Paraspara e-KootaBandhu for quicker news

1Jul/120

Anjaneya Jayanthi

ಶ್ರೀದೇವಳದ ಉಪಸನ್ನಿಧಿ ಹಾಗೂ ಭಕ್ತರಿಂದ ಬಹುಮುಖ ಸೇವೆಯನ್ನು ಪಡೆಯುತ್ತಾ ಅವರನ್ನು ಅನುಗ್ರಹಿಸುತ್ತಿರುವ ಶ್ರೀ ಹನುಮಂತನ ಸನ್ನಿಧಿಯಲ್ಲಿ ದಿನಾಂಕ 06-04-2012 ರಂದು ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಂದು ಸೂರ್ಯೋದಯಕ್ಕೆ ಸರಿಯಾಗಿ ನವಕ ಪ್ರಧಾನ ಕಲಾಶಾಭಿಷೇಕ ಹೋಮಗಳನ್ನು  ನೇರವೇರಿಸಲಾಯಿತು.

ಸಂಜೆ ಮಹಾರಂಗಪೂಜೆ ಹಾಗೂ ರಥಬೀದಿಯುದ್ಧಕ್ಕೂ ಕರ್ಪೂರ ದೀಪಗಳ ಸಾಲು ಅತ್ಯಂತ ಮನೋಹರವಾಗಿತ್ತು. ಸಾವಿರಾರು ಜನರು ಈ ಸೇವೆಯಲ್ಲಿ ಪಾಲ್ಗೋಂಡಿದ್ದರು. ಶ್ರೀದೇವಳದ ವತಿಯಿಂದ ಪಾನಕ ಪನೀವಾರ ಹಾಗೂ ಆಂಜನೇಯ ಸೇವಾ ಸಮಿತಿಯವರ ವಿಶೇಷ ಸಿಹಿತಿಂಡಿ ಹಣ್ಣುಗಳ ವಿತರಣೆ ಹಾಗೂ ಸ್ಥಳಿಯ ಸಂಘದವರಿಂದ ಮನೋರಂಜನಾ ಕಾರ್ಯಕ್ರಮಗಳು ನೇರವೇರಿದವು

1Jul/120

Narasimha Jayanthi

ನರಸಿಂಹ ಜಯಂತಿ :- ದಿನಾಂಕ  04-05-2012 ರಂದು ಶ್ರೀದೇವಳದಲ್ಲಿ ನರಸಿಂಹ ಜಯಂತಿಯು ಸಂಭ್ರಮದಿಂದ ಆಚರಿಸಲ್ಪಟ್ಟಿತು. ಬೆಳಗಿನಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. , ಬೆಳಿಗ್ಗೆ ಸಂಹಿತಾಭಿಷೇಕ, ನರಸಿಂಹ ಹೋಮಗಳು ವಿಧಿವತ್ತಾಗಿ ನಡೆದವು, ಮಧ್ಯಾಹ್ನ ವಿಶೇಷ ಪೂಜೆಯೊಂದಿಗಎ ಮಹಾಮಂಗಳಾರತಿ  ನಿತ್ಯ ಬಲಿ ಮುಗಿದೊಡನೆ ಎಲ್ಲಾರೂ ಕೂಡಿ ಭೋಜನ ಪ್ರಸಾದ ಸ್ವೀಕರಿಸಿದರು.

ಸಂಜೆ 6--00 ಗಂಟೆಗೆ ಪಂಚಾಮ್ರತ ಸಹಿತ ವಿಶೇಷ ಪೂಜೆ ಓಲಗ ಮಂಟಪದಲ್ಲಿ ಅಷ್ಟಾವಧಾನ ಸೇವೆಗಳು ಶಾಸ್ತ್ರೋಕ್ತವಾಗಿ  ನಡೆದವು ,ಅಪಾರ ಸಂಖ್ಯೆಯಲ್ಲಿ ನೆರೆದ ಜನರಿಗೆ ಪಾನಕ ಪನೀವಾರವನ್ನು ವಿತರಿಸಲಾಯಿತು.

ರಾತ್ರಿ 8-00 ಗಂಟೆಗೆ ಹಿರಿರಂಗಪೂಜೆ, ಉತ್ಸವ ಬಲಿ, ಪುಷ್ಫರಥೋತ್ಸವ, ನಡೆದು ಮಂತ್ರಾಕ್ಷತೆಯೊಂದಿಗೆ ಉತ್ಸವಕ್ಕೆ ಮಂಗಲ ಹಾಡಲಾಯಿತು.  ನರಸಿಂಹ ಜಯಂತಿಯ ಅದ್ದೂರಿಯ ಆಚರಣೆಗಾಗಿ ಶ್ರೀಗುರುಪ್ರಸಾದ ಕಾರಂತ ಬೆಂಗಳೂರು ಕಾರ್ಯಕ್ರಮದ ಹಿರಿತನವಹಿಸಿದ್ದರು. ಸಂಜೆ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ ಶ್ರೀಸಾಲಿಗ್ರಾಮ ಕ್ಷೇತ್ರ ಮಹಾತ್ಮೆ ಎನ್ನವ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಿದರು.

30Jun/120

Shibira

ಸಾಲಿಗ್ರಾಮ :- ಶ್ರೀದೇವಳದಲ್ಲಿ ಪ್ರತಿವರ್ಷದಂತೆ 11.04.2012 ರಿಂದ 13.04.12ರವರೆಗೆ ಕನ್ಯಕಾ ಸಂಸ್ಕ್ರತಿ ಶಿಬಿರವನ್ನು ನಡೆಸಲಾಯಿತು. 48 ಜನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ವಸಂತ ವೇದ ಶಿಬಿರವು ದಿನಾಂಕ 17-04-2012 ರಿಂದ 11-05-12 ರವರೆಗೆ ಸಂಪನ್ನಗೊಂಡಿತ್ತು. ಒಟ್ಟು 5 ವರ್ಷಗಳ 5 ಹಂತದ 1 ತಿಂಗಳ ಈ ಶಿಬಿರದಲ್ಲಿ ಒಟ್ಟು 412 ಶಿಬಿರಾರ್ಥಿಗಳು ಬಾಗವಹಿಸಿದ್ದರು. ಡಾ|| ನಿಟಿಲಾಪುರ ಕ್ರಷ್ಣಮೂರ್ತಿ ಮತ್ತು ಶ್ರೀ ಗುಂಡ್ಮಿ ಗಣಪಯ್ಯ ಹೊಳ್ಳರ ಮಾರ್ಗದರ್ಶನದಲ್ಲಿ 12 ಜನ ತರುಣರು ಗುರುಗಳಾಗಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರು.  ಶ್ರೀದೇವಳದ ಆಡಳಿತ ಮಂಡಳಿಯು ಶಿಬಿರದ ಯಶಸ್ವಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿತು.

30Jun/120

Siyala Abhisheka

14.06.2012ರ ಮಿಥುನ ಸಂಕ್ರಮಣದಂದು ಉತ್ತಮ ಮಳೆ ಬೆಳೆಗಾಗಿ ಭಕ್ತಾದಿಗಳು ಅರ್ಪಿಸಿದ ಸಾವಿರಾರು ಸೀಯಾಳವನ್ನು ಶ್ರೀಗುರುನರಸಿಂಹ ಹಾಗೂ ಪರವಾರ ದೇವತೆಗಳಿಗೆ ಅಭಿಷೇಕವನ್ನು ಮಾಡಲಾಯಿತು. ನಂತರ ಗಣಹೋಮ ಹಾಗೂ ಪುಷ್ಫರಥೋತ್ಸವನ್ನು ನಡೆಸಲಾಯಿತು

14.06.2012ರ ಮಿಥುನ ಸಂಕ್ರಮಣದಂದು ಉತ್ತಮ ಮಳೆ ಬೆಳೆಗಾಗಿ ಭಕ್ತಾದಿಗಳು ಅರ್ಪಿಸಿದ ಸಾವಿರಾರು ಸೀಯಾಳವನ್ನು ಶ್ರೀಗುರುನರಸಿಂಹ ಹಾಗೂ ಪರವಾರ ದೇವತೆಗಳಿಗೆ ಅಭಿಷೇಕವನ್ನು ಮಾಡಲಾಯಿತು. ನಂತರ ಗಣಹೋಮ ಹಾಗೂ ಪುಷ್ಫರಥೋತ್ಸವನ್ನು ನಡೆಸಲಾಯಿತು

30Jun/120

Sri Gurunarasimha

ಅರ್ಚಕರಾದ ಶ್ರೀರಾಮಚಂದ್ರ ಅಡಿಗ ಮತ್ತು ಸಹೋದರರಿಂದ ದಿನಾಂಕ 24.06.12.ರಂದು ಶ್ರೀಗುರುನರಸಿಂಹ ದೇವರ ಗರ್ಭಗುಡಿಯನ್ನು ಸ್ವಚ್ಛತೆಗೊಳಿಸಿ ಬಣ್ಣವನ್ನು ಹಚ್ಚಲಾಯಿತು  ಶ್ರೀದೇವರಾಜ ಹೆಬ್ಬಾರ್‍, ರಘು ಹೆಬ್ಬಾರ್‍, ಸುಬ್ರಮಣ್ಯ ಅಡಿಗ ಶ್ರೀದೇವಳದ ಸಿಬ್ಬಂದಿಗಳಾದ ಶ್ರೀಕೇಶವ ಹೊಳ್ಳ ಶ್ರೀನಾಗಭೂಷಣ ಹೆಬ್ಬಾರ್‍, ಗಣೇಶ ಭಟ್ ,ಶ್ರೀಚೇತನ ಐತಾಳ ಇವರು ಸಹಕರಿಸಿದರು

ಸರತಿ ಅರ್ಚಕರಾದ ಶ್ರೀರಾಮಚಂದ್ರ ಅಡಿಗ ಮತ್ತು ಸಹೋದರರಿಂದ ದಿನಾಂಕ 24.06.12.ರಂದು ಶ್ರೀಗುರುನರಸಿಂಹ ದೇವರ ಗರ್ಭಗುಡಿಯನ್ನು ಸ್ವಚ್ಛತೆಗೊಳಿಸಿ ಬಣ್ಣವನ್ನು ಹಚ್ಚಲಾಯಿತು ಶ್ರೀದೇವರಾಜ ಹೆಬ್ಬಾರ್‍, ರಘು ಹೆಬ್ಬಾರ್‍, ಸುಬ್ರಮಣ್ಯ ಅಡಿಗ ಶ್ರೀದೇವಳದ ಸಿಬ್ಬಂದಿಗಳಾದ ಶ್ರೀಕೇಶವ ಹೊಳ್ಳ ಶ್ರೀನಾಗಭೂಷಣ ಹೆಬ್ಬಾರ್‍, ಗಣೇಶ ಭಟ್ ,ಶ್ರೀಚೇತನ ಐತಾಳ ಇವರು ಸಹಕರಿಸಿದರು

30Jun/120

SWRNA GUNDU MANI MALE

14.06.2012  ರ ಮಿಥುನ ಸಂಕ್ರಮಣದಂದು ಶ್ರೀಮತಿ ಸುಶೀಲಮ್ಮ ಮತ್ತು ಮಕ್ಕಳು ಹೈದರಬಾದ್ ಇವರಿಂದ ಸ್ಬರ್ಣ ಗುಂಡುಮಣಿ ಸರ ಅರ್ಪಣೆ, ಸ್ವೀಕರಿಸಿ ಶ್ರೀದೇವರ ಪ್ರಸಾದ ನೀಡಿ ಗೌರವಿಸುತ್ತಿರುವ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಮತ್ತು ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥ
ಶ್ರೀಮತಿ ಸುಶೀಲಮ್ಮ ಮತ್ತು ಮಕ್ಕಳು ಹೈದರಬಾದ್ ಇವರಿಂದ ಸ್ಬರ್ಣ ಗುಂಡುಮಣಿ ಸರ ಅರ್ಪಣೆ, ಸ್ವೀಕರಿಸಿ ಶ್ರೀದೇವರ ಪ್ರಸಾದ ನೀಡಿ ಗೌರವಿಸುತ್ತಿರುವ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಮತ್ತು ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥ
183 ಗ್ರಾಂ ತೂಕದ ರೂ. 4,74,000/- ಅಂದಾಜು ಬೆಲೆಯ ಶ್ರೀಗುರುನರಸಿಂಹ ದೇವರ ಪೆನ್ನಂಟ್ ಇರುವ ಗುಂಡುಮಣಿ ಸರ

183 ಗ್ರಾಂ ತೂಕದ ರೂ. 4,74,000/- ಅಂದಾಜು ಬೆಲೆಯ ಶ್ರೀಗುರುನರಸಿಂಹ ದೇವರ ಪೆನ್ನಂಟ್ ಇರುವ ಗುಂಡುಮಣಿ ಸರ

20Feb/120

Donation

ದಿನಾಂಕ 29.01.2012ರಂದು ಸಾಲಿಗ್ರಾಮದ ನಾಗೇಶ ಪೈ ಇವರು ಶ್ರೀದೇವಳದ ಬ್ರಹತ್ ಅಭಿವ್ರದ್ಧಿ ಯೋಜನೆಗೆ ರೂ.1,25,000-00 ದೇಣಿಗೆ ನೀಡಿದರು. ದೇಣಿಗೆಯನ್ನು ಸ್ವೀಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

1

20Feb/120

Amarutanna Kuteera, Jalagara & Yagamantapa

ಸಾಲಿಗ್ರಾಮ :- ಶ್ರೀ ಬಿ.ವಾಸುದೇವ ಐತಾಳ ಮತ್ತು ಮಕ್ಕಳು ಶ್ರೀ ಚಂದ್ರಶೇಖರ ಐತಾಳರ ನೇತ್ರತ್ವದಲ್ಲಿ  ಅಮ್ರತಾನ್ನ ಕುಟೀರ (ನೈವೇಧ್ಯ ಕೋಣೆ)  ನವೀಕರಣಗೊಳಿಸಿ ಶ್ರೀದೇವರಿಗೆ ಸಮರ್ಪಿಸಿದರು. (ಅಂ.ಬೆಲೆ. ರೂ 40,000-00)

ಶ್ರೀ ಬಿ.ನಾರಾಯಣ ಐತಾಳ ಮತ್ತು ಮಕ್ಕಳು ಶ್ರೀ ಬಿ. ಶಿವಕಿರಣ ಐತಾಳರ ನೇತ್ರತ್ವದಲ್ಲಿ ಜಲಾಗಾರ (ಬಾವಿಕಟ್ಟೆ) ಮತ್ತು ಯಾಗಮಂಟಪದ ನವೀಕರಣ ಮಾಡಿ ಶ್ರೀದೇವರಿಗೆ ಸಮರ್ಪಿಸಿದರು. (ಅಂ.ಬೆಲೆ. 40,000-00)

28012012499

2801201249528012012502

ಶ್ರೀದೇವಳದ ಆಡಳಿತಮಂಡಳಿಯ ಸದಸ್ಯ ಶ್ರೀ ಆನಂತಪದ್ಮನಾಭ ಐತಾಳರು ಈ ಕೊಡುಗೆಯನ್ನು ಸ್ವೀಕರಿಸಿ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

20Feb/120

Pushpa Kannadi

ಸಾಲಿಗ್ರಾಮ :- ಹಿಂದಿನ ಆಡಳಿತ ಮಂಡಳಿಯ ಕಾರ್ಯದರ್ಶಿ  ಶ್ರೀ ಬಿ .ನಾರಾಯಣ ಸೋಮಯಾಜಿಯವರು ಶ್ರೀದೇವರ ಉತ್ಸವ ಮುರ್ತಿಯ ಹಿಂದಿನ ಪುಷ್ಫಕನ್ನಡಿಯ ನವೀಕರಣಕ್ಕೆ ರೂ.1,00,008-00 ದೇಣಿಗೆಯನ್ನು ನೀಡಿದರು.

NSOMAYAJI2NSOMAYAJI4ಶ್ರೀಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಭಾಸ್ಕರ ನಾವಡ ಮತ್ತು ಸಹಧರ್ಮದರ್ಶಿಗಳು ಈ ಕೊಡುಗೆಯನ್ನು ಸ್ವೀಕರಿಸಿ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

20Feb/120

Rajata Palaki Samarpane

ರಜತ ಪಲ್ಲಕಿ

ರಜತ ಪಲ್ಲಕಿ

ರೂ .95,000-00 ವೆಚ್ಚದಲ್ಲಿ ಬೆಳ್ಳಿ ಪಲ್ಲಕಿಯನ್ನು ಶ್ರೀಮತಿ ಇಂದಿರಾ ಮತ್ತು ಡಾ|| ಎ.ಎಸ್. ಕ್ರಷ್ಣಮುರ್ತಿ ಕಾರಂತ್ ಹಾಗೂ ಶ್ರೀಮತಿ ಶಾಂತಲಾ ಮತ್ತು ಶ್ರೀ ಮುರುಳೀಧರ ಕಾರಂತ ಬೆಂಗಳೂರು ಇವರು ನವೀಕರಣಗೊಳಿಸಿ ದಿನಾಂಕ 14.01.2012 ರಂದು ಶ್ರೀದೇವರಿಗೆ ಸಮರ್ಪಿಸಿದರು. ಈ ಕೊಡುಗೆಯನ್ನು ಸ್ವೀಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ದಿನಾಂಕ 25.01.2012 ರಂದು ಶ್ರೀಮತಿ ಶಾಂತಲಾ ಮತ್ತು ಶ್ರೀ ಮುರುಳೀಧರ ಕಾರಂತರು ಶ್ರೀದೇವಳದ ಬೆಳ್ಳಿರಥ ನಿರ್ಮಾಣಕ್ಕೆ 2.KG 100 ಗ್ರಾಂ (ಅಂ.ಬೆಲೆ.1,17,600-00) ಶ್ರೀದೇವರಿಗೆ  ಸಮರ್ಪಿಸಿದರು. ಈ ಕೊಡುಗೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ.ಜಗದೀಶ ಕಾರಂತರು ಸ್ವೀಕರಿಸಿ ಇನ್ನು ಹೆಚ್ಚಿನ ಕೊಡುಗೆಯನ್ನು ಕೋಡುವಂತಾಗಲಿ ಎಂದು ಶ್ರೀದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ನೀಡಿ ಗೌರವಿಸಿದರು.