Paraspara e-KootaBandhu for quicker news

31May/140

Sri Guru Narasimha Nigam Agama Pata shale

ಶ್ರೀಗುರುನರಸಿಂಹ ನಿಗಮಾಗಮ ವೇದ ಪಾಠಶಾಲೆಗೆ ಅರ್ಜಿ ಆಹ್ವಾನ

ಸಾಲಿಗ್ರಾಮ- ಶ್ರೀಗುರುನರಸಿಂಹ ದೇವಳವು ನಡೆಸುತ್ತಿರುವ ನಿಗಮಾಗಮ ಪಾಠಶಾಲೆಗೆ ಸ್ಮಾರ್ತ ವಿಪ್ರ ವಟುಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಆಸಕ್ತ ವಿದ್ಯಾರ್ಥಿಗಳು  ಜೂನ್ ಇಪ್ಪತ್ತೈದರ ಒಳಗೆ ಅಧ್ಯಕ್ಷರು, ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ-576225 ಉಡುಪಿ ಜಿಲ್ಲೆ ಇವರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ 0820-2564544, 3204544, 9449545714, ಮತ್ತು ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

ರಾಜ್ಯಸರ್ಕಾರ ನಡೆಸುವ ಋಗ್ವೇದ ಪ್ರಥಮ, ಪ್ರವೇಶ ಮತ್ತು ಮೂಲ ಪರೀಕ್ಷೆಗಳಿಗೆ ಐದು ವರ್ಷದ ತರಬೇತಿಯೊಂದಿಗೆ ಧಾರ್ಮಿಕ ದತ್ತಿ ಇಲಾಖೆ ನಡೆಸುವ ವಾತುಲಾಗಮದ ಪ್ರವರ ಪರೀಕ್ಷೆಗೆ ಮೂರು ವರ್ಷದ ತರಬೇತಿಯನ್ನು ನೀಡಲಾಗುವುದು.

ಪ್ರತಿ ವಿದ್ಯಾರ್ಥಿಗಳಿಗೆ ಅಭ್ಯಾಸ ವೇತನ (ಸ್ಟೈಫಂಡ್) ದೊಂದಿಗೆ  ಉಚಿತ ಊಟ ವಸತಿಯನ್ನು ನೀಡಲಾಗುವುದು. ಶ್ರೀ ಶೇಷಗಿರಿ ನಾಡಿಗೇರ ಘನಪಾಟಿಯವರು  ವೇ ಮೂ. ಗುಂಡ್ಮಿ  ವೆಂಕಟರಮಣ ನಾವಡರ ಸಹಕಾರದೊಂದಿಗೆ ಜುಲೈ ಒಂದರಿಂದ ವೇದಾಧ್ಯಯವನ್ನು ಕಲಿಸಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀದೇವಳದ ಆಡಳಿತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Comments (0) Trackbacks (0)

No comments yet.


Leave a comment


No trackbacks yet.