KARNATAKA BANK LTD. MANGALURU
ಶ್ರೀಗುರುನರಸಿಂಹ ದೇವಳಕ್ಕೆ ಕರ್ಣಾಟಕ ಬ್ಯಾಂಕ್ ಕೊಡುಗೆ ಅಪಾರವಾದುದು ಮತ್ತು ಅಮೂಲ್ಯವಾದುದು ಈ ವರೆಗೆ ಆರು ಕಂಪ್ಯೂಟರ್ ಮತ್ತು ಪ್ರಿಂಟರ ಜೊತೆಗೆ ಶ್ರೀದೇವಳದ ಎದುರಿನ ರಾಜಾಂಗಣಕ್ಕೆ ಕಲಾತ್ಮಕ ಛಾವಣಿ ಕೊಡುಗೆ ಮತ್ತು ಉತ್ತಮ ಬ್ಯಾಕಿಂಗ್ ವ್ಯವಹಾರದ ಭಾಂದವ್ಯ ಹೊಂದಿರುವ ಕರ್ಣಾಟಕ ಬ್ಯಾಂಕ್ ನ ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗಕ್ಕೆ ಆಡಳಿತ ಮಂಡಳಿಯು ಅಭಾರಿಯಾಗಿರುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತರುವ ಶ್ರೀ ಪಿ. ಜಯರಾಮ ಹಂದೆಯವರು ಸತತ ಮೂರನೇ ಬಾರಿಗೆ ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ. ಇವರ ಸಾಧನೆಯನ್ನು ಗೌರವಿಸಿ ಶ್ರೀದೇವಳದ ಆಡಳಿತ ಮಂಡಳಿಯು ದಿನಾಂಕ 3೦-07-2015 ರಂದು ಮಂಗಳೂರಿನ ಕರ್ಣಾಟಕ ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಈ ಸಂಧರ್ಭದಲ್ಲಿ ಮುಖ್ಯಮಹಾಪ್ರಭಂಧಕರಾದ ಶ್ರೀ ಮಹಾಬಲೇಶ್ವರ ಭಟ್ ಮಹಾಪ್ರಬಂಧಕಾರಾದ ಶ್ರೀ ಜಯರಾಮ ಹಂದೆ ಶ್ರೀ ರಘುರಾಮ ಮಯ್ಯರು ಉಪಸ್ಥಿತರಿದ್ದರು. ಶ್ರೀದೇವಳದ ವತಿಯಿಂದ ಅಧ್ಯಕ್ಷರಾದ ಶ್ರೀ ಕೆ ಅನಂತಪದ್ಮನಾಭ ಐತಾಳರು, ಉಪಾಧ್ಯಕ್ಷರಾದ ಶ್ರೀ ಬಿ. ರಘುನಾಥ ಸೋಮಯಾಜಿ, ಕೋಶಾಧಿಕಾರಿಯಾದ ಶ್ರೀ ಸುಬ್ರಹ್ಮಣ್ಯ ಹೇರ್ಳೆ, ಸದಸ್ಯರಾದ ಶ್ರೀ ಅಶೋಕಕುಮಾರ ಹೊಳ್ಳ, ವೇ.ಮೂ.ಚಂದ್ರಶೇಖರ ಉಪಾಧ್ಯ, ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ಎ.ಜಗದೀಶ ಕಾರಂತರು, ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥರು, ಶ್ರೀದೇವಳದ ಇಂಜನೀಯರ್ ಶ್ರೀ ಶ್ರೀಕಾಂತ ಆಚಾರ್ಯ ಆರ್ಕಿಟೆಕ್ಟ್ ಶ್ರೀ ರಾಜೇಂದ್ರ ಮಯ್ಯ, ಕೂ.ಮ.ಜ ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷರಾದ ಶ್ರೀ ಶೇಷಗಿರಿ ರಾವ್, ಸದಸ್ಯರಾದ ಶ್ರೀ ರಘುರಾಮ ರಾವ್ ಉಪಸ್ಥಿರಿದ್ದರು.
Election -2015
Sri Gurunarasimha Temple Saligrama Udupi Dist. Karnataka State
Managing Commit Election 29-03-2015 Result
RataSaptami
ರಥ ಸಪ್ತಮಿ :- ದಿನಾಂಕ 17.02.2013 ರಂದು ರಥಸಪ್ತಮಿಯನ್ನು ಆಚರಿಸಲಾಯಿತು. ಶ್ರೀದೇವಳದ ಸಾಂಪ್ರಾದಾಯಿಕ ಸೇವೆಯಾದ ಈ ಸೇವೆಯನ್ನು ಮಂಟಪ ಉಪಾಧ್ಯಾಯರು ನಡೆಸಿಕೊಂಡು ಬರುತ್ತಿದ್ದು ಬೆಳಗ್ಗೆ ಸಂಹಿತಾಭಿಷೇಕ, ವಿಶೇಷ ಪೂಜೆ ಮಧ್ಯಾಹ್ನ ಪುಷ್ಫರಥೋತ್ಸವನ್ನು ಆಚರಿಸಲಾಯಿತು. ಮಧ್ಯಾಹ್ನ ಭೋಜನ ಪ್ರಸಾದವನ್ನು ನೆರೆದಿದ್ದ ಎಲ್ಲಾ ಭಕ್ತರು ಸ್ವೀಕರಿಸಿದರು.
Kanyaka Samskruthi Shibira
ಕನ್ಯಕಾ ಸಂಸ್ಕ್ರತಿ ಶಿಬಿರ :- ದಿನಾಂಕ 11.04.2013 ರಿಂದ 13.04.2013 ರವರೆಗೆ ಶ್ರೀದೇವಳದ ಆಡಳಿತ ಮಂಡಳಿಯು ಪ್ರತಿ ವರ್ಷದಂತೆ ಈ ಸಲವೂ ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.

ಕನ್ಯಕಾ ಸಂಸ್ಕ್ರತಿ ಶಿಬಿರ ಉದ್ಘಾಟನೆ
39 ಜನ ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು ಹಾಗೂ ಇವರೆಲ್ಲರಿಗೂ ನಮ್ಮ ಸಂಸ್ಕ್ರತಿ ಉಳಿಸಿ ಬೆಳೆಸುವ ಮತ್ತು ಮನೋಬಲವನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭ
Vasantha Veda Shibhira
ಸಾಲಿಗ್ರಾಮ :- ಶ್ರೀದೇವಳದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಸಂತವೇದ ಶಿಬಿರವನ್ನು ಅಯೋಜಿಸಲಾಗಿತ್ತು ಏಪ್ರೀಲ್ 15 ರಿಂದ ಪ್ರಾರಂಭವಾಗಿ ಮೇ 7 ರ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. 379 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಬಾಗವಹಿಸಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡರು. ಇವರಿಗೆ ವೇದಪಾಠ ಮತ್ತು ಮಾರ್ಗದರ್ಶನವನ್ನು ನೀಡಲು 21 ಜನ ಗುರುಗಳು ಶ್ರಮವಹಿಸಿದ್ದರು ಇವರೊಂದಿಗೆ ಶ್ರೀದೇವಳದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಕೈಗೂಡಿಸಿದ್ದರು.
ದಿನಾಂಕ 07-05-2013ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಆಢಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥ, ಕೂ.ಮ.ಜ.ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಶಂಕರನಾರಾಯಣ ಹೊಳ್ಳ, ಪಾಠಶಾಲೆಯ ಪ್ರಾಂಶುಪಾಲರಾದ ಡಾ|| ನಿಟಿಲಾಪು ಕ್ರಷ್ಣಮುರ್ತಿ ಕಾರಂತ್ ಮತ್ತು ಗುರುಗಳಾದ ವೇ.ಮು. ಗಣಪಯ್ಯ ಹೊಳ್ಳರು ವೇದಿಕೆಯಲ್ಲಿ ಉಸ್ಥಿತರಿದ್ದರು.

ಸಮಾರೋಪ ಸಮಾರಂಭ
ಉತ್ತಮವಾಗಿ ಕಲಿತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳ ಹೆತ್ತವರು ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚೆಕೊಂಡರು , ವಿದ್ಯಾರ್ಥಿಗಳು ಕೆಲವೊಂದು ಕಸರತ್ತುಗಳನ್ನು ಮಾಡಿ ನೆರೆದಿದ್ದ ಎಲ್ಲರಿಗೂ ಮನರಂಜನೆ ನೀಡಿದ್ದು ವಿಶೇಷ ಆಕರ್ಷಣೆಯಾಗಿತ್ತು ಮಧ್ಯಾಹ್ನ ಮಹಾಪೂಜೆಯ ನಂತರ ಭೋಜನ ಪ್ರಸಾದವನ್ನು ಸ್ವೀಕರಿಸಿ ಎಲ್ಲಾ ಚದುರಿದರು.
ಈ ಶಿಬಿರದ ಯಶಸ್ಸಿಗಾಗಿ ಹಲವಾರು ದಾನಿಗಳು ವಿವಿಧ ರೂಪದ ಕೊಡುಗೆಯನ್ನು ನೀಡಿ ಸಹಕರಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಶ್ರೀ ಮಂಜುನಾಥ ಮಯ್ಯ ಮಣಿಪಾಲ ಇವರಿಂದ ಎಲ್ಲಾ ಶಿಬಿರಾರ್ಥಿಗಳಿಗೆ ಶ್ರೀದೇವರ ರಕ್ಷಾಕವಚವನ್ನು ಹಾಗೂ ಶ್ರೀ ಎಂ. ರಾಮಕ್ರಷ್ಣ ಮಯ್ಯರು "ಬೆಳಕು" ಎನ್ನುವ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು .

ಮಾನವ ಪಿರಮಿಡ್ (ಮನೋರಂಜನೆ ಕಾರ್ಯಕ್ರಮ)
Anjneya Jayanthi
ಅಂಜನೇಯ ಜಯಂತಿ : -
ಶ್ರೀದೇವಳದ ಉಪಸನ್ನಿಧಿಯಾದ ಹಾಗೂ ಭಕ್ತರಿಂದ ಬಹುಮುಖ ಸೇವೆಯನ್ನು ಪಡೆಯುತ್ತಾ ಅವರನ್ನು ಅನುಗ್ರಹಿಸುತ್ತಿರುವ ಶ್ರೀ ಆಂಜನೇಯ ದೇವರ ಸನ್ನಿಧಿಯಲ್ಲಿ ದಿನಾಂಕ 25-04-2013 ರ ಚಿತ್ರಪೂರ್ಣಿಮೆಯಂದು ಆಂಜನೇಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಂದು ಸೂರ್ಯೋದಯಕ್ಕೆ ಸರಿಯಾಗಿ ಪಂಚವಿಂಶತಿ ಕಲಾಶಾಭಿಷೇಕ, ಹೋಮ, ಎಳನೀರು ಅಭಿಷೇಕ ವಿಶೇಷ ಅಲಂಕಾರ ಪೂಜೆಗಳನ್ನು ಶ್ರೀದೇವಳದ ಜೋಯಿಸರಾದ ಶ್ರೀ ವೇ.ಮು.ರತ್ನಾಕರ ಸೋಮಯಾಜಿ, ತಂತ್ರಿಗಳಾದ ವೇ.ಮು.ಕ್ರಷ್ಣ ಸೋಮಯಾಜಿಯವರ ನೇತ್ರತ್ವದಲ್ಲಿ ಅರ್ಚಕ ಶ್ರೀ ವೇ.ಮು. ಶ್ರೀನಿವಾಸ ಅಡಿಗರ ಸಹಕಾರದಲ್ಲಿ ನೇರವೇರಿಸಲಾಯಿತು. ಪೂರ್ವಾಹ್ನದ ಸೇವೆಯ ಎಲ್ಲಾ ಖರ್ಚನ್ನು ಶ್ರೀ ಆಂಜನೇಯ ದೇವಳದ ಸಿಬ್ಬಂದಿಯು ವಹಿಸಿದ್ದರು.
ರಾತ್ರಿ ಚಂದ್ರಗ್ರಹಣದ ಸಲುವಾಗಿ ಸಂಜೆಯ ವಿಶೇಷಪೂಜೆ ಮಹಾರಂಗಪೂಜೆಯನ್ನು ಮಧ್ಯಾಹ್ನ ಗಂಟೆ 3-00 ಕ್ಕೆ ಮಾಡಲಾಯಿತು. ವಿಶೇಷ ಆಕರ್ಷಣೆಯಾಗಿ ಭಕ್ತರಿಂದ ಕರ್ಪೂರವನ್ನು ಶ್ರೀಆಂಜನೇಯ ದೇವಳದಿಂದ ಶ್ರೀಗುರುನರಸಿಂಹ ದೇವಸ್ಥಾನದವರೆಗೆ ಹಚ್ಚಲಾಯಿತು . ನಂತರ ಪಾನಕ ಪನಿವಾರವನ್ನು ನೆರದಿದ್ದ ಭಕ್ತರಿಗೆ ಹಂಚಲಾಯಿತು.