Paraspara e-KootaBandhu for quicker news

10Jun/130

Siyala Abhisheka

ಸೀಯಾಳಾಭಿಷೇಕ :- ಪ್ರತಿ ವರ್ಷದಂತೆ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ದಿನಾಂಕ 16-06-2013ರ ಭಾನುವಾರದಂದು ಗಂಟೆ 10-00 ಕ್ಕೆ ಶ್ರೀಗುರುನರಸಿಂಹ ಮತ್ತು ಪರಿವಾರ ದೇವರುಗಳಿಗೆ "ಸೀಯಾಳಾಭಿಷೇಕವನ್ನು" ಸಾರ್ವಜನಿಕ ನೆಲೆಯಲ್ಲಿ ನಡೆಸಲು ಉದ್ದೇಶಿಸಿದ್ದು ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೀಯಾಳವನ್ನು ತಂದು ಸಕ್ರಿಯವಾಗಿ ಭಾಗವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕೆಂದು ಕೋರಲಾಗಿದೆ.

ದಿನಾಂಕ 15.06.2013 ಶನಿವಾರದಂದು ಮಿಥುನ ಸಂಕ್ರಮಣವನ್ನು ಆಚರಿಸಲಾಗುವುದು. ಆ ಪ್ರಯುಕ್ತ ಗಣಹೋಮ ಮತ್ತು ಪುಷ್ಫರಥೋತ್ಸವನ್ನು ನಡೆಸಲಾಗುವುದು.

10Jun/130

Kanyaka Samskruthi Shibira

ಕನ್ಯಕಾ ಸಂಸ್ಕ್ರತಿ ಶಿಬಿರ :- ದಿನಾಂಕ 11.04.2013 ರಿಂದ 13.04.2013 ರವರೆಗೆ ಶ್ರೀದೇವಳದ ಆಡಳಿತ ಮಂಡಳಿಯು ಪ್ರತಿ ವರ್ಷದಂತೆ ಈ ಸಲವೂ ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.

ಕನ್ಯಕಾ ಸಂಸ್ಕ್ರತಿ ಶಿಬಿರ ಉದ್ಘಾಟನೆ

ಕನ್ಯಕಾ ಸಂಸ್ಕ್ರತಿ ಶಿಬಿರ ಉದ್ಘಾಟನೆ

39 ಜನ ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು ಹಾಗೂ ಇವರೆಲ್ಲರಿಗೂ ನಮ್ಮ ಸಂಸ್ಕ್ರತಿ ಉಳಿಸಿ ಬೆಳೆಸುವ ಮತ್ತು ಮನೋಬಲವನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

DSC02596

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

10Jun/130

Vasantha Veda Shibhira

ಸಾಲಿಗ್ರಾಮ :- ಶ್ರೀದೇವಳದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಸಂತವೇದ ಶಿಬಿರವನ್ನು ಅಯೋಜಿಸಲಾಗಿತ್ತು ಏಪ್ರೀಲ್ 15 ರಿಂದ  ಪ್ರಾರಂಭವಾಗಿ ಮೇ 7 ರ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. 379 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಬಾಗವಹಿಸಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡರು. ಇವರಿಗೆ ವೇದಪಾಠ ಮತ್ತು ಮಾರ್ಗದರ್ಶನವನ್ನು ನೀಡಲು 21 ಜನ ಗುರುಗಳು ಶ್ರಮವಹಿಸಿದ್ದರು ಇವರೊಂದಿಗೆ ಶ್ರೀದೇವಳದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಕೈಗೂಡಿಸಿದ್ದರು.

DSC02618

ದಿನಾಂಕ 07-05-2013ರಂದು  ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಆಢಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥ, ಕೂ.ಮ.ಜ.ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಶಂಕರನಾರಾಯಣ ಹೊಳ್ಳ, ಪಾಠಶಾಲೆಯ ಪ್ರಾಂಶುಪಾಲರಾದ ಡಾ|| ನಿಟಿಲಾಪು ಕ್ರಷ್ಣಮುರ್ತಿ ಕಾರಂತ್ ಮತ್ತು ಗುರುಗಳಾದ ವೇ.ಮು. ಗಣಪಯ್ಯ ಹೊಳ್ಳರು ವೇದಿಕೆಯಲ್ಲಿ ಉಸ್ಥಿತರಿದ್ದರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

