Paraspara e-KootaBandhu for quicker news

6Feb/130

Sakaranthi Ratasapatmi

ದಿನಾಂಕ 12.02.2013 ನೇ ಮಂಗಳವಾರ ಕುಂಭ ಸಂಕ್ರಮಣ :- ಗಣಹೋಮ, ಪುಷ್ಫರಥೋತ್ಸವ

ದಿನಾಂಕ 17.02.2013ನೇ ರವಿವಾರ ರಥಸಪ್ತಮಿ :- ಸಂಹಿತಾಭಿಷೇಕ, ಪುಷ್ಫರಥೋತ್ಸವ :- ಪಾರಂಪಳ್ಳಿ ಮಂಟಪ ಉಪಾಧ್ಯರ ಕುಟುಂಬಸ್ಥರ ಸೇವೆ.

ದಿನಾಂಕ 14.03.2013ನೇ ಗುರುವಾರ ಮೀನ ಸಂಕ್ರಮಣ :- ಗಣಹೋಮ, ಪುಷ್ಫರಥೋತ್ಸವ

6Feb/130

Shashwatha Antara Chappara- Arpane

ಸಾಲಿಗ್ರಾಮ :- ಶಾಶ್ವತ ಅಂತರ ಚಪ್ಪರದ (ಸ್ವಾಗತ ಛಾವಣಿ) ಉದ್ಘಾಟನಾ ಸಮಾರಂಭ

ದಿನಾಂಕ 15.01.2013 ಬೆಳಗ್ಗೆ 10-00 ಕ್ಕೆ ಸರಿಯಾಗಿ ಶ್ರೀದೇವಳದ ಎದುರಿನ ರಾಜಾಂಗಣದಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಕೊಡುಗೆಯಲ್ಲಿ ನಿರ್ಮಾಣಗೊಂಡ  ಕಲಾತ್ಮಕವಾದ ಶಾಶ್ವತ ಅಂತರ ಚಪ್ಪರವನ್ನು ಕರ್ನಾಟಕ ಬ್ಯಾಂಕ್  ಮ್ಯಾನೇಜಿಂಗ್ ಡೈರೆಕ್ಟರ್‍ ಆದ  ಶ್ರೀ ಪಿ. ಜಯರಾಮ ಭಟ್ ಇವರು ತಮ್ಮ ಅಮ್ರತ ಹಸ್ತದಿಂದ ದೀಪ ಬೆಳಗಿಸಿವುದರ ಮುಲಕ  ಶ್ರೀಗುರುನರಸಿಂಹ ದೇವರಿಗೆ ಸಮರ್ಪಿಸಿದರು.

ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥರು ಎಲ್ಲರನ್ನು ಸ್ವಾಗತಿಸಿದರು. ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ ವೆಂಕಟ್ರಾವ್, ಕರ್ನಾಟಕ ಬ್ಯಾಂಕ್ ನಿರ್ದೇಶಕರಾದ ಶ್ರೀ ಪಿ.ಜಯರಾಮ ಹಂದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು  ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರು ವಹಿಸಿದ್ದರು, ಶ್ರೀಎ ಜಗದೀಶ ಕಾರಂತರು ಮಾತನಾಡುತ್ತಾ, ಕರ್ನಾಟಕ ಬ್ಯಾಂಕ್ (ಲಿ) ಪ್ರಧಾನ ಕಛೇರಿ ಮಂಗಳೂರು ಇವರು  ಶ್ರೀದೇವಳದ ಆಡಳಿತ ಮಂಡಳಿಯ ಕೋರಿಕೆಯನ್ನು ಮನ್ನಿಸಿ ದೇವಳದ ಮುಂಭಾಗದ ರಾಜಾಂಗಣದಲ್ಲಿ ಶಾಶ್ವತ  ಕಲಾತ್ಮಕ ಅಂತರ ಚಪ್ಪರ (ಸ್ವಾಗತ ಛಾವಣಿ )  ನಿರ್ಮಾಣಕ್ಕೆ ರೂ ಹತ್ತು ಲಕ್ಷವನ್ನು ದೇಣಿಗೆ ರೂಪದಲ್ಲಿ ತತ್ ಕ್ಷಣವೇ ನೀಡಿರುತ್ತಾರೆ. ಈ ಹಿಂದೆಯೂ ಶ್ರೀದೇವಳದ ಗಣಕೀರಣಗೊಳಿಸುವ ನಮ್ಮ ಅಪೇಕ್ಷೆಯನ್ನು ಮನ್ನಿಸಿ ನಮಗೆ ಅಗತ್ಯವಿರುವಷ್ಟು ಕಂಪ್ಯೂಟರ್‍ಗಳನ್ನು ನೀಡಿರುವುದನ್ನು ಈ ಸಂಧರ್ಭದಲ್ಲಿ ಸ್ಮರಿಸಿಕೊಳ್ಳುತ್ತೇವೆ. ಶ್ರೀದೇವಳದ ಬಹುತೇಕ ಆರ್ಥಿಕ ವ್ಯವಹಾರಗಳನ್ನು ಕರ್ನಾಟಕ ಬ್ಯಾಂಕನ ಚಿತ್ರಪಾಡಿ ಶಾಖೆಯ ಮುಲಕ ನಡೆಸುತ್ತಿದ್ದು ಈ ಶಾಖೆಯ ಪ್ರಬಂಧಕರು ಹಾಗೂ ಸಿಬಂಧಿಗಳ ಸಹಕಾರವನ್ನು ತುಂಬು ಹ್ರದಯದಿಂದ ಸ್ಮರಿಸಿಕೊಳ್ಳುತ್ತೇವೆ. ಈಗಾಗಲೇ ಈ ಕಲಾತ್ಮಕವಾದ ಸ್ವಾಗತ ಛಾವಣಿಗೆ ರೂ. ಹದಿನೆಂಟು ಲಕ್ಷದ ಐವತ್ತು ಸಾವಿರ  ಖರ್ಚು ತಗಲಿದ್ದು ಕರ್ನಾಟಕ ಬ್ಯಾಂಕ್ ನಮಗೆ ರೂ. ಹತ್ತು ಲಕ್ಷದ ಪ್ರಧಾನ ದೇಣಿಗೆ ನೀಡಿದ್ದು ಇನ್ನುಳಿದ ಎಂಟು ಲಕ್ಷದ ಐವತ್ತು ಸಾವಿರ ಅವಕಾಶವಿದ್ದಲ್ಲಿ ದೇಣಿಗೆ ರೂಪದಲ್ಲಿ ನೀಡುವಂತೆ ತಮ್ಮನ್ನು ವಿನಂತಿಸಿಕೊಳ್ಳುತ್ತೇವೆ, ಎನ್ನುತಾ  ತಮ್ಮ ಮಾತನ್ನು ಮುಗಿಸಿದರು

