Paraspara e-KootaBandhu for quicker news

1Oct/120

Ganesh Habba

ಸಾಂಪ್ರದಾಯಿಕ ಗಣಹೋಮ ಹಾಗೂ ನರಸಿಂಹ ಹೋಮ ಗಣೇಶ ಚತುರ್ಥಿಯ ದಿನ ನಡೆಯಿತು.

ಸಾಂಪ್ರದಾಯಿಕ ಗಣಹೋಮ ಹಾಗೂ ನರಸಿಂಹ ಹೋಮ ಗಣೇಶ ಚತುರ್ಥಿಯ ದಿನ ನಡೆಯಿತು.

ಗಣೇಶ ಚತುರ್ಥಿ :- ದಿನಾಂಕ 19.09.2012ರಂದು ಸಂಪ್ರದಾಯದಂತೆ ಶ್ರೀಗಣಪತಿ ದೇವರಿಗೆ ವಿಶೇಷ ಪೂಜೆ, ಪಂಚಭಕ್ಷ ಪರಮಾನ್ನ ನೈವೇಧ್ಯ, 120 ಕಾಯಿ ಗಣಹೋಮ, ಮುಡುಗಣಪತಿ ಸೇವೆ, ಸಂಜೆ ಶ್ರೀಗಣಪತಿ ಮತ್ತು ನರಸಿಂಹ ದೇವರಿಗೆ ರಂಗಪೂಜೆಗಳನ್ನು ಮಾಡಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಶ್ರೀಗುರುನರಸಿಂಹ ದೇವರನ್ನು ಗಣಪತಿ ಯಂತ್ರದ ಮೇಲೆ ಸ್ಥಾಪನೆ ಮಾಡಿರುವುದರಿಂದ ಇಲ್ಲಿ ಶ್ರೀದೇವರಿಗೆ ಗಣಹೋಮ, ಮುಡುಗಣಪತಿ ಸೇವೆ ಬಹಳ ವಿಶೇಷವಾಗಿದೆ.

1Oct/120

Krishna Janmasstami, Vittlpindi Utsva

DSC02021

ಕ್ರಷ್ಣ ಜನ್ಮಾಷ್ಠಮಿ :- ದಿನಾಂಕ 08.09.2012 ರಾತ್ರಿ ಶ್ರೀಗುರುನರಸಿಂಹ ದೇವರಿಗೆ ಮತ್ತು ವೇಣಗೋಪಾಲ ಕ್ರಷ್ಣ ದೇವರಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ಮಾಡಿ ಕ್ರಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.

ವಿಟ್ಲಪಿಂಡಿ ಉತ್ಸವ :- ದಿನಾಂಕ 09.09.2012ರ ಸಂಜೆ 4-30ಕ್ಕೆ ಸರಿಯಾಗಿ ಶ್ರೀಗುರುನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕಿಯಲ್ಲಿ ವೇದ ವಿದ್ಯಾರ್ಥಿಗಳ,ಉಪಾಧಿವಂತರ,ಅರ್ಚಕವರ್ಗದವರ ಮಂತ್ರಘೋಷ, ಪಂಚವಾದ್ಯ, ತೋರಣ ಪತಾಕೆ ಬಿರುದಾವಳಿಗಳ ಅದ್ದೂರಿ ಮೆರವಣಿಗೆಯೊಂದಿಗೆ ಸಂಪ್ರದಾಯದದಂತೆ ಮೊಸರು ಕುಡಿಕೆಗಳನ್ನು ಒಡೆಯುತ್ತಾ ಎಡಬೆಟ್ಟು (ಮುಡಹಡು) ಗ್ರಾಮದಲ್ಲಿರುವ ಶ್ರೀವೇಣುಗೋಪಾಲ ದೇವಸ್ಥಾಕ್ಕೆ ಹೋಗಿ ಅಲ್ಲಿ ಸಾಂಪ್ರದಾಯಿಕ ಪೂಜೆ ಮತ್ತು ಅಷ್ಟಾವಧಾನ ಪೂಜೆಗಳನ್ನು ಸ್ವೀಕರಿಸಿ ಅಲ್ಲಿಂದ ಮೆರವಣಿಗೆಯಲ್ಲಿ ಶ್ರೀಆಂಜನೇಯ ಸ್ವಾಮಿ ದೇವಳಕ್ಕೆ ಬಂದು ಅಲ್ಲಿ ಸೋಣೆ ಆರತಿ ಮತ್ತು ಅಷ್ಟಾವಧಾನ ಸೇವೆ ಪೂರೈಸಿ ಶ್ರೀದೇವಳಕ್ಕೆ ಹಿಂತುರುಗಿ ಮಹಾಪೂಜೆಯನ್ನು ಮಾಡಲಾಯಿತು.

18Aug/120

Sri Ananathakrishna

ಕರ್ನಾಟಕ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಆನಂತಕ್ರಷ್ಣ ಮತ್ತು ಕುಟುಂಬ ತಾ 24.07.2012 ರಂದು ಶ್ರೀದೇವಳಕ್ಕೆ ಭೇಟಿ ನೀಡಿ ಶ್ರೀದೇವರಿಗೆ ಪೂಜೆ ಸಲ್ಲಿಸಿದರು.

ANANTAKRISHNA

1Aug/120

Shravana Shanivara

ಸಾಲಿಗ್ರಾಮ :- ದಿನಾಂಕ 21.07.12 & 28.07.12 & 04.08.12 & 11.08.2012 ರ 4 ಶನಿವಾರಗಳು ಶ್ರೀದೇವಳದಲ್ಲಿ ವಿಶೇಷ ದಿನಗಳಾಗಿದ್ದು ಶ್ರಾವಣ ಶನಿವಾರ ಎಂದೆ ಪ್ರಸಿದ್ದಿ ಹೊಂದಿದೆ ಈ ಎಲ್ಲಾ ದಿನಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವರಿಗೆ ಸೇವೆ ಸಲ್ಲಿಸಿದರು. ಈ ವಾತವಾರಣವು ಸಾಲಿಗ್ರಾಮ ಹಬ್ಬದ ನೆನಪನ್ನು ಮಾಡುವಂತಿತ್ತು ಎಲ್ಲಾ ದಿನಗಳಲ್ಲಿ ಸಾವಿರ ಸಂಖ್ಯೆಯ ಭಕ್ತರು ಭೋಜನ ಪ್ರಸಾದವನ್ನು ಸ್ವೀಕರಿಸಿದರು. ಕೊನೆಯ ಶ್ರಾವಣ ಶನಿವಾರ ಸುಮಾರು 5,000 ಜನ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

ಶ್ರಾವಣ ಸಂಜೆ :- 21.07.12ರ ಶ್ರಾವಣ ಶನಿವಾರದಂದು ಶ್ರೀಗುರುನರಸಿಂಹ ದೇವಸ್ಥಾನ, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಅಂಗಸಂಸ್ಥೆ :- ಸಾಲಿಗ್ರಾಮ, ರಂಗ ಬಳಗ ಕೋಟ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀದೇವಳದ ಜ್ಞಾನಮಂದಿರದಲ್ಲಿ ಯಕ್ಷಗಾನ ಮೇಳದ ಯಜಮಾನರೆಂದು ಪ್ರಸಿದ್ದಿ ಹೊಂದಿದ ಪಾರಂಪಳ್ಳಿ ಶ್ರೀಶ್ರೀಧರ ಹಂದೆ ಸಂಸ್ಮರಣೆ ಹಾಗೂ ತಾಳಮದ್ದಲೆ (ಪ್ರಸಂಗ :- ಸತ್ಯ ಹರಿಶ್ಚಂದ್ರ ) ನಡೆಸಿಕೊಡಲಾಯಿತು. ಸುಮಾರು 300  ಜನ ಪ್ರೇಕ್ಷಕರು ಈ ಕಾರ್ಯಕ್ರಮವನ್ನು ವಿಕ್ಷಿಸಿದರು.

DSC02023

1Aug/120

Mane Maneyallu Bajane

ಸಾಲಿಗ್ರಾಮ :- ದಿನಾಂಕ 14.05.2012 ರಂದು ಶ್ರೀನಂಜುಂಡೇಶ್ವರ ಭಜನಾ ಮಂಡಳಿ ಶತಮಾನೋತ್ಸವ ಸಮಿತಿ ಶ್ರೀನಂಜುಂಡೇಶ್ವರ ದೇವಸ್ಥಾನ ಪಣಂಬೂರು  ಇವರು "ಮನೆ ಮನೆಯಲ್ಲೂ ಭಜನೆ"  25 ನೇ ಭಜನಾ ಸಂಭ್ರಮದ ಅಂಗವಾಗಿ ಶ್ರೀದೇವಳಕ್ಕೆ ಭೇಟಿ ನೀಡಿ ಭಜನೆಯನ್ನು ಮಾಡಿ ಶ್ರೀದೇವರಿಗೆ ಸೇವೆ ಸಲ್ಲಿಸಿದರು.

BHJANE3

1Aug/120

Balamuri Shanka

ಸಾಲಿಗ್ರಾಮ :- ಶ್ರೀ ಬಿ.ನಾರಾಯಣ ಐತಾಳ ಗಿರಿರನಗರ ಬೆಂಗಳೂರು  ಇವರು ಶ್ರೀಮತಿ ಪ್ರೇಮಾ ಭಾರ್ಗವ ನರಸಿಂಹ ಮತ್ತು ಶ್ರೀಮತಿ ಪದ್ಮಪ್ರಿಯಾ ಆನಂದ ಇವರ ಸಹಭಾಗಿತ್ವದಲ್ಲಿ  ರೂ.1,65,000 ,ಮೌಲ್ಯದ ಕಲಾತ್ಮಕವಾಗಿ ಬೆಳ್ಳಿ ಕಟ್ಟಸಿದ ಶಂಕದಲ್ಲೆ ಪವಿತ್ರವಾದ ದೊಡ್ದ ಗಾತ್ರದ ಪವಿತ್ರವಾದ ಬಲಮುರಿಶಂಖವನ್ನು  ಶ್ರೀದೇವರಿಗೆ ಸಮರ್ಪಿಸಿದರು.

ಬಲಮುರಿ ಶಂಖ

ಬಲಮುರಿ ಶಂಖ

ಶ್ರೀ ಬಿ ನಾರಾಯಣ ಐತಾಳರು ಆಡಳಿತ ಮಂಡಳಿಯ ಅಧ್ಯಕ್ಷರಾದ ಎ.ಜಗದೀಶ ಕಾರಂತರಿಗೆ ಹಸ್ತಾಂತರಿಸುವುದು.

ಶ್ರೀ ಬಿ ನಾರಾಯಣ ಐತಾಳರು ಆಡಳಿತ ಮಂಡಳಿಯ ಅಧ್ಯಕ್ಷರಾದ ಎ.ಜಗದೀಶ ಕಾರಂತರಿಗೆ ಹಸ್ತಾಂತರಿಸುವುದು.

1Aug/120

Saligrama Kantabharana

ಸಾಲಿಗ್ರಾಮ :- ದಿನಾಂಕ 19.05.2012 ರಂದು ಶ್ರೀಶ್ರೀನಿವಾಸ ಹೆಬ್ಬಾರ್‍ ವಿಲ್ಸನ್ ಗಾರ್ಡನ್ ಬೆಂಗಳೂಉ ಇವರು ಹನ್ನೆರುಡು ವಿವಿಧ ಶಕ್ತಿ ಕೇಂದ್ರಗಳನ್ನು ಹೊಂದಿರುವ ಸಾಲಿಗ್ರಾಮಗಳನ್ನು ಬೆಳ್ಳಿಯಲ್ಲಿ ಕಲಾತ್ಮಕವಾಗಿ ಪೋಣಿಸಿದ ಕಂಠಾಭರಣವನ್ನು ಶ್ರೀದೇವರಿಗೆ ಸಮರ್ಪಿಸಿದರು,

12 ವಿವಿಧ ಶಕ್ತಕೇಂದ್ರ ಹೊಂದಿರುವ ಸಾಲಿಗ್ರಾಮ ಕಂಠಾಭರಣ

12 ವಿವಿಧ ಶಕ್ತಿಕೇಂದ್ರ ಹೊಂದಿರುವ ಸಾಲಿಗ್ರಾಮ ಕಂಠಾಭರಣ

ಬೇಳ್ಳಿ ಕಟ್ಟಿಸಿದ ಸಾಲಿಗ್ರಾಮ ಕಂಠಾಭರಣ ಮತ್ತು ಸುವರ್ಣದ ಗುಂಡುಮಣಿ ಸರದಿಂದ ಅಲಂಕ್ರತಗೊಂಡ ಶ್ರೀಗುರುನರಸಿಂಹ ದೇವರು

ಬೇಳ್ಳಿ ಕಟ್ಟಿಸಿದ ಸಾಲಿಗ್ರಾಮ ಕಂಠಾಭರಣ ಮತ್ತು ಸುವರ್ಣದ ಗುಂಡುಮಣಿ ಸರದಿಂದ ಅಲಂಕ್ರತಗೊಂಡ ಶ್ರೀಗುರುನರಸಿಂಹ ದೇವರು

1Aug/120

Mituna Sankaraman

ಮಿಥುನ ಸಂಕ್ರಮಣ :- ಪ್ರತಿ ವರ್ಷದಂತೆ ಈ ವರ್ಷವು ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಭಕ್ತರಿಂದ ಸಂಗ್ರಹಿಸಿದ ಸುಮಾರು 1,500 ಕ್ಕೂ ಅಧಿಕ ಸೀಯಾಳವನ್ನು ಶ್ರೀಗುರುನರಸಿಂಹ ಮತ್ತು ಪರಿವಾರ ದೇವತೆಗಳಿಗೆ ಮಂಗಳವಾದ್ಯ ಹಾಗೂ ವೇದಮಂತ್ರಘೋಷದೊಂದಿಗೆ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಗಣಹೋಮ ಮತ್ತು ನವಕಪ್ರಧಾನ ಕಲಾಶಾಭಿಷೇಕ ಸೇವೆಯನ್ನು ಮಾಡಲಾಯಿತು. ಹಾಗೂ ಈ ವರ್ಷದ ಉತ್ತರಾಯಣದ ಕೊನೆಯ ಪುಷ್ಫರಥೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಓರ್ವಭಕ್ತರು ಸುಮಾರು ರೂ. 4,74,126-00 ಮೌಲ್ಯದ ಪದಕ ಸಹಿತವಾದ ಗುಂಡುಮಣಿ ಸರವನ್ನು ಶ್ರೀದೇವರಿಗೆ ಭಕ್ತಿಪೂರ್ವಕವಾಗಿ ನೀಡಿದರು.

ಶ್ರೀಧೆವರ ಪದಕ ಸಹಿತ ಗುಂಡುಮಣಿ ಸರ

ಶ್ರೀದೇವರ ಪದಕ ಸಹಿತ ಗುಂಡುಮಣಿ ಸರ

30Jul/120

Nilavara Surendra Adiga

ಸಾಲಿಗ್ರಾಮ :- ಶ್ರೀದೇವಳದ ಜ್ಞಾನಮಂದಿರದಲ್ಲಿ ಅಡಿಗ ಕೋಟ ಅಭಿನಂದನಾ ಸಮಿತಿಯವರು ಏರ್ಪಟಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರನ್ನು ಶ್ರೀದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

DSC01875

30Jul/120

Ganyara Beti

ಏಪ್ರೀಲ್ ೨೦೧೨ ರಲ್ಲಿ ಉಡುಪಿ ಲೋಕಸಭಾ ಚುನಾವಣೆ ಅಂಗವಾಗಿ ಶ್ರೀದೇವಳಕ್ಕೆ ಮುಖ್ಯಮಂತ್ರಿಗಳಾಗಿದ್ದ ಶ್ರೀ ಡಿ ಸದಾನಂದ ಗೌಡ ಹಾಗೂ ಗಣ್ಯ ವ್ಯಕ್ತಿಗಳು, ಮತ್ತು ವೀರಪ್ಪ ಮೋಯಿಲಿ ಮತ್ತು ಗಣ್ಯ ವ್ಯಕ್ತಿಗಳು ಶ್ರೀದೇವಳಕ್ಕೆ ಭೇಟಿ ನೀಡಿ ಶ್ರೀದೇವರಿಗೆ ಪೂಜೆ ಸಲ್ಲಿಸಿದರು.