11Mar/140
KANYAKA SAMSKRUTHI SHIBHIRA- 2014
ಕನ್ಯಕಾ ಸಂಸ್ಕ್ರತಿ ಶಿಬಿರ - 2014 :- ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸಹಕಾರದೊಂದಿಗೆ ದಿನಾಂಕ 11-04-2014 ರಿಂದ 13-04-2014 ರವರೆಗೆ 20 ವರ್ಷದ ಒಳಗಿನ ವಿಪ್ರ ಹೆಣ್ಣುಮಕ್ಕಳಿಗೆ ಕನ್ಯಕಾ ಸಂಸ್ಕ್ರತಿ ಶಿಬಿರವನ್ನು ನಡೆಸಲಾಗುವುದು. ಈ ಶಿಬಿರದಲ್ಲಿ ಶಿಬಿರಾರ್ಥಿಯೊಂದಿಗೆ ಅವರ ತಾಯಿ ಮತ್ತು ಮನೆಯ ಮಹಿಳೆಯರು ಭಾಗವಹಿಸಬಹುದಾಗಿದೆ.
ಈ ಶಿಬಿರವು ನಮ್ಮ ಸಂಸ್ಕ್ರತಿ, ಕಲೆ, ಸ್ವರಕ್ಷಣೆ, ಸ್ಪರ್ಧೆಗಳು ಮತ್ತು ಮನೋರಂಜನೆಯನ್ನು ಒಳಗೊಂಡಿರುತ್ತದೆ, ಶಿಬಿರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ಶ್ರೀದೇವಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ಆಡಳಿತ ಮಂಡಳಿ
ಶ್ರೀಗುರುನರಸಿಂಹ ದೇವಸ್ಥಾನ
ಸಾಲಿಗ್ರಾಮ