನೇ ರವಿವಾರ ರಥಸಪ್ತಮಿ :- ಸಂಹಿತಾಭಿಷೇಕ, ಪುಷ್ಫರಥೋತ್ಸವ :- ಪಾರಂಪಳ್ಳಿ ಮಂಟಪ ಉಪಾಧ್ಯರ ಕುಟುಂಬಸ್ಥರ ಸೇವೆ.

ದಿನಾಂಕ 14.03.2013ನೇ ಗುರುವಾರ ಮೀನ ಸಂಕ್ರಮಣ :- ಗಣಹೋಮ, ಪುಷ್ಫರಥೋತ್ಸವ

6Feb/130

Shashwatha Antara Chappara- Arpane

ಸಾಲಿಗ್ರಾಮ :- ಶಾಶ್ವತ ಅಂತರ ಚಪ್ಪರದ (ಸ್ವಾಗತ ಛಾವಣಿ) ಉದ್ಘಾಟನಾ ಸಮಾರಂಭ

ದಿನಾಂಕ 15.01.2013 ಬೆಳಗ್ಗೆ 10-00 ಕ್ಕೆ ಸರಿಯಾಗಿ ಶ್ರೀದೇವಳದ ಎದುರಿನ ರಾಜಾಂಗಣದಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಕೊಡುಗೆಯಲ್ಲಿ ನಿರ್ಮಾಣಗೊಂಡ  ಕಲಾತ್ಮಕವಾದ ಶಾಶ್ವತ ಅಂತರ ಚಪ್ಪರವನ್ನು ಕರ್ನಾಟಕ ಬ್ಯಾಂಕ್  ಮ್ಯಾನೇಜಿಂಗ್ ಡೈರೆಕ್ಟರ್‍ ಆದ  ಶ್ರೀ ಪಿ. ಜಯರಾಮ ಭಟ್ ಇವರು ತಮ್ಮ ಅಮ್ರತ ಹಸ್ತದಿಂದ ದೀಪ ಬೆಳಗಿಸಿವುದರ ಮುಲಕ  ಶ್ರೀಗುರುನರಸಿಂಹ ದೇವರಿಗೆ ಸಮರ್ಪಿಸಿದರು.

ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥರು ಎಲ್ಲರನ್ನು ಸ್ವಾಗತಿಸಿದರು. ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ ವೆಂಕಟ್ರಾವ್, ಕರ್ನಾಟಕ ಬ್ಯಾಂಕ್ ನಿರ್ದೇಶಕರಾದ ಶ್ರೀ ಪಿ.ಜಯರಾಮ ಹಂದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು  ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರು ವಹಿಸಿದ್ದರು, ಶ್ರೀಎ ಜಗದೀಶ ಕಾರಂತರು ಮಾತನಾಡುತ್ತಾ, ಕರ್ನಾಟಕ ಬ್ಯಾಂಕ್ (ಲಿ) ಪ್ರಧಾನ ಕಛೇರಿ ಮಂಗಳೂರು ಇವರು  ಶ್ರೀದೇವಳದ ಆಡಳಿತ ಮಂಡಳಿಯ ಕೋರಿಕೆಯನ್ನು ಮನ್ನಿಸಿ ದೇವಳದ ಮುಂಭಾಗದ ರಾಜಾಂಗಣದಲ್ಲಿ ಶಾಶ್ವತ  ಕಲಾತ್ಮಕ ಅಂತರ ಚಪ್ಪರ (ಸ್ವಾಗತ ಛಾವಣಿ )  ನಿರ್ಮಾಣಕ್ಕೆ ರೂ ಹತ್ತು ಲಕ್ಷವನ್ನು ದೇಣಿಗೆ ರೂಪದಲ್ಲಿ ತತ್ ಕ್ಷಣವೇ ನೀಡಿರುತ್ತಾರೆ. ಈ ಹಿಂದೆಯೂ ಶ್ರೀದೇವಳದ ಗಣಕೀರಣಗೊಳಿಸುವ ನಮ್ಮ ಅಪೇಕ್ಷೆಯನ್ನು ಮನ್ನಿಸಿ ನಮಗೆ ಅಗತ್ಯವಿರುವಷ್ಟು ಕಂಪ್ಯೂಟರ್‍ಗಳನ್ನು ನೀಡಿರುವುದನ್ನು ಈ ಸಂಧರ್ಭದಲ್ಲಿ ಸ್ಮರಿಸಿಕೊಳ್ಳುತ್ತೇವೆ. ಶ್ರೀದೇವಳದ ಬಹುತೇಕ ಆರ್ಥಿಕ ವ್ಯವಹಾರಗಳನ್ನು ಕರ್ನಾಟಕ ಬ್ಯಾಂಕನ ಚಿತ್ರಪಾಡಿ ಶಾಖೆಯ ಮುಲಕ ನಡೆಸುತ್ತಿದ್ದು ಈ ಶಾಖೆಯ ಪ್ರಬಂಧಕರು ಹಾಗೂ ಸಿಬಂಧಿಗಳ ಸಹಕಾರವನ್ನು ತುಂಬು ಹ್ರದಯದಿಂದ ಸ್ಮರಿಸಿಕೊಳ್ಳುತ್ತೇವೆ. ಈಗಾಗಲೇ ಈ ಕಲಾತ್ಮಕವಾದ ಸ್ವಾಗತ ಛಾವಣಿಗೆ ರೂ. ಹದಿನೆಂಟು ಲಕ್ಷದ ಐವತ್ತು ಸಾವಿರ  ಖರ್ಚು ತಗಲಿದ್ದು ಕರ್ನಾಟಕ ಬ್ಯಾಂಕ್ ನಮಗೆ ರೂ. ಹತ್ತು ಲಕ್ಷದ ಪ್ರಧಾನ ದೇಣಿಗೆ ನೀಡಿದ್ದು ಇನ್ನುಳಿದ ಎಂಟು ಲಕ್ಷದ ಐವತ್ತು ಸಾವಿರ ಅವಕಾಶವಿದ್ದಲ್ಲಿ ದೇಣಿಗೆ ರೂಪದಲ್ಲಿ ನೀಡುವಂತೆ ತಮ್ಮನ್ನು ವಿನಂತಿಸಿಕೊಳ್ಳುತ್ತೇವೆ, ಎನ್ನುತಾ  ತಮ್ಮ ಮಾತನ್ನು ಮುಗಿಸಿದರು

ದೀಪ ಬೇಳಗಿಸಿ ಸಮರ್ಪಣೆ ಮಾಡುತ್ತೀರುವ ಶ್ರೀ ಪಿ. ಜಯರಾಮ ಭಟ್

ದೀಪ ಬೇಳಗಿಸಿ ಸಮರ್ಪಣೆ ಮಾಡುತ್ತೀರುವ ಶ್ರೀ ಪಿ. ಜಯರಾಮ ಭಟ್

ಉದ್ಘಾಟಕರಾದ ಕನಾಟಕ ಬ್ಯಾಂಕನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಜಯರಾಮ ಭಟ್ ಮಾತನಾಡುತ್ತಾ  ಕೋಟ ಸಮಾಜದವನೇ ಆದ ನಾನು ಈ ಗುರುಸ್ಥಾನದಲ್ಲಿ  ಸೇವೆ ಮಾಡುವ  ಅವಕಾಶ ಒದಗಿ ಬಂದಿದ್ದಾಗಿ ಶ್ರೀದೇವರನ್ನು ಸ್ಮರಿಸಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ವೈ ಸದಾರಾಮ ಹೇರ್ಳೆಯವರು ಧನ್ಯವಾದ ಸಮರ್ಪಣೆ ಮಾಡಿದರು ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಹಿಂದಿನ ಆಡಳಿತ ಮಂಡಳಿಯಲ್ಲಿ ಕಾರ್ಯದಶಿಯಾಗಿದ್ದ ಶ್ರೀ ಬಿ ನಾರಾಯಣ ಸೋಮಯಾಜಿ ವಹಿಸಿದ್ದರು.

ರೂ ಹತ್ತು ಲಕ್ಷದ ಡಿಡಿಯನ್ನು ಶ್ರೀ ಜಯರಾಮ ಭಟ್ ಇವರು ಶ್ರೀದೇವಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರಿಗೆ ಹಸ್ತಾಂತರಿಸಿದರು.

ರೂ ಹತ್ತು ಲಕ್ಷದ ಡಿಡಿಯನ್ನು ಶ್ರೀ ಜಯರಾಮ ಭಟ್ ಇವರು ಶ್ರೀದೇವಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರಿಗೆ ಹಸ್ತಾಂತರಿಸಿದರು.

ಈ ಶುಭ ಸಂಧರ್ಭದಲ್ಲಿ ಕರ್ನಾಟಕ ಬ್ಯಾಂಕ್  ನಿರ್ದೇಶರಾದ ಶ್ರೀ ಮಹಾಬಲೇಶ್ವರ ಭಟ್ , ಶ್ರೀ ಎಂ.ವಿ. ಚಂದ್ರಶೇಖರ ಕಾರಂತ್,  ಹಾಗೂ ಮುಖ್ಯ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂಧಿ ವರ್ಗ, ಶ್ರೀದೇವಳದ ಆಡಳಿತ ಮಂಡಳಿಯ ಸಹ ಧರ್ಮದರ್ಶಿಗಳಾದ,  ಶ್ರೀ ಎಚ್ .ಧರ್ಮರಾಯ ಹಂದೆ ಕೋಟ, ಶ್ರೀ ನಾಗರಾಜ ಬಿ ಶ್ರಂಗೇರಿ, ಶ್ರೀ ಎನ್.ಕ್ರಷ್ಣ ಹೊಳ್ಳ ಕಾಸರಗೋಡು, ವೇ.ಮು.ಅನಂತಪದ್ಮನಾಭ ಐತಾಳ ಕೋಟ, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆಯ ಮತ್ತು ಅಂಗಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಹಿಂದಿನ ಆಡಳಿತ ಮಂಡಳಿಯ ಸದಸ್ಯರು,  ಊರಿನ ಮತ್ತು ಪರವೂರಿನ ಗಣ್ಯ ವ್ಯಕ್ತಿಗಳು, ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾದರು.

ಶ್ರೀ ಪಿ ಜಯರಾಮ ಭಟ್ ಇವರನ್ನು ಶ್ರೀದೇವಳದ ಸಂಪ್ರದಾಯದಂತೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು

ಶ್ರೀ ಪಿ ಜಯರಾಮ ಭಟ್ ಇವರನ್ನು ಶ್ರೀದೇವಳದ ಸಂಪ್ರದಾಯದಂತೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು

ನಂತರ ನೆರೆದಿದ್ದ ಎಲ್ಲರಿಗೂ ಶ್ರೀದೇವರ ಪ್ರಸಾದ ರೂಪದಲ್ಲಿ ಸಿಹಿತಿಂಡಿ ವಿತರಣೆ ಮಾಡಲಾಯಿತು.

5Feb/130

Samskrutika Habba-2013

ಸಾಂಸ್ಕ್ರತಿಕ ಹಬ್ಬ-2013 ಮತ್ತು ಸಾಧಕರಿಗೆ ಗೌರವಾರ್ಪಣೆ

ಪ್ರತಿ ವರ್ಷದಂತೆ ಈ ವರ್ಷವು ಜಾತ್ರೆಯ ಪ್ರಯುಕ್ತ  ದಿನಾಂಕ 13.01.2013 ರಿಂದ 16.01.2013ರವರೆಗೆ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಎಲ್ಲಾ ಕಾರ್ಯಕ್ರಮಗಳು ಯಶಸ್ವಿ ಪ್ರದರ್ಶನಗೊಂಡು ಪ್ರೆಕ್ಷಕರ ಮನಗೆದ್ದಿತು. ಈ ಎಲ್ಲಾ ದಿನಗಳಲ್ಲಿ ಅಧ್ಯಾಪಕರಾದ ಗುಂಡ್ಮಿ ಶ್ರೀ ರಾಮಚಂದ್ರ ಐತಾಳರು ಕಾರ್ಯಕ್ರಮದ ನಿರ್ವಹಣೆ ಜವಬ್ದಾರಿಯನ್ನು  ಯಶಸ್ವಿಯಾಗಿ ನಿಭಾಯಿಸಿದರು.

ಸಾಂಸ್ಕ್ರತಿಕ ಹಬ್ಬ -2013  ಉಧ್ಘಾಟನೆ

ಸಾಂಸ್ಕ್ರತಿಕ ಹಬ್ಬ -2013 ಉದ್ಗಾಟನೆ

ದಿನಾಂಕ 13.01.2013ರ ಭಾನುವಾರ ಸ್ಥಳ :- ನೂತನ ಬಯಲು ರಂಗಮಂದಿರ

ಸಂಜೆ 6-00ಕ್ಕೆ ಸರಿಯಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತ ಮಾಡಿದರು ಹಾಗೂ ಸಹಧರ್ಮದರ್ಶಿಗಳಾದ ಶ್ರೀಆನಂದರಾಮ ಮಧ್ಯಸ್ಥ, ಶ್ರೀ ವೈ. ಸದಾರಾಮ ಹೇರ್ಳೆ,  ಶ್ರೀ ನಾಗರಾಜ ಬಿ ಉಪಸ್ಥಿತರಿದ್ದರು.

ಗೌರವ ಪಾತ್ರರಾದ ಶ್ರೀ ಕೆ. ತಾರನಾಥ ಹೊಳ್ಳ, ಸಮಾಜ ಸೇವಕ

ಗೌರವ ಪಾತ್ರರಾದ ಶ್ರೀ ಕೆ. ತಾರನಾಥ ಹೊಳ್ಳ, ಸಮಾಜ ಸೇವಕ

ಶ್ರೀ ಕೆ. ತಾರನಾಥ ಹೊಳ್ಳ (ಸಮಾಜ ಸೇವಕ) :- ಪ್ರಸ್ತುತ ಕೂಟಮಹಾಜಗತ್ತು ಸಾಲಿಗ್ರಾಮ(ರಿ) ಇದರ ಕೇಂದ್ರಸಂಸ್ಥೆಯಲ್ಲಿ ಕೋಶಾಧಿಕಾರಿಯಾಗಿರುವ ಇವರು ಗೆಳೆಯರ ಬಳಗ ತಾರನಾಥ ಹೊಳ್ಳರು ಎಂದೇ ಪ್ರಸಿದ್ಧರಾಗಿದ್ದಾರೆ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಮುಖ್ಯ ಅಧಿಕಾರಿಗಳಾಗಿ ಸಮಾಜಕ್ಕಾಗಿ ದುಡಿದು ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗೌರವ ಪಾತ್ರರಾದ ಶ್ರೀ ಕೆ.ಶಿವಾನಂದ, ಯಕ್ಷಗಾನದ ಚಂಡೆ ಕಲಾವಿದ

ಗೌರವ ಪಾತ್ರರಾದ ಶ್ರೀ ಕೆ.ಶಿವಾನಂದ, ಯಕ್ಷಗಾನದ ಚಂಡೆ ಕಲಾವಿದ

ಶ್ರೀ ಶಿವಾನಂದ ಕೋಟ (ಚಂಡೆ ಕಲಾವಿದ):- ಶ್ರೀಯುತ ಕೆ. ಶಿವಾನಂದ ಇವರು ಸಾಲಿಗ್ರಾಮ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ ಚಂಡೆ ವಾದಕರಾಗಿ ಕೆಲಸ ಮಾಡುತ್ತಿದ್ದು ಪ್ರಸಿದ್ದ ಕಲಾವಿದರಾಗಿ ಹಲಾವರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಗೌರವ ಪಾತ್ರರಾದ ಶ್ರೀ ಪಿ.ರಾಮ ಗಾಣಿಗ

ಗೌರವ ಪಾತ್ರರಾದ ಶ್ರೀ ಪಿ.ರಾಮ ಗಾಣಿಗ

ಶ್ರೀ ಪಿ ರಾಮಗಾಣಿಗ (ಶ್ರೀದೇವಳದ ಸೇವಕ) :- ಶ್ರೀಯುತ ರಾಮ ಗಾಣಿಗರು ಸುಮಾರು 30 ವರ್ಷಗಳಿಂದ ಶ್ರೀಆಂಜನೇಯ ದೇವಳದ ಎಣ್ಣೆ ಸಂಗ್ರಹಣೆ ಮತ್ತು  ಶ್ರೀದೇವಳದ ಶುಚಿತ್ವವನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ.

ಸಮಾಜದಲ್ಲಿ ಉತ್ತಮ ಸೇವೆ ಮಾಡಿದ ಇವರನ್ನು ಶ್ರೀದೇವಳದ ಆಡಳಿ ಮಂಡಳಿಯು ಗುರುತಿಸಿ  ಶಾಲು ಹೊದೆಸಿ ಗೌರವ ಪತ್ರದೊಂದಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ganesh sharma

ಶ್ರೀಗುರುನರಸಿಂಹ ನಿಗಮ ಆಗಮ ಪಾಠಶಾಲೆಯಲ್ಲಿ ವೇದಾಧ್ಯಯನ ಪುರ್ತಿಗೊಳಿಸಿದ ಹಾಸನದ ಶ್ರೀ ಗಣೇಶಶರ್ಮ ಇವರನ್ನು ಅಂಕಪಟ್ಟಿ, ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಸಂಜೆ 7-00 ರಿಂದ ನಡೆದ ಮನೋರಂಜನಾ ಕಾರ್ಯಕ್ರಮವಾಗಿ ಕು|| ಅಮ್ರತಾ ಉಪಾಧ್ಯ ಚಿತ್ರಪಾಡಿ ಮತ್ತು ಕು|| ಸಿಂಧು ಭಾಗವತ ಗುಂಡ್ಮಿ ಇವರಿಂದ ಭರತನಾಟ್ಯ ಮತ್ತು

1 052

ಸ್ರಷ್ಠಿ ನ್ರತ್ಯ ಕಲಾಕುಠೀರ ಇವರಿಂದ ವೈವಿಧ್ಯಮಯ ನ್ರತ್ಯದಿಂದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

1 076

ದಿನಾಂಕ 14.01.2013ರ ಸೋಮವಾರ

ಕು|| ವೈಷ್ಣವಿ ರಾವ್ ಪಡುಬಿದ್ರೆ ಇವರಿಂದ ವೈವಿಧ್ಯ ನ್ರತ್ಯ ಹಾಗೂ ಪ್ರಸಿದ್ಧ ನ್ರತ್ಯ ತಂಡ ನ್ರತ್ಯನೀಕೇತನ ಕೊಡವೂರು  ಇವರಿಂದ ವಿವಿಧ ನ್ರತ್ಯ ಪ್ರದರ್ಶನದಿಂದ ಅಂದಿನ ಕಾರ್ಯಕ್ರಮಗಳು ಜನ ಮೆಚ್ಚುಗೆಗೊಳಿಸಿತು.

ದಿನಾಂಕ 15.01.2013ರ ಮಂಗಳವಾರ :- ಸಭಾ ಕಾರ್ಯಕ್ರಮ - ಸಮ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ.

ಸಂಜೆ 6.00 ರಿಂದ ಶ್ರೀಮತಿ ಅನ್ನಪೂರ್ಣ ಸೋಮಯಾಜಿ ಬೆಂಗಳೂರು ಇವರು ತಮ್ಮ ತಂಡದೊಂದಿಗೆ ಬಂದು ಭಕ್ತಿ ರಸಮಂಜರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಸಂಜೆ 7.00ರಿಂದ ಸಭಾಕಾರ್ಯಕ್ರಮ ಪ್ರಾರಂಭಗೊಂಡಿತು.

ಸಭೆಯ ಅಧ್ಯಕ್ಷರಾಗಿ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ.ವೆಂಕಟ್ರಾವ್ ಬೆಂಗಳೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ. ರಾಜು ಪೂಜಾರಿ ಕಾರ್ಕಡ ಇವರು ಆಗಮಿಸಿದ್ದರು. ಶ್ರೀದೇವಳದ ಆಡಳಿತ ಮಂಡಳಿ ಸಹ ಧರ್ಮದರ್ಶಿಗಳಾದ ಶ್ರೀ ಆನಂದರಾಮ ಮಧ್ಯಸ್ಥ ಪಾರಂಪಳ್ಳಿ, ಶ್ರೀ ವೈ.ಸದಾರಾಮ ಹೇರ್ಳೆ ಮಣಿಪಾಲ, ಶ್ರೀನಾಗರಾಜ ಬಿ. ಶ್ರಂಗೇರಿ, ಶ್ರೀ ಎನ್.ಕ್ರಷ್ಣ ಹೊಳ್ಳ ಕಾಸರಗೋಡು, ಶ್ರೀ ಕೆ.ಯಜ್ಞನಾರಾಯಣ ಹೇರ್ಳೆ ಬೆಂಗಳೂರು, ವೇ.ಮು.ಅನಂತಪದ್ಮನಾಭ ಐತಾಳ ಕೋಟ, ಶ್ರೀಎಚ್ ಧರ್ಮರಾಯ ಹಂದೆ ಕೋಟ,  ಇವರೆಲ್ಲರು ಉಪಸ್ಥಿತರಿದ್ದರು.

ಗೌರವ ಪಾತ್ರರಾದ ಡಾ|| ವಿಶ್ವೇಶ್ವರ ತುಂಗ ಸಾಲಿಗ್ರಾಮ

ಗೌರವ ಪಾತ್ರರಾದ ಡಾ|| ವಿಶ್ವೇಶ್ವರ ತುಂಗ ಸಾಲಿಗ್ರಾಮ

ಡಾ|| ವಿಶ್ವೇಶ್ವರ ತುಂಗ (ವೈದ್ಯ) :- ಶ್ರೀಯುತರು ದಿನದಲ್ಲಿ ಯಾವುದೇ ಸಮಯದಲ್ಲಿ ಎಲ್ಲಿಗೆ ಕರೆದರು ಕೂಡ ಬೇಸರಗೊಳ್ಳದೆ ಸಮಯಕ್ಕೆ ಸರಿಯಾಗಿ ಬಂದು ಚಿಕಿತ್ಸೆಯನ್ನು ಹಿಂದಿನ ದಿನದಿಂದಲೂ ನೀಡುತ್ತ ಬಂದಿದ್ದು ಇಂದಿಗೂ ಕೂಡ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಸಾಲಿಗ್ರಾಮದ ಪ್ರಸಿದ್ಧ ಹಾಗೂ ಅನುಭವಿ ವೈದ್ಯರಾದ ಶ್ರೀ ವಿಶ್ವೇಶ್ವರ ತುಂಗ ಇವರ ಜೀವ ಶ್ರೇಷ್ಠ ಸಾಧನೆ ಮತ್ತು ಜನ ಸೇವೆಯನ್ನು ಗುರುತಿಸಿ ಆಡಳಿತ ಮಂಡಳಿಯು ಶಾಲು ಹೊದೆಸಿ ಗೌರವ ಪತ್ರದೊಂದಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ಗೌರವ ಪಾತ್ರರಾದ ಶ್ರೀ ಎ.ಅನಂತಕ್ರಷ್ಣ ಅಧ್ಯಕ್ಷರು ಕರ್ನಾಟಕ ಬ್ಯಾಂಕ್

ಗೌರವ ಪಾತ್ರರಾದ ಶ್ರೀ ಎ.ಅನಂತಕ್ರಷ್ಣ ಅಧ್ಯಕ್ಷರು ಕರ್ನಾಟಕ ಬ್ಯಾಂಕ್

ಶ್ರೀ ಎ.ಅನಂತಕ್ರಷ್ಣ  (ಅಧ್ಯಕ್ಷರು, ಕರ್ನಾಟಕ ಬ್ಯಾಂಕ್) :- ಕರ್ನಾಟಕ ಬ್ಯಾಂಕ್ ನಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಸೇರ್ಪಡೆಗೊಂಡು ಅಲ್ಲಿ ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಗಳಿಂದ ಯಶಸ್ಸಿನ ಒಂದೊಂದೆ ಮೆಟ್ಟಿಲನ್ನು ಏರುತ್ತಾ ಬ್ಯಾಂಕನ ಮೇನೆಜಿಂಗ್ ಡೈರೆಕ್ಟರ್‍ ಆಗಿ ಪದನ್ನೋತಿ ಹೊಂದಿ ದಾಖಲೆಯ ಎರಡು ಅವಧಿಯಲ್ಲಿ ಆ ಹುದ್ದೆಯಲ್ಲಿ ಬ್ಯಾಂಕನ ಸರ್ವೋತೋಮುಖ ಬೇಳವಣಿಗೆ ಕಾರಣರಾಗಿ  ಸಂಸ್ಥೆಯ ಉದ್ಯೋಗಿಗಳು, ಗ್ರಾಹಕರ ಹಾಗೂ ಶೇರುದಾರರ ಪ್ರೀತಿ ಅಭಿಮಾನಗಳಿಗೆ ಪಾತ್ರರಾಗಿದ್ದು ನಿವ್ರತ್ತಿಯ ನಂತರವು ಸಹ ಸಂಸ್ಥೆಯ ಅಧ್ಯಕ್ಷರಾಗಿ ಮುನ್ನಡೆಸುವ ಹಾದಿಯಲ್ಲಿ ಮಾರ್ಗದರ್ಶಕರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ.ಕರ್ನಾಟಕ ಬ್ಯಾಂಕ (ಲಿ) ಇದರ ಅಧ್ಯಕ್ಷ  ಹಾಗೂ, ಕೋಟ ಸಮಾಜದ ಹೆಮ್ಮೆಯ ಪುತ್ರರಾಗಿರುವ ಶ್ರೀಎ.ಅನಂತಕ್ರಷ್ಣ ಇವರ ಜೀವನ ಶ್ರೇಷ್ಠ ಸಾಧನೆಯನ್ನು ಗೌರವಿಸಿ ಶ್ರೀದೇವಳದ ಆಡಳಿತ ಮಂಡಳಿಯು ಶ್ರೀದೇವರ ಪ್ರಸಾದ ನೀಡಿ ಅಭಿನಂದಿಸಿದರು.

ರಾತ್ರಿ 8.30 ರಿಂದ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳಿಸಿದ ಜ್ಞಾನ ಐತಾಳ ನೇತ್ರತ್ವದ ಹೆಜ್ಜೆನಾದ ತಂಡದ ಸಂಗೀತ ಹಾಗೂ ನ್ರತ್ಯ ವೈಭವವು  ಅಪಾರ ಪ್ರೇಕ್ಷಕರ ಮೆಚ್ಚುಗೆಗಳಿಸಿ ಪ್ರಶಂಸೆಗೆ ಪಾತ್ರವಾಯಿತು ಇಂತಹ ಸುಂದರವಾದ ಕಾರ್ಯಕ್ರಮವನ್ನು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಅಂಗಸಂಸ್ಥೆ :- ಉತ್ತರಹಳ್ಳಿ ಇವರು ಪ್ರಾಯೋಜಿಸಿದರು.

ದಿನಾಂಕ 16.01.2013 ಬುಧವಾರ

ಶ್ರೀದೇವಳದ ಒಳಗಿನ ಓಲಗ ಮಂಟಪದಲ್ಲಿ ಶ್ರೀದೇವರ ಅಷ್ಟವಧಾನ ಸೇವೆಯ ಪ್ರಯುಕ್ತ ಪಾರಂಪಳ್ಳಿ ಶ್ರೀ ರಾಮಚಂದ್ರ ಅಡಿಗ ಮತ್ತು ಸಂಗಡಿಗರಿಂದ ವೀಣಾವಾದನವು ಜರುಗಿತು.

ವೀಣಾವಾದ ಶ್ರೀ ಪಾರಂಪಳ್ಳಿ ರಾಮಚಂದ್ರ ಐತಾಳರು ಮತ್ತು ಸಂಗಡಿಗರಿಂದ

ವೀಣಾವಾದನ:- ಶ್ರೀ ಪಾರಂಪಳ್ಳಿ ರಾಮಚಂದ್ರ ಐತಾಳರು ಮತ್ತು ಸಂಗಡಿಗರಿಂದ

ಶ್ರೀಗುರುನರಸಿಂಹ ಬಯಲು ರಂಗಮಂದಿರದಲ್ಲಿ ಯುವ ಮಿತ್ರಬಳಗ ಪಾರಂಪಳ್ಳಿ  ಇವರು ಅಂದಿನ ಎಲ್ಲಾ ಕಾರ್ಯಕ್ರಮಗಳನ್ನು ಪ್ರಾಯೋಜಿಸಿದ್ದು ಅಲ್ಲದೇ ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿಯನ್ನು ಕೂಡ ಅವರೇ ಹೊತ್ತಿದ್ದರು. ಸಂಜೆ 6.30 ಕ್ಕೆ ಜಾಗೋ ಭಾರತ ಖ್ಯಾತಿಯ  ಶ್ರೀ ಚಕ್ರವರ್ತಿ ಸೂಲಿಬೆಲೆ ಇವರಿಂದ " ಮಲಗಿದ್ದು ಸಾಕು ಇನ್ನು ಎಳೋಣ " ಉಪನ್ಯಾಸವನ್ನು ನೀಡಿದರು. ರಾತ್ರಿ 8-00 ಕ್ಕೆ ಸಭಾ ಕಾರ್ಯಕ್ರಮ, ನಂತರ ಮಂಗಳೂರು ಜನನಿ ಕಲಾ ತಂಡಾ ಮಂಗಳೂರು ಇವರಿಂದ ರೋಮಾಂಚನಕಾರಿ ಹಾಗೂ ಭಯಾನಕ ಸನ್ನಿವೇಶಗಳನ್ನೊಳಗೊಂಡ "ನನ್ನ ಚಿಕ್ಕಮ್ಮ" ನಾಟಕವು ಯಶಸ್ವಿ ಪ್ರದರ್ಶನಗೊಂಡು ಜನರ ಮೆಚ್ಚುಗೆ ಗಳಿಸಿತು.

ಅಂದಿಗೆ ಜಾತ್ರೆಯ ಸಾಂಸ್ಕ್ರತಿಕ ಹಬ್ಬವು ಯಶಸ್ವಿಯಾಗಿ ಕೊನೆಗೊಂಡು ಜನರ ಅಪಾರ ಮೆಚ್ಚುಗೆ ಗಳಿಸಿತು.

4Feb/130

Habba – 2013

ಬ್ರಹ್ಮರಥ

ಬ್ರಹ್ಮರಥ

ಸಾಲಿಗ್ರಾಮ ಹಬ್ಬ -2013

ಉಡುಪಿ ಜಿಲ್ಲೆಯ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಸಾಲಿಗ್ರಾಮ ಹಬ್ಬ ಎಂದೇ ಹೆಸರುವಾಸಿಯಾದ ಶ್ರೀಗುರುನರಸಿಂಹ ದೇವಳದ ಜಾತ್ರೆಯು ದಿನಾಂಕ 13.01.2013ರ ಸಂಜೆ 7.30 ಕ್ಕೆ ಮಹೂರ್ತಬಲಿ, ಅಂಕುರಾರೋಪಣದಿಂದ ಪ್ರಾರಂಭಿಸಿ ತಾ.18.01.13ರ ಬೆಳಗ್ಗೆ ಸಂಪ್ರೋಕ್ಷಣೆ ಮತ್ತು ಗಣಹೋಮದೊಂದಿಗೆ ಸಂಪನ್ನಗೊಂಡಿತು. ಆಡಳಿತ ಮಂಡಳಿಯ ಅದ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ಮಾತನಾಡುತ್ತಾ  ಜಾತ್ರೆಯ ಸಂಪೂರ್ಣ ಯಶಸ್ಸಿಗೆ, ಶ್ರೀದೇವರ ಕ್ರಪೆ ಮತ್ತು  ಭಕ್ತರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರವೇ ಕಾರಣ, ಸಹಕರಿಸಿದ ಎಲ್ಲ ಭಕ್ತರಿಗೆ ಧನ್ಯವಾದ ಹೇಳುತ್ತಾ  ಶ್ರೀದೇವಳದ ಎಲ್ಲಾ ಕಾರ್ಯಕ್ರಮಗಳಲ್ಲಿ ಇದೇ ರೀತಿಯ ಸಹಕಾರವನ್ನು ಬಯಸಿದರು.

ಶ್ರೀದೇವಳದ ತಂತ್ರಿಗಳಾದ ವೇ.ಮು.ಕ್ರಷ್ಣ ಸೋಮಯಾಜಿ, ಜೋಯಿಸರಾದ ವೇ.ಮು.ರತ್ನಾಕರ ಸೋಮಯಾಜಿ, ಯಜಮಾನರಾದ ಶ್ರೀಗಣೇಶ ಐತಾಳ, ಅರ್ಚಕರಾದ ವೇ.ಮು. ವಿಜಯಕುಮಾರ ಅಡಿಗ, ವೇ.ಮು.ಜನಾರ್ದನ ಅಡಿಗ ಹಾಗೂ ಉಪಾಧಿವಂತರು, ಸಹ ಅರ್ಚಕರು, ಪುರೋಹಿತ ವ್ರಂದ ಹೀಗೆ ಎಲ್ಲರ ಸಂಪೂರ್ಣ ಸಹಕಾರದೊಂದಿಗೆ ಶ್ರೀದೇವಳದ ಜಾತ್ರೆಯ ಸಂಬಂಧಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ವಿಘ್ನವಿಲ್ಲದೆ ಸಾಂಗೋಪಸಾಂಗವಾಗಿ ನೇರವೇರಿತು.

ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತ ಐರೋಡಿ , ಕಾರ್ಯದರ್ಶಿಯಾದ ಶ್ರೀ ಆನಂದರಾಮ ಮಧ್ಯಸ್ಥ ಪಾರಂಪಳ್ಳಿ ಕೋಶಾಧಿಕಾರಿಯಾದ ಶ್ರೀ. ವೈ ಸದಾರಾಮ ಹೇರ್ಳೆ ಮಣಿಪಾಲ, ಸಹಧರ್ಮದರ್ಶಿಗಳಾದ ಶ್ರೀ ಎಚ್.ಧರ್ಮರಾಯ ಹಂದೆ ಕೋಟ, ಶ್ರೀಕೆ ಯಜ್ಞನಾರಾಯಣ ಹೇರ್ಳೆ ಬೆಂಗಳೂರು, ವೇ.ಮು.ಆನಂತಪದ್ಮನಾಭ ಐತಾಳ ಕೋಟ, ಶ್ರೀ ಬಿ.ನಾಗರಾಜ ಶ್ರಂಗೇರಿ, ಶ್ರೀ ಎನ್ ಕ್ರಷ್ಣ ಹೊಳ್ಳ ಕಾಸರಗೋಡು, ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆ ಹಾಗೂ ಎಲ್ಲಾ ಅಂಗಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಮೋಕ್ತೇಸರರು, ಊರ ಪರವೂರಿನ ಗಣ್ಯ ವ್ಯಕ್ತಿಗಳು, ದಾನಿಗಳು, ಭಕ್ತರು ಶ್ರೀದೇವಳದ ಸಿಬ್ಬಂದಿ ವರ್ಗ, ಹಾಗೂ ಊರಿನ ಹತ್ತು ಸಮಸ್ತರ ಸಹಕಾರದಿಂದ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೇರವೇರಿತು.

ದಿನಾಂಕ 14.01.2013 ಸೋಮವಾರ,

ದಿನಾಂಕ 14.01.2013 ಸೋಮವಾರ ಬೆಳಗ್ಗೆ  ಗಣಹೋಮ, ನರಸಿಂಹ ಹೋಮ, ಮಧ್ಯಾಹ್ನ 12-00ಕ್ಕೆ ಮಹಾಪೂಜೆ, ಪುಷ್ಫರಥೋತ್ಸವ ನಂತರ ಭೋಜನ ಪ್ರಸಾದ ವಿತರಣೆ ಮಾಡಲಾಯಿತು.

ಅಡಕೆ ಮರವನ್ನು ಕಾರ್ಕಡ ಗ್ರಾಮದಿಂದ ಪೂಜೆಗೊಳಿಸಿ ಮೆರವಣಿಗೆಯಲ್ಲಿ ತರುವ ದ್ರಶ್ಯ

ಅಡಕೆ ಮರವನ್ನು ಕಾರ್ಕಡ ಗ್ರಾಮದಿಂದ ಪೂಜೆಗೊಳಿಸಿ ಮೆರವಣಿಗೆಯಲ್ಲಿ ತರುವ ದ್ರಶ್ಯ

ಸಂಜೆ ಕಾರ್ಕಡ ಬಡಾಹೋಳಿ ಗ್ರಾಮಸ್ಥರಿಂದ ಅಡಕೆ (ಧ್ವಜ) ಮರ ಪೂಜೆಗೊಳಿಸಿ ಶ್ರೀದೇವಳದ ಬಿರಿದು ಬಾವಲಿ ಮಂಗಳವಾದ್ಯಗಳ ಮೆರವಣಿಗೆಯಲ್ಲಿ  ಶ್ರೀದೇವಳಕ್ಕೆ  ತರಲಾಯಿತು, ಚಿತ್ರಪಾಡಿ ಗ್ರಾಮಸ್ಥರು ವಾಡಿಕೆಯಂತೆ ಬಾಳೆ ಮರವನ್ನು ತಂದು ಅಡಕೆ ಮರದೊಂದಿಗೆ ಶ್ರೀದೇವಳದ ಧ್ವಜ ಸ್ತಂಭಕ್ಕೆ ಏರಿಸಿ ಕಟ್ಟಲಾಯಿತು.

ಅಡಕೆ (ಧ್ವಜ) ಬಾಳೆ ಮರವನ್ನು ಧ್ವಜಸ್ತಂಭಕ್ಕೆ ಕಟ್ಟುವ ದ್ರಶ್ಯ

ಅಡಕೆ (ಧ್ವಜ) ಬಾಳೆ ಮರವನ್ನು ಧ್ವಜಸ್ತಂಭಕ್ಕೆ ಕಟ್ಟುವ ದ್ರಶ್ಯ

ಗರುಡ ಹೋಮ ಮುಂತಾದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಧ್ವಜಮರಕ್ಕೆ ಕಲಶಾಭಿಷೇಕ ಪೂಜೆ ಮಹಾಮಂಗಳಾರತಿಯನ್ನು ಮಾಡಿ ಗರುಡಪಟ (ಧ್ವಜರೋಹಣ) ವನ್ನು ಏರಿಸಿಲಾಯಿತು.

ಧ್ವಜಾರೋಹಣದ ದ್ರಶ್ಯ

ಧ್ವಜಾರೋಹಣದ ದ್ರಶ್ಯ

1 207

ನಂತರ ಅಂಧ್ರಪ್ರದೇಶದಲ್ಲಿರುವ ಚಂದ್ರಮತಿ ಕುಟುಂಬಸ್ಥರ ಶಾಶ್ವತಸೇವೆಯಾದ ಕಿರಿರಂಗಪೂಜೆ ಉತ್ಸವವನ್ನು ಮಾಡಲಾಯಿತು.

ದಿನಾಂಕ 15.01.2013 ಮಂಗಳವಾರ,

ಶ್ರೀದೇವರಿಗೆ ವಿಶೇಷ ಪೂಜೆ, ನವಕಪ್ರಧಾನ ಹೋಮ, ಕಲಾಶಾಭಿಷೇಕ, ಮಹಾಮಂಗಳಾರತಿ, ನಿತ್ಯಬಲಿಯನ್ನು ಮಾಡಲಾಯಿತು. ಶ್ರೀಮತಿ ಸುಲೋಚನಾ ಉಪಾಧ್ಯ ಜನತಾ ಕಾಫಿ ಸಪ್ಲಾಯಿಸ್ ಬೆಂಗಳೂರು ಇವರು ಮಧ್ಯಾಹ್ನದ ಅನ್ನಸಂತರ್ಪಣೆಯನ್ನು ನಡೆಸಿಕೊಟ್ಟರು. ಸುಮಾರು 721 ಜನ ಭಕ್ತಾಧಿಗಳು ಭೋಜನ ಪ್ರಸಾದವನ್ನು ಸ್ವೀಕರಿಸಿದರು.

ಸಂಜೆಯ ಉತ್ಸವಬಲಿಯ ನೋಟ

ಸಂಜೆಯ ಉತ್ಸವಬಲಿಯ ನೋಟ (ಚಂಡೆ ಸುತ್ತು ಸೇವೆ)

ಸಂಜೆ 5.00ಕ್ಕೆ  ಉತ್ಸವ ಬಲಿಯಲ್ಲಿ ವಿಶೇಷ ಆಕರ್ಷಣೆಯಾದ ಚಂಡೆ ಸುತ್ತು ಸೇವೆ ಎಲ್ಲರನ್ನು ಆಕರ್ಷಿಸಿತು ನಂತರ ಕಟ್ಟೆಪೂಜೆ, ರಜತ ಪಾಲಕಿಯಲ್ಲಿ ಶ್ರೀದೇವರು ಸಾಂಪ್ರಾದಾಯಿಕ ಕಟ್ಟೆಗಳಿಗೆ ಹೋಗಿ ಅಲ್ಲಿ ಪೂಜೆಗಳನ್ನು ಸ್ವೀಕರಿಸಿ ಶ್ರೀದೇವಳಕ್ಕೆ ಹಿಂದುರಗಲಾಯಿತು.

ಕಟ್ಟೆಪೂಜೆ

ಕಟ್ಟೆಪೂಜೆ

ಅಶ್ವತ ಕಟ್ಟೆಯಲ್ಲಿ ಪೂಜೆಗೊಳ್ಳುತ್ತೀರುವ ಶ್ರೀದೇವರು

ಅಶ್ವತ ಕಟ್ಟೆಯಲ್ಲಿ ಪೂಜೆಗೊಳ್ಳುತ್ತೀರುವ ಶ್ರೀದೇವರು

ನಂತರ ಹಿರೇರಂಗಪೂಜೆ (ಅಗಲು ) ಮಹಾಮಂಗಳಾರತಿ, ಉತ್ಸವಬಲಿ, ಪುಷ್ಫರಥೋತ್ಸವ ಓಲಗ ಮಂಟಪದಲ್ಲಿ ಅಷ್ಟಾವಧಾನಸೇವೆ ಮಂಗಳಾರತಿಯೊಂದಿಗೆ ಅಂದಿನ ಧಾರ್ಮಿಕ ಕಾರ್ಯಕ್ರಮ ಮುಕ್ತಾಯಗೊಂಡಿತು.

ದಿನಾಂಕ 16.01.2013 ಬುಧವಾರ,

1 4231 4241 493

ಬೆಳಗ್ಗೆ ಶ್ರೀದೇವರ ಪೂಜೆ ಸವಾರಿ, ರಥಶುದ್ದಿ,  ನವಕಪ್ರಧಾನ ಹೋಮ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನೆಲ್ಲ ಪೂರೈಸಿ ಮಹಾಮಂಗಳಾರತಿಯನ್ನು ಮಾಡಲಾಯಿತು. ನಂತರ ಉತ್ಸವಬಲಿ ಚಂಡೆಸುತ್ತು ಸೇವೆಗಳನ್ನೆಲ್ಲ ಪೂರೈಸಿ ಶ್ರೀದೇವರು ಬ್ರಹ್ಮರಥದ ಹತ್ತಿರ ಬಂದು ಅಲ್ಲಿನ ಎಲ್ಲಾ ವಿಧಿ ವಿಧಾನಗಳನ್ನು ಪೂರೈಸಿ ಬ್ರಹ್ಮರಥವನ್ನು ಏರಿ ರಥದ ಪೀಠದಲ್ಲಿ ಆಸೀನರಾದರು ನಂತರ ಪೂಜೆ ಮಹಾಮಂಗಳಾರತಿಯನ್ನು ಮಾಡಿ ನೆರೆದಿದ್ದ ಸಾವಿರಾರು ಭಕ್ತರು ಬ್ರಹ್ಮರಥವನ್ನು ಎಳೆದು ಕ್ರತಾರ್ಥರಾದರು.

1 4501 452

1 468

1 481

1 4921 4961 5281 5521 5691 575

1 5911 618

ಸಂಜೆ 6.30ರ ತನಕ ರಥದಲ್ಲಿ ಕುಳಿತ ಶ್ರೀದೇವರು ಭಕ್ತಾಧಿಗಳು ಸಮರ್ಪಿಸಿದ ಹಣ್ಣುಕಾಯಿ ಮುಂತಾದ ಹರಕೆ ಸೇವಗಳನ್ನು ಸ್ವೀಕರಿಸಿದರು,. ನಂತರ ಬ್ರಹ್ಮರಥವನ್ನು ಶ್ರೀಆಂಜನೇಯ ದೇವಳದವರೆಗೆ ಎಳೆದು ಅಲ್ಲಿ ಪೂಜೆಗೊಳಿಸಿ ಶ್ರೀದೇವಳಕ್ಕೆ ಹಿಂತುರಗಲಾಯಿತು.  ನಂತರ ಓಲಗಮಂಟಪದಲ್ಲಿ ಅಷ್ಟಾವಧಾನ ಸೇವೆ, ನಂತರ ಭೂತಬಲಿ, ನಿತ್ಯಬಲಿ, ಕಲ್ಯಾಣೋತ್ಸವ, ಶಯನೋತ್ಸವದೊಂದಿಗೆ  ಅಂದಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

1 6611 6861 7001 7041 7021 229

ಮಧ್ಯಾಹ್ನ ದಣಿದ ಭಕ್ತಾದಿಗಳಿಗೆ  ಬೆಂಗಳೂರಿನ ಓರ್ವ ಭಕ್ತರು ಮತ್ತು  ಎ.ಪಿ. ವೈಕುಂಠಕಾರಂತರ ಸ್ಮರಣಾರ್ಥ ಅವರ ಮಕ್ಕಳು ಪಾನಕ ಪನೀವಾರವನ್ನು ವಿತರಣೆ ಮಾಡಿದರು.

ಮಧ್ಯಾಹ್ನದ ಅನ್ನಸಂತರ್ಪಣೆಯನ್ನು ನಾಗಪ್ಪ ಹೇರ್ಳೆ ಮತ್ತು ಸಾವಿತ್ರಮ್ಮ ದಂಪತಿಗಳ ಸ್ಮರಣಾರ್ಥ ಶ್ರೀಮತಿ ಜಯಲಕ್ಷ್ಮೀ ಯಜ್ಞನಾರಾಯಣ ಹೇರ್ಳೆ ಇವರು ನಡೆಸಿಕೊಟ್ಟರು. ಸುಮಾರು 3,021 ಜನ ಭಕ್ತರು ಭೋಜನ ಪ್ರಸಾದವನ್ನು ಸ್ವೀಕರಿಸಿದರು.

ಸಂಜೆ ಅಷ್ಟಾವಧಾನ ಸೇವೆಯ ನಂತರ ಬಾಳೆಬೆಟ್ಟು ಎಂ.ಸೂರ್ಯನಾರಯಣ ಮಯ್ಯ ಇವರು ಪಾನಕ ಪನೀವಾರನ್ನು ನೆರೆದಿದ್ದ ಭಕ್ತರಿಗೆ ವಿತರಿಸಿದರು.

1 434ಶ್ರೀಆಂಜನೇಯ ಸ್ವಾಮಿ

17.01.2013 ಗುರುವಾರ

ಪ್ರಬೋದೋತ್ಸವ :- ದಿನಾಂಕ 17.01.2013ರ ಬೆಳಗ್ಗೆ 8-00ಕ್ಕೆ ಸುಪ್ರಭಾತ ಸೇವೆ, ಮಹಾಪೂಜೆಯ ನಂತರ ಸವಾರಿ ಉತ್ಸವಬಲಿ ಓಲಗಮಂಟಪ ಸೇವೆಯನ್ನು ಮಾಡಿ ಪ್ರಸಾದವನ್ನು ಹಂಚಲಾಯಿತು. ಮಧ್ಯಾಹ್ನ 12-00ಕ್ಕೆ ಮಹಾಪೂಜೆ, ನಿತ್ಯಬಲಿಯ ನಂತರ ಭೋಜನ ಪ್ರಸಾದ ವಿತರಣೆ . ಭೋಜನ ಪ್ರಸಾದವನ್ನು ಸುಮಾರು 638 ಜನ ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.

1 407

ಸಂಜೆ 5.30ಕ್ಕೆ ವಿಶೇಷಪೂಜೆ ನಂತರ ಉತ್ಸವ ಬಲಿ, ಓಕಳಿ ಸೇವೆ, ಓಲಗ ಮಂಟಪಸೇವೆಯನ್ನು ಪೂರೈಸಿ ಶ್ರೀದೇವರು ರಜತ ಪಾಲಕಿಯಲ್ಲಿ ಕೋಟ ಹಂದೆ ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ವರುಣ ಹೋಮ ಮತ್ತು ಧಾರ್ಮಿಕ ವಿಧಿಗಳನ್ನು ಪೂರೈಸಿ ದೇವಳದ ಕೆರೆಯಲ್ಲಿ ಅಭವ್ರತ ಸ್ನಾನ ಮಾಡಿ ಅಷ್ಟವಧಾನ ಸೇವೆಯನ್ನು ಪೂರೈಸಲಾಯಿತು. ನಂತರ ಮರಳಿ ಬರುವಾಗ ಸಾಂಪ್ರಾದಾಯಿಕ ಕಟ್ಟೆಪೂಜೆಗಳನ್ನೆಲ್ಲ ಮುಗಿಸಿಕೊಡು ಶ್ರೀದೇವಳದ ಓಲಗ ಮಂಟಪದಲ್ಲಿ ಕುಳ್ಳಿರಿಸಲಾಯಿತು.

ಸಾಂಪ್ರಾದಾಯಕ ಕಟ್ಟಪೂಜೆಯ ನೋಟ

ಸಾಂಪ್ರಾದಾಯಕ ಕಟ್ಟಪೂಜೆಯ ನೋಟ

ನಂತರ ಹೋಮಗಳ ಪೂರ್ಣಾಹುತಿ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಧ್ವಜಸ್ತಂಭ ಪೂಜೆ ಮಾಡಿ ಗರುಡ ಪಟ (ಧ್ವಜ ಅವರೋಹಣ) ಇಳಿಸಲಾಯಿತು. ನಂತರ ಶ್ರೀದೇವಳದ ಒಳಗೆ ಪ್ರವೇಶಿಸಿದ ಶ್ರೀದೇವರಿಗೆ ಮಹಾಮಂಗಳಾರತಿಯನ್ನು ಮಾಡಿ ನೆರೆದಿದ್ದ ಭಕ್ತರಿಗೆ ಪ್ರಸಾದವನ್ನು ನೀಡಲಾಯಿತು. ಮಂತ್ರಾಕ್ಷತೆ, ವಸಂತಾರಾಧನೆಯನ್ನು ಮಾಡುವುದರ ಮುಲಕ  ಜಾತ್ರೆಯ ಸಂಬಂಧಿಯ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡು ಸಂಪನ್ನಗೊಂಡಿತು.