Election -2015
Sri Gurunarasimha Temple Saligrama Udupi Dist. Karnataka State
Managing Commit Election 29-03-2015 Result
RataSaptami
ರಥ ಸಪ್ತಮಿ :- ದಿನಾಂಕ 17.02.2013 ರಂದು ರಥಸಪ್ತಮಿಯನ್ನು ಆಚರಿಸಲಾಯಿತು. ಶ್ರೀದೇವಳದ ಸಾಂಪ್ರಾದಾಯಿಕ ಸೇವೆಯಾದ ಈ ಸೇವೆಯನ್ನು ಮಂಟಪ ಉಪಾಧ್ಯಾಯರು ನಡೆಸಿಕೊಂಡು ಬರುತ್ತಿದ್ದು ಬೆಳಗ್ಗೆ ಸಂಹಿತಾಭಿಷೇಕ, ವಿಶೇಷ ಪೂಜೆ ಮಧ್ಯಾಹ್ನ ಪುಷ್ಫರಥೋತ್ಸವನ್ನು ಆಚರಿಸಲಾಯಿತು. ಮಧ್ಯಾಹ್ನ ಭೋಜನ ಪ್ರಸಾದವನ್ನು ನೆರೆದಿದ್ದ ಎಲ್ಲಾ ಭಕ್ತರು ಸ್ವೀಕರಿಸಿದರು.
Kanyaka Samskruthi Shibira
ಕನ್ಯಕಾ ಸಂಸ್ಕ್ರತಿ ಶಿಬಿರ :- ದಿನಾಂಕ 11.04.2013 ರಿಂದ 13.04.2013 ರವರೆಗೆ ಶ್ರೀದೇವಳದ ಆಡಳಿತ ಮಂಡಳಿಯು ಪ್ರತಿ ವರ್ಷದಂತೆ ಈ ಸಲವೂ ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.

ಕನ್ಯಕಾ ಸಂಸ್ಕ್ರತಿ ಶಿಬಿರ ಉದ್ಘಾಟನೆ
39 ಜನ ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು ಹಾಗೂ ಇವರೆಲ್ಲರಿಗೂ ನಮ್ಮ ಸಂಸ್ಕ್ರತಿ ಉಳಿಸಿ ಬೆಳೆಸುವ ಮತ್ತು ಮನೋಬಲವನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭ
Vasantha Veda Shibhira
ಸಾಲಿಗ್ರಾಮ :- ಶ್ರೀದೇವಳದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಸಂತವೇದ ಶಿಬಿರವನ್ನು ಅಯೋಜಿಸಲಾಗಿತ್ತು ಏಪ್ರೀಲ್ 15 ರಿಂದ ಪ್ರಾರಂಭವಾಗಿ ಮೇ 7 ರ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. 379 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಬಾಗವಹಿಸಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡರು. ಇವರಿಗೆ ವೇದಪಾಠ ಮತ್ತು ಮಾರ್ಗದರ್ಶನವನ್ನು ನೀಡಲು 21 ಜನ ಗುರುಗಳು ಶ್ರಮವಹಿಸಿದ್ದರು ಇವರೊಂದಿಗೆ ಶ್ರೀದೇವಳದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಕೈಗೂಡಿಸಿದ್ದರು.
ದಿನಾಂಕ 07-05-2013ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಆಢಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥ, ಕೂ.ಮ.ಜ.ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಶಂಕರನಾರಾಯಣ ಹೊಳ್ಳ, ಪಾಠಶಾಲೆಯ ಪ್ರಾಂಶುಪಾಲರಾದ ಡಾ|| ನಿಟಿಲಾಪು ಕ್ರಷ್ಣಮುರ್ತಿ ಕಾರಂತ್ ಮತ್ತು ಗುರುಗಳಾದ ವೇ.ಮು. ಗಣಪಯ್ಯ ಹೊಳ್ಳರು ವೇದಿಕೆಯಲ್ಲಿ ಉಸ್ಥಿತರಿದ್ದರು.