ದೀಪ ಬೇಳಗಿಸಿ ಸಮರ್ಪಣೆ ಮಾಡುತ್ತೀರುವ ಶ್ರೀ ಪಿ. ಜಯರಾಮ ಭಟ್

ದೀಪ ಬೇಳಗಿಸಿ ಸಮರ್ಪಣೆ ಮಾಡುತ್ತೀರುವ ಶ್ರೀ ಪಿ. ಜಯರಾಮ ಭಟ್

ಉದ್ಘಾಟಕರಾದ ಕನಾಟಕ ಬ್ಯಾಂಕನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಜಯರಾಮ ಭಟ್ ಮಾತನಾಡುತ್ತಾ  ಕೋಟ ಸಮಾಜದವನೇ ಆದ ನಾನು ಈ ಗುರುಸ್ಥಾನದಲ್ಲಿ  ಸೇವೆ ಮಾಡುವ  ಅವಕಾಶ ಒದಗಿ ಬಂದಿದ್ದಾಗಿ ಶ್ರೀದೇವರನ್ನು ಸ್ಮರಿಸಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ವೈ ಸದಾರಾಮ ಹೇರ್ಳೆಯವರು ಧನ್ಯವಾದ ಸಮರ್ಪಣೆ ಮಾಡಿದರು ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಹಿಂದಿನ ಆಡಳಿತ ಮಂಡಳಿಯಲ್ಲಿ ಕಾರ್ಯದಶಿಯಾಗಿದ್ದ ಶ್ರೀ ಬಿ ನಾರಾಯಣ ಸೋಮಯಾಜಿ ವಹಿಸಿದ್ದರು.

ರೂ ಹತ್ತು ಲಕ್ಷದ ಡಿಡಿಯನ್ನು ಶ್ರೀ ಜಯರಾಮ ಭಟ್ ಇವರು ಶ್ರೀದೇವಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರಿಗೆ ಹಸ್ತಾಂತರಿಸಿದರು.

ರೂ ಹತ್ತು ಲಕ್ಷದ ಡಿಡಿಯನ್ನು ಶ್ರೀ ಜಯರಾಮ ಭಟ್ ಇವರು ಶ್ರೀದೇವಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರಿಗೆ ಹಸ್ತಾಂತರಿಸಿದರು.

ಈ ಶುಭ ಸಂಧರ್ಭದಲ್ಲಿ ಕರ್ನಾಟಕ ಬ್ಯಾಂಕ್  ನಿರ್ದೇಶರಾದ ಶ್ರೀ ಮಹಾಬಲೇಶ್ವರ ಭಟ್ , ಶ್ರೀ ಎಂ.ವಿ. ಚಂದ್ರಶೇಖರ ಕಾರಂತ್,  ಹಾಗೂ ಮುಖ್ಯ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂಧಿ ವರ್ಗ, ಶ್ರೀದೇವಳದ ಆಡಳಿತ ಮಂಡಳಿಯ ಸಹ ಧರ್ಮದರ್ಶಿಗಳಾದ,  ಶ್ರೀ ಎಚ್ .ಧರ್ಮರಾಯ ಹಂದೆ ಕೋಟ, ಶ್ರೀ ನಾಗರಾಜ ಬಿ ಶ್ರಂಗೇರಿ, ಶ್ರೀ ಎನ್.ಕ್ರಷ್ಣ ಹೊಳ್ಳ ಕಾಸರಗೋಡು, ವೇ.ಮು.ಅನಂತಪದ್ಮನಾಭ ಐತಾಳ ಕೋಟ, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆಯ ಮತ್ತು ಅಂಗಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಹಿಂದಿನ ಆಡಳಿತ ಮಂಡಳಿಯ ಸದಸ್ಯರು,  ಊರಿನ ಮತ್ತು ಪರವೂರಿನ ಗಣ್ಯ ವ್ಯಕ್ತಿಗಳು, ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾದರು.

ಶ್ರೀ ಪಿ ಜಯರಾಮ ಭಟ್ ಇವರನ್ನು ಶ್ರೀದೇವಳದ ಸಂಪ್ರದಾಯದಂತೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು

ಶ್ರೀ ಪಿ ಜಯರಾಮ ಭಟ್ ಇವರನ್ನು ಶ್ರೀದೇವಳದ ಸಂಪ್ರದಾಯದಂತೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು

ನಂತರ ನೆರೆದಿದ್ದ ಎಲ್ಲರಿಗೂ ಶ್ರೀದೇವರ ಪ್ರಸಾದ ರೂಪದಲ್ಲಿ ಸಿಹಿತಿಂಡಿ ವಿತರಣೆ ಮಾಡಲಾಯಿತು.