Paraspara e-KootaBandhu for quicker news

11Mar/140

KANYAKA SAMSKRUTHI SHIBHIRA- 2014

ಕನ್ಯಕಾ ಸಂಸ್ಕ್ರತಿ ಶಿಬಿರ - 2014 :- ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸಹಕಾರದೊಂದಿಗೆ ದಿನಾಂಕ 11-04-2014 ರಿಂದ 13-04-2014 ರವರೆಗೆ 20 ವರ್ಷದ ಒಳಗಿನ ವಿಪ್ರ ಹೆಣ್ಣುಮಕ್ಕಳಿಗೆ ಕನ್ಯಕಾ ಸಂಸ್ಕ್ರತಿ ಶಿಬಿರವನ್ನು ನಡೆಸಲಾಗುವುದು. ಈ ಶಿಬಿರದಲ್ಲಿ ಶಿಬಿರಾರ್ಥಿಯೊಂದಿಗೆ ಅವರ ತಾಯಿ ಮತ್ತು ಮನೆಯ ಮಹಿಳೆಯರು  ಭಾಗವಹಿಸಬಹುದಾಗಿದೆ.

ಈ ಶಿಬಿರವು ನಮ್ಮ ಸಂಸ್ಕ್ರತಿ, ಕಲೆ, ಸ್ವರಕ್ಷಣೆ, ಸ್ಪರ್ಧೆಗಳು ಮತ್ತು ಮನೋರಂಜನೆಯನ್ನು ಒಳಗೊಂಡಿರುತ್ತದೆ, ಶಿಬಿರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ಶ್ರೀದೇವಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

ಆಡಳಿತ ಮಂಡಳಿ

ಶ್ರೀಗುರುನರಸಿಂಹ ದೇವಸ್ಥಾನ

ಸಾಲಿಗ್ರಾಮ

11Mar/140

VASANTHA VEDA SHIBIRA 2014

ವಸಂತವೇದ ಶಿಬಿರ 2014 :- ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 18.04.2014 ರಿಂದ 08.05.2014 ರವರೆಗೆ ವಿಪ್ರ ವಟುಗಳಿಗೆ ವಸಂತ ವೇದ ಶಿಬಿರವನ್ನು ನಡೆಸಲಾಗುವುದು.

ಈ ಶಿಬಿರದ   ಪಠ್ಯಕ್ರಮವು ಋಗ್ವೇದವಾಗಿದ್ದು ಸ್ಮಾರ್ತ ಪದ್ದತಿಯಲ್ಲಿ (ವಿಭೂತಿ ಧಾರಣೆ) ಹೇಳಿಕೊಡಲಾಗುವುದು, ಸಂಧ್ಯಾವಂದನೆ ಪಂಚಾಯತನ ಪೂಜಾಪದ್ಧತಿ, ರುದ್ರ ಪವಮಾನ, ಪಂಚಾಂಗ ಪಠಣ ಮುಂತಾದ ಪಠ್ಯಗಳೊಂದಿಗೆ 5 ವರ್ಷ ಅವಧಿಯಲ್ಲಿ ಹೇಳಿಕೊಡಲಾಗುವುದು.

ಶಿಬಿರಕ್ಕೆ ಸೇರ ಬಯಸುವ ವಿದ್ಯಾರ್ಥಿಗಳು ಅರ್ಜಿಯನ್ನು ಶ್ರೀದೇವಳದ ಕಛೇರಿಯಿಂದ ಪಡೆಯಬಹುದಾಗಿದೆ. ದಿನಾಂಕ 08-04-2014ರ  ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ , ಪ್ರಥಮ ತರಗತಿಗೆ ಸೇರುವ ವಿದ್ಯಾರ್ಥಿಗಳು ಮಾತ್ರ  ರೂ.500/-ನ್ನು ಠೇವಣಿಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಶಿಬಿರ ಪೂರ್ಣಗೊಳಿಸಿದಲ್ಲಿ ಮಾತ್ರ ಠೇವಣಿಯನ್ನು ನಿಬಡ್ಡಿಯೊಂದಿಗೆ ಹಿಂದುರುಗಿಸಲಾಗುವುದು.

ಬಂಟ್ವಾಳ, ಜಯಪುರ, ಸುಳ್ಯ, ಮಂಗಳೂರು, ಬಸ್ರೂರು, ಕಳಸ ಬಾಳೆಹೊಳೆ, ಮುಂಬಯಿ, ಮುಂತಾದ ಕಡೆಗಳಲ್ಲಿ  ಕೂಟಮಹಾಜಗತ್ತು ಸಾಲಿಗ್ರಾಮ(ರಿ) ಇದರ ಆಯಾಯ ಅಂಗಸಂಸ್ಥೆಗಳ ಸಹಕಾರದೊಂದಿಗೆ ವಸಂತ ವೇದ ಶಿಬಿರವನ್ನು ನಡೆಸಲಾಗುವುದು. ಈ ಶಿಬಿರವು ಶ್ರೀದೇವಳದ ಉಪಶಾಖೆಯಾಗಿದ್ದು ಎಲ್ಲಾ ಪಠ್ಯಕ್ರಮಗಳು ಒಂದೇ ಆಗಿರುತ್ತದೆ. ಆದ್ದರಿಂದ ಸಮೀಪದ ವಿಪ್ರ ವಟುಗಳು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಆಡಳಿತ ಮಂಡಳಿ

ಶ್ರೀಗುರುನರಸಿಂಹ ದೇವಸ್ಥಾನ

ಸಾಲಿಗ್ರಾಮ