Paraspara e-KootaBandhu for quicker news

11Jul/140

VEDA PATA SAHALE

ಶ್ರೀಗುರುನರಸಿಂಹ ನಿಗಮಾಗಮ ವೇದ ಪಾಠಶಾಲೆ

ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ 576225 ಉಡುಪಿ ಜಿಲ್ಲೆ


ಸಾಲಿಗ್ರಾಮ- ಶ್ರೀಗುರುನರಸಿಂಹ ದೇವಳವು ನಡೆಸುತ್ತಿರುವ ನಿಗಮಾಗಮ ಪಾಠಶಾಲೆಯು ಇದೇ ಜುಲೈ ಒಂದರಿಂದ ಪ್ರಾರಂಭವಾಗಿದ್ದು, ಒಂಭತ್ತು ವಿದ್ಯಾರ್ಥಿಗಳಿಗೆ ವೇದಪಾಠವನ್ನು  ಶ್ರೀ ಶೇಷಗಿರಿ ನಾಡಿಗೇರ ಘನಪಾಟಿಯವರು ಹೇಳಿಕೊಡುತ್ತಿದ್ದಾರೆ.

ಆಸಕ್ತ  ವಿಪ್ರ ವಟುಗಳು ವೇದ ಪಾಠಶಾಲೆಯನ್ನು ಸೇರಬಯಸಿದಲ್ಲಿ ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ 0820-2564544, 3204544, 9449545714,

ರಾಜ್ಯಸರ್ಕಾರ ನಡೆಸುವ ಋಗ್ವೇದ ಪ್ರಥಮ, ಪ್ರವೇಶ ಮತ್ತು ಮೂಲ ಪರೀಕ್ಷೆಗಳಿಗೆ ಐದು ವರ್ಷದ ತರಬೇತಿಯೊಂದಿಗೆ ಧಾರ್ಮಿಕ ದತ್ತಿ ಇಲಾಖೆ ನಡೆಸುವ ವಾತುಲಾಗಮದ ಪ್ರವರ ಪರೀಕ್ಷೆಗೆ ಮೂರು ವರ್ಷದ ತರಬೇತಿಯನ್ನು ನೀಡಲಾಗುವುದು.

ಪ್ರತಿ ವಿದ್ಯಾರ್ಥಿಗಳಿಗೆ ಅಭ್ಯಾಸ ವೇತನ (ಸ್ಟೈಫಂಡ್) ದೊಂದಿಗೆ  ಉಚಿತ ಊಟ ವಸತಿಯನ್ನು ಮತ್ತು ವಿಶೇಷ ಕೊಡುಗೆಗಳನ್ನು ನೀಡಲಾಗುವುದು. ಶ್ರೀ ಶೇಷಗಿರಿ ನಾಡಿಗೇರ ಘನಪಾಟಿಯವರು  ಮತ್ತು ವೇ ಮೂ. ಗುಂಡ್ಮಿ  ವೆಂಕಟರಮಣ ನಾವಡರ ಸಹಕಾರದೊಂದಿಗೆ ನಡೆಯುತ್ತಿರುವ ಈ ವೇದ ಪಾಠಶಾಲೆಗೆ  ಆಸಕ್ತ ವಿದ್ಯಾರ್ಥಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀದೇವಳದ ಆಡಳಿತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀ ಎ.ಜಗದೀಶ ಕಾರಂತ

ಅಧ್ಯಕ್ಷರು, ಆಡಳಿತ ಮಂಡಳಿ

ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