Paraspara e-KootaBandhu for quicker news

15Mar/130

KANYAKA SAMSKRUTI SHIBHIRA

ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ

ದಿನಾಂಕ 11.04.2013 ರಿಂದ 13.04.2013 ರವರೆಗೆ 18 ವರ್ಷದೊಳಗಿನ ವಿಪ್ರ ಹುಡುಗಿಯರಿಗೆ ಕನ್ಯಕಾ ಸಂಸ್ಕ್ರತಿ ಶಿಬಿರವನ್ನು ಏರ್ಪಡಿಸಲಾಗಿದೆ. ಹಾಗೂ  ಎಲ್ಲಾ ವಿಪ್ರ ಮಹಿಳೆಯರು ಕೂಡ ಭಾಗವಹಿಸಲು ಅವಕಾಶವಿದೆ. ಇದರಲ್ಲಿ ನಮ್ಮ ಸಮಾಜದ ಸಂಸ್ಕ್ರತಿ, ಕಲೆ, ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು

ಆಸಕ್ತರು ಶ್ರಿದೇವಳದ ಕಛೇರಿ ಅಥವಾ  ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ ಮಹಿಳಾ ವೇದಿಕೆಯ ಅಧ್ಯಕ್ಷರು ಯಾ ಸದಸ್ಯರನ್ನು ಸಂಪರ್ಕಿಸ ಬಹುದಾಗಿದೆ.

ಶ್ರೀದೇವಳದ ಕಛೇರಿ ದೂರವಾಣಿ - 0820-2564544, 3204544, 9449545714,

ಮಹಿಳಾ ವೇದಿಕೆ:- ಶ್ರೀಮತಿ ಭಾರತಿ ಪ್ರಕಾಶ ಹೇರ್ಳೆ , ಸಾಲಿಗ್ರಾಮ, ದೂರವಾಣಿ :- 9902760122

15Mar/130

VASANTHA VEDA SHIBHIRA – 2013

ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ

ವಸಂತ ವೇದ ಶಿಬಿರ

ಶ್ರೀದೇವಳವು ದಿನಾಂಕ 16.04.2013 ರಿಂದ ವಿಪ್ರವಟುಗಳಿಗೆ ಋಗ್ವೇದ ಸ್ಮಾರ್ತ ಪದ್ಧತಿಯಲ್ಲಿ ಸಂಧ್ಯೋಪಾಸನೆ, ದೇವರ ಪೂಜೆ ಸೂಕ್ತಗಳನ್ನು ಹೇಳಿಕೊಡಲಾಗುವುದು. ಆಸಕ್ತ  ವಿಪ್ರವಟುಗಳು ಶ್ರೀದೇವಳದ ಕಛೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ 06.04.2013 ರ ಒಳಗೆ ಕಛೇರಿಗೆ ತಲುಪಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ- 0820-2564544, 3204544, 9449545714 ಬೆಳಗ್ಗೆ  10-00 ರಿಂದ 6.30 ರವರೆಗೆ ಸಂಪರ್ಕಿಸಬಹುದಾಗಿದೆ.

ವಸಂತವೇದ ಶಿಬಿರ :-  ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇವರು ಕೂಟಮಹಾಜಗತ್ತು(ರಿ) ಸಾಲಿಗ್ರಾಮ ಅಂಗಸಂಸ್ಥೆ ಇವರ ಸಹಕಾರದೊಂದಿಗೆ ದಿನಾಂಕ 15.04.2013 ರಿಂದ  ವಿಪ್ರ ವಟುಗಳಿಗೆ ವಸಂತ ವೇದ ಶಿಬಿರವನ್ನು ನಡೆಸಲಾಗುವುದು.

ಕೂಟ ಮಹಾಜಗತ್ತು (ರಿ) ಸಾಲಿಗ್ರಾಮ ಕೇಂದ್ರ ಸಂಸ್ಥೆಯವರು ತಯಾರಿಸಿದ ಪಠ್ಯಕ್ರಮದಂತೆ  ಋಗ್ವೇದ ಸ್ಮಾರ್ತ ಪದ್ದತಿಯಲ್ಲಿ

 • 1ನೇ  ವರ್ಷದ ತರಗತಿಯಲ್ಲಿ ಸಂಧ್ಯಾವಂದನೆ, ದೇವರಸ್ತೋತ್ರಗಳು ಮತ್ತು ಪುರುಷ, ಗಣಪತಿ ಅಗ್ನಿ ಮತ್ತು ಭಾಗ್ಯ ಸೂಕ್ತಗಳನ್ನು ಹೇಳಿಕೊಡಲಾಗುವುದು.
 • 2ನೇ ವರ್ಷದ ತರಗತಿಯಲ್ಲಿ ವಿಷ್ಣು, ರುದ್ರ, ಸೂರ್ಯ ಸೂಕ್ತಗಳನ್ನು ಪಂಚಾಯತನ ಪೂಜಾ ಪದ್ದತಿಯನ್ನು ಹೇಳಿಕೊಡಲಾಗುವುದು
 • 3ನೇ ವರ್ಷದ ತರಗತಿಯಲ್ಲಿ ಸ್ವಸ್ತಿ, ರಾತ್ರಿ ಐಕ್ಯಮತ್ಯ, ಸರಸ್ವತಿ ಸೂಕ್ತಗಳನ್ನು, ಮಂತ್ರಪುಷ್ಫ, ರುದ್ರಾಧ್ಯಾಯ ಮತ್ತು ಚಮಕಾಧ್ಯಾಯವನ್ನು ಹೇಳಿಕೊಡಲಾಗುವುದು.
 • 4ನೇ ವರ್ಷದ ತರಗತಿಯಲ್ಲಿ ಪವಮಾನ ಸೂಕ್ತ ಒಂದು ಮತ್ತು ಎರಡನೇ ಅಧ್ಯಾಯ, ಬ್ರಹ್ಮಯಜ್ಞ, ಪಿತ್ರತರ್ಪಣ, ಔಪಾಸನವನ್ನು ಹೇಳಿಕೊಡಲಾಗುವುದು.
 • 5ನೇ ವರ್ಷದ ತರಗತಿಯಲ್ಲಿ ಪವಮಾನ ಸೂಕ್ತದ ಉಳಿದ ಅಧ್ಯಾಯಗಳನ್ನು ಹೇಳಿಕೊಡಲಾಗುವುದು.
 • ಇದಲ್ಲದೆ ಎಲ್ಲಾ ತರಗತಿಯವರಿಗೆ ಆಸನ, ಸೂರ್ಯನಮಸ್ಕಾರ, ಪಂಚಾಂಗ ಪಠಣ, ಸರಳ ಸಂಸ್ಕ್ರತ ಶಿಕ್ಷಣವನ್ನು ನೀಡಲಾಗುವುದು.

ಪರ ಊರಿನಿಂದ ಬರುವವರಿಗೆ ಉಚಿತ ಊಟ ವಸತಿ ವ್ಯವಸ್ಥೆ ಇದೆ. ಪ್ರಥಮ ವರ್ಷ ನೂರು ವಟುಗಳಿಗೆ ಸೇರಲು ಅವಕಾಶವಿದೆ.

ಆಸಕ್ತ ಅಭ್ಯರ್ಥಿಗಳು ಖಾಲಿ ಕಾಗದದಲ್ಲಿ ಅಥವಾ ದೇವಸ್ಥಾನದ ಕಚೇರಿಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ಹೆಸರು, ತಂದೆಯ ಹೆಸರು, ಗೋತ್ರ, ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾರ್ಹತೆ, ಹುಟ್ಟಿದ ತಾರೀಕು, ಪ್ರಾಯ, ವಸತಿ ಸೌಕರ್ಯ ಬೇಕೆ? ಸಂಸ್ಕ್ರತ ಜ್ಞಾನವಿದಯೇ? ಎಂಬ ವಿವರಗಳನ್ನು ಬರೆದು ವಸಂತವೇದ ಶಿಬಿರದಲ್ಲಿ ಭಾಗಿಯಾಗಿದ್ದರೆ ಅಲ್ಲಿನ ವ್ಯಾಸಂಗ ಪ್ರಮಾಣಪತ್ರದ ಯಥಾ ನಕಲು, ಭಾವಚಿತ್ರ, ಮತ್ತು ರೂ.500/- ಠೇವಣಿಯೊಂದಿಗೆ ತಾ.06.04.2013 ರ ಒಳಗೆ ವ್ಯವಸ್ಥಾಪಕರು, ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ. 576225, ಉಡುಪಿ ಜಿಲ್ಲೆ ಇಲ್ಲಿಗೆ ಕಳುಹಿಸಿಕೊಡಬೇಕು.

ತಾ.15.04.2013 ರಂದು 2,3,4,5 ನೇ ತರಗತಿಗಳು ಪ್ರಾರಂಭವಾಗುವುದು ದಿನಾಂಕ 16.04.2013 ರಂದು 1, ನೇ ತರಗತಿಗಳ ಪ್ರವೇಶಕ್ಕೆ ನಡೆಯುವ ಸಂದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ/ತಾಯಿ/ರಕ್ಷಕರೊಂದಿಗೆ ಭಾಗವಹಿಸಬೇಕು.

ಶಿಬಿರಕ್ಕೆ ಬರುವಾಗ ಪಾಣಿಪಂಚೆ, ಬೈರಾಸ, ಪೆನ್ನು, ಬಟ್ಟಲು, ಲೋಟ, ಕುಳಿತುಕೊಳ್ಳುವ ಚಾಪೆ, ನೋಟು ಪುಸ್ತಕ, ಕೌಳಿಗೆ, ಸೌಟು, ಹರಿವಾಣ, ವಸತಿ ಮಾಡುವ ಮಕ್ಕಳು ರಾತ್ರಿ ಮಲಗಲು ಬೇಕಾದ ಪರಿಕರಗಳು, ಸೋಪು, ಬ್ರಶ್, ಪೇಸ್ಟ್ ಇತ್ಯಾದಿ ನಿತ್ಯೋಪಯೋಗಿ ವಸ್ತುಗಳನ್ನು ತರಬೇಕು

ಹೆಚ್ಚಿನ ಮಾಹಿತಿಗಾಗಿ ಶ್ರೀದೇವಳದ ಕಛೇರಿಯನ್ನು ಸಮಪರ್ಕಿಸಿರಿ. (ದೂರವಾಣಿ:- 0820-2564544, 3204544, 9449545714)

6Feb/130

Sakaranthi Ratasapatmi

ದಿನಾಂಕ 12.02.2013 ನೇ ಮಂಗಳವಾರ ಕುಂಭ ಸಂಕ್ರಮಣ :- ಗಣಹೋಮ, ಪುಷ್ಫರಥೋತ್ಸವ

ದಿನಾಂಕ 17.02.2013ನೇ ರವಿವಾರ ರಥಸಪ್ತಮಿ :- ಸಂಹಿತಾಭಿಷೇಕ, ಪುಷ್ಫರಥೋತ್ಸವ :- ಪಾರಂಪಳ್ಳಿ ಮಂಟಪ ಉಪಾಧ್ಯರ ಕುಟುಂಬಸ್ಥರ ಸೇವೆ.

ದಿನಾಂಕ 14.03.2013ನೇ ಗುರುವಾರ ಮೀನ ಸಂಕ್ರಮಣ :- ಗಣಹೋಮ, ಪುಷ್ಫರಥೋತ್ಸವ

31Dec/120

HABBA-2013

Gurunarasimah inv1

Gurunarasimah inv2Gurunarasimah inv FINAL3

Gurunarasimah inv 4

ನಿಮ್ಮೆಲ್ಲರಿಗೂ ಶ್ರೀದೇವಳದ ವಾರ್ಷಿಕ ಜಾತ್ರೆಗೆ ಆದರದ ಆಮಂತ್ರಣ

2Oct/120

SHAKALA RUK SAHINTHA YAGA

ಶಾಕಲಾ ಋಕ್ ಸಂಹಿತಾ ಮಹಾ ಯಾಗ :- ದಿನಾಂಕ 17.11.2012 ರಿಂದ 25.11.2012ರವರೆಗೆ ಶ್ರೀದೇವಳದಲ್ಲಿ ಬೆಂಗಳೂರಿನ "ಇಂದ್ರಪ್ರಸ್ಥ" ಶ್ರೀ ಪ್ರಕಾಶ ಮಯ್ಯ ಇವರಿಂದ ಶಾಕಲ ಋಕ್ ಸಹಿಂತಾ ಯಾಗವನ್ನು ಮಾಡಿಸಲಿದ್ದಾರೆ ಎಲ್ಲಾ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಶ್ರೀ ಪ್ರಕಾಶ ಮಯ್ಯ ಮತ್ತು ಶ್ರೀದೇವಳದ ಆಡಳಿತ ಮಂಡಳಿ ಕೋರಿದೆ.

2Oct/120

Sampradyika Dharmika Karykramagla Munnota

 • ತುಲಾ ಸಂಕ್ರಾಂತಿ :- ದಿನಾಂಕ 17.10.2012, ಗಣಹೋಮ ಉತ್ಸವ ಬಲಿ
 • ನವರಾತ್ರಿ :- ದಿನಾಂಕ 16.10.2012 ರಿಂದ 23.10.2012 ರವರೆಗೆ ಶ್ರೀದುರ್ಗಾಪರಮೇಶ್ವರಿ ದೇವರಿಗೆ ವಿಶೇಷ ಪೂಜೆ, ಪ್ರತಿ ದಿನ ಚಂಡಿಕಾ ಸಪ್ತಶತಿ ಪಾರಾಯಣ
 • ದುರ್ಗಾ ಹೋಮ :- 21.10.2012 ರಂದು ಕಿರಿಮಂಜೇಶ್ವರ ಸುಬ್ರಮಣ್ಯ ನಾವಡರಿಂದ, 22.10.2012 ರಂದು ಬೆಂಗಳೂರು ವಾಸುದೇವ ಮಧ್ಯಸ್ಥರಿಂದ (ಶಾಶ್ವತ) ಸೇವೆ.
 • ಶಾರದಾ ಪೂಜೆ :- 20.10.2012
 • ಕಿರಿರಂಗಪೂಜೆ ಪಲ್ಲಕಿ ಉತ್ಸವ :- ದಿನಾಂಕ 23.10.2012ರ ರಾತ್ರಿ ಐರೋಡಿ ಪಲ್ಲಕಿ ಕಾರಂತ ಕುಟುಂಬಸ್ಥರಿಂದ (ಶಾಶ್ವತ) ಸೇವೆ.
 • ವಿಜಯದಶಮಿ :- ದಿನಾಂಕ 24.10.2012
 • ದೀಪಾವಳಿ :- ದಿನಾಂಕ 12.11.2012 ರಂದು ನರಕ ಚತುರ್ದಶಿ, ದಿನಾಂಕ 13.11.2012ರಂದು ದೀಪಾವಳಿ ಬಲೀಂದ್ರ ಪೂಜೆ
 • ವ್ರಶ್ಚಿಕ ಸಂಕ್ರಾಂತಿ :- ದಿನಾಂಕ 16.11.2012 ರಂದು ಗಣಹೋಮ ಉತ್ಸವ ಬಲಿ
 • ಉತ್ಥಾನ ದ್ವಾದಶಿ ಕ್ಷೀರಾಬ್ದಿ ಪೂಜೆ (ತುಳಸಿ ಪೂಜೆ ) :- ದಿನಾಂಕ 25.11.2012ರ ಸಂಜೆ
 • ಮುಡುಗಣಪತಿ ಸೇವೆ :- 28.11.2012 ರಂದು ರಾತ್ರಿ ಸಾವಿರದ ಒಂದು ಕಾಯಿ ಮುಡುಗಣಪತಿ ಸೇವೆ
 • ಮನೆಯಕ್ಕಿ ಸಮಾರಾಧನೆ :- 29.11.2012ರ ಮಧ್ಯಾಹ್ನ ಸಮಾರಾಧನೆ
 • ದೀಪೋತ್ಸವ :- ದಿನಾಂಕ 12.12.2012 ರಂದು ಲಕ್ಷದೀಪೋತ್ಸವ, ಹಿರಿರಂಗಪೂಜೆ, ಪುಷ್ಫರಥೋತ್ಸವ, ತೆಪ್ಪೋತ್ಸವ

ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದೆ.

1Oct/120

Sri Gurunarasimha Bayalu Ranga Mandira

ಶ್ರೀ ಗುರುನರಸಿಂಹ ಓಲಗ ಮಂಟಪ / ಬಯಲು ರಂಗಮಂದಿರ ಲೋಕಾರ್ಪಣೆ

ಶ್ರೀದೇವಳಕ್ಕೆ ಪಾರಂಪಳ್ಳಿ ದಿ|| ಕ್ರಷ್ಣ ಅಡಿಗರ ಸ್ಮರಣಾರ್ಥ ಇವರ ಪತ್ನಿ ಶ್ರೀಮತಿ ಶ್ರೀಮತಿ ಅಡಿಗ ಮತ್ತು ಮಕ್ಕಳು ದಾನವಾಗಿ ನೀಡಿದ ಸ್ಥಳದಲ್ಲಿ ದೇವಸ್ಥಾನ, ಕರ್ನಾಟಕ ಘನ ಸರ್ಕಾರ ಮತ್ತು ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಇವರೆಲ್ಲರ ಆರ್ಥಿಕ ನೆರವಿನೊಂದಿಗೆ ರಚಿತವಾದ ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರವನ್ನು ದಿನಾಂಕ 19.09.2012ರ ಗಣೇಶನ ಹಬ್ಬದ ಶುಭ ದಿನದಂದು ಶ್ರೀದೇವರಿಗೆ ಸಮರ್ಪಿಸಲಾಯಿತು. ಈ ವೇದಿಕೆಯಲ್ಲಿ ಸಾಲಿಗ್ರಾಮದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯವರು 21 ನೇ ಗಣೇಶೋತ್ಸವನ್ನು ವಿಶೇಷವಾಗಿ ಆಚರಿಸುವುದರ ಮುಲಕ ಬಯಲು ರಂಗಮಂದಿರದ ಮೆರಗನ್ನು ಹೆಚ್ಚಿಸಿ ಇದರ ಸಾರ್ಥಕತೆಯ ಅರಿವನ್ನು ಮುಡಿಸಿದರು.


ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರ ಲೋಕಾರ್ಪಣೆ ಪ್ರಯುಕ್ತ ದಿನಾಂಕ 17.09.2012 ರ ರಾತ್ರಿ ವಾಸ್ತುಪೂಜೆ, ಸುದರ್ಶನ ಹೋಮವನ್ನು ಮಾಡಲಾಯಿತು. ದಿನಾಂಕ 18.09.2012ರ ಬೆಳಗ್ಗೆ ಶ್ರೀಗುರುನರಸಿಂಹ ದೇವರಿಗೆ ಪಂಚವಿಶತಿ ಕಲಾಶಾಭಿಷೇಕವನ್ನು ಮಾಡಲಾಯಿತು

ಶ್ರೀಗುರುನರಸಿಂಹ ಓಲಗ ಮಂಟಪ/ಬಯಲು ರಂಗಮಂದಿರ ಲೋಕಾರ್ಪಣೆ ಪ್ರಯುಕ್ತ ದಿನಾಂಕ 17.09.2012 ರ ರಾತ್ರಿ ವಾಸ್ತುಪೂಜೆ, ಸುದರ್ಶನ ಹೋಮವನ್ನು ಮಾಡಲಾಯಿತು. ದಿನಾಂಕ 18.09.2012ರ ಬೆಳಗ್ಗೆ ಶ್ರೀಗುರುನರಸಿಂಹ ದೇವರಿಗೆ ಪಂಚವಿಶತಿ ಕಲಾಶಾಭಿಷೇಕವನ್ನು ಮಾಡಲಾಯಿತು

ದಿನಾಂಕ 19.09.2012ರ ಬೆಳಗ್ಗೆ ಕರ್ನಾಟಕ ರಾಜ್ಯದ ಮಾನ್ಯ ಮುಜರಾಯಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯರು ದೀಪ ಬೆಳಗಿಸಿ ಓಲಗ ಮಂಟಪವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ರಾಜು ಪೂಜಾರಿ, ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವಸಚಿವರಾದ

ದಿನಾಂಕ 19.09.2012ರ ಬೆಳಗ್ಗೆ ಕರ್ನಾಟಕ ರಾಜ್ಯದ ಮಾನ್ಯ ಮುಜರಾಯಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯರು ದೀಪ ಬೆಳಗಿಸಿ ಓಲಗ ಮಂಟಪವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ರಾಜು ಪೂಜಾರಿ, ಸಾಲಿಗ್ರಾಮ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ ಶ್ಯಾನುಬಾಗ್, ಕಾರ್ಕಡದ ಶ್ರೀ ಶಿವರಾಮ ಉಡುಪ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ.ಎ ಜಗದೀಶ ಕಾರಂತರು ವಹಿಸಿದ್ದರು ಮತ್ತು ಸಹಧರ್ಮದರ್ಶೀಗಳಾದ ಶ್ರೀ.ಸದಾರಾಮ ಹೇರ್ಳೆ, ಶ್ರೀನೀರಾಳ ಕ್ರಷ್ಣ ಹೊಳ್ಳ, ಶ್ರೀ ಅನಂದರಾಮ ಮಧ್ಯಸ್ಥರು ಸಭೇಯಲ್ಲಿ ಉಪಸ್ಥಿತರಿದ್ದರು. ಶ್ರೀರಾಮಚಂದ್ರ ಐತಾಳರು ಸಭೇಯ ನಡಾವಳಿಯ ಜವಬ್ದಾರಿಯನ್ನು ಹೊತ್ತಿದ್ದರು.13Sep/120

Volaga Mantapa

Gurnasimah Pomplet 2nd Proof

1Sep/120

DEEPOTSAVA

2

ಸಾಲಿಗ್ರಾಮ :- ಶ್ರೀ ದೇವಳದ ಸಾಂಪ್ರಾದಾಯಿಕ ದೀಪೋತ್ಸವವು ದಿನಾಂಕ 12.12.2012ರ ಬುಧವಾರ ನಡೆಯುತ್ತಿದ್ದು ತಾವೆಲ್ಲರೂ ಈ ಸೇವೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ. ಸಂಜೆ  ಗಂಟೆ 7.30 ಕ್ಕೆ ಮಹಾಮಂಗಳಾರತಿ, ಹಿರಿರಂಗಪೂಜೆ, ದೀಪೋತ್ಸವ, ಪುಷ್ಫರಥೋತ್ಸವ, ತೆಪ್ಪೋತ್ಸವ ನಡೆಯಲಿದೆ. ಹಾಗೂ ಸಂಜೆ ಗಂಟೆ 6.30 ರಿಂದ ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಯಕ್ಷ ಮಿತ್ರರು ಕಾರ್ಕಡ ಇವರಿಂದ ಯಕ್ಷಗಾನ ಪ್ರಸಂಗ ಮಿನಾಕ್ಷಿ ಕಲ್ಯಾಣ ನಡೆಯಲಿದೆ.

ತಾವು ತಮ್ಮವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕ್ರಪೆಗೆ ಪಾತ್ರರಾಗುವರೆ ನಿಮಗಿದು ಆತ್ಮೀಯ ಕರೆಯೊಲೆ.

ಅಧ್ಯಕ್ಷರು ಮತ್ತು ಸದಸ್ಯರು

ಶ್ರೀಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ

15Aug/120

Ganeshana Habba

ಗಣೇಶ ಚತುರ್ಥಿ :- ದಿನಾಂಕ 19.09.2012 ರಂದು ಗಣೇಶ ಹಬ್ಬದ ಪ್ರಯುಕ್ತ 120 ಕಾಯಿ ಗಣಹೋಮ, ಮುಡುಗಣಪತಿ ಸೇವೆ, ಸಂಜೆ ಕಿರಿರಂಗಪೂಜೆ ಉತ್ಸವವನ್ನು ನಡೆಸಲಾಗುವುದು.