ಉತ್ತಮವಾಗಿ ಕಲಿತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳ  ಹೆತ್ತವರು ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚೆಕೊಂಡರು , ವಿದ್ಯಾರ್ಥಿಗಳು ಕೆಲವೊಂದು ಕಸರತ್ತುಗಳನ್ನು ಮಾಡಿ ನೆರೆದಿದ್ದ ಎಲ್ಲರಿಗೂ ಮನರಂಜನೆ ನೀಡಿದ್ದು ವಿಶೇಷ ಆಕರ್ಷಣೆಯಾಗಿತ್ತು  ಮಧ್ಯಾಹ್ನ ಮಹಾಪೂಜೆಯ ನಂತರ ಭೋಜನ ಪ್ರಸಾದವನ್ನು ಸ್ವೀಕರಿಸಿ ಎಲ್ಲಾ ಚದುರಿದರು.

DSC02619

ಈ ಶಿಬಿರದ ಯಶಸ್ಸಿಗಾಗಿ ಹಲವಾರು ದಾನಿಗಳು ವಿವಿಧ ರೂಪದ ಕೊಡುಗೆಯನ್ನು ನೀಡಿ ಸಹಕರಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಶ್ರೀ ಮಂಜುನಾಥ ಮಯ್ಯ ಮಣಿಪಾಲ ಇವರಿಂದ ಎಲ್ಲಾ ಶಿಬಿರಾರ್ಥಿಗಳಿಗೆ ಶ್ರೀದೇವರ ರಕ್ಷಾಕವಚವನ್ನು ಹಾಗೂ ಶ್ರೀ ಎಂ. ರಾಮಕ್ರಷ್ಣ ಮಯ್ಯರು "ಬೆಳಕು" ಎನ್ನುವ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು .

ಮಾನವ ಪಿರಮಿಡ್  (ಮನೋರಂಜನೆ ಕಾರ್ಯಕ್ರಮ)

ಮಾನವ ಪಿರಮಿಡ್ (ಮನೋರಂಜನೆ ಕಾರ್ಯಕ್ರಮ)

10Jun/130

Anjneya Jayanthi

ಅಂಜನೇಯ ಜಯಂತಿ : -

ANJEಶ್ರೀದೇವಳದ ಉಪಸನ್ನಿಧಿಯಾದ ಹಾಗೂ ಭಕ್ತರಿಂದ ಬಹುಮುಖ ಸೇವೆಯನ್ನು ಪಡೆಯುತ್ತಾ ಅವರನ್ನು ಅನುಗ್ರಹಿಸುತ್ತಿರುವ ಶ್ರೀ ಆಂಜನೇಯ ದೇವರ ಸನ್ನಿಧಿಯಲ್ಲಿ ದಿನಾಂಕ 25-04-2013 ರ ಚಿತ್ರಪೂರ್ಣಿಮೆಯಂದು ಆಂಜನೇಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಂದು ಸೂರ್ಯೋದಯಕ್ಕೆ ಸರಿಯಾಗಿ ಪಂಚವಿಂಶತಿ  ಕಲಾಶಾಭಿಷೇಕ,  ಹೋಮ, ಎಳನೀರು ಅಭಿಷೇಕ ವಿಶೇಷ ಅಲಂಕಾರ ಪೂಜೆಗಳನ್ನು    ಶ್ರೀದೇವಳದ ಜೋಯಿಸರಾದ ಶ್ರೀ ವೇ.ಮು.ರತ್ನಾಕರ ಸೋಮಯಾಜಿ, ತಂತ್ರಿಗಳಾದ ವೇ.ಮು.ಕ್ರಷ್ಣ ಸೋಮಯಾಜಿಯವರ  ನೇತ್ರತ್ವದಲ್ಲಿ ಅರ್ಚಕ ಶ್ರೀ ವೇ.ಮು. ಶ್ರೀನಿವಾಸ ಅಡಿಗರ ಸಹಕಾರದಲ್ಲಿ  ನೇರವೇರಿಸಲಾಯಿತು. ಪೂರ್ವಾಹ್ನದ ಸೇವೆಯ ಎಲ್ಲಾ ಖರ್ಚನ್ನು ಶ್ರೀ ಆಂಜನೇಯ ದೇವಳದ ಸಿಬ್ಬಂದಿಯು ವಹಿಸಿದ್ದರು.

ರಾತ್ರಿ ಚಂದ್ರಗ್ರಹಣದ ಸಲುವಾಗಿ ಸಂಜೆಯ ವಿಶೇಷಪೂಜೆ ಮಹಾರಂಗಪೂಜೆಯನ್ನು ಮಧ್ಯಾಹ್ನ ಗಂಟೆ 3-00 ಕ್ಕೆ ಮಾಡಲಾಯಿತು. ವಿಶೇಷ ಆಕರ್ಷಣೆಯಾಗಿ ಭಕ್ತರಿಂದ ಕರ್ಪೂರವನ್ನು ಶ್ರೀಆಂಜನೇಯ ದೇವಳದಿಂದ ಶ್ರೀಗುರುನರಸಿಂಹ ದೇವಸ್ಥಾನದವರೆಗೆ ಹಚ್ಚಲಾಯಿತು . ನಂತರ ಪಾನಕ ಪನಿವಾರವನ್ನು  ನೆರದಿದ್ದ ಭಕ್ತರಿಗೆ ಹಂಚಲಾಯಿತು.

10Jun/130

Narasimha Jayanthi

ನರಸಿಂಹ ಜಯಂತಿ :-

ನರಸಿಂಹ

ದಿನಾಂಕ  23-05-2013 ರಂದು ಶ್ರೀದೇವಳದಲ್ಲಿ ನರಸಿಂಹ ಜಯಂತಿಯು ಸಂಭ್ರಮದಿಂದ ಆಚರಿಸಲ್ಪಟ್ಟಿತು. ಬೆಳಗಿನಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. , ಬೆಳಿಗ್ಗೆ ಸಂಹಿತಾಭಿಷೇಕ, ನರಸಿಂಹ ಹೋಮಗಳು ವಿಧಿವತ್ತಾಗಿ ನಡೆದವು, ಮಧ್ಯಾಹ್ನ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ  ನಿತ್ಯ ಬಲಿ ಮುಗಿದೊಡನೆ ಎಲ್ಲಾರೂ ಕೂಡಿ ಭೋಜನ ಪ್ರಸಾದ ಸ್ವೀಕರಿಸಿದರು.

ಸಂಜೆ 6--00 ಗಂಟೆಗೆ ಪಂಚಾಮ್ರತ ಸಹಿತ ವಿಶೇಷ ಪೂಜೆ ಶ್ರೀದೇವಳದ ಓಲಗ ಮಂಟಪದಲ್ಲಿ ಅಷ್ಟಾವಧಾನ ಸೇವೆಗಳು ಶಾಸ್ತ್ರೋಕ್ತವಾಗಿ  ನಡೆದವು ,ಅಪಾರ ಸಂಖ್ಯೆಯಲ್ಲಿ ನೆರೆದ ಜನರಿಗೆ ಪಾನಕ ಪನೀವಾರವನ್ನು ವಿತರಿಸಲಾಯಿತು.

ರಾತ್ರಿ 8-00 ಗಂಟೆಗೆ ಹಿರಿರಂಗಪೂಜೆ, ಉತ್ಸವ ಬಲಿ, ಪುಷ್ಫರಥೋತ್ಸವ, ನಡೆದು ಮಂತ್ರಾಕ್ಷತೆಯೊಂದಿಗೆ ಉತ್ಸವಕ್ಕೆ ಮಂಗಲ ಹಾಡಲಾಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ     ಶ್ರೀದೇವಳದ ತಂತ್ರಿಗಳಾದ ವೇ.ಮು.ಕ್ರಷ್ಣ ಸೋಮಯಾಜಿ, ಜೋಯಿಸರಾದ ಶ್ರೀ ವೇ.ಮು.ರತ್ನಾಕರ ಸೋಮಯಾಜಿಯವರ  ನೇತ್ರತ್ವದಲ್ಲಿ ಅರ್ಚಕ ಶ್ರೀ ವೇ.ಮು. ಜನಾರ್ದನ ಅಡಿಗರ ಸಹಕಾರದಲ್ಲಿ  ನೇರವೇರಿಸಲಾಯಿತು.

ಸಂಜೆ ಗಂಟೆ 7-00 ರಿಂದ  ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ  " ದಕ್ಷ ಯಜ್ಞ " ಎನ್ನವ ಯಕ್ಷಗಾನ ಪ್ರಸಂಗವನ್ನು ಯಶಸ್ವಿಯಾಗಿ ಆಡಿ ತೋರಿಸಿದರು.