ಸಮಾರೋಪ ಸಮಾರಂಭ
ಉತ್ತಮವಾಗಿ ಕಲಿತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳ ಹೆತ್ತವರು ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚೆಕೊಂಡರು , ವಿದ್ಯಾರ್ಥಿಗಳು ಕೆಲವೊಂದು ಕಸರತ್ತುಗಳನ್ನು ಮಾಡಿ ನೆರೆದಿದ್ದ ಎಲ್ಲರಿಗೂ ಮನರಂಜನೆ ನೀಡಿದ್ದು ವಿಶೇಷ ಆಕರ್ಷಣೆಯಾಗಿತ್ತು ಮಧ್ಯಾಹ್ನ ಮಹಾಪೂಜೆಯ ನಂತರ ಭೋಜನ ಪ್ರಸಾದವನ್ನು ಸ್ವೀಕರಿಸಿ ಎಲ್ಲಾ ಚದುರಿದರು.
ಈ ಶಿಬಿರದ ಯಶಸ್ಸಿಗಾಗಿ ಹಲವಾರು ದಾನಿಗಳು ವಿವಿಧ ರೂಪದ ಕೊಡುಗೆಯನ್ನು ನೀಡಿ ಸಹಕರಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಶ್ರೀ ಮಂಜುನಾಥ ಮಯ್ಯ ಮಣಿಪಾಲ ಇವರಿಂದ ಎಲ್ಲಾ ಶಿಬಿರಾರ್ಥಿಗಳಿಗೆ ಶ್ರೀದೇವರ ರಕ್ಷಾಕವಚವನ್ನು ಹಾಗೂ ಶ್ರೀ ಎಂ. ರಾಮಕ್ರಷ್ಣ ಮಯ್ಯರು "ಬೆಳಕು" ಎನ್ನುವ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು .

ಮಾನವ ಪಿರಮಿಡ್ (ಮನೋರಂಜನೆ ಕಾರ್ಯಕ್ರಮ)
Anjneya Jayanthi
ಅಂಜನೇಯ ಜಯಂತಿ : -
ಶ್ರೀದೇವಳದ ಉಪಸನ್ನಿಧಿಯಾದ ಹಾಗೂ ಭಕ್ತರಿಂದ ಬಹುಮುಖ ಸೇವೆಯನ್ನು ಪಡೆಯುತ್ತಾ ಅವರನ್ನು ಅನುಗ್ರಹಿಸುತ್ತಿರುವ ಶ್ರೀ ಆಂಜನೇಯ ದೇವರ ಸನ್ನಿಧಿಯಲ್ಲಿ ದಿನಾಂಕ 25-04-2013 ರ ಚಿತ್ರಪೂರ್ಣಿಮೆಯಂದು ಆಂಜನೇಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಂದು ಸೂರ್ಯೋದಯಕ್ಕೆ ಸರಿಯಾಗಿ ಪಂಚವಿಂಶತಿ ಕಲಾಶಾಭಿಷೇಕ, ಹೋಮ, ಎಳನೀರು ಅಭಿಷೇಕ ವಿಶೇಷ ಅಲಂಕಾರ ಪೂಜೆಗಳನ್ನು ಶ್ರೀದೇವಳದ ಜೋಯಿಸರಾದ ಶ್ರೀ ವೇ.ಮು.ರತ್ನಾಕರ ಸೋಮಯಾಜಿ, ತಂತ್ರಿಗಳಾದ ವೇ.ಮು.ಕ್ರಷ್ಣ ಸೋಮಯಾಜಿಯವರ ನೇತ್ರತ್ವದಲ್ಲಿ ಅರ್ಚಕ ಶ್ರೀ ವೇ.ಮು. ಶ್ರೀನಿವಾಸ ಅಡಿಗರ ಸಹಕಾರದಲ್ಲಿ ನೇರವೇರಿಸಲಾಯಿತು. ಪೂರ್ವಾಹ್ನದ ಸೇವೆಯ ಎಲ್ಲಾ ಖರ್ಚನ್ನು ಶ್ರೀ ಆಂಜನೇಯ ದೇವಳದ ಸಿಬ್ಬಂದಿಯು ವಹಿಸಿದ್ದರು.
ರಾತ್ರಿ ಚಂದ್ರಗ್ರಹಣದ ಸಲುವಾಗಿ ಸಂಜೆಯ ವಿಶೇಷಪೂಜೆ ಮಹಾರಂಗಪೂಜೆಯನ್ನು ಮಧ್ಯಾಹ್ನ ಗಂಟೆ 3-00 ಕ್ಕೆ ಮಾಡಲಾಯಿತು. ವಿಶೇಷ ಆಕರ್ಷಣೆಯಾಗಿ ಭಕ್ತರಿಂದ ಕರ್ಪೂರವನ್ನು ಶ್ರೀಆಂಜನೇಯ ದೇವಳದಿಂದ ಶ್ರೀಗುರುನರಸಿಂಹ ದೇವಸ್ಥಾನದವರೆಗೆ ಹಚ್ಚಲಾಯಿತು . ನಂತರ ಪಾನಕ ಪನಿವಾರವನ್ನು ನೆರದಿದ್ದ ಭಕ್ತರಿಗೆ ಹಂಚಲಾಯಿತು.
Narasimha Jayanthi
ನರಸಿಂಹ ಜಯಂತಿ :-
ದಿನಾಂಕ 23-05-2013 ರಂದು ಶ್ರೀದೇವಳದಲ್ಲಿ ನರಸಿಂಹ ಜಯಂತಿಯು ಸಂಭ್ರಮದಿಂದ ಆಚರಿಸಲ್ಪಟ್ಟಿತು. ಬೆಳಗಿನಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. , ಬೆಳಿಗ್ಗೆ ಸಂಹಿತಾಭಿಷೇಕ, ನರಸಿಂಹ ಹೋಮಗಳು ವಿಧಿವತ್ತಾಗಿ ನಡೆದವು, ಮಧ್ಯಾಹ್ನ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ನಿತ್ಯ ಬಲಿ ಮುಗಿದೊಡನೆ ಎಲ್ಲಾರೂ ಕೂಡಿ ಭೋಜನ ಪ್ರಸಾದ ಸ್ವೀಕರಿಸಿದರು.
ಸಂಜೆ 6--00 ಗಂಟೆಗೆ ಪಂಚಾಮ್ರತ ಸಹಿತ ವಿಶೇಷ ಪೂಜೆ ಶ್ರೀದೇವಳದ ಓಲಗ ಮಂಟಪದಲ್ಲಿ ಅಷ್ಟಾವಧಾನ ಸೇವೆಗಳು ಶಾಸ್ತ್ರೋಕ್ತವಾಗಿ ನಡೆದವು ,ಅಪಾರ ಸಂಖ್ಯೆಯಲ್ಲಿ ನೆರೆದ ಜನರಿಗೆ ಪಾನಕ ಪನೀವಾರವನ್ನು ವಿತರಿಸಲಾಯಿತು.
ರಾತ್ರಿ 8-00 ಗಂಟೆಗೆ ಹಿರಿರಂಗಪೂಜೆ, ಉತ್ಸವ ಬಲಿ, ಪುಷ್ಫರಥೋತ್ಸವ, ನಡೆದು ಮಂತ್ರಾಕ್ಷತೆಯೊಂದಿಗೆ ಉತ್ಸವಕ್ಕೆ ಮಂಗಲ ಹಾಡಲಾಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ಶ್ರೀದೇವಳದ ತಂತ್ರಿಗಳಾದ ವೇ.ಮು.ಕ್ರಷ್ಣ ಸೋಮಯಾಜಿ, ಜೋಯಿಸರಾದ ಶ್ರೀ ವೇ.ಮು.ರತ್ನಾಕರ ಸೋಮಯಾಜಿಯವರ ನೇತ್ರತ್ವದಲ್ಲಿ ಅರ್ಚಕ ಶ್ರೀ ವೇ.ಮು. ಜನಾರ್ದನ ಅಡಿಗರ ಸಹಕಾರದಲ್ಲಿ ನೇರವೇರಿಸಲಾಯಿತು.
ಸಂಜೆ ಗಂಟೆ 7-00 ರಿಂದ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ " ದಕ್ಷ ಯಜ್ಞ " ಎನ್ನವ ಯಕ್ಷಗಾನ ಪ್ರಸಂಗವನ್ನು ಯಶಸ್ವಿಯಾಗಿ ಆಡಿ ತೋರಿಸಿದರು.
Shashwatha Antara Chappara- Arpane
ಸಾಲಿಗ್ರಾಮ :- ಶಾಶ್ವತ ಅಂತರ ಚಪ್ಪರದ (ಸ್ವಾಗತ ಛಾವಣಿ) ಉದ್ಘಾಟನಾ ಸಮಾರಂಭ
ದಿನಾಂಕ 15.01.2013 ಬೆಳಗ್ಗೆ 10-00 ಕ್ಕೆ ಸರಿಯಾಗಿ ಶ್ರೀದೇವಳದ ಎದುರಿನ ರಾಜಾಂಗಣದಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಕೊಡುಗೆಯಲ್ಲಿ ನಿರ್ಮಾಣಗೊಂಡ ಕಲಾತ್ಮಕವಾದ ಶಾಶ್ವತ ಅಂತರ ಚಪ್ಪರವನ್ನು ಕರ್ನಾಟಕ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀ ಪಿ. ಜಯರಾಮ ಭಟ್ ಇವರು ತಮ್ಮ ಅಮ್ರತ ಹಸ್ತದಿಂದ ದೀಪ ಬೆಳಗಿಸಿವುದರ ಮುಲಕ ಶ್ರೀಗುರುನರಸಿಂಹ ದೇವರಿಗೆ ಸಮರ್ಪಿಸಿದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥರು ಎಲ್ಲರನ್ನು ಸ್ವಾಗತಿಸಿದರು. ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ ವೆಂಕಟ್ರಾವ್, ಕರ್ನಾಟಕ ಬ್ಯಾಂಕ್ ನಿರ್ದೇಶಕರಾದ ಶ್ರೀ ಪಿ.ಜಯರಾಮ ಹಂದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರು ವಹಿಸಿದ್ದರು, ಶ್ರೀಎ ಜಗದೀಶ ಕಾರಂತರು ಮಾತನಾಡುತ್ತಾ, ಕರ್ನಾಟಕ ಬ್ಯಾಂಕ್ (ಲಿ) ಪ್ರಧಾನ ಕಛೇರಿ ಮಂಗಳೂರು ಇವರು ಶ್ರೀದೇವಳದ ಆಡಳಿತ ಮಂಡಳಿಯ ಕೋರಿಕೆಯನ್ನು ಮನ್ನಿಸಿ ದೇವಳದ ಮುಂಭಾಗದ ರಾಜಾಂಗಣದಲ್ಲಿ ಶಾಶ್ವತ ಕಲಾತ್ಮಕ ಅಂತರ ಚಪ್ಪರ (ಸ್ವಾಗತ ಛಾವಣಿ ) ನಿರ್ಮಾಣಕ್ಕೆ ರೂ ಹತ್ತು ಲಕ್ಷವನ್ನು ದೇಣಿಗೆ ರೂಪದಲ್ಲಿ ತತ್ ಕ್ಷಣವೇ ನೀಡಿರುತ್ತಾರೆ. ಈ ಹಿಂದೆಯೂ ಶ್ರೀದೇವಳದ ಗಣಕೀರಣಗೊಳಿಸುವ ನಮ್ಮ ಅಪೇಕ್ಷೆಯನ್ನು ಮನ್ನಿಸಿ ನಮಗೆ ಅಗತ್ಯವಿರುವಷ್ಟು ಕಂಪ್ಯೂಟರ್ಗಳನ್ನು ನೀಡಿರುವುದನ್ನು ಈ ಸಂಧರ್ಭದಲ್ಲಿ ಸ್ಮರಿಸಿಕೊಳ್ಳುತ್ತೇವೆ. ಶ್ರೀದೇವಳದ ಬಹುತೇಕ ಆರ್ಥಿಕ ವ್ಯವಹಾರಗಳನ್ನು ಕರ್ನಾಟಕ ಬ್ಯಾಂಕನ ಚಿತ್ರಪಾಡಿ ಶಾಖೆಯ ಮುಲಕ ನಡೆಸುತ್ತಿದ್ದು ಈ ಶಾಖೆಯ ಪ್ರಬಂಧಕರು ಹಾಗೂ ಸಿಬಂಧಿಗಳ ಸಹಕಾರವನ್ನು ತುಂಬು ಹ್ರದಯದಿಂದ ಸ್ಮರಿಸಿಕೊಳ್ಳುತ್ತೇವೆ. ಈಗಾಗಲೇ ಈ ಕಲಾತ್ಮಕವಾದ ಸ್ವಾಗತ ಛಾವಣಿಗೆ ರೂ. ಹದಿನೆಂಟು ಲಕ್ಷದ ಐವತ್ತು ಸಾವಿರ ಖರ್ಚು ತಗಲಿದ್ದು ಕರ್ನಾಟಕ ಬ್ಯಾಂಕ್ ನಮಗೆ ರೂ. ಹತ್ತು ಲಕ್ಷದ ಪ್ರಧಾನ ದೇಣಿಗೆ ನೀಡಿದ್ದು ಇನ್ನುಳಿದ ಎಂಟು ಲಕ್ಷದ ಐವತ್ತು ಸಾವಿರ ಅವಕಾಶವಿದ್ದಲ್ಲಿ ದೇಣಿಗೆ ರೂಪದಲ್ಲಿ ನೀಡುವಂತೆ ತಮ್ಮನ್ನು ವಿನಂತಿಸಿಕೊಳ್ಳುತ್ತೇವೆ, ಎನ್ನುತಾ ತಮ್ಮ ಮಾತನ್ನು ಮುಗಿಸಿದರು
ದೀಪ ಬೇಳಗಿಸಿ ಸಮರ್ಪಣೆ ಮಾಡುತ್ತೀರುವ ಶ್ರೀ ಪಿ. ಜಯರಾಮ ಭಟ್
ಉದ್ಘಾಟಕರಾದ ಕನಾಟಕ ಬ್ಯಾಂಕನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಜಯರಾಮ ಭಟ್ ಮಾತನಾಡುತ್ತಾ ಕೋಟ ಸಮಾಜದವನೇ ಆದ ನಾನು ಈ ಗುರುಸ್ಥಾನದಲ್ಲಿ ಸೇವೆ ಮಾಡುವ ಅವಕಾಶ ಒದಗಿ ಬಂದಿದ್ದಾಗಿ ಶ್ರೀದೇವರನ್ನು ಸ್ಮರಿಸಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ವೈ ಸದಾರಾಮ ಹೇರ್ಳೆಯವರು ಧನ್ಯವಾದ ಸಮರ್ಪಣೆ ಮಾಡಿದರು ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಹಿಂದಿನ ಆಡಳಿತ ಮಂಡಳಿಯಲ್ಲಿ ಕಾರ್ಯದಶಿಯಾಗಿದ್ದ ಶ್ರೀ ಬಿ ನಾರಾಯಣ ಸೋಮಯಾಜಿ ವಹಿಸಿದ್ದರು.
ರೂ ಹತ್ತು ಲಕ್ಷದ ಡಿಡಿಯನ್ನು ಶ್ರೀ ಜಯರಾಮ ಭಟ್ ಇವರು ಶ್ರೀದೇವಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ಜಗದೀಶ ಕಾರಂತರಿಗೆ ಹಸ್ತಾಂತರಿಸಿದರು.
ಈ ಶುಭ ಸಂಧರ್ಭದಲ್ಲಿ ಕರ್ನಾಟಕ ಬ್ಯಾಂಕ್ ನಿರ್ದೇಶರಾದ ಶ್ರೀ ಮಹಾಬಲೇಶ್ವರ ಭಟ್ , ಶ್ರೀ ಎಂ.ವಿ. ಚಂದ್ರಶೇಖರ ಕಾರಂತ್, ಹಾಗೂ ಮುಖ್ಯ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂಧಿ ವರ್ಗ, ಶ್ರೀದೇವಳದ ಆಡಳಿತ ಮಂಡಳಿಯ ಸಹ ಧರ್ಮದರ್ಶಿಗಳಾದ, ಶ್ರೀ ಎಚ್ .ಧರ್ಮರಾಯ ಹಂದೆ ಕೋಟ, ಶ್ರೀ ನಾಗರಾಜ ಬಿ ಶ್ರಂಗೇರಿ, ಶ್ರೀ ಎನ್.ಕ್ರಷ್ಣ ಹೊಳ್ಳ ಕಾಸರಗೋಡು, ವೇ.ಮು.ಅನಂತಪದ್ಮನಾಭ ಐತಾಳ ಕೋಟ, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆಯ ಮತ್ತು ಅಂಗಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಹಿಂದಿನ ಆಡಳಿತ ಮಂಡಳಿಯ ಸದಸ್ಯರು, ಊರಿನ ಮತ್ತು ಪರವೂರಿನ ಗಣ್ಯ ವ್ಯಕ್ತಿಗಳು, ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾದರು.
ಶ್ರೀ ಪಿ ಜಯರಾಮ ಭಟ್ ಇವರನ್ನು ಶ್ರೀದೇವಳದ ಸಂಪ್ರದಾಯದಂತೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು
ನಂತರ ನೆರೆದಿದ್ದ ಎಲ್ಲರಿಗೂ ಶ್ರೀದೇವರ ಪ್ರಸಾದ ರೂಪದಲ್ಲಿ ಸಿಹಿತಿಂಡಿ ವಿತರಣೆ ಮಾಡಲಾಯಿತು.