VASANTHA VEDA SHIBIRA 2014
ವಸಂತವೇದ ಶಿಬಿರ 2014 :- ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 18.04.2014 ರಿಂದ 08.05.2014 ರವರೆಗೆ ವಿಪ್ರ ವಟುಗಳಿಗೆ ವಸಂತ ವೇದ ಶಿಬಿರವನ್ನು ನಡೆಸಲಾಗುವುದು.
ಈ ಶಿಬಿರದ ಪಠ್ಯಕ್ರಮವು ಋಗ್ವೇದವಾಗಿದ್ದು ಸ್ಮಾರ್ತ ಪದ್ದತಿಯಲ್ಲಿ (ವಿಭೂತಿ ಧಾರಣೆ) ಹೇಳಿಕೊಡಲಾಗುವುದು, ಸಂಧ್ಯಾವಂದನೆ ಪಂಚಾಯತನ ಪೂಜಾಪದ್ಧತಿ, ರುದ್ರ ಪವಮಾನ, ಪಂಚಾಂಗ ಪಠಣ ಮುಂತಾದ ಪಠ್ಯಗಳೊಂದಿಗೆ 5 ವರ್ಷ ಅವಧಿಯಲ್ಲಿ ಹೇಳಿಕೊಡಲಾಗುವುದು.
ಶಿಬಿರಕ್ಕೆ ಸೇರ ಬಯಸುವ ವಿದ್ಯಾರ್ಥಿಗಳು ಅರ್ಜಿಯನ್ನು ಶ್ರೀದೇವಳದ ಕಛೇರಿಯಿಂದ ಪಡೆಯಬಹುದಾಗಿದೆ. ದಿನಾಂಕ 08-04-2014ರ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ , ಪ್ರಥಮ ತರಗತಿಗೆ ಸೇರುವ ವಿದ್ಯಾರ್ಥಿಗಳು ಮಾತ್ರ ರೂ.500/-ನ್ನು ಠೇವಣಿಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಶಿಬಿರ ಪೂರ್ಣಗೊಳಿಸಿದಲ್ಲಿ ಮಾತ್ರ ಠೇವಣಿಯನ್ನು ನಿಬಡ್ಡಿಯೊಂದಿಗೆ ಹಿಂದುರುಗಿಸಲಾಗುವುದು.
ಬಂಟ್ವಾಳ, ಜಯಪುರ, ಸುಳ್ಯ, ಮಂಗಳೂರು, ಬಸ್ರೂರು, ಕಳಸ ಬಾಳೆಹೊಳೆ, ಮುಂಬಯಿ, ಮುಂತಾದ ಕಡೆಗಳಲ್ಲಿ ಕೂಟಮಹಾಜಗತ್ತು ಸಾಲಿಗ್ರಾಮ(ರಿ) ಇದರ ಆಯಾಯ ಅಂಗಸಂಸ್ಥೆಗಳ ಸಹಕಾರದೊಂದಿಗೆ ವಸಂತ ವೇದ ಶಿಬಿರವನ್ನು ನಡೆಸಲಾಗುವುದು. ಈ ಶಿಬಿರವು ಶ್ರೀದೇವಳದ ಉಪಶಾಖೆಯಾಗಿದ್ದು ಎಲ್ಲಾ ಪಠ್ಯಕ್ರಮಗಳು ಒಂದೇ ಆಗಿರುತ್ತದೆ. ಆದ್ದರಿಂದ ಸಮೀಪದ ವಿಪ್ರ ವಟುಗಳು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.
ಆಡಳಿತ ಮಂಡಳಿ
ಶ್ರೀಗುರುನರಸಿಂಹ ದೇವಸ್ಥಾನ
ಸಾಲಿಗ್ರಾಮ