Paraspara e-KootaBandhu for quicker news

5Feb/130

Samskrutika Habba-2013

ಸಾಂಸ್ಕ್ರತಿಕ ಹಬ್ಬ-2013 ಮತ್ತು ಸಾಧಕರಿಗೆ ಗೌರವಾರ್ಪಣೆ

ಪ್ರತಿ ವರ್ಷದಂತೆ ಈ ವರ್ಷವು ಜಾತ್ರೆಯ ಪ್ರಯುಕ್ತ  ದಿನಾಂಕ 13.01.2013 ರಿಂದ 16.01.2013ರವರೆಗೆ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಎಲ್ಲಾ ಕಾರ್ಯಕ್ರಮಗಳು ಯಶಸ್ವಿ ಪ್ರದರ್ಶನಗೊಂಡು ಪ್ರೆಕ್ಷಕರ ಮನಗೆದ್ದಿತು. ಈ ಎಲ್ಲಾ ದಿನಗಳಲ್ಲಿ ಅಧ್ಯಾಪಕರಾದ ಗುಂಡ್ಮಿ ಶ್ರೀ ರಾಮಚಂದ್ರ ಐತಾಳರು ಕಾರ್ಯಕ್ರಮದ ನಿರ್ವಹಣೆ ಜವಬ್ದಾರಿಯನ್ನು  ಯಶಸ್ವಿಯಾಗಿ ನಿಭಾಯಿಸಿದರು.

ಸಾಂಸ್ಕ್ರತಿಕ ಹಬ್ಬ -2013  ಉಧ್ಘಾಟನೆ

ಸಾಂಸ್ಕ್ರತಿಕ ಹಬ್ಬ -2013 ಉದ್ಗಾಟನೆ

ದಿನಾಂಕ 13.01.2013ರ ಭಾನುವಾರ ಸ್ಥಳ :- ನೂತನ ಬಯಲು ರಂಗಮಂದಿರ

ಸಂಜೆ 6-00ಕ್ಕೆ ಸರಿಯಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತ ಮಾಡಿದರು ಹಾಗೂ ಸಹಧರ್ಮದರ್ಶಿಗಳಾದ ಶ್ರೀಆನಂದರಾಮ ಮಧ್ಯಸ್ಥ, ಶ್ರೀ ವೈ. ಸದಾರಾಮ ಹೇರ್ಳೆ,  ಶ್ರೀ ನಾಗರಾಜ ಬಿ ಉಪಸ್ಥಿತರಿದ್ದರು.

ಗೌರವ ಪಾತ್ರರಾದ ಶ್ರೀ ಕೆ. ತಾರನಾಥ ಹೊಳ್ಳ, ಸಮಾಜ ಸೇವಕ

ಗೌರವ ಪಾತ್ರರಾದ ಶ್ರೀ ಕೆ. ತಾರನಾಥ ಹೊಳ್ಳ, ಸಮಾಜ ಸೇವಕ

ಶ್ರೀ ಕೆ. ತಾರನಾಥ ಹೊಳ್ಳ (ಸಮಾಜ ಸೇವಕ) :- ಪ್ರಸ್ತುತ ಕೂಟಮಹಾಜಗತ್ತು ಸಾಲಿಗ್ರಾಮ(ರಿ) ಇದರ ಕೇಂದ್ರಸಂಸ್ಥೆಯಲ್ಲಿ ಕೋಶಾಧಿಕಾರಿಯಾಗಿರುವ ಇವರು ಗೆಳೆಯರ ಬಳಗ ತಾರನಾಥ ಹೊಳ್ಳರು ಎಂದೇ ಪ್ರಸಿದ್ಧರಾಗಿದ್ದಾರೆ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಮುಖ್ಯ ಅಧಿಕಾರಿಗಳಾಗಿ ಸಮಾಜಕ್ಕಾಗಿ ದುಡಿದು ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗೌರವ ಪಾತ್ರರಾದ ಶ್ರೀ ಕೆ.ಶಿವಾನಂದ, ಯಕ್ಷಗಾನದ ಚಂಡೆ ಕಲಾವಿದ

ಗೌರವ ಪಾತ್ರರಾದ ಶ್ರೀ ಕೆ.ಶಿವಾನಂದ, ಯಕ್ಷಗಾನದ ಚಂಡೆ ಕಲಾವಿದ

ಶ್ರೀ ಶಿವಾನಂದ ಕೋಟ (ಚಂಡೆ ಕಲಾವಿದ):- ಶ್ರೀಯುತ ಕೆ. ಶಿವಾನಂದ ಇವರು ಸಾಲಿಗ್ರಾಮ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ ಚಂಡೆ ವಾದಕರಾಗಿ ಕೆಲಸ ಮಾಡುತ್ತಿದ್ದು ಪ್ರಸಿದ್ದ ಕಲಾವಿದರಾಗಿ ಹಲಾವರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಗೌರವ ಪಾತ್ರರಾದ ಶ್ರೀ ಪಿ.ರಾಮ ಗಾಣಿಗ

ಗೌರವ ಪಾತ್ರರಾದ ಶ್ರೀ ಪಿ.ರಾಮ ಗಾಣಿಗ

ಶ್ರೀ ಪಿ ರಾಮಗಾಣಿಗ (ಶ್ರೀದೇವಳದ ಸೇವಕ) :- ಶ್ರೀಯುತ ರಾಮ ಗಾಣಿಗರು ಸುಮಾರು 30 ವರ್ಷಗಳಿಂದ ಶ್ರೀಆಂಜನೇಯ ದೇವಳದ ಎಣ್ಣೆ ಸಂಗ್ರಹಣೆ ಮತ್ತು  ಶ್ರೀದೇವಳದ ಶುಚಿತ್ವವನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ.

ಸಮಾಜದಲ್ಲಿ ಉತ್ತಮ ಸೇವೆ ಮಾಡಿದ ಇವರನ್ನು ಶ್ರೀದೇವಳದ ಆಡಳಿ ಮಂಡಳಿಯು ಗುರುತಿಸಿ  ಶಾಲು ಹೊದೆಸಿ ಗೌರವ ಪತ್ರದೊಂದಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ganesh sharma

ಶ್ರೀಗುರುನರಸಿಂಹ ನಿಗಮ ಆಗಮ ಪಾಠಶಾಲೆಯಲ್ಲಿ ವೇದಾಧ್ಯಯನ ಪುರ್ತಿಗೊಳಿಸಿದ ಹಾಸನದ ಶ್ರೀ ಗಣೇಶಶರ್ಮ ಇವರನ್ನು ಅಂಕಪಟ್ಟಿ, ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಸಂಜೆ 7-00 ರಿಂದ ನಡೆದ ಮನೋರಂಜನಾ ಕಾರ್ಯಕ್ರಮವಾಗಿ ಕು|| ಅಮ್ರತಾ ಉಪಾಧ್ಯ ಚಿತ್ರಪಾಡಿ ಮತ್ತು ಕು|| ಸಿಂಧು ಭಾಗವತ ಗುಂಡ್ಮಿ ಇವರಿಂದ ಭರತನಾಟ್ಯ ಮತ್ತು

1 052

ಸ್ರಷ್ಠಿ ನ್ರತ್ಯ ಕಲಾಕುಠೀರ ಇವರಿಂದ ವೈವಿಧ್ಯಮಯ ನ್ರತ್ಯದಿಂದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

1 076

ದಿನಾಂಕ 14.01.2013ರ ಸೋಮವಾರ

ಕು|| ವೈಷ್ಣವಿ ರಾವ್ ಪಡುಬಿದ್ರೆ ಇವರಿಂದ ವೈವಿಧ್ಯ ನ್ರತ್ಯ ಹಾಗೂ ಪ್ರಸಿದ್ಧ ನ್ರತ್ಯ ತಂಡ ನ್ರತ್ಯನೀಕೇತನ ಕೊಡವೂರು  ಇವರಿಂದ ವಿವಿಧ ನ್ರತ್ಯ ಪ್ರದರ್ಶನದಿಂದ ಅಂದಿನ ಕಾರ್ಯಕ್ರಮಗಳು ಜನ ಮೆಚ್ಚುಗೆಗೊಳಿಸಿತು.

ದಿನಾಂಕ 15.01.2013ರ ಮಂಗಳವಾರ :- ಸಭಾ ಕಾರ್ಯಕ್ರಮ - ಸಮ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ.

ಸಂಜೆ 6.00 ರಿಂದ ಶ್ರೀಮತಿ ಅನ್ನಪೂರ್ಣ ಸೋಮಯಾಜಿ ಬೆಂಗಳೂರು ಇವರು ತಮ್ಮ ತಂಡದೊಂದಿಗೆ ಬಂದು ಭಕ್ತಿ ರಸಮಂಜರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಸಂಜೆ 7.00ರಿಂದ ಸಭಾಕಾರ್ಯಕ್ರಮ ಪ್ರಾರಂಭಗೊಂಡಿತು.

ಸಭೆಯ ಅಧ್ಯಕ್ಷರಾಗಿ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ.ವೆಂಕಟ್ರಾವ್ ಬೆಂಗಳೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ. ರಾಜು ಪೂಜಾರಿ ಕಾರ್ಕಡ ಇವರು ಆಗಮಿಸಿದ್ದರು. ಶ್ರೀದೇವಳದ ಆಡಳಿತ ಮಂಡಳಿ ಸಹ ಧರ್ಮದರ್ಶಿಗಳಾದ ಶ್ರೀ ಆನಂದರಾಮ ಮಧ್ಯಸ್ಥ ಪಾರಂಪಳ್ಳಿ, ಶ್ರೀ ವೈ.ಸದಾರಾಮ ಹೇರ್ಳೆ ಮಣಿಪಾಲ, ಶ್ರೀನಾಗರಾಜ ಬಿ. ಶ್ರಂಗೇರಿ, ಶ್ರೀ ಎನ್.ಕ್ರಷ್ಣ ಹೊಳ್ಳ ಕಾಸರಗೋಡು, ಶ್ರೀ ಕೆ.ಯಜ್ಞನಾರಾಯಣ ಹೇರ್ಳೆ ಬೆಂಗಳೂರು, ವೇ.ಮು.ಅನಂತಪದ್ಮನಾಭ ಐತಾಳ ಕೋಟ, ಶ್ರೀಎಚ್ ಧರ್ಮರಾಯ ಹಂದೆ ಕೋಟ,  ಇವರೆಲ್ಲರು ಉಪಸ್ಥಿತರಿದ್ದರು.

ಗೌರವ ಪಾತ್ರರಾದ ಡಾ|| ವಿಶ್ವೇಶ್ವರ ತುಂಗ ಸಾಲಿಗ್ರಾಮ

ಗೌರವ ಪಾತ್ರರಾದ ಡಾ|| ವಿಶ್ವೇಶ್ವರ ತುಂಗ ಸಾಲಿಗ್ರಾಮ

ಡಾ|| ವಿಶ್ವೇಶ್ವರ ತುಂಗ (ವೈದ್ಯ) :- ಶ್ರೀಯುತರು ದಿನದಲ್ಲಿ ಯಾವುದೇ ಸಮಯದಲ್ಲಿ ಎಲ್ಲಿಗೆ ಕರೆದರು ಕೂಡ ಬೇಸರಗೊಳ್ಳದೆ ಸಮಯಕ್ಕೆ ಸರಿಯಾಗಿ ಬಂದು ಚಿಕಿತ್ಸೆಯನ್ನು ಹಿಂದಿನ ದಿನದಿಂದಲೂ ನೀಡುತ್ತ ಬಂದಿದ್ದು ಇಂದಿಗೂ ಕೂಡ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಸಾಲಿಗ್ರಾಮದ ಪ್ರಸಿದ್ಧ ಹಾಗೂ ಅನುಭವಿ ವೈದ್ಯರಾದ ಶ್ರೀ ವಿಶ್ವೇಶ್ವರ ತುಂಗ ಇವರ ಜೀವ ಶ್ರೇಷ್ಠ ಸಾಧನೆ ಮತ್ತು ಜನ ಸೇವೆಯನ್ನು ಗುರುತಿಸಿ ಆಡಳಿತ ಮಂಡಳಿಯು ಶಾಲು ಹೊದೆಸಿ ಗೌರವ ಪತ್ರದೊಂದಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ಗೌರವ ಪಾತ್ರರಾದ ಶ್ರೀ ಎ.ಅನಂತಕ್ರಷ್ಣ ಅಧ್ಯಕ್ಷರು ಕರ್ನಾಟಕ ಬ್ಯಾಂಕ್

ಗೌರವ ಪಾತ್ರರಾದ ಶ್ರೀ ಎ.ಅನಂತಕ್ರಷ್ಣ ಅಧ್ಯಕ್ಷರು ಕರ್ನಾಟಕ ಬ್ಯಾಂಕ್

ಶ್ರೀ ಎ.ಅನಂತಕ್ರಷ್ಣ  (ಅಧ್ಯಕ್ಷರು, ಕರ್ನಾಟಕ ಬ್ಯಾಂಕ್) :- ಕರ್ನಾಟಕ ಬ್ಯಾಂಕ್ ನಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಸೇರ್ಪಡೆಗೊಂಡು ಅಲ್ಲಿ ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಗಳಿಂದ ಯಶಸ್ಸಿನ ಒಂದೊಂದೆ ಮೆಟ್ಟಿಲನ್ನು ಏರುತ್ತಾ ಬ್ಯಾಂಕನ ಮೇನೆಜಿಂಗ್ ಡೈರೆಕ್ಟರ್‍ ಆಗಿ ಪದನ್ನೋತಿ ಹೊಂದಿ ದಾಖಲೆಯ ಎರಡು ಅವಧಿಯಲ್ಲಿ ಆ ಹುದ್ದೆಯಲ್ಲಿ ಬ್ಯಾಂಕನ ಸರ್ವೋತೋಮುಖ ಬೇಳವಣಿಗೆ ಕಾರಣರಾಗಿ  ಸಂಸ್ಥೆಯ ಉದ್ಯೋಗಿಗಳು, ಗ್ರಾಹಕರ ಹಾಗೂ ಶೇರುದಾರರ ಪ್ರೀತಿ ಅಭಿಮಾನಗಳಿಗೆ ಪಾತ್ರರಾಗಿದ್ದು ನಿವ್ರತ್ತಿಯ ನಂತರವು ಸಹ ಸಂಸ್ಥೆಯ ಅಧ್ಯಕ್ಷರಾಗಿ ಮುನ್ನಡೆಸುವ ಹಾದಿಯಲ್ಲಿ ಮಾರ್ಗದರ್ಶಕರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ.ಕರ್ನಾಟಕ ಬ್ಯಾಂಕ (ಲಿ) ಇದರ ಅಧ್ಯಕ್ಷ  ಹಾಗೂ, ಕೋಟ ಸಮಾಜದ ಹೆಮ್ಮೆಯ ಪುತ್ರರಾಗಿರುವ ಶ್ರೀಎ.ಅನಂತಕ್ರಷ್ಣ ಇವರ ಜೀವನ ಶ್ರೇಷ್ಠ ಸಾಧನೆಯನ್ನು ಗೌರವಿಸಿ ಶ್ರೀದೇವಳದ ಆಡಳಿತ ಮಂಡಳಿಯು ಶ್ರೀದೇವರ ಪ್ರಸಾದ ನೀಡಿ ಅಭಿನಂದಿಸಿದರು.

ರಾತ್ರಿ 8.30 ರಿಂದ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳಿಸಿದ ಜ್ಞಾನ ಐತಾಳ ನೇತ್ರತ್ವದ ಹೆಜ್ಜೆನಾದ ತಂಡದ ಸಂಗೀತ ಹಾಗೂ ನ್ರತ್ಯ ವೈಭವವು  ಅಪಾರ ಪ್ರೇಕ್ಷಕರ ಮೆಚ್ಚುಗೆಗಳಿಸಿ ಪ್ರಶಂಸೆಗೆ ಪಾತ್ರವಾಯಿತು ಇಂತಹ ಸುಂದರವಾದ ಕಾರ್ಯಕ್ರಮವನ್ನು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಅಂಗಸಂಸ್ಥೆ :- ಉತ್ತರಹಳ್ಳಿ ಇವರು ಪ್ರಾಯೋಜಿಸಿದರು.

ದಿನಾಂಕ 16.01.2013 ಬುಧವಾರ

ಶ್ರೀದೇವಳದ ಒಳಗಿನ ಓಲಗ ಮಂಟಪದಲ್ಲಿ ಶ್ರೀದೇವರ ಅಷ್ಟವಧಾನ ಸೇವೆಯ ಪ್ರಯುಕ್ತ ಪಾರಂಪಳ್ಳಿ ಶ್ರೀ ರಾಮಚಂದ್ರ ಅಡಿಗ ಮತ್ತು ಸಂಗಡಿಗರಿಂದ ವೀಣಾವಾದನವು ಜರುಗಿತು.

ವೀಣಾವಾದ ಶ್ರೀ ಪಾರಂಪಳ್ಳಿ ರಾಮಚಂದ್ರ ಐತಾಳರು ಮತ್ತು ಸಂಗಡಿಗರಿಂದ

ವೀಣಾವಾದನ:- ಶ್ರೀ ಪಾರಂಪಳ್ಳಿ ರಾಮಚಂದ್ರ ಐತಾಳರು ಮತ್ತು ಸಂಗಡಿಗರಿಂದ

ಶ್ರೀಗುರುನರಸಿಂಹ ಬಯಲು ರಂಗಮಂದಿರದಲ್ಲಿ ಯುವ ಮಿತ್ರಬಳಗ ಪಾರಂಪಳ್ಳಿ  ಇವರು ಅಂದಿನ ಎಲ್ಲಾ ಕಾರ್ಯಕ್ರಮಗಳನ್ನು ಪ್ರಾಯೋಜಿಸಿದ್ದು ಅಲ್ಲದೇ ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿಯನ್ನು ಕೂಡ ಅವರೇ ಹೊತ್ತಿದ್ದರು. ಸಂಜೆ 6.30 ಕ್ಕೆ ಜಾಗೋ ಭಾರತ ಖ್ಯಾತಿಯ  ಶ್ರೀ ಚಕ್ರವರ್ತಿ ಸೂಲಿಬೆಲೆ ಇವರಿಂದ " ಮಲಗಿದ್ದು ಸಾಕು ಇನ್ನು ಎಳೋಣ " ಉಪನ್ಯಾಸವನ್ನು ನೀಡಿದರು. ರಾತ್ರಿ 8-00 ಕ್ಕೆ ಸಭಾ ಕಾರ್ಯಕ್ರಮ, ನಂತರ ಮಂಗಳೂರು ಜನನಿ ಕಲಾ ತಂಡಾ ಮಂಗಳೂರು ಇವರಿಂದ ರೋಮಾಂಚನಕಾರಿ ಹಾಗೂ ಭಯಾನಕ ಸನ್ನಿವೇಶಗಳನ್ನೊಳಗೊಂಡ "ನನ್ನ ಚಿಕ್ಕಮ್ಮ" ನಾಟಕವು ಯಶಸ್ವಿ ಪ್ರದರ್ಶನಗೊಂಡು ಜನರ ಮೆಚ್ಚುಗೆ ಗಳಿಸಿತು.

ಅಂದಿಗೆ ಜಾತ್ರೆಯ ಸಾಂಸ್ಕ್ರತಿಕ ಹಬ್ಬವು ಯಶಸ್ವಿಯಾಗಿ ಕೊನೆಗೊಂಡು ಜನರ ಅಪಾರ ಮೆಚ್ಚುಗೆ ಗಳಿಸಿತು